ನಷ್ಟದಲ್ಲಿದ್ದರೂ ಸ್ಯಾಮ್‌ಸಂಗ್ ವಿಶ್ವದ ಟಾಪ್ ಸ್ಮಾರ್ಟ್‌ಫೋನ್ ಕಂಪನಿ: ಲಾಭದಲ್ಲಿರುವ ಆಪಲ್‌ಗೆ 2ನೇ ಸ್ಥಾನ..!
2018 ಮೊದಲ ತ್ರೈಮಾಸಿಕದಲ್ಲಿ ಜಾಗತಿಕವಾಗಿ ಅತಿ ಹೆಚ್ಚು ಸ್ಮಾರ್ಟ್ ಫೋನ್ ಮಾರಾಟ ಮಾಡಿದ ಕಂಪೆನಿಗಳ ಪಟ್ಟಿಯೊಂದು ಬಿಡುಗಡೆಯಾಗಿದ್ದು, ಇಂಟರ್ ನ್ಯಾಷನಲ್ ಡೇಟಾ ಕಾರ್ಪೋರೇಷನ್(IDC) ಈ ವರದಿಯನ್ನು ಬಿಡುಗಡೆ ಮಾಡಿದೆ.

ಆಪಲ್ ಕಂಪನಿಗೆ ಸೆಡ್ಡು ಹೊಡೆದಿರುವ ಕೋರಿಯಾ ಮೂಲದ ಟೆಕ್ ದೈತ್ಯ ಸ್ಯಾಮ್ ಸಂಗ್ ಮೊದಲನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದು, ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಶೇ. 23.3% ಪಾಲನ್ನು ಹೊಂದಿದ ಎನ್ನಲಾಗಿದ್ದು, ಈ ಮೂಲಕ ವಿಶ್ವದಲ್ಲೇ ಟಾಪ್ ಸ್ಮಾರ್ಟ್‌ಫೋನ್ ಕಂಪನಿ ಎನ್ನುವ ಪಟ್ಟ ಪಡೆದುಕೊಂಡಿದೆ.

7.82 ಕೋಟಿ ಫೋನ್ ಮಾರಾಟ:
ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಸ್ಯಾಮ್ ಸಂಗ್ ವಿಶ್ವದಾದ್ಯಂತ 7.82 ಕೋಟಿ ಸ್ಮಾರ್ಟ್‌ಫೋನ್ ಗಳನ್ನು ಮಾರಾಟ ಮಾಡಿದೆ ಎನ್ನಲಾಗಿದೆ. 23.4% ಮಾರುಕಟ್ಟೆ ಪಾಲನ್ನು ಹೊಂದಿದ್ದರೂ ಸಹ ಸ್ಯಾಮ್‌ಸಂಗ್ ಕಳೆದ ಸಾಲಿಗಿಂತ 2.4% ಕುಸಿತವನ್ನು ಕಂಡಿದೆ.

ಎರಡನೇ ಸ್ಥಾನಕ್ಕೆ ಆಪಲ್:
15.6% ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ ಆಪಲ್ ಎರಡನೇ ಸ್ಥಾನದಲ್ಲಿದೆ. ಈ ಅವಧಿಯಲ್ಲಿ ಆಪಲ್ 5.22 ಕೋಟಿ ಐಫೋನ್ ಗಳನ್ನು ಮಾರಾಟ ಮಾಡಿದೆ, ಆಪಲ್ ಈ ಬಾರಿ 2.8% ಅಷ್ಟು ಮಾರುಕಟ್ಟೆ ಪಾಲನ್ನು ಹೆಚ್ಚಿಕೊಂಡಿದೆ.


ಮೂರರಲ್ಲಿ ಹುವಾವೆ:
11.8% ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದೆ ಹುವಾವೆ ಕಾಣಿಸಿಕೊಂಡಿದೆ. ಹುವಾವೆ 3.93 ಕೋಟಿ ಸ್ಮಾರ್ಟ್ ಫೋನ್‌ಗಳನ್ನು ಮಾರಾಟ ಮಾಡಿದೆ ಎನ್ನಲಾಗಿದೆ.

ಒಟ್ಟು 33.43 ಕೋಟಿ ಸ್ಮಾರ್ಟ್ ಫೋನ್:
2018 ಮೊದಲ ತ್ರೈಮಾಸಿಕದಲ್ಲಿ ಜಾಗತಿಕವಾಗಿ ಒಟ್ಟು 33.43 ಕೋಟಿ ಸ್ಮಾರ್ಟ್ ಫೋನ್ ಮಾರಾಟವಾಗಿದೆ ಎನ್ನಲಾಗಿದೆ. ಇದೇ ಕಳೆದ ವರ್ಷ ಅಂದರೆ 2017ರ ಮೊದಲ ತ್ರೈಮಾಸಿಕದಲ್ಲಿ ಜಾಗತಿಕವಾಗಿ 34.44 ಕೋಟಿ ಫೋನ್ ಮಾರಾಟವಾಗಿತ್ತು. ಕಳೆದ ಸಾಲಿಗೆ ಹೋಲಿಸಿಕೊಂಡರೆ ಈ ಬಾರಿ ಮಾರುಕಟ್ಟೆಯಲ್ಲಿ ಕುಸಿತವು ಖಂಡಿದೆ ಎನ್ನಲಾಗಿದೆ.


Click it and Unblock the Notifications








