ಸ್ಯಾಮ್‌ಸಂಗ್‌ನಿಂದ ಪಕ್ಕಾ ಆಯ್ತು ಮಡಚುವ ಸ್ಮಾರ್ಟ್‌ಫೋನ್‌..! ಹೇಗಿರಲಿದೆ..?

  |

  ವಿಶ್ವದ ಮೊದಲ ಮಡಚಬಹುದಾದ ಸ್ಮಾರ್ಟ್‌ಫೋನ್‌ನ್ನು ಮಾರುಕಟ್ಟೆಗೆ ಪರಿಚಯಿಸಲು ಸ್ಯಾಮ್​ಸಂಗ್ ಕಂಪನಿ ತಯಾರಿ ನಡೆಸಿದ್ದು, ಮುಂದಿನ ವರ್ಷದಲ್ಲಿ ಬಿಡುಗಡೆ ಮಾಡುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಲೇ ಮಡಚಬಹುದಾದ ಸ್ಮಾರ್ಟ್‌ಫೋನ್‌ ಬಗ್ಗೆ ಆನ್‌ಲೈನ್‌ ಜಗತ್ತಿನಲ್ಲಿ ಬಹಳಷ್ಟು ಊಹೆಗಳು, ಅನೇಕ ಸೋರಿಕೆಗಳು ಬಂದಿವೆ. ಆದರೆ, ಈಗ ಸ್ವತಃ ಸ್ಯಾಮ್‌ಸಂಗ್‌ ಕಂಪನಿ ಈ ಬಗ್ಗೆ ