Just In
- 12 hrs ago
ನಾಯ್ಸ್ ಬಡ್ಸ್ ಸೋಲೋ ಇಯರ್ಫೋನ್ ಲಾಂಚ್! 36 ಗಂಟೆಗಳ ಪ್ಲೇಬ್ಯಾಕ್ ವಿಶೇಷ!
- 14 hrs ago
ಹೆಚ್ಪಿ ಸಂಸ್ಥೆಯಿಂದ ಮೂರು ಹೊಸ ಲ್ಯಾಪ್ಟಾಪ್ ಬಿಡುಗಡೆ! ವಿಶೇಷತೆ ಏನು?
- 14 hrs ago
ಕಡಿಮೆ ಪ್ರೈಸ್ಟ್ಯಾಗ್ನಲ್ಲಿ ಲಭ್ಯವಿರುವ ಜಿಯೋ ಡೇಟಾ ವೋಚರ್ಗಳು!
- 15 hrs ago
ಭಾರತದ ಮಾರುಕಟ್ಟೆಯಲ್ಲಿ ರಿಯಲ್ಮಿ ನಾರ್ಜೊ 30 ಪ್ರೊ 5G ಸ್ಮಾರ್ಟ್‌ಫೋನ್ ಬಿಡುಗಡೆ!
Don't Miss
- News
ಅಮೆರಿಕಾದಲ್ಲಿ ಒಂದೇ ದಿನ 72721 ಜನರಿಗೆ ಕೊರೊನಾವೈರಸ್!
- Lifestyle
ಗುರುವಾರದ ಭವಿಷ್ಯ ಹೇಗಿದೆ ನೋಡಿ
- Automobiles
ಸಿಎನ್ಜಿ ಕಾರು ಮಾರಾಟದಲ್ಲಿ ಹೊಸ ದಾಖಲೆ ಮಾಡಿದ ಮಾರುತಿ ಸುಜುಕಿ
- Sports
ಐಎಸ್ಎಲ್: ಮುಂಬೈ ಗೋಲಿನ ಮಳೆಯಲ್ಲಿ ಮುಳುಗಿದ ಒಡಿಶಾ
- Education
University Of Mysore Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ/ಪ್ರಾಜೆಕ್ಟ್ ಫೆಲೋ ಹುದ್ದೆಗೆ ಅರ್ಜಿ ಆಹ್ವಾನ
- Movies
ಬಿಗ್ಬಾಸ್ ಗೆ ಇನ್ನು ನಾಲ್ಕೇ ದಿನ: ಮನೆ ಹೇಗಿದೆ ಗೊತ್ತಾ?
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಫೆ. 24ರ ಮಾರುಕಟ್ಟೆ ದರ ಇಲ್ಲಿದೆ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಶ್ವದ ಮೊದಲ ಮಡುಚಬಹುದಾದ ಫೋನ್ ಬಿಡುಗಡೆಗೆ ಸ್ಯಾಮ್‌ಸಂಗ್ ಸಜ್ಜು!!
ವಿಶ್ವದ ಮೊದಲ ಮಡುಚಬಹುದಾದ (ಫೋಲ್ಡೆಬಲ್) ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸ್ಯಾಮ್‌ಸಂಗ್ ಕಂಪನಿ ತಯಾರಿ ನಡೆಸಿದೆ ಎನ್ನಲಾಗುತ್ತಿದೆ. ಮಡುಚಬಹುದಾದ ಸ್ಮಾರ್ಟ್‌ಫೋನ್ ಒಂದನ್ನು ಸ್ಯಾಮ್‌ಸಂಗ್ ಶೀಘ್ರದಲ್ಲೇ ಪರಿಚಯಿಸುತ್ತಿದೆ ಎಂಬ ಸುದ್ದಿ ವೈರಲ್ ಆಗುತ್ತಿದ್ದು, ಈ ವರ್ಷದ ಅಂತ್ಯದ ವೇಳೆಗೆ ವಿಶ್ವದ ಮೊದಲ ಮಡುಚುವ ಸ್ಮಾರ್ಟ್‌ಪೋನ್ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ.
ಈ ಹಿಂದೆಯೇ ಸ್ಯಾಮ್‌ಸಂಗ್ ಮೊಬೈಲ್ ವಿಭಾಗದ ಸಿಇಒ ಡಿಜೆ ಕೊಹ್ ಹೊಸ ರೀತಿಯ ಸ್ಮಾರ್ಟ್‌ಫೋನ್ ಪರಿಚಯಿಸುವುದಾಗಿ ತಿಳಿಸಿದ್ದರು. ಆದರೆ ಅದು ಮೊಬೈಲ್ ಮಾಡೆಲ್ನಲ್ಲೇ ಹೊಸ ಅವಿಷ್ಕಾರವಾಗಿರಲಿದೆ ಎಂದು ಎಲ್ಲೂ ಬಹಿರಂಗ ಪಡಿಸಿರಲಿಲ್ಲ. ಇದೀಗ ಮೊಬೈಲ್ ಮಾರುಕಟ್ಟೆಯಲ್ಲಿ ಕೇಳಿ ಬರುತ್ತಿರುವ ವರದಿಗಳ ಪ್ರಕಾರ, ಸ್ಯಾಮ್ಸಂಗ್ನ ಹೊಸ ಉತ್ಪನ್ನ ಮಡಚುವ (ಫೋಲ್ಡೆಬಲ್) ಸ್ಮಾರ್ಟ್‌ಫೋನ್ ಆಗಿರಲಿದೆ ಎಂದು ಹೇಳಲಾಗುತ್ತಿದೆ.
ಈ ನೂತನ ಫೋಲ್ಡೆಬಲ್ ಸ್ಮಾರ್ಟ್‌ಪೋನ್ ಟ್ಯಾಬ್ಲೆಟ್ ಫೋನ್ಗಳ ಮಾದರಿಯಲ್ಲಿ ಇರಲಿದ್ದು, ಅದನ್ನು ಸುಲಭವಾಗಿ ಮಡಚಿ ಪಾಕೆಟ್ನಲ್ಲಿಡ ಬಹುದು ಎಂದು ಹೇಳಲಾಗಿದೆ. ಇನ್ನು 2018ನೇ ವರ್ಷದಲ್ಲಿಯೇ ಗ್ರಾಹಕರಿಗೆ ತಾನೂ ಕೂಡ ಮಡುಚುವ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವುದಾಗಿ ಹುವಾವೆ ಕಂಪೆನಿ ಹೇಳಿಕೊಂಡಿದೆ. ಹಾಗಾದರೆ, ಶೀಘ್ರದಲ್ಲೇ ಮಡುಚುವ ಫೋನ್ ಗ್ರಾಹಕರ ಕೈಸೇರಬಹುದಾದ ಈ ಸಮಯದಲ್ಲಿ ಭವಿಷ್ಯದಲ್ಲಿ ಸ್ಮಾರ್ಟ್‌ಫೋನ್‌ಗಳು ಹೇಗಿರುತ್ತದೆ ಎಂಬ ಕುತೋಹಲದ ಮಾಹಿತಿಯನ್ನು ಮುಂದೆ ಓದಿ.

ಮಡುಚುವ ಮತ್ತು ವಿಸ್ತರಿಸಬಹುದಾದ ಸ್ಮಾರ್ಟ್‌ಫೋನ್!
ಮಡುಚುವ ಮತ್ತು ವಿಸ್ತರಿಸಬಹುದಾದ ಸ್ಮಾರ್ಟ್‌ಫೋನ್ ತಂತ್ರಜ್ಞಾನದ ಬಗ್ಗೆ ಈಗಾಗಲೇ ಅಭಿವೃದ್ದಿ ನಡೆಯುತ್ತಿದೆ. ಎಲ್‌ಜಿ, ಆಪಲ್ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳು ವಿಸ್ತರಿಸಬಹುದಾದ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಸಂಶೋಧನೆ ನಡೆಸುತ್ತಿವೆ. ಈಗ ಹುವಾವೆ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಈಗಾಗಲೇ ಸ್ವಲ್ಪಮಟ್ಟಿನ ಯಶಸ್ಸನ್ನು ಸಹ ಈ ತಂತ್ರಜ್ಞಾನ ಪಡೆದುಕೊಂಡಿರುವುದು ಭವಿಷ್ಯದಲ್ಲಿ ಮಡುಚಬಹುದಾದ ಮತ್ತು ವಿಸ್ತರಿಸಬಹುದಾದ ಸ್ಮಾರ್ಟ್‌ಫೋನ್ ಆಸೆಯನ್ನು ಹೊತ್ತಿದೆ.

ಪಾರದರ್ಶಕ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ!
ಸ್ಮಾರ್ಟ್‌ಫೋನ್ ತಂತ್ರಜ್ಞಾನದಲ್ಲಿ ಬಹುಬೇಗ ಬದಲಾವಣೆ ಕಾಣುವ ತಂತ್ರಜ್ಞಾನ ಎಂದು ಹೇಳಲಾಗುತ್ತಿರುವ ಪಾರದರ್ಶಕ ಡಿಸ್‌ಪ್ಲೇ ಕಲ್ಪನೆಯೇ ಅತ್ಯದ್ಬುತವಾಗಿದೆ.ಸ್ಮಾರ್ಟ್‌ಫೋನ್ ಒಂದು ಬದಿಯಿಂದ ಮತ್ತೊಂದು ಬದಿಯನ್ನು ಪಾರದರ್ಶಕವಾಗಿ ನೋಡಬಹುದಾದ ಪಾರದರ್ಶಕ ಡಿಸ್‌ಪ್ಲೇ ಇನ್ನೆನು ಕೆಲವೇ ವರ್ಷಗಳಲ್ಲಿ ಕಾಲಿಡುತ್ತದೆ ಎಂದರೆ ಆಶ್ಚರ್ಯವೇನಿಲ್ಲ.!

ವೈರ್‌ಲೆಸ್ ಚಾರ್ಜಿಂಗ್!
ಭವಿಷ್ಯದ್ಲಲಿ ಸ್ಮಾರ್ಟ್‌ಪೋನ್ ಸೇರಿದಂತೆ ಎಲ್ಲಾ ಸ್ಮಾರ್ಟ್ ಡಿವೈಸ್‌ಗಳು ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನವನ್ನು ನಂಬಲಾರದ ರೀತಿಯಲ್ಲಿ ಹೊಂದುತ್ತವೆ ಎಂದು ಹೇಳಲಾಗಿದೆ. ಮನೆಯಲ್ಲಿನ ಪವರ್ ಸ್ಟೇಷನ್ ಇಂದ ಎಲ್ಲಾ ಸ್ಮಾರ್ಟ್ ಡಿವೈಸ್‌ಗಳು ವೈರ್‌ಲೆಸ್ ಸಿಗ್ನಲ್‌ಗಳಿಂದ ಚಾರ್ಜ್ ಆಗುತ್ತವೆ. ಮನೆಯ ಯಾವುದೇ ಸ್ಥಳದಲ್ಲಿ ಚಾರ್ಜ್ ಸ್ವಯಂಚಾಲಿತ ಆಗುವ ಸಾಮರ್ಥ್ಯ ಅವುಗಳಿಗೆ ಇರಲಿದೆಯಂತೆ.

ಸ್ಮಾರ್ಟ್‌ವಾಚ್ ಪ್ರೊಜೆಕ್ಟರ್!
ಈಗ ಇರುವ ಸ್ಮಾರ್ಟ್‌ವಾಚ್‌ಗಳೇ ಮುಂದೆ ಮತ್ತಷ್ಟು ಬದಲಾಗುತ್ತವೆ. ಕೇವಲ ಒಂದು ಸ್ಮಾರ್ಟ್‌ವಾಚ್ ಸ್ಮಾರ್ಟ್‌ಫೋನ್ ರೀತಿಯ ಕಾರ್ಯನಿರ್ವಹಣೆಯನ್ನು ನೀಡಲಿದೆ. ಈ ಸ್ಮಾರ್ಟ್‌ವಾಚ್ ಹೊರಸೂಸುವ ಪಾರದರ್ಶಕ ಬೆಳಕಿನ ಪರದೆಯ ಮೂಲಕವೇ ಸ್ಮಾರ್ಟ್‌ಫೋನ್‌ನಲ್ಲಿ ನಿರ್ವಹಿಸಬಹುದಾದ ಎಲ್ಲಾ ಕಾರ್ಯಗಳನ್ನು ನಿಯಂತ್ರಿಸಬಹುದಾಗಿದೆ ಎಂದು ಟೆಕ್ ಪ್ರಪಂಚ ಈ ತಂತ್ರಜ್ಞಾನ ಅಭಿವೃದ್ದಿಯತ್ತ ಹೆಚ್ಚು ಒಲವು ತೋರಿದೆ.

3D ಸ್ಮಾರ್ಟ್‌ಫೋನ್ ಡಿಸ್‌ಪ್ಲೇ!
ಥಿಯೇಟರ್‌ಗಳಲ್ಲಿ ಸಿನಿಮಾಗಳನ್ನು 3D ಅನುಭವದಲ್ಲಿ ನೋಡುವ ರಿತಿಯಲ್ಲಿಯೇ, ಭವಿಷ್ಯದಲ್ಲಿ ಸ್ಮಾರ್ಟ್‌ಫೋನ್‌ನಲ್ಲಿಯೇ 3D ಅನುಭವ ನೀಡುವ ಡಿಸ್‌ಪ್ಲೇ ತಯಾರಾಗಲಿದೆ. ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಸಹಾಯದಿಂದ ಭವಿಷ್ಯದ ಸ್ಮಾರ್ಟ್‌ಫೋನ್‌ಗಳೆಲ್ಲವೂ 3D ಸ್ಮಾರ್ಟ್‌ಫೋನ್‌ಗಳಾಗಿರಲಿವೆ ಎಂದು ಟೆಕ್ ಪ್ರಪಂಚ ಊಹಿಸಿ ಅಭಿವೃದ್ದಿಯತ್ತ ದೃಷ್ಟಿಯನ್ನು ಹಾಯಿಸಿದೆ.

ಫೋನ್ ಬ್ಯಾಟರಿ ಖಾಲಿಯಾಗುವುದೇ ಇಲ್ಲ!
ಇನ್ನು ಹತ್ತು ವರ್ಷಗಳಲ್ಲಿ ಬ್ಯಾಟರಿ ಖಾಲಿಯಾಗುವುದೇ ಇಲ್ಲದ ಸ್ಮಾರ್ಟ್‌ಫೋನ್ ತಂತ್ರಜ್ಞಾನ ಅಭಿವೃದ್ದಿಯಾಗುತ್ತದೆ. ಕೇವಲ ಸೋಲಾರ್ ಪವರ್ ಮೂಲಕವೇ ಸ್ಮಾರ್ಟ್‌ಫೋನ್ ಸ್ವಯಂ ಚಾರ್ಜ್ ಆಗುವ ತಂತ್ರಜ್ಞಾನ ಬೆಳವಣಿಗೆಯಾಗಲಿದೆಯಂತೆ. ಈಗಾಗಲೇ ಈ ತಂತ್ರಜ್ಞಾನದ ಅಭಿವೃದ್ದಿಗಾಗಿ ಟೆಕ್ ಪ್ರಪಂಚ ಶ್ರಮಿಸುತ್ತಿರುವ ಬಗ್ಗೆ ಮಾಹಿತಿಗಳಿವೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190