7,990 ರೂ.ಗೆ 'ಗ್ಯಾಲಾಕ್ಸಿ M10' ರಿಲೀಸ್!..ಇತಿಹಾಸದಲ್ಲೇ ಬಿಗ್ ಶಾಕ್!..ಬೆಚ್ಚಿಬಿದ್ದ ಶಿಯೋಮಿ!!

|

ಭಾರತದ ಮೊಬೈಲ್ ಮಾರುಕಟ್ಟೆಯೇ ಅಲ್ಲೋಲಕಲ್ಲೋಲವಾಗುವಂತಹ ಇಂತಹದೊಂದು ಮಹತ್ತರ ಬೆಳವಣಿಗೆಯಾಗಲಿದೆ ಎಂದು ಯಾರೂ ಕೂಡ ನಿರೀಕ್ಷಿಸಿರಲಿಲ್ಲ. ಆದರೆ, ದಕ್ಷಿಣ ಕೊರಿಯಾದ ತಂತ್ರಜ್ಞಾನ ದೈತ್ಯ ಸ್ಯಾಮ್‌ಸಂಗ್ ಕಂಪೆನಿ ಇಡೀ ಮೊಬೈಲ್ ಲೋಕವೇ ನಂಬಲೂ ಸಾಧ್ಯವಾಗದಂತಹ ಕೊಡುಗೆಯೊಂದನ್ನು ನೀಡಿ ಗಮನಸೆಳೆದಿದೆ. ಭಾರತದಲ್ಲಿ ಸ್ಯಾಮ್‌ಸಂಗ್‌ನ ನೂತನ 'ಗ್ಯಾಲಾಕ್ಸಿ ಎಂ' ಸರಣಿ ಸ್ಮಾರ್ಟ್‌ಫೋನ್‌ಗಳ ಬಿಡುಗಡೆಗೆ ಚೀನಾದ ಮೊಬೈಲ್ ಕಂಪೆನಿಗಳು ಪತರಗುಟ್ಟಿವೆ.!

ಹೌದು, ಭಾರತದಲ್ಲಿ ನೆನ್ನೆ ಬಿಡುಗಡೆಯಾದ 'ಗ್ಯಾಲಾಕ್ಸಿ ಎಂ' ಸರಣಿ ಸ್ಮಾರ್ಟ್‌ಫೋನ್‌ಗಳು ಮೊಬೈಲ್ ಮಾರುಕಟ್ಟೆಯನ್ನು ನಡುಗಿಸಿವೆ. ಕೇವಲ 7,990ರೂ.ಗಳಿಂದ ಆರಂಭವಾಗಿರುವ 'ಗ್ಯಾಲಾಕ್ಸಿ ಎಂ' ಸರಣಿ ಸ್ಮಾರ್ಟ್‌ಫೋನ್‌ಗಳು ಚೀನಾ ಮೊಬೈಲ್ ಕಂಪೆನಿಗಳಿಗೆ ಶವಪಟ್ಟಿಗೆ ತಯಾರಿಸಲು ತಯಾರಾಗಿವೆ. ಭಾರತ ಮೊದಲು ಎಂಬ ಹಣೆಪಟ್ಟಿಯನ್ನು ಹೊತ್ತು ಬಿಡುಗಡೆ ಯಾಗಿರುವ ಈ ಸ್ಮಾರ್ಟ್‌ಪೋನ್‌ಗಳು ಯಾವೊಂದು ಮೊಬೈಲ್ ಕಂಪೆನಿ ಕೂಡ ಊಹೆ ಮಾಡಿರದ ಬೆಲೆಯಲ್ಲಿ ದೇಶದಲ್ಲಿ ಬಿಡುಗಡೆಯಾಗಿವೆ.

7,990 ರೂ.ಗೆ 'ಗ್ಯಾಲಾಕ್ಸಿ M10' ರಿಲೀಸ್!..ಬೆಚ್ಚಿಬಿದ್ದ ಶಿಯೋಮಿ!!

ಭಾರತದಲ್ಲಿ ಚೀನಾ ಕಂಪೆನಿಗಳ ಆರ್ಭಟವನ್ನು ಕಡಿಮೆ ಮಾಡಲು ಸ್ಯಾಮ್‌ಸಂಗ್ ಕೇವಲ 7,990 ರೂ.ಗಳಿಂದ ತನ್ನ ನೂತನ ಸ್ಮಾರ್ಟ್‌ಫೋನ್ ಸರಣಿಯನ್ನು ಆರಂಭಿಸಿದೆ. ಈ ಸುದ್ದಿ ಕೇಳಿ ಮೊಬೈಲ್ ಪ್ರಿಯರು ಮೂಕವಿಸ್ಮಿತರಾದರೆ, ಇತರೆ ಮೊಬೈಲ್ ಕಂಪೆನಿಗಳು ತಲೆಮೇಲೆ ಕೈಹೊತ್ತು ಕುಳಿತಿವೆ. ಹಾಗಾದರೆ, ಭಾರತದಲ್ಲಿ ನೆನ್ನೆಯಷ್ಟೇ ಬಿಡುಗಡೆಯಾಗಿರುವ ನೂತನ ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಎಂ' ಸ್ಮಾರ್ಟ್‌ಫೋನ್‌ಗಳು ಹೇಗಿವೆ? ಚೀನಾ ಕಂಪೆನಿಗಳು ಬೆಚ್ಚಿಬಿದ್ದಿರುವುದು ಏಕೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

'ಗ್ಯಾಲಾಕ್ಸಿ ಎಂ' ಸ್ಮಾರ್ಟ್‌ಫೋನ್‌ಗಳ ಬಿಡುಗಡೆ!!

'ಗ್ಯಾಲಾಕ್ಸಿ ಎಂ' ಸ್ಮಾರ್ಟ್‌ಫೋನ್‌ಗಳ ಬಿಡುಗಡೆ!!

ಈ ಮೊದಲೇ ಸ್ಯಾಮ್‌ಸಂಗ್ ಕಂಪೆನಿ ಮಾಹಿತಿ ನೀಡಿದಂತೆ ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಎಂ' ಸ್ಮಾರ್ಟ್‌ಫೋನ್‌ಗಳು ನೆನ್ನೆ ರಾತ್ರಿ ನಡೆದ ಅದ್ದೂರಿ ಸಮಾರಂಭದಲ್ಲಿ ದೇಶದಲ್ಲಿ ಬಿಡುಗಡೆಯಾಗಿವೆ. ಭಾರತದ ಮೊಬೈಲ್ ಮಾರುಕಟ್ಟೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಸ್ಯಾಮ್‌ಸಂಗ್ ತಯಾರಿಸಿರುವ ನೂತನ ಸರಣಿಯ ಸ್ಮಾರ್ಟ್‌ಪೋನ್‌ಗಳು ಇವಾಗಿದ್ದು, ಚೀನಾ ಮೊಬೈಲ್ ಕಂಪೆನಿಗಳು ಸಹ ಬೆಚ್ಚಿಬೀಳುವಂತಹ ಬೆಲೆ ಮತ್ತು ಫೀಚರ್ಸ್‌ಗಳನ್ನು ಹೊತ್ತು ಮಾರುಕಟ್ಟೆಗೆ ಬಿಡುಗಡೆಯಾಗಿವೆ.

ಬೆಲೆ ಕೇವಲ 7,990 ರೂ.ಗಳಿಂದ ಆರಂಭ!

ಬೆಲೆ ಕೇವಲ 7,990 ರೂ.ಗಳಿಂದ ಆರಂಭ!

