ಭಾರತದಲ್ಲಿ ನೂತನ ವೇರಿಯಂಟ್‌ಗಳಲ್ಲಿ ಗ್ಯಾಲಕ್ಸಿ ನೋಟ್ 9 ಮತ್ತು ಎಸ್9+ ಬಿಡುಗಡೆ!

|

ಸ್ಯಾಮ್ ಸಂಗ್ ಅಂತಿಮವಾಗಿ ಎಲ್ಲಾ ಹೊಸ ಕಲರ್ ವೇರಿಯಂಟ್ ನ ಗ್ಯಾಲಕ್ಸಿ ನೋಟ್ 9 ಮತ್ತು ಗ್ಯಾಲಕ್ಸಿ ಎಸ್9+ ಫೋನ್ ಗಳನ್ನು ಹೊಸದಾಗಿರುವ ಕ್ರಮವಾಗಿ ಆಲ್ಫೈನ್ ವೈಟ್ ಮತ್ತು ಡುಯಲ್ ಟೋನ್ ಪೋಲರೈಸ್ ಬ್ಲೂ ಕಲರಿನ ವೇರಿಯಂಟ್ ಫೋನ್ ಗಳನ್ನು ಬಿಡುಗಡೆಗೊಳಿಸಿದೆ.

ಗ್ಲೋಬಲ್ ಮಾರುಕಟ್ಟೆಯಲ್ಲಿ ಈಗಾಗಲೇ ಈ ಪೋನ್ ಗಳು ಬಿಡುಗಡೆಗೊಂಡಿತ್ತು ಮತ್ತು ಈ ಎರಡೂ ಬಣ್ಣಗಳ ಫೋನಿನ ವಿಶೇಷತೆ ಏನೆಂದರೆ ಈಗಾಗಲೇ ಲಭ್ಯವಿರುವ ಇತರೆ ಬಣ್ಣಗಳ ಮಾಡೆಲ್ ನ ಫೋನ್ ಗಳಿಗಿರುವ ಬೆಲೆಯನ್ನೇ ಈ ಫೋನ್ ಗಳಿಗೂ ನಿಗದಿ ಮಾಡಲಾಗಿದೆ.

ಭಾರತದಲ್ಲಿ ನೂತನ ವೇರಿಯಂಟ್‌ಗಳಲ್ಲಿ ಗ್ಯಾಲಕ್ಸಿ ನೋಟ್ 9 ಮತ್ತು ಎಸ್9+ ಬಿಡುಗಡೆ!

ಆಲ್ಫೈನ್ ವೈಟ್ ಗ್ಯಾಲಕ್ಸಿ ನೋಟ್ 9 128GB ವೇರಿಯಂಟ್ ನ ಬೆಲೆ Rs 67,900. ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9+ ಪೋಲರೈಸ್ ಬ್ಲೂ 64GB ಸ್ಟೋರೇಜ್ ಮಾಡೆಲ್ ನ ಬೆಲೆ Rs 64,900.ಸ್ಯಾಮ್ ಸಂಗ್ ಆನ್ ಲೈನ್ ಶಾಪ್ ನಲ್ಲಿ ಪ್ರೀಆರ್ಡರ್ ಮಾಡಲು ಅವಕಾಶವಿದೆ ಮತ್ತು ಡಿಸೆಂಬರ್ 7 ರಿಂದ ಆಯ್ದ ಕೆಲವು ಆನ್ ಲೈನ್ ಫ್ಲ್ಯಾಟ್ ಫಾರ್ಮ್ ಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಆಫ್ ಲೈನ್ ಸ್ಟೋರ್ ಗಳಲ್ಲಿ ಡಿಸೆಂಬರ್ 10 ರಿಂದ ಮಾರಾಟ ಆರಂಭವಾಗುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ವಿಶೇಷತೆಗಳು

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ವಿಶೇಷತೆಗಳು

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 6.4 ಇಂಚಿನ ಕ್ವಾಡ್ HD+ ಸೂಪರ್ AMOLED ಇನ್ಫಿನಿಟಿ ಡಿಸ್ಪ್ಲೇ ಜೊತೆಗೆ 1440x2960 ಪಿಕ್ಸಲ್ ರೆಸಲ್ಯೂಷನ್ ನ್ನು ಹೊಂದಿದೆ ಇದರ ಅನುಪಾತ 18:5:9 ಆಗಿದೆ.ಆಕ್ಟಾ-ಕೋರ್ Exynos 9810 ಸಾಕೆಟ್ ನ್ನು ಹೊಂದಿದ್ದು 6GB ಮತ್ತು 8GB ಮೆಮೊರಿ ಆಯ್ಕೆಗಳಲ್ಲಿ ಪೇರ್ ಆಗಿರುತ್ತದೆ.

