ನೀಲಿ ಬಣ್ಣದಲ್ಲಿ ಸಿಗುತ್ತಿದೆ ಸ್ಯಾಮ್ ಸಂಗ್ ಎಸ್9 ಮತ್ತು ಎಸ್9+

|

ಫೋನ್ ಖರೀದಿಸುವಾಗ ಗ್ರಾಹಕರು ಕೇವಲ ಫೋನಿನ ಸ್ಟೋರೇಜ್, ಮೆಮೊರಿ, ಬ್ಯಾಟರಿ ಇಷ್ಟನ್ನೇ ಅಲ್ಲ ಬದಲಾಗಿ ಅದರ ಡಿಸೈನ್ ಮತ್ತು ಬಣ್ಣಗಳಿಂದಲೂ ಕೂಡ ಆಕರ್ಷಿತರಾಗುತ್ತಾರೆ. ಅದಕ್ಕಾಗಿಯೇ ಇದೀಗ ಫೋನ್ ತಯಾರಿಕಾ ಕಂಪೆನಿಗಳು ತಮ್ಮ ಫೋನ್ ನ್ನು ವಿಭಿನ್ನ ಬಣ್ಣಗಳ ಆವೃತ್ತಿಯಲ್ಲಿ ಬಿಡುಗಡೆಗೊಳಿಸುತ್ತಾರೆ.

ನೀಲಿ ಬಣ್ಣದಲ್ಲಿ ಸಿಗುತ್ತಿದೆ ಸ್ಯಾಮ್ ಸಂಗ್ ಎಸ್9 ಮತ್ತು ಎಸ್9+

ಈ ವರ್ಷದ ಆರಂಭದಲ್ಲಿ ಸೌತ್ ಕೊರಿಯಾದ ಎಲೆಕ್ಟ್ರಾನಿಕ್ ದೈತ್ಯ ಕಂಪೆನಿ ಎನ್ನಿಸಿಕೊಂಡಿರುವ ಸ್ಯಾಮ್ ಸಂಗ್ ತನ್ನ ಗ್ಯಾಲಕ್ಸಿ ಎಸ್9 ಮತ್ತು ಗ್ಯಾಲಕ್ಸಿ ಎಸ್9+ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸಿತ್ತು. ಇದೀಗ ಈ ಎರಡೂ ಫೋನ್ ಗಳ ಮತ್ತೊಂದು ವಿಭಿನ್ನ ಬಣ್ಣದ ಆಯ್ಕೆಯು ಗ್ರಾಹಕರಿಗಾಗಿ ಲಭ್ಯವಿದೆ.

ಹೌದು ಇದುವರೆಗೂ ಮಿಡ್ ನೈಟ್ ಬ್ಲಾಕ್, ಟೈಟಾನಿಯಂ ಗ್ರೇ, ಕೋರಲ್ ಬ್ಲೂ, ಲೈಲಾಕ್ ಪರ್ಪಲ್, ಸನ್ ರೈಸ್ ಗೋಲ್ಡ್ ಮತ್ತು ಬರ್ಗೆಂಡಿ ರೆಡ್ ಕಲರ್ ಗಳಲ್ಲಿ ಸಿಗುತ್ತಿದ್ದ ಈ ಫೋನ್ ಗಳು ಇದೀಗ ಐಸ್ ಬ್ಲೂ ಬಣ್ಣದಲ್ಲೂ ಕೂಡ ಲಭ್ಯವಾಗುತ್ತದೆ.

ಮಾರುಕಟ್ಟೆಯ ಬೆಲೆ:

ಇಂದಿನಿಂದ ಚೀನಾ ಮಾರುಕಟ್ಟೆಗಳಲ್ಲಿ ಐಸ್ ಬ್ಲೂ ಬಣ್ಣದ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9 ಮತ್ತು ಎಸ್9+ ಖರೀದಿಗೆ ಲಭ್ಯವಾಗುತ್ತಿದೆ.ಆದರೆ 128ಜಿಬಿ ವೇರಿಯಂಟ್ ನಲ್ಲಿ ಮಾತ್ರವೇ ಈ ಬಣ್ಣದ ಫೋನ್ ಲಭ್ಯವಿದೆ. ಕಂಪೆನಿಯು ಗ್ಯಾಲಕ್ಸಿ ಎಸ್9 ಗೆ 5499 ಯುವನ್ ಬೆಲೆ ನಿಗದಿ ಪಡಿಸಿದೆ. ಭಾರತೀಯ ಮಾರುಕಟ್ಟೆಗೆ ಇದನ್ನು ಬದಲಾಯಿಸಿ ಹೇಳುವುದಾದರೆ 57,425 ರೂಪಾಯಿ ಆಗಲಿದೆ. ಇನ್ನು ಗ್ಯಾಲಕ್ಸಿ ಎಸ್9+ ನ ಬೆಲೆ 6499 ಯುವನ್, ಭಾರತೀಯ ಮಾರುಕಟ್ಟೆಯಲ್ಲಿ 67,870 ರೂಪಾಯಿ ಆಗಲಿದೆ. ಈ ಹೊಸ ಸ್ಮಾರ್ಟ್ ಫೋನ್ ಗಳನ್ನು ನವೆಂಬರ್ 26 ರಿಂದ ಕಂಪೆನಿಯು ಶಿಪ್ಪಿಂಗ್ ಮಾಡಲಿದೆ.

ಫೋನಿನ ವೈಶಿಷ್ಟ್ಯತೆಗಳು:

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9,ಎಸ್9+ ಇನ್ಫಿನಿಟಿ ಎಡ್ಜ್ ಡಿಸ್ಪ್ಲೇಯನ್ನು ಹೊಂದಿದೆ. ಎಸ್9 5.8 ಇಂಚಿನ ಕ್ವಾಡ್ HD + ಕರ್ವ್ಡ್ ಸೂಪರ್ AMOLED ಡಿಸ್ಪ್ಲೇಯನ್ನು ಹೊಂದಿದೆ. ಎಸ್9+ 6.2 ಇಂಚಿನ ಕ್ವಾಡ್ HD + ಕರ್ವ್ಡ್ ಸೂಪರ್ AMOLED ಡಿಸ್ಪ್ಲೇಯನ್ನು ಒಳಗೊಂಡಿದೆ.ಎರಡೂ ಸ್ಮಾರ್ಟ್ ಫೋನ್ ಗಳು ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ನಿಂದ ಮೇಲ್ಬಾಗದಲ್ಲಿ ರಕ್ಷಾ ಕವಚವನ್ನು ಹೊಂದಿದೆ. ಎರಡೂ ಸ್ಮಾರ್ಟ್ ಫೋನ್ ಗಳು ಆಂಡ್ರಾಯ್ಡ್ 8.0 ಓರಿಯೋ ಆಪರೇಟಿಂಗ್ ಸಿಸ್ಟಮ್ ಮುಖಾಂತರ ರನ್ ಆಗುತ್ತದೆ ಮತ್ತು ಕಂಪೆನಿಯ ಸ್ವಂತ ಪ್ರೊಸೆಸರ್ Exynos 9810 ನ್ನು ಹೊಂದಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9 4ಜಿಬಿ ಮೆಮೊರಿ ಮತ್ತು ಗ್ಯಾಲಕ್ಸಿ ಎಸ್9+ 6ಜಿಬಿ ಮೆಮೊರಿಯನ್ನು ಹೊಂದಿದೆ. ಎರಡೂ ಡಿವೈಸ್ ನಲ್ಲಿ ಎರಡು ರೀತಿಯ ಸ್ಟೋರೇಜ್ ವೇರಿಯಂಟ್ ಗಳಿದೆ-64ಜಿಬಿ ಮತ್ತು 256ಜಿಬಿ. ಮೈಕ್ರೋ ಎಸ್ ಡಿ ಕಾರ್ಡ್ ನ್ನು ಕೂಡ ಬಳಕೆದಾರರು ಇನ್ಸ್ಟಾಲ್ ಮಾಡಿಕೊಳ್ಳಲು ಅವಕಾಶವಿದ್ದು 400ಜಿಬಿ ವರೆಗೆ ಸ್ಟೋರೇಜ್ ನ್ನು ಹಿಗ್ಗಿಸಿಕೊಳ್ಳಬಹುದು.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 9 3000mAh ಬ್ಯಾಟರಿಯನ್ನು ಹೊಂದಿದೆ ಮತ್ತು ಗ್ಯಾಲಕ್ಸಿ ಎಸ್9+ 3500mAh ನ ಬ್ಯಾಟರಿಯನ್ನು ಹೊಂದಿದೆ. ಎರಡೂ ಡಿವೈಸ್ ಗಳು ವಯರ್ ಲೆಸ್ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿದೆ.

Best Mobiles in India

Read more about:
English summary
Samsung introduces Galaxy S9 and S9+ Ice Blue Gradient colour variant

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X