Subscribe to Gizbot

ಡಿಸ್‌ಪ್ಲೇಯಲ್ಲಿ ತೂತು ಮಾಡಿದ ಸ್ಯಾಮ್‌ಸಂಗ್: ಆಪಲ್ ಸೋಲಿಸಲು ಹೀಗೆ ಮಾಡಿದ್ದ.?

Written By:

ವಿಶ್ವ ಮಾರುಕಟ್ಟೆಯಲ್ಲಿ ಹೊಸ ವಿನ್ಯಾಸ, ಹೊಸ ಆಯ್ಕೆಗಳ ಮೂಲಕ ದುಬಾರಿ ಬೆಲೆಯಾದರು ಬಳಕೆದಾರರ ಮನಗೆದ್ದಿರುವ ಆಪಲ್ ಐಫೋನ್ X, ಸದ್ಯದ ಫುಲ್‌ಸ್ಕ್ರಿನ್-ಬ್ರಜಿಲ್ ಲೈಸ್ ವಿನ್ಯಾಸದಲ್ಲಿಯೇ ಉತ್ತಮವಾದ ಫೋನ್ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಆಪಲ್‌ಗೆ ಪ್ರತಿ ವಿಭಾಗದಲ್ಲಿಯೂ ಸ್ಪರ್ಧೆಯನ್ನು ನೀಡುತ್ತಿರುವ ಸ್ಯಾಮ್‌ಸಂಗ್ ಈ ಬಾರಿ ಐಫೋನ್ ‍X ನಾಚುವಂತಹ ಫೋನ್ ವಿನ್ಯಾಸವನ್ನು ಮಾಡಿದೆ.

ಡಿಸ್‌ಪ್ಲೇಯಲ್ಲಿ ತೂತು ಮಾಡಿದ ಸ್ಯಾಮ್‌ಸಂಗ್: ಆಪಲ್ ಸೋಲಿಸಲು ಹೀಗೆ ಮಾಡಿದ್ದ.?

ಸ್ಯಾಮ್‌ಸಂಗ್ ಹೊಸ ಮಾದರಿಯಲ್ಲಿ ಐಫೋನ್ ‍X ವಿನ್ಯಾಸಕ್ಕೂ ಸೆಡ್ಡು ಹೊಡೆಯುವಂತ ಹೊಸ ವಿನ್ಯಾಸವೊಂದನ್ನು ಮಾಡಿದ್ದು, ಸ್ಮಾರ್ಟ್‌ಫೋನ್ ಲೋಕವೇ ಈ ಹೊಸ ಮಾದರಿಯ ವಿನ್ಯಾಸವನ್ನು ನೋಡಿ ಬೆಚ್ಚಿ ಬಿದ್ದಿದೆ ಎನ್ನಲಾಗಿದೆ. ಸ್ಯಾಮ್‌ಸಂಗ್ ಹೊರತು ಪಡಿಸಿದರೆ ಬೇರೆ ಯಾವುದೇ ಕಂಪನಿಗಳೂ ಈ ರೀತಿಯ ವಿನ್ಯಾಸವನ್ನು ಮಾಡಲು ಸಾಧ್ಯವಿಲ್ಲ ಎನ್ನುವ ಮಾತು ಕೇಳಿಬಂದಿದೆ. ಅಲ್ಲದೇ ಆಪಲ್‌ ಸಹ ಈ ಮಾದರಿಯಲ್ಲಿ ಫೋನ್ ವಿನ್ಯಾಸವನ್ನು ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ. ಸ್ಯಾಮ್‌ಸಂಗ್ ಮಾಡಿರುವ ವಿನ್ಯಾಸವೂ ಏಕೆ ಸದ್ದು ಮಾಡುತ್ತಿದೆ ಎಂಬುದನ್ನು ಮುಂದಿನಂತೆ ನೋಡಿ.

ಓದಿರಿ: ರೂ.249ಕ್ಕೆ ನೋಕಿಯಾ 3310 ಮಾದರಿ ಫೋನ್: ಇಲ್ಲಿ ಮಾತ್ರ ಲಭ್ಯ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಕ್ರಿನ್‌ನಲ್ಲಿ ಹೋಲ್ ಮಾಡಿದ ಸ್ಯಾಮ್‌ಸಂಗ್:

ಸ್ಕ್ರಿನ್‌ನಲ್ಲಿ ಹೋಲ್ ಮಾಡಿದ ಸ್ಯಾಮ್‌ಸಂಗ್:

ಮೂಲಗಳ ಪ್ರಕಾರ ಸ್ಯಾಮ್‌ಸಂಗ್ ಗ್ಯಾಲೆಕ್ಸಿ X ಸ್ಮಾರ್ಟ್‌ಫೋನ್ ವಿನ್ಯಾಸ ಇದು ಎನ್ನಲಾಗಿದ್ದು, ಆನ್‌ಲೈನಿನಲ್ಲಿ ಲೀಕ್ ಆಗಿರುವ ಮಾಹಿತಿಯೂ ಸದ್ಯ ವೈರಲ್ ಆಗಿದ್ದು, ಸ್ಯಾಮ್‌ಸಂಗ್ ತನ್ನ ಡಿಸ್‌ಪ್ಲೇಯಲ್ಲಿ ಹೋಲ್ (ಕಿಂಡಿ) ಮಾಡಿದೆ ಎನ್ನಲಾಗಿದೆ. ಈ ಮಾದರಿಯ ವಿನ್ಯಾಸವೂ ಮಾರುಕಟ್ಟೆಯಲ್ಲಿ ಮಾಡಲು ಸಾಧ್ಯವೇ ಇಲ್ಲ ಎನ್ನಲಾಗಿದೆ.

ಕ್ಯಾಮೆರಾ-ಫಿಂಗರ್ ಪ್ರಿಂಟ್:

ಕ್ಯಾಮೆರಾ-ಫಿಂಗರ್ ಪ್ರಿಂಟ್:

ಐಫೋನ್ X ತನ್ನ ವಿನ್ಯಾಸದಿಂದಲೇ ಸಾಕಷ್ಟು ಪ್ರಚಾರವನ್ನು ಪಡೆದುಕೊಂಡಿತ್ತು. ಇದೇ ಮಾದರಿಯಲ್ಲಿ ಸ್ಯಾಮ್‌ಸಂಗ್ ನೂತನ ವಿನ್ಯಾಸದಲ್ಲಿ ಫುಲ್‌ ಮೊಬೈಲ್‌ನಲ್ಲಿ ಡಿಸ್‌ಪ್ಲೇಯೇ ಕಾಣಿಸಿಕೊಳ್ಳಲಿದ್ದು, ಬೇರೆಯಾವುದೇ ಬ್ರಜಿಲ್ ಇರುವುದಿಲ್ಲ ಎನ್ನಲಾಗಿದೆ. ತನ್ನ ಕ್ಯಾಮೆರಾ ಸೆನ್ಸ್ಯಾರ್ ಗಳನ್ನು ಡಿಸ್‌ಪ್ಲೇಯ ಅಡಿಯಲ್ಲಿ ಮುಚ್ಚಿಟ್ಟಿದ್ದು, ಅಲ್ಲದೇ ಕ್ಯಾಮೆರಾ ಮತ್ತು ಫಿಂಗರ್ ಪ್ರಿಂಟ್ ಸ್ಕ್ಯಾನ್ ಮಾಡುವ ಸಲುವಾಗಿ ಡಿಸ್‌ಪ್ಲೇಯಲ್ಲಿ ರಂದ್ರವನ್ನು ಕೊರೆದಿದೆ.

ಡಿಸ್‌ಪ್ಲೇ ಫೋನಿನ ತುಂಬ ಕಾಣಿಸಿಕೊಳ್ಳಲಿದೆ:

ಡಿಸ್‌ಪ್ಲೇ ಫೋನಿನ ತುಂಬ ಕಾಣಿಸಿಕೊಳ್ಳಲಿದೆ:

ಐಫೋನ್ X ತನ್ನ ಫೋನಿನಲ್ಲಿ ಫೇಸ್‌ ಲಾಕ್‌ ನೀಡುವ ಸಲುವಾಗಿ ಫೋನಿನ ಮೇಲ್ಬಾಗದಲ್ಲಿ ಸ್ವಲ್ಪವನ್ನು ಬಳಕೆ ಮಾಡಿಕೊಂಡಿತ್ತು. ಆದರೆ ಸ್ಯಾಮ್‌ಸಂಗ್ ಈ ಮಾದರಿಯಲ್ಲಿ ಡಿಸ್‌ಪ್ಲೇಯ ಯಾವುದೇ ಭಾಗವನ್ನು ಬಳಕೆ ಮಾಡಿಕೊಳ್ಳದೇ ಫೋನಿನಲ್ಲಿ ಫೂರ್ಣ ಪ್ರಮಾಣದಲ್ಲಿ ಡಿಸ್‌ಪ್ಲೇಯನ್ನು ಇರುವ ವಂತೆ ಮಾಡಿದೆ.

ಫೇಸ್‌3D:

ಫೇಸ್‌3D:

ಆಪಲ್ ಫೇಸ್‌ ಐಡಿ ಬಿಡುಗಡೆ ಮಾಡಿದ ರೀತಿಯಲ್ಲಿ ಸ್ಯಾಮ್‌ಸಂಗ್ ತನ್ನ ಫೋನಿನಲ್ಲಿ ಫೇಸ್‌ 3D ಸೇವೆಯನ್ನು ನೀಡಲಿದೆ. ಇದಕ್ಕಾಗಿಯೇ ಹೊಸ ಮಾದರಿಯ ಚಿಪ್‌ವೊಂದನ್ನು ಅಭಿವೃದ್ಧಿ ಮಾಡುತ್ತಿದೆ ಎನ್ನಲಾಗಿದೆ. ಈಗಾಗಲೇ ಗ್ಯಾಲೆಕ್ಸಿ 9 ಬಿಡುಗಡೆಗೆ ತಯಾರಿ ನಡೆಸಿದ್ದು, ಶೀಘ್ರವೇ ಮಾರುಕಟ್ಟೆಗೆ ಸ್ಯಾಮ್ ಸಂಗ್ X ಮಾರುಕಟ್ಟೆಯನ್ನು ಪ್ರವೇಶೀಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Samsung holes in display for larger screen. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot