ಸ್ಯಾನ್‌ಸುಯ್ ಹಾರಿಜೋನಾ ಸ್ಮಾರ್ಟ್‌ಫೋನು: 3999 ರೂ.ಗಳಿಗೆ ಲಭ್ಯ

Written By:

ಜಪಾನ್ ಮೂಲದ ಸ್ಯಾನ್‌ಸುಯ್ ಬಜೆಟ್ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ್ದು, ಸ್ಯಾನ್‌ಸುಯ್ ಹಾರಿಜೋನಾ ಸ್ಮಾರ್ಟ್‌ಫೋನು 3999 ರೂ.ಗಳಿಗೆ ಮಾರಾಟವಾಗುತ್ತಿದ್ದು, ಫ್ಲಿಪ್‌ಕಾರ್ಟಿನಲ್ಲಿ ಮಾತ್ರ ಎಕ್ಸ್‌ಕ್ಲೂಸಿವ್ ಆಗಿ ಲಭ್ಯವಿರಲಿದೆ. ಈ ಸ್ಮಾರ್ಟ್‌ಫೋನ್ 4G VoLTE ಸಪೋರ್ಟ್ ಮಾಡಲಿದೆ. 2000 mAh ಬ್ಯಾಟರಿ ಈ ಫೋನಿನಲ್ಲಿದೆ.

ಸ್ಯಾನ್‌ಸುಯ್ ಹಾರಿಜೋನಾ ಸ್ಮಾರ್ಟ್‌ಫೋನು: 3999 ರೂ.ಗಳಿಗೆ ಲಭ್ಯ

ಓದಿರಿ: ಉಚಿತವಾಗಿ ಆನ್‌ಲೈನ್‌ನಲ್ಲಿ ನೋಡಿ IPL ಮ್ಯಾಚ್: ಎಲ್ಲೆಲ್ಲಿ..?

ಸದ್ಯ ಭಾರತದಲ್ಲಿ ಲಭ್ಯವಿರುವ ಸ್ಯಾನ್‌ಸುಯ್ ಹಾರಿಜೋನಾ ಸ್ಮಾರ್ಟ್‌ಫೋನು ಬ್ಲಾಕ್ ಮತ್ತು ಗೋಲ್ಡನ್ ಬಣ್ಣದಾಗಿದೆ. ಈ ಫೋನಿಗೆ ಡುಯಲ್ ಸಿಮ್ ಹಾಕಬಹುದಾಗಿದೆ. ಅಲ್ಲದೇ ಈ ಫೋನು ಆಂಡ್ರಾಯ್ಡ್ 6 ನಲ್ಲಿ ಕಾರ್ಯನಿರ್ವಹಿಸಲಿದೆ. 4.5 ಇಂಚಿನ ಪರದೆಯನ್ನು ಇದು ಹೊಂದಿದೆ.

1.3GHz ಕ್ವಾಡ್ ಕೋರ್ ಪ್ರೋಸೆಸರ್ ಈ ಫೋನಿನಲ್ಲಿದೆ. 1 GB RAM ಮತ್ತು 8GB ಇಂಟರ್ನಲ್ ಮೊಮೊರಿಯನ್ನು ಹೊಂದಿರುವ ಈ ಫೋನಲ್ಲಿ ಮೆಮೊರಿ ಕಾರ್ಡ್ ಹಾಕುವ ಮೂಲಕ 64GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ. ಅಲ್ಲದೇ ಗ್ರಾಫಿಕ್ಸ್ ಗಾಗಿಯೇ GPU ಅಳವಡಿಸಲಾಗಿದೆ.

ಸ್ಯಾನ್‌ಸುಯ್ ಹಾರಿಜೋನಾ ಸ್ಮಾರ್ಟ್‌ಫೋನು: 3999 ರೂ.ಗಳಿಗೆ ಲಭ್ಯ

ಓದಿರಿ: ಉಚಿತವಾಗಿ ಜಿಯೋ ಟಿವಿ ಬಳಕೆದಾರರಿಗೆ 15 ಭಾಷೆಗಳ 432 ಲೈವ್ ಚಾನಲ್ ನೋಡುವ ಭಾಗ್ಯ...!

ಹಿಂಭಾಗದಲ್ಲಿ 5 MP ಕ್ಯಾಮೆರಾವು ಈ ಫೋನಿನಲ್ಲಿದೆ. ಮುಂಭಾಗದಲ್ಲಿ 3.3 MP ಕ್ಯಾಮೆರಾವನ್ನು ನೀಡಲಾಗಿದೆ. ಅಲ್ಲದೇ ಉತ್ತಮ ಚಿತ್ರಗಳನ್ನು ಸೆರೆಹಿಡಿಯುವ ಸಲುವಾಗಿ ಅನೇಕ ಆಯ್ಕೆಗಳನ್ನು ಕೊಡಮಾಡಲಾಗಿದೆ. ಈ ಪೋನು 4G VoLTE ಸಪೋರ್ಟ್ ಮಾಡಲಿದೆ.Read more about:
English summary
Japanese firm Sansui has launched a budget Android device called Horizon 1. The smartphone is priced at Rs. 3,999. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot