ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಮಾರಾಟ ಇಂದಿನಿಂದ ಆರಂಭ

By Ashwath
|

ಸ್ಯಾಮ್‌ಸಂಗ್‌ನ ಈ ವರ್ಷದ ದುಬಾರಿ ಬೆಲೆಯ ಗೆಲಾಕ್ಸಿ ಎಸ್‌5‌ ಸ್ಮಾರ್ಟ್‌ಫೋನಿನ ಮಾರಾಟ ಇಂದಿನಿಂದ ವಿಶ್ವದಲ್ಲಿ ಅಧಿಕೃತವಾಗಿ ಆರಂಭವಾಗಿದೆ.ಗೆಲಾಕ್ಸಿ ಎಸ್‌5‌ಗೆ ದೇಶೀಯ ಮಾರುಕಟ್ಟೆಯಲ್ಲಿ 51,500 ರೂಪಾಯಿ ಬೆಲೆಯನ್ನು ಸ್ಯಾಮ್‌ಸಂಗ್‌ ನಿಗದಿ ಪಡಿಸಿದ್ದು, ಆನ್‌‌ಲೈನ್‌ ಶಾಪಿಂಗ್‌ ತಾಣದಲ್ಲಿ ಇದಕ್ಕಿಂತ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ಲಭ್ಯವಿದೆ.

ಆಪಲ್‌,ಸೋನಿ,ಎಲ್‌‌ಜಿ,ಗೂಗಲ್‌‌ಎಚ್‌ಟಿಸಿಯಂತಹ ಬ್ರ್ಯಾಂಡ್‌ ಕಂಪೆನಿಗಳು ತಮ್ಮ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಮೊದಲು ವಿದೇಶದಲ್ಲಿ ಬಿಡುಗಡೆ ಮಾಡಿದ ಬಳಿಕ ಭಾರತದಲ್ಲಿ ಬಿಡುಗಡೆ ಮಡುತ್ತವೆ.ಆದರೆ ಸ್ಯಾಮ್‌ಸಂಗ್‌‌ ತನ್ನ ದುಬಾರಿ ಬೆಲೆಯ ಕೆಲವು ಫೋನ್‌ಗಳನ್ನು ವಿಶ್ವದ ದೇಶಗಳಲ್ಲಿ ಬೇರೆ ಬೇರೆ ದಿನದಲ್ಲಿ ಬಿಡುಗಡೆ ಮಾಡಿದ್ದರೂ,ಮಾರಾಟವನ್ನು ಮಾತ್ರ ಒಂದೇ ದಿನದಿಂದ ಆರಂಭಿಸುತ್ತದೆ.

ಕಳೆದ ಬಾರಿ ಅಕ್ಟಾ ಕೋರ್‌ ಪ್ರೊಸೆಸರ್‌ನಲ್ಲಿ ಬಿಡುಗಡೆ ಮಾಡಿದ್ದ ಗೆಲಾಕ್ಸಿ ಎಸ್‌4 ಸ್ಮಾರ್ಟ್‌‌‌ಫೋನ್‌ ಸ್ಯಾಮ್‌ಸಂಗ್‌ಗೆ ವಿಶ್ವ ಮಟ್ಟದಲ್ಲಿ ಬಾರಿ ಜನಪ್ರಿಯತೆಯನ್ನು ತಂದು ಕೊಟ್ಟಿತ್ತು.ಬಿಡುಗಡೆಯಾದ ಎರಡೇ ತಿಂಗಳಿನಲ್ಲಿ ಎರಡು ಕೋಟಿ ಗೆಲಾಕ್ಸಿ ಎಸ್‌4 ಮಾರಾಟ ಮಾಡುವ ಮೂಲಕ ಸ್ಯಾಮ್‌‌ಸಂಗ್‌ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಹೊಸ ಮೈಲಿಗಲ್ಲನ್ನು ಬರೆದಿತ್ತು. ಪ್ರಸ್ತುತ ಗೆಲಾಕ್ಸಿ ಎಸ್‌5ಯಲ್ಲಿರುವ ವಿಶೇಷತೆಗಳನ್ನು ಲೆಕ್ಕ ಹಾಕಿದರೆ ಇದು ಸಹ ಮಾರಾಟದಲ್ಲಿ ಹೊಸ ಮೈಲಿಗಲ್ಲನ್ನು ಬರೆಯಬಹುದು ಎಂದು ವಿಶ್ಲೇಷಿಸಲಾಗುತ್ತದೆ.

ಈ ಸ್ಮಾರ್ಟ್‌ಫೋನ್‌ ಎರಡು ಆಂತರಿಕ ಮೆಮೊರಿ,ಎರಡು ರೀತಿಯ ಪ್ರೊಸೆಸರ್‌,ಎರಡು ಸಿಮ್‌ ಸ್ಲಾಟ್‌(ಸಿಂಗಲ್‌, ಡ್ಯುಯಲ್‌)ನಲ್ಲಿ ವಿಶ್ವದ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ವಿಶ್ವದ ಮಾರುಕಟ್ಟೆಗೆ ಸಿಂಗಲ್‌ ಸಿಮ್‌, ಕ್ವಾಡ್‌ ಕೋರ್‌ ಪ್ರೊಸೆಸರ್‌ನಲ್ಲಿ ಬಿಡುಗಡೆಯಾಗಿದ್ದರೆ ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಸಿಂಗಲ್‌‌ ಸಿಮ್‌, ಅಕ್ಟಾ ಕೋರ್‍ ಪ್ರೊಸೆಸರ್‌ನಲ್ಲಿ ಬಿಡುಗಡೆಯಾಗಿದೆ.ಚೀನಾದ ಮಾರುಕಟ್ಟೆಗೆ ಸ್ಯಾಮ್‌ಸಂಗ್‌ ಡ್ಯುಯಲ್‌ ಸಿಮ್‌ನಲ್ಲಿ ಗೆಲಾಕ್ಸಿ ಎಸ್‌‌5ಯನ್ನು ಬಿಡುಗಡೆ ಮಾಡಿದ್ದು ಭಾರತದ ಮಾರುಕಟ್ಟೆಗೆ ಡ್ಯುಯಲ್‌ ಸಿಮ್‌ ಆವೃತ್ತಿ ಬಿಡುಗಡೆ ಮಾಡುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.16/32 ಜಿಬಿ ಆಂತರಿಕ ಮೆಮೊರಿಯಲ್ಲಿ ಬಿಡುಗಡೆಯಾಗಿದ್ದರೂ ಸದ್ಯಕ್ಕೆ 16ಜಿಬಿ ಆಂತರಿಕ ಮೆಮೊರಿಯ ಸ್ಮಾರ್ಟ್‌ಫೋನ್‌ ಮಾತ್ರ ಸ್ಯಾಮ್‌ಸಂಗ್‌ನ ಭಾರತದ ಇಸ್ಟೋರ್‌ನಲ್ಲಿ ಲಭ್ಯವಿದೆ.

ಬಾರ್ಸಿ‌ಲೋನಾದಲ್ಲಿ ನಡೆದ ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್‌ ಸಮ್ಮೇಳನದಲ್ಲಿ ಕ್ವಾಡ್‌ ಕೋರ್‌ ಪ್ರೊಸೆಸರ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದ ಸ್ಯಾಮ್‌ಸಂಗ್‌ ಭಾರತದ ಮಾರುಕಟ್ಟೆಗೆ ಮಾರ್ಚ್‌ ಕೊನೆಯ ವಾರದಲ್ಲಿ ಅಕ್ಟಾಕೋರ್‌ ಪ್ರೊಸೆಸರ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿತ್ತು.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5
ವಿಶೇಷತೆ:
ಸಿಂಗಲ್‌ ಸಿಮ್‌
5.1 ಇಂಚಿನ ಸೂಪರ್‌ ಅಮೊಲೆಡ್‌ ಸ್ಕ್ರೀನ್‌(1080 x 1920 ಪಿಕ್ಸೆಲ್‌,432 ಪಿಪಿಐ)
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್‌ ಓಎಸ್‌
ಅಕ್ಟಾ ಕೋರ್‌ ಪ್ರೊಸೆಸರ್‌
2 GB ರ್‍ಯಾಮ್‌
16 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
16 ಜಿಬಿ ಆಂತರಿಕ ಮೆಮೊರಿ
64 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌‌‌,ಎನ್‌ಎಫ್‌ಸಿ
2800 mAh ಬ್ಯಾಟರಿ

ಸ್ಯಾಮ್‌ಸಂಗ್‌ ಗೆಲಾಕ್ಸಿ ಕುರಿತ ಮತ್ತಷ್ಟು ಸುದ್ದಿಗಳಿಗೆ ಈ ಕೆಳಗಿನ ಲಿಂಕ್‌ಗಳಿಗೆ ಭೇಟಿ ನೀಡಬಹುದು

ಗೆಲಾಕ್ಸಿ ಎಸ್‌5 vs ಐಫೋನ್‌ 5ಎಸ್‌ vs ನೆಕ್ಸಸ್‌5...
ಗೆಲಾಕ್ಸಿ ಎಸ್‌5ಯಲ್ಲಿ ಹೃದಯ ಬಡಿತವನ್ನು ಪರೀಕ್ಷಿಸುವುದು ಹೇಗೆ?
ಗೆಲಾಕ್ಸಿ ಎಸ್‌5ಯಲ್ಲಿರುವ ಐಫೋನ್‌ 5ಎಸ್‌ನಲ್ಲಿರದ ವಿಶೇಷತೆಗಳು
ಗೆಲಾಕ್ಸಿ ಎಸ್‌5 ಸ್ಕ್ರೀನ್‌ಗೆ ಸುತ್ತಿಗೆಯಿಂದ ಹೊಡೆದರೆ ಏನಾಗುತ್ತದೆ?

ಸ್ಯಾಮ್‌ಸಂಗ್‌ ಹೊಸದಾಗಿ ಬಿಡುಗಡೆ ಮಾಡಿರುವ ಸ್ಮಾರ್ಟ್‌ಫೋನ್‌ ಈ ಹಿಂದೆ ಬಿಡುಗಡೆ ಮಾಡಿರುವ ಸ್ಮಾರ್ಟ್‌‌ಫೋನ್‌ಗಳಿಗಿಂತ ಹೇಗೆ ಭಿನ್ನವಾಗಿದೆ ಎನ್ನುವುದಕ್ಕೆ ಗೆಲಾಕ್ಸಿ ಎಸ್‌ ಸರಣಿಯ ಐದು ಸ್ಮಾರ್ಟ್‌‌ಫೋನ್‌ಗಳ ವಿಶೇಷತೆಗಳನ್ನು ತಿಳಿಸುವ ಒಂದು ಇನ್‌ಫೋಗ್ರಾಫಿಕ್‌ ಇಲ್ಲಿದೆ.

ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌.

1

1

ಗಾತ್ರ,ತೂಕ, ಸ್ಕ್ರೀನ್‌‌ ಅಳತೆ

2

2


ಕ್ಯಾಮೆರಾ

3

3


ಪ್ರೊಸೆಸರ್‍

4

4


ಬ್ಯಾಟರಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X