ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್ ಕುರಿತಾದ ಟಾಪ್ 10 ಸಲಹೆಗಳು

Written By:

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್ ಸ್ಮಾರ್ಟ್‌ಫೋನ್, 5.60 ಇಂಚಿನ 1600x2560 ಡಿಸ್‌ಪ್ಲೇಯೊಂದಿಗೆ ಬಂದಿದ್ದು 2.7GHz ಪ್ರೊಸೆಸರ್ ಇದರಲ್ಲಿದೆ. ಫೋನ್ 3 ಜಿಬಿ RAM ಅನ್ನು ಒಳಗೊಂಡಿದ್ದು 16 ಮೆಗಾಪಿಕ್ಸೆಲ್ ಕ್ಯಾಮೆರಾ ಫೋನ್‌ನಲ್ಲಿದೆ. ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಫೋನ್‌ನಲ್ಲಿದ್ದು ಇದು 3ಜಿ ಮತ್ತು 4ಜಿಯನ್ನು ಬೆಂಬಲಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಇದನ್ನೂ ಓದಿ: ಮೋಟೋ ಜಿ ಬ್ಯಾಟರಿ ಬ್ಯಾಕಪ್‌ಗಾಗಿ ಅತ್ಯುತ್ತಮ 10 ಸಲಹೆಗಳು

ಫೋನ್‌ನ ಮುಂಭಾಗ ಕ್ಯಾಮೆರಾ 3.7 ಎಮ್‌ಪಿಯಾಗಿದ್ದು ಇದು 3 ಜಿಬಿ RAM ಅನ್ನು ಒಳಗೊಂಡಿದೆ. ಇನ್ನು ಫೋನ್‌ನ ಆಂತರಿಕ ಸಂಗ್ರಹ ಸಾಮರ್ಥ್ಯ 32 ಜಿಬಿಯಾಗಿದ್ದು ಇದನ್ನು 128 ಜಿಬಿವರೆಗೆ ವಿಸ್ತರಿಸಬಹುದಾಗಿದೆ. ಫೋನ್ 3000mAh ಚಾರ್ಜಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ.

ಇಂದಿನ ಲೇಖನದನಲ್ಲಿ ಡಿವೈಸ್ ಕುರಿತ ಇನ್ನಷ್ಟು ಸಲಹೆಗಳನ್ನು ನಾವು ನೀಡುತ್ತಿದ್ದು ಇದು ಅತ್ಯಂತ ಉಪಯೋಗಕಾರಿ ಎಂದೆನಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಂಪರ್ಕಗಳನ್ನು ಅಳಿಸಲು

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್

ಸೆಟ್ಟಿಂಗ್ಸ್ - ಮೋರ್ - ಅಪ್ಲಿಕೇಶನ್ ಮ್ಯಾನೇಜರ್ ಇಲ್ಲಿ ನಿಮಗೆ ಸಂಪರ್ಕಗಳ ಸ್ಟೊರೇಜ್ ಸಿಗುತ್ತದೆ ಇಲ್ಲಿ ಡೇಟಾವನ್ನು ಕ್ಲಿಯರ್ ಮಾಡಿ.
ಇನ್ನು ಸೆಟ್ಟಿಂಗ್ಸ್‌ಗೆ ಹೋಗಿ ಇಲ್ಲಿ ಡಿಲೀಟ್ ಮೆನು ಪ್ರೆಸ್ ಮಾಡಿ. ತದನಂತರ ಎಲ್ಲವನ್ನೂ ಆಯ್ಕೆಮಾಡಿ ನಂತರ ಪುನಃ ಡಿಲೀಟ್ ಮಾಡಿ.

ಸಂಪರ್ಕಕ್ಕಾಗಿ ತ್ವರಿತವಾಗಿ ಹುಡುಕಲು

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್

ನೀವು ಸಂಪರ್ಕಗಳ ಅಪ್ಲಿಕೇಶನ್‌ನಲ್ಲಿರುವಾಗ, ಪರದೆಯ ಮೇಲ್ಭಾಗದಲ್ಲಿ ಸರ್ಚ್ ಬಾರ್‌ನಲ್ಲಿ ಟೈಪ್ ಮಾಡಲು ಆರಂಭಿಸಿ.

