ಐಫೋನ್‌ಗಿಂತಲೂ ದುಬಾರಿ ಈ ಹೊಸ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್…!

|

ಸ್ಮಾರ್ಟ್ ಫೋನ್ ಮಾರುಕಟ್ಟೆಯ ದೈತ್ಯ ಎಂದು ಕರೆಸಿಕೊಂಡಿರುವ ಕೋರಿಯಾ ಮೂಲದ ಸ್ಯಾಮ್ ಸಂಗ್ ಹೊಸ ದೊಂದು ಸಾಹಸಕ್ಕೆ ಮುಂದಾಗಿದೆ. ಸ್ಮಾರ್ಟ್ ಫೋನ್ ಲೋಕದಲ್ಲಿಯೇ ಯಾರು ಮಾಡದ ಹೊಸ ಸಾಧನೆಯೊಂದನ್ನು ಮಾಡಿದ್ದು, ಮಾರುಕಟ್ಟೆಗೆ ಹೊಸ ಮಾದರಿಯ ಸ್ಮಾರ್ಟ್ ಪೋನ್ ವೊಂದನ್ನು ಲಾಂಚ್ ಮಾಡಲು ಮುಂದಾಗಿದೆ. ಈಗಾಗಲೇ ಹೇಳಿಕೆ ನೀಡಿದಂತೆ ಮಾರುಕಟ್ಟೆಗೆ ಮಡಚ ಬಹುದಾದ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಲಿದೆ.

ಐಫೋನ್‌ಗಿಂತಲೂ ದುಬಾರಿ ಈ ಹೊಸ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್…!

ಈಗಾಗಲೇ ಮಾಧ್ಯಮಗಳಿಗೆ ಆಹ್ವಾನವನ್ನು ಕಳುಹಿಸಿರುವ ಸ್ಯಾಮ್ ಸಂಗ್, ಮೊದಲ ಬಾರಿಗೆ ಮಡಚುವ ಸ್ಮಾರ್ಟ್ ಫೋನ್ ಅನ್ನು ವಿಶ್ವದ ಅತೀ ದೊಡ್ಡ ಮಾರುಕಟ್ಟೆಯಾಗಿರುವ ಚೀನಾದಲ್ಲಿ ಈ ಹೊಸ ಮಾದರಿಯ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಲಿದೆ. ನವೆಂಬರ್ 1 ರಂದು ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲಿದೆ. ಇದು ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಅತೀ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ.

ಮಾರುಕಟ್ಟೆಯಲ್ಲಿ ಯಾವ ಮಾದರಿಯ ಸ್ಮಾರ್ಟ್ ಪೋನ್ ಅನ್ನು ಲಾಂಚ್ ಮಾಡಲಿದೆ ಎನ್ನುವ ಕುರಿತು ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದರೆ ಮೂಲಗಳು ತಿಳಿಸಿರುವ ಮಾದರಿಯಲ್ಲಿ ಮಡಚುವ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

ಐಫೋನ್‌ಗಿಂತಲೂ ದುಬಾರಿ ಈ ಹೊಸ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್…!

ಸ್ಯಾಮ್ ಸಂಗ್ ಲಾಂಚ್ ಮಾಡಲಿರುವ ಹೊಸ ಸ್ಮಾರ್ಟ್ ಪೋನ್ ನಲ್ಲಿ 7.8 ಇಂಚಿನ ಡಿಸ್ ಪ್ಲೇಯನ್ನು ನೀಡಲಾಗಿದ್ದು, ಬಳಕೆದಾರರಿಗೆ ಹೊಸ ಮಾದರಿಯ ಅನುಭವನ್ನು ನೀಡಲಿದೆ ಎನ್ನಲಾಗಿದೆ. ಇದರಿಂದಾಗಿ ಬಳಕೆದಾರರು ನೂತನ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದಲ್ಲದೇ ಈ ಸ್ಮಾರ್ಟ್ ಫೋನ್ $1300 ಕ್ಕೂ ಹೆಚ್ಚು ಬೆಲೆಯನ್ನು ನಿಗಧಿ ಮಾಡಲಿದೆ ಎನ್ನಲಾಗಿದೆ.

ಸದ್ಯ ಲೀಕ್ ಆಗಿರುವ ಮಾಹಿತಿಯನ್ನು ನೋಡಿದರೆ ಸ್ಯಾಮ್ ಸಂಗ್ ಲಾಂಚ್ ಮಾಡಲಿರುವ ಹೊಸ ಫೋನ್ ಐಫೋನ್ ಬೆಲೆಗಿಂತಲೂ ಅಧಿಕವಾಗಿರಲಿದೆ ಎನ್ನಲಾಗಿದ್ದು, ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಸಂಚಲನವನ್ನು ಮೂಡಿಸಲಿದೆ ಎನ್ನಲಾಗಿದೆ. ಇದರಿಂದಾಗಿ ಬೇರೆ ಕಂಪನಿಗಳು ಬೇಡಿಕೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಈಗಾಗಲೇ ಸ್ಯಾಮ್ ಸಂಗ್ ಲಾಂಚ್ ಮಾಡಲಿರುವ ಹೊಸ ಮಾದರಿಯ ಸ್ಮಾರ್ಟ್ ಫೋನ್ ಕುರಿತಂತೆ ಸಾಕಷ್ಟು ನಿರೀಕ್ಷೆಗಳು ಗರಿಗೆದರಿದೆ. ಈಗಾಗಲೇ ಅಭಿಮಾನಿಗಳು ಹೊಸ ಫೋನ್ ಲಾಂಚ್ ಆಗುವ ಕ್ಷಣಕ್ಕೆ ಲಾಂಚ್ ಆಗಲಿದೆ. ಬಳಕೆದಾರರಿಗೆ ಇದು ಹೊಸ ಮಾದರಿಯ ಆಯ್ಕೆಗಳನ್ನು ನೀಡಲಿದೆ.

Best Mobiles in India

English summary
Samsung's next flip smartphone is launching on November 9. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X