90 GB ಆಫರ್ ಕೊಟ್ಟ BSNL, ಜೊತೆಗೆ ಉಚಿತ ಕರೆ: ಬೆಲೆ?
ಸರ್ಕಾರಿ ಸ್ವಾಮ್ಯದ BSNL ಸಹ ಇದೇ ಮಾದರಿಯ ಆಫರ್ ವೊಂದನ್ನು ತನ್ನ ಗ್ರಾಹಕರಿಗೆ ನೀಡಲು ಮುಂದಾಗಿದೆ. ಇದರಲ್ಲಿ ಡೇಟಾ ದೊಂದಿಗೆ ಗ್ರಾಹಕರಿಗೆ ಉಚಿತ ಕರೆ ಮಾಡುವ ಅವಕಾಶವು ಇದೆ.
ಜಿಯೋ-ಏರ್‌ಟೆಲ್-ವೊಡಾಫೋನ್-ಐಡಿಯಾ ಒಂದೇ ಮಾದರಿಯ ಆಫರ್ ನೀಡಿವೆ. ಇದೇ ಮಾದರಿಯಲ್ಲಿ ಸರ್ಕಾರಿ ಸ್ವಾಮ್ಯದ BSNL ಸಹ ಇದೇ ಮಾದರಿಯ ಆಫರ್ ವೊಂದನ್ನು ತನ್ನ ಗ್ರಾಹಕರಿಗೆ ನೀಡಲು ಮುಂದಾಗಿದೆ. ಇದರಲ್ಲಿ ಡೇಟಾ ದೊಂದಿಗೆ ಗ್ರಾಹಕರಿಗೆ ಉಚಿತ ಕರೆ ಮಾಡುವ ಅವಕಾಶವು ಇದೆ.

ಓದಿರಿ: ಓನ್‌ಪ್ಲಸ್ 5 - ಐಫೋನ್ 7 ಸಹ ಈ ಫೋನಿನ ಮುಂದೇ ಏನೇನು ಅಲ್ಲ..!
BSNL ಹೊಸ ಪ್ಲಾನ್ ಅನ್ನು ರೂ.429 ರೂಗಳಿಗೆ ಬಿಡುಗಡೆ ಮಾಡಿದ್ದು, ಇದು 90 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಆಫರ್ ನಲ್ಲಿ ಗ್ರಾಹಕರು ಪ್ರತಿ ನಿತ್ಯ 1GB ಡೇಟಾವನ್ನು ಬಳಕೆಗೆ ಪಡೆಯಲಿದ್ದಾರೆ ಮತ್ತು ಎಲ್ಲಾ ನೆಟ್‌ವರ್ಕ್ ಗಳಿಗೂ ಉಚಿತ ಕರೆ ಮಾಡುವ ಅವಕಾಶವನ್ನು ಹೊಂದಲಿದ್ದಾರೆ.

ಜಿಯೋ ಆಫರ್ ಗೆ ಸೆಡ್ಡು:
ಜಿಯೋ ರೂ.399ಕ್ಕೆ 84 ದಿನಗಳ ಕಾಲ 1GB ಡೇಟಾ ಪ್ರತಿ ನಿತ್ಯ, ಮತ್ತು ಉಚಿತ ಕರೆ ಮಾಡುವ ಆಫರ್ ಅನ್ನು ಘೋಷಣೆ ಮಾಡಿದೆ. ಇದೇ ಮಾದರಿಯಲ್ಲಿ BSNL 90 ದಿನಗಳ ಅವಧಿಗೆ ಈ ಆಫರ್ ಘೋಷಣೆ ಮಾಡಿದೆ.

ಖಾಸಗಿ ಟೆಲಿಕಾಂ ಕಂಪನಿಗಳೊಂದಿಗೆ ಸ್ಪರ್ಧೇ:
ಜಿಯೋ ದೇಶದಲ್ಲಿ ಸೇವೆಯನ್ನು ಆರಂಭಿಸುವ ವರೆಗೂ ಸುಮ್ಮನೆ ಸದ್ದು ಮಾಡಿದೆ ಇದ್ದ BSNL ಇತ್ತೀಚೆಗೆ ಹೆಚ್ಚಿನ ಗ್ರಾಹಕರನ್ನು ಸೆಳೆಯುವ ಸಲುವಾಗಿ ಆಕರ್ಷಕ ಕೊಡುಗೆಗಳನ್ನು ನೀಡಲು ಮುಂದಾಗಿದೆ.

ದೊಡ್ಡದಾದ BSNL ಕುಟುಂಬ:
ಈಗಾಗಲೇ BSNL ಕುಟುಂಬವೂ ದೊಡ್ಡದಾಗಿದ್ದು, ಇದನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಖಾಸಗಿ ಟೆಲಿಕಾಂ ಕಂಪನಿಗಳ ಮಾದರಿಯಲ್ಲಿ ಆಫರ್ ಗಳನ್ನ ಘೋಷಣೆ ಮಾಡುತ್ತಿರುವುದು ಅದಕ್ಕೆ ಕಾರಣವಾಗಿದೆ.


Click it and Unblock the Notifications