ಡಿಕ್ಶಿನರಿಯಲ್ಲಿ ಪದ ಉಳಿಸಲು

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್

ಡಿಕ್ಶಿನರಿಯಲ್ಲಿಲ್ಲದ ಪದವನ್ನು ಟೈಪ್ ಮಾಡಿ. ಎಡಭಾಗದಲ್ಲಿರುವ ಸಲಹೆ ಬಾಕ್ಸ್‌ನಲ್ಲಿ ಪದ ಪ್ರದರ್ಶನಗೊಳ್ಳುತ್ತದೆ. ಪದದ ಮೇಲೆ ದೀರ್ಘವಾಗಿ ಒತ್ತಿರಿ ಇದು ಡಿಕ್ಶಿನರಿಯಲ್ಲಿ ಉಳಿಯುತ್ತದೆ.

ಫೋಲ್ಡರ್‌ಗಳು ಅಥವಾ ಫೈಲ್‌ಗಳನ್ನು ಮರೆಮಾಡಲು

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್

ನಿಮ್ಮ ಫೋಲ್ಡರ್‌ಗೆ ರೀನೇಮ್ ಮಾಡಿ ಮತ್ತು ಫೈಲ್ ಅಥವಾ ಪೋಲ್ಡರ್ ಹೆಸರಿಗಿಂತ ಮುನ್ನ ಪೂರ್ಣವಿರಾಮವನ್ನು ಹಾಕಿ.

ಫೋನ್ ಬ್ರೌಸರ್‌ನಲ್ಲಿ ಬ್ಲರ್ ಇಮೇಜ್‌ಗಳನ್ನು ಹೊಂದಿಸಲು

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್

ನಿಮ್ಮ ಫೋನ್‌ನಲ್ಲಿ ಬ್ರೌಸ್ ಮಾಡುತ್ತಿರುವಾಗ ಚಿತ್ರಗಳು ಸ್ವಲ್ಪ ಬ್ಲರ್ ಆಗಿರುವುದು ನಿಮ್ಮ ಗಮನಕ್ಕೆ ಬರಬಹುದು. ಇದನ್ನು ಹೋಗಲಾಡಿಸಲು ನಿಮ್ಮ ಹತ್ತಿರದ ವೈಫೈ ಸಂಪರ್ಕವನ್ನು ಆನ್ ಮಾಡಿಕೊಳ್ಳಿ. ಇದರಿಂದ ಕ್ಯಾರಿಯರ್‌ಗಿಂತಲೂ ವೈಫೈ ಸಂಪರ್ಕದ ಮೂಲಕ ಬ್ರೌಸರ್ ಡೌನ್‌ಲೋಡ್ ಅನ್ನು ಮಾಡುತ್ತದೆ. ಮತ್ತು ನಿಮ್ಮ ಚಿತ್ರಗಳು ಸಾಮಾನ್ಯವಾಗಿ ಗೋಚರಿಸುತ್ತವೆ.

ಕ್ಯಾಲೆಂಡರ್ ಅಪ್ಲಿಕೇಶನ್‌ನಲ್ಲಿ ತಿಂಗಳು ಮತ್ತು ವರ್ಷ ಬದಲಾಯಿಸಲು

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್

ನಿಮ್ಮ ಕ್ಯಾಲೆಂಡರ್ ಅಪ್ಲಿಕೇಶನ್ ಅನ್ನು ನೀವು ಬಳಸುತ್ತಿದ್ದೀರಿ ಎಂದಾದಲ್ಲಿ, ವರ್ಷದಿಂದ ತಿಂಗಳಿಗೆ ಹೋಗಿ, ಇಲ್ಲಿ ರಿವರ್ಸ್ ಪಿಂಚ್ ಅನ್ನು ನಿಮಗೆ ಮಾಡಬಹುದು. ಹೀಗೆ ತಿಂಗಳು ಮತ್ತು ವರ್ಷವನ್ನು ನಿಮಗೆ ಬದಲಾಯಿಸಬಹುದಾಗಿದೆ.