ಭಾರತದಲ್ಲಿ ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಂ ಸರಣಿ ಸ್ಮಾರ್ಟ್‌ಪೋನ್‌ ಬೆಲೆಗಳು ಕೇವಲ 7,990 ರೂ.ಗಳಿಂದ ಆರಂಭವಾಗಿವೆ. ಬೇಸಿಕ್ ಮಾದರಿಯ 2 ಜಿಬಿ RAM / 16 ಜಿಬಿ ಮಾದರಿಯ ''ಗ್ಯಾಲಾಕ್ಸಿ ಎಂ 10'' ಸ್ಮಾರ್ಟ್‌ಪೋನ್ ಬೆಲೆ 7,990 ರೂ.ಗಳಾದರೆ, 3 ಜಿಬಿ RAM / 32 ಜಿಬಿ ಮಾದರಿಯ 'ಗ್ಯಾಲಾಕ್ಸಿ ಎಂ 10 ಬೆಲೆ ಕೇವಲ 8,990ರೂ.ಗಳಾಗಿವೆ. ಇನ್ನು 3 ಜಿಬಿ RAM / 32 ಜಿಬಿ ಮಾದರಿಯ ಗ್ಯಾಲಾಕ್ಸಿ ಎಂ 20 ಸ್ಮಾರ್ಟ್‌ಫೋನ್ ಬೆಲೆ 10,990 ರೂ.ಗಳಾದರೆ, 4 ಜಿಬಿ RAM / 64 ಜಿಬಿ ಮೆಮೊರಿಯ ಎಂ20 ಫೋನ್ ಬೆಲೆ ಕೇವಲ 12,990.ರೂ.ಗಳಾಗಿವೆ.

ಬೆಲೆಗೆ ಊಹಿಸಲಾಗದ ಫೀಚರ್ಸ್!

ಬೆಲೆಗೆ ಊಹಿಸಲಾಗದ ಫೀಚರ್ಸ್!

ಸ್ಯಾಮ್‌ಸಂಗ್ ಕಂಪೆನಿಯ ಇತಿಹಾಸದಲ್ಲೇ ಅತ್ಯಂತ ಕಡಿಮೆ ಬೆಲೆ ಹೆಚ್ಚು ಫೀಚರ್ಸ್ ಹೊತ್ತಿರುವ ಸ್ಮಾರ್ಟ್‌ಫೋನ್‌ಗಳಾಗಿ ಗ್ಯಾಲಾಕ್ಸಿ ಎಂ ಸರಣಿ ಸ್ಮಾರ್ಟ್‌ಪೋನ್‌ಗಳು ಕಾಣಿಸಿಕೊಂಡಿವೆ. ಚೀನಾ ಮೊಬೈಲ್ ಕಂಪೆನಿಗಳಿಗಿಂತಲೂ ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯಂತ ಹೆಚ್ಚು ಫೀಚರ್ಸ್ ನೀಡಿದ ಕೀರ್ತಿಗೆ ಸ್ಯಾಮ್ಸಂಗ್ ಇದೀಗ ಪಾತ್ರವಾಗಿದೆ. ಇಷ್ಟು ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಿರುವ ಈ ಫೋನ್‌ಗಳು ಇನ್ಫಿನಿಟಿ ಡಿಸ್ಪ್ಲೇ, ಡ್ಯುಯಲ್ ಕ್ಯಾಮೆರಾ, 5,000 mAh ಬ್ಯಾಟರಿ ಮತ್ತು ಫೇಸ್‌ ಅನ್‌ಲಾಕ್‌ ಫೀಚರ್ಸ್ ಅನ್ನು ಹೊತ್ತು ಆಶ್ಚರ್ಯ ಮೂಡಿಸಿವೆ.

ಹೇಗಿದೆ ಗ್ಯಾಲಾಕ್ಸಿ M20?

ಹೇಗಿದೆ ಗ್ಯಾಲಾಕ್ಸಿ M20?

ಚೀನಾ ಮೊಬೈಲ್ ಕಂಪೆನಿಗಳು ಬೆಚ್ಚಿಬಿಳುವಂತೆ ಮಾಡಿರುವ ಸ್ಯಾಮ್‌ಸಂಗ್‌ನ ಗ್ಯಾಲಾಕ್ಸಿ M20 ಸ್ಮಾರ್ಟ್‌ಫೋನ್‌ ಇಂದು ಮೊಬೈಲ್ ಮಾರುಕಟ್ಟೆಯ ಹಾಟ್‌ಫೇವರೇಟ್ ಆಗುವ ಲಕ್ಷಣಗಳನ್ನು ಹೊಂದಿದೆ. ಗ್ಯಾಲಾಕ್ಸಿ ಎಂ 20 ಸ್ಮಾರ್ಟ್‌ಫೋನ್ ಬೆಲೆ ಕೇವಲ 10,990 ರೂ.ಗಳಿಂದ ಆರಂಭವಾಗಿದ್ದರೆ, ಅದರ ಫೀಚರ್ಸ್ ಮಾತ್ರ 25 ಸಾವಿರ ರೂ.ಗಳಿಂತ ಹೆಚ್ಚು ಬೆಲೆಯ ಸ್ಯಾಮ್‌ಸಂಗ್ ಫೋನ್‌ಗಳನ್ನು ಹೋಲುತ್ತಿವೆ. ನೋಚ್ ವಿನ್ಯಾಸದ 6.3 ಇಂಚ್ ಡಿಸ್‌ಪ್ಲೇ, 5,000mAh ಬ್ಯಾಟರಿಯಂತಹ ಫೀಚರ್ಸ್ ಮೊಬೈಲ್ ಮಾರುಕಟ್ಟೆಗೆ ಶಾಕ್ ನೀಡಿವೆ.

ಗ್ಯಾಲಾಕ್ಸಿ M20 ಡಿಸ್‌ಪ್ಲೇ!

ಗ್ಯಾಲಾಕ್ಸಿ M20 ಡಿಸ್‌ಪ್ಲೇ!

19.5: 9 ಆಕಾರ ಅನುಪಾತದೊಂದಿಗೆ 6.3 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಗ್ಯಾಲಾಕ್ಸಿ M20 ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ. 1080x2340 ಪಿಕ್ಸೆಲ್ ಸಾಮರ್ಥ್ಯದ ಇನ್ಫಿನಿಟಿ-ವಿ ಪ್ರದರ್ಶನದ ಈ ಡಿಸ್‌ಪ್ಲೇ ಮಲ್ಟಿಮೀಡಿಯಾ ಪ್ರಿಯರಿಗೆ ಹೇಳಿಮಾಡಿಸಿದಂತೆ ಇರಲಿದೆ. ಅದಕ್ಕಿಂತಲೂ ಇದು ಹೆಚ್ಚು ಗಟ್ಟಿಮುಟ್ಟಾದ ಡಿಸ್‌ಪ್ಲೇಯಾಗಿದೆ. ಇನ್ನು ಡಿಸ್‌ಪ್ಲೇ ನೋಚ್ ವಿನ್ಯಾಸದೊಂದಿಗೆ ಹಿಂಬಾಗದಲ್ಲಿ ಎರಡು ಕ್ಯಾಮೆರಾಗಳು ಮತ್ತು ಫಿಂಗರ್‌ಪ್ರಿಂಟ್ ಫೀಚರ್ ಇರುವುದನ್ನು ನೋಡಬಹುದಾಗಿದೆ.

ಗ್ಯಾಲಾಕ್ಸಿ M20 ಫೀಚರ್ಸ್!

ಗ್ಯಾಲಾಕ್ಸಿ M20 ಫೀಚರ್ಸ್!

3 ಜಿಬಿ ಮತ್ತು 4 ಜಿಬಿ RAM ಮಾದರಿಗಳಲ್ಲಿ ಎಕ್ಸನೋಸ್ಸ್ 7904 Soc ಪ್ರೊಸೆಸರ್ ಮತ್ತು ಮಾಲಿ-ಜಿ 71 ಜಿಪಿಯು ಹೊತ್ತು ಗ್ಯಾಲಾಕ್ಸಿ M20 ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಸ್ಯಾಮ್ಸಂಗ್ ಎಕ್ಸ್ಪೀರಿಯನ್ಸ್ 9.5 ಯುಎಕ್ಸ್ ಆಧರಿಸಿ ಆಂಡ್ರಾಯ್ಡ್ 8.1 ಓರಿಯೊದಲ್ಲಿ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆಯನ್ನು ನೀಡಲಿದೆ. 32 ಜಿಬಿ ಮತ್ತು 64 ಜಿಬಿ ಮೆಮೊರಿ ಮಾದರಿಗಳಲ್ಲಿ ಸ್ಮಾರ್ಟ್‌ಫೋನ್ ಲಭ್ಯವಿದೆ. ಮೈಕ್ರೊ ಎಸ್‌ಡಿ ಕಾರ್ಡಿನ ಮೂಲಕ 512 ಜಿಬಿ ವರೆಗೆ ಮೆಮೊರಿಯನ್ನು ವಿಸ್ತರಿಸಬ ಆಯ್ಕೆಯನ್ನು ಸ್ಮಾರ್ಟ್‌ಫೋನ್ ಹೊಂದಿದೆ.

ಗ್ಯಾಲಾಕ್ಸಿ M20 ಕ್ಯಾಮೆರಾ!

ಗ್ಯಾಲಾಕ್ಸಿ M20 ಕ್ಯಾಮೆರಾ!

ಸ್ಯಾಮ್‌ಸಂಗ್ ಗ್ಯಾಲಾಕ್ಸಿ M20 ಸ್ಮಾರ್ಟ್‌ಪೋನ್ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. 13-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕದ ಜೊತೆಗೆ ಎಫ್ / 1.9 ಅಪಾರ್ಚರ್‌ನಲ್ಲಿ 5-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸಂವೇದಕಗಳು ಹಿಂಬಾಗದ ಕ್ಯಾಮೆರಾದ ಶಕ್ತಿಯಾಗಿವೆ. ಇನ್ನು F/ 2.0 ಅಪಾರ್ಚರ್‌ನೊಂದಿಗೆ 8-ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾ ಇರುವುದು ಸೆಲ್ಫೀ ಪ್ರಿಯರಿಗೆ ಸಿಹಿಸುದ್ದಿಯಾಗಿದೆ. ಈ ಸೆಲ್ಫಿ ಕ್ಯಾಮೆರಾವು ಫೇಸ್‌ ಅನ್‌ಲಾಕ್‌ಗೂ ಸಹಾಯಕವಾಗಿದೆ.

 ಗ್ಯಾಲಾಕ್ಸಿ M20 ಇತರೆ ಫೀಚರ್ಸ್!

ಗ್ಯಾಲಾಕ್ಸಿ M20 ಇತರೆ ಫೀಚರ್ಸ್!

ಯುಎಸ್‌ಬಿ ಟೈಪ್ ಸಿ ಚಾರ್ಜರ್ ಮೂಲಕ ವೇಗದ ಚಾರ್ಜಿಂಗ್ ಬೆಂಬಲಿಸುವ 5,000 ಎಮ್ಎಎಚ್ ಬ್ಯಾಟರಿ, ಡ್ಯುಯಲ್ ಸಿಮ್ ಸಪೋರ್ಟ್, 512 ಜಿಬಿ ವರೆಗೆ ಮೆಮೊರಿಯನ್ನು ವಿಸ್ತರಿಸಬಹುದಾದ ಆಯ್ಕೆ, ಇನ್ಫಿನಿಟಿ-ವಿ ಡಿಸ್‌ಪ್ಲೇಯಂತಹ ಅತ್ಯುತ್ತಮ ಫೀಚರ್ಸ್ ಅನ್ನು ಹೊಂದಿದೆ. ಇದು ಬಜೆಟ್ ಸ್ಮಾರ್ಟ್‌ಫೋನ್ ಆದರೂ, " 14nm, 4x ಕಾರ್ಟೆಕ್ಸ್- A73 @ 1.8GHz ಮತ್ತು 4x ಕಾರ್ಟೆಕ್ಸ್- A53 @ 1.8GHz ಪ್ರೊಸೆಸರ್ ಅನ್ನು ಹೊಂದುವ ಮೂಲಕ ಸ್ಮಾರ್ಟ್‌ಫೋನ್ ಪ್ರಿಯರನ್ನು ಸೆಳೆಯಲು ತುದಿಗಾಲಿನಲ್ಲಿ ನಿಂತಿದೆ.

ಹೇಗಿದೆ ಗ್ಯಾಲಾಕ್ಸಿ M10?

ಹೇಗಿದೆ ಗ್ಯಾಲಾಕ್ಸಿ M10?

ಬಿಡುಗಡೆಯಾದ ಮೊದಲ ದಿನವೇ ಭಾರತದ ಮೊಬೈಲ್ ಮಾರುಕಟ್ಟೆಯನ್ನು ನಡಿಗಿಸಿರುವ ಸ್ಯಾಮ್‌ಸಂಗ್ ಕಂಪೆನಿಯ ಬೆಸ್ಟ್ ಬಜೆಟ್ ಸ್ಮಾರ್ಟ್‌ಫೋನ್ ಆಗಿ 'ಗ್ಯಾಲಾಕ್ಸಿ M10' ಹೊರಹೊಮ್ಮಿದೆ. ಮೊಬೈಲ್ ಪ್ರಿಯರು ಊಹಿಸಲಾಗದಷ್ಟು ಕಡಿಮೆ ಬೆಲೆಗೆ ಬಿಡುಗಡೆಯಾಗಿರುವ ಈ ಸ್ಮಾರ್ಟ್‌ಫೋನ್ 19: 9 ಆಕಾರ ಅನುಪಾತದೊಂದಿಗೆ 6.2 ಇಂಚಿನ ಹೆಚ್‌ಡಿ ಪ್ಲಸ್ ಬಿಗ್ ಡಿಸ್‌ಪ್ಲೇ, ಆಂಡ್ರಾಯ್ಡ್ 8.1 ಓರಿಯೊ, 3,400mAh ಬ್ಯಾಟರಿ ಪ್ಯಾಕ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಬೆಲೆ ಕೇವಲ 7,990 ರೂ.ಗಳಿಂದ ಆರಂಭವಾಗಿದೆ.

ಗ್ಯಾಲಾಕ್ಸಿ M10 ಡಿಸ್‌ಪ್ಲೇ!

ಗ್ಯಾಲಾಕ್ಸಿ M10 ಡಿಸ್‌ಪ್ಲೇ!

19:9 ಆಕಾರ ಅನುಪಾತದೊಂದಿಗೆ 6.2-ಇಂಚಿನ ಹೆಚ್‌ಡಿ ಪ್ಲಸ್ ಇನ್ಫಿನಿಟಿ- V ಡಿಸ್‌ಪ್ಲೇಯನ್ನು ಗ್ಯಾಲಾಕ್ಸಿ M10 ಸ್ಮಾರ್ಟ್‌ಫೋನಿನಲ್ಲಿ ನೋಡಬಹುದಾಗಿದೆ. ಆದರೆ, ಎಂ20ಗೆ ಹೋಲಿಸಿದರೆ ಈ M10 ಸ್ಮಾರ್ಟ್‌ಪೋನ್ ಸ್ಕ್ರೀನ್ ರೆಸಲ್ಯೂಷನ್ ಕಡಿಮೆಇದೆ. M10 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ 720x1520 ಪಿಕ್ಸೆಲ್ ಸಾಮರ್ಥ್ಯವನ್ನು ಹೊಂದಿದ್ದರೂ ಸಹ ಹೆಚ್‌ಡಿ ಪ್ಲಸ್ ವಿಡಿಯೋಗಳ ವೀಕ್ಷಣಗೆ ಅಡ್ಡಿಯಿಲ್ಲ. ಇನ್ನು ಈ ಫೋನ್ ಕೂಡ ಡಿಸ್ಪ್ಲೇ ನೋಚ್ ವಿನ್ಯಾಸವನ್ನು ಹೊಂದಿರುವುದು ವಿಶೇಷ ಎನ್ನಬಹುದು.

ಗ್ಯಾಲಾಕ್ಸಿ M10 ಫೀಚರ್ಸ್!

ಗ್ಯಾಲಾಕ್ಸಿ M10 ಫೀಚರ್ಸ್!

2 ಜಿಬಿ ಮತ್ತು 3 ಜಿಬಿ RAM ಮಾದರಿಗಳಲ್ಲಿ ಎಕ್ಸನೋಸ್ಸ್ 7904 Soc ಪ್ರೊಸೆಸರ್ ಮತ್ತು ಮಾಲಿ-ಜಿ 71 ಜಿಪಿಯು ಹೊತ್ತು ಗ್ಯಾಲಾಕ್ಸಿ M10 ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಈ ಫೋನ್ ಕೂಡ ಸ್ಯಾಮ್ಸಂಗ್ ಎಕ್ಸ್ಪೀರಿಯನ್ಸ್ 9.5 ಯುಎಕ್ಸ್ ಆಧರಿಸಿ ಆಂಡ್ರಾಯ್ಡ್ 8.1 ಓರಿಯೊದಲ್ಲಿ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆಯನ್ನು ನೀಡಲಿದೆ. 16 ಜಿಬಿ ಮತ್ತು 32 ಜಿಬಿ ಮೆಮೊರಿ ಮಾದರಿಗಳಲ್ಲಿ ಸ್ಮಾರ್ಟ್‌ಫೋನ್ ಲಭ್ಯವಿದೆ. ಮೈಕ್ರೊ ಎಸ್‌ಡಿ ಕಾರ್ಡಿನ ಮೂಲಕ 512 ಜಿಬಿ ವರೆಗೆ ಮೆಮೊರಿಯನ್ನು ವಿಸ್ತರಿಸಬ ಆಯ್ಕೆಯನ್ನು ಸ್ಮಾರ್ಟ್‌ಫೋನ್ ಹೊಂದಿದೆ.

 ಗ್ಯಾಲಾಕ್ಸಿ M10 ಕ್ಯಾಮೆರಾ!

ಗ್ಯಾಲಾಕ್ಸಿ M10 ಕ್ಯಾಮೆರಾ!

ಗ್ಯಾಲಾಕ್ಸಿ M10 ಸ್ಮಾರ್ಟ್‌ಪೋನ್ ಕೂಡ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. 13-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕದ ಜೊತೆಗೆ ಎಫ್ / 1.9 ಅಪಾರ್ಚರ್‌ನಲ್ಲಿ 5-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸಂವೇದಕಗಳು ಹಿಂಬಾಗದ ಕ್ಯಾಮೆರಾದ ಶಕ್ತಿಯಾಗಿವೆ. ಇನ್ನು F/ 2.0 ಅಪಾರ್ಚರ್‌ನೊಂದಿಗೆ 5 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾ ಇರುವುದು ಸೆಲ್ಫೀ ಪ್ರಿಯರಿಗೆ ಸಿಹಿಸುದ್ದಿಯಾಗಿದೆ. ಈ ಸೆಲ್ಫಿ ಕ್ಯಾಮೆರಾವು ಫೇಸ್‌ ಅನ್‌ಲಾಕ್‌ಗೂ ಸಹಾಯಕವಾಗಿದೆ.

Best Mobiles in India

English summary
Samsung M Series Phones Galaxy M20, Galaxy M10 Launched: Price in India, Specifications. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X