ಕ್ಯಾಮರಾ ವಿಭಾಗವನ್ನು ಪರಿಗಣಿಸುವುದಾದರೆ ನೋಟ್ 9 ಡುಯಲ್ ಕ್ಯಾಮರಾ ಸೆಟ್ ಅಪ್ ನ್ನು ಹೊಂದಿದ್ದು 12ಮೆಗಾ ಪಿಕ್ಸಲ್ ಡುಯಲ್ ಪಿಕ್ಸಲ್ ಸೆನ್ಸರ್ ಜೊತೆಗೆ ಟೆಲಿಫೋಟೋ ಜೊತೆದೆ LED ಫ್ಲ್ಯಾಶ್ ಹೊಂದಿದೆ. ಮುಂಭಾಗದ ಕ್ಯಾಮರಾವು 8 ಮೆಗಾಪಿಕ್ಸಲ್ ಸಾಮರ್ಥ್ಯದ್ದಾಗಿದ್ದು ಸೆಲ್ಫೀ ಮತ್ತು ಹೆಚ್ ಡಿ ವೀಡಿಯೋ ಕಾಲಿಂಗ್ ಗೆ ನೆರವಾಗುತ್ತದೆ.

ಈ ಸ್ಮಾರ್ಟ್ ಫೋನ್ ನ ಬ್ಯಾಟರಿ ಸಾಮರ್ಥ್ಯವು 4,000mAh ಆಗಿದ್ದು ಆಂಡ್ರಾಯ್ಡ್ 8.0 ಓರಿಯೋ ಆಪರೇಟಿಂಗ್ ಸಿಸ್ಟಮ್ ಮೂಲಕ ರನ್ ಆಗುತ್ತದೆ ಜೊತೆಗೆ ಸ್ಯಾಮ್ ಸಂಗ್ ಎಕ್ಸ್ ಪೀರಿಯನ್ಸ್ ಯುಎಕ್ಸ್ ಮೇಲ್ಬಾಗದಲ್ಲಿ ಇದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9 ವಿಶೇಷತೆಗಳು

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9 ವಿಶೇಷತೆಗಳು

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9+ 6.2 ಇಂಚಿನ ಸೂಪರ್ AMOLED ಇನ್ಫಿನಿಟಿ ಡಿಸ್ಪ್ಲೇ ಜೊತೆಗೆ 18.5.9 ಅನುಪಾತವನ್ನು ಹೊಂದಿದೆ . ಸ್ಯಾಮ್ ಸಂಗ್ ನ ಸ್ವಂತ Exynos 9810 ಪ್ರೊಸೆಸರ್ ನ್ನು ಹೊಂದಿದ್ದು ಇದು 6GB RAM ನ್ನು ಹೊಂದಿದೆ. ಎರಡು ಸ್ಟೋರೇಜ್ ಆಯ್ಕೆಗಳಿವೆ 64GB ಮತ್ತು 256GB.

ಆಪ್ಟಿಕಲ್ ಗಳ ಬಗ್ಗೆ ಹೇಳುವುದಾದರೆ ಇದರಲ್ಲಿ ಡುಯಲ್ ಕ್ಯಾಮರಾ ಸೆಟ್ ಅಪ್ ಇದ್ದು 12ಮೆಗಾಪಿಕ್ಸಲ್ ಸಾಮರ್ಥ್ಯದ ಲೆನ್ಸ್ ಆಗಿದೆ ಜೊತೆಗೆ LED ಫ್ಲ್ಯಾಶ್ ಇದೆ. ಮುಂಭಾಗದ ಕ್ಯಾಮರಾವು 8 ಮೆಗಾಪಿಕ್ಸಲ್ ದ್ದಾಗಿದ್ದು ಸೆಲ್ಫೀ ಮತ್ತು ವೀಡಿಯೋ ಕಾಲಿಂಗ್ ಗೆ ನೆರವಾಗುತ್ತದೆ.

ಬ್ಯಾಟರಿ

ಬ್ಯಾಟರಿ

ಗ್ಯಾಲಕ್ಸಿ ಎಸ್ 9+ 3,500mAh ಬ್ಯಾಟರಿಯನ್ನು ಹೊಂದಿದೆ ಮತ್ತು ಆಂಡ್ರಾಯ್ಡ್ ಓರಿಯೋ ಆಪರೇಟಿಂಗ್ ಸಿಸ್ಟಮ್ ಮೂಲಕ ರನ್ ಆಗುತ್ತದೆ ಜೊತೆಗೆ ಸ್ಯಾಮ್ ಸಂಗ್ ನ್ಯೂ ಗ್ರೇಸ್ ಯುಎಕ್ಸ್ ನ್ನು ಹೊಂದಿದೆ.

Most Read Articles
Best Mobiles in India

Read more about:
English summary
Samsung launched Galaxy Note 9 Alpine White and Galaxy S9+ Polaris Blue variant in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X