ಸ್ಲೀಪ್ ಮೋಡ್‌ನಲ್ಲಿ ಇಲ್ಲದಿದ್ದಾಗ ಬ್ಲಾಕಿಂಗ್ ಮೋಡ್ ಬಳಸಲು

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್

ಸೆಟ್ಟಿಂಗ್ಸ್ > ಮೈ ಡಿವೈಸ್ > ಬ್ಲಾಕಿಂಗ್ ಮೋಡ್ ಇಲ್ಲಿ ನಿಮಗೆ ಫ್ರಮ್ ಹಾಗೂ ಟು ಟೈಮ್ ಅನ್ನು ಹೊಂದಿಸಿ ಅಧಿಸೂಚನೆಗಳನ್ನು ಬ್ಲಾಕ್ ಮಾಡಬಹುದಾಗಿದೆ.

ದೊಡ್ಡ ಅಪ್ಲಿಕೇಶನ್‌ಗಳನ್ನು ತೆಗೆದು ಹಾಕಲು

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್

ಫೋನ್ ಮೆಮೊರಿಯಲ್ಲಿ ನೀವು ಸ್ಥಳಾವಕಾಶದ ಸಮಸ್ಯೆಯನ್ನು ಅನುಭವಿಸುತ್ತಿದ್ದೀರಿ ಎಂದಾದಲ್ಲಿ, ಅತಿ ದೊಡ್ಡ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್‌ ಮಾಡಬೇಕಾಗುತ್ತದೆ. ಸೆಟ್ಟಿಂಗ್ಸ್ > ಮೋರ್ > ಅಪ್ಲಿಕೇಶನ್ ಮ್ಯಾನೇಜರ್. ಇಲ್ಲಿ ಬಲದಿಂದ ಎಡಕ್ಕೆ ಸ್ವೈಪ್ ಮಾಡಿ ಮತ್ತು ರನ್ನಿಂಗ್ ಆಯ್ಕೆಮಾಡಿ.

ವೀಡಿಯೊಗಳನ್ನು ವೀಕ್ಷಿಸುತ್ತಿರುವಾಗ ಸ್ಕ್ರೀನ್ ಲಾಕ್ ಮಾಡಲು

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್

ಪವರ್ ಬಟನ್ ಒತ್ತುವ ಮೂಲಕ ವೀಡಿಯೊಗಳನ್ನು ವೀಕ್ಷಿಸುತ್ತಿರುವಾಗ ಕೂಡ ನಿಮ್ಮ ಸ್ಕ್ರೀನ್ ಲಾಕ್ ಆಗುತ್ತದೆ.

ಮ್ಯೂಸಿಕ್ ಅಪ್ಲಿಕೇಶನ್‌ನಲ್ಲಿ ಧ್ವನಿ ಈಕ್ವಲೈಸರ್ ಬಳಸಲು

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್

ಆಂಡ್ರಾಯ್ಡ್ ಇದೀಗ ಸೌಂಡ್ ಈಕ್ವಲೈಸರ್ ಜೊತೆಗೆ ಬಂದಿದ್ದು ಇಲ್ಲಿ ನಿಮಗೆ ಮ್ಯೂಸಿಕ್ ಧ್ವನಿಯನ್ನು ಹೊಂದಿಸಬಹುದಾಗಿದೆ. ಮ್ಯೂಸಿಕ್ ಪ್ಲೇಯರ್ ಅಪ್ಲಿಕೇಶನ್ ಬಳಸಿ ಮ್ಯೂಸಿಕ್ ಫೈಲ್ ತೆರೆಯಿರಿ. ಸೆಟ್ಟಿಂಗ್ಸ್ > ಸೌಂಡ್ ಅಲೈವ್ ಮತ್ತು ಕಸ್ಟಮ್ ಆಯ್ಕೆಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Samsung Galaxy Note Edge Tips and Tricks. These tricks are considered very easy and useful.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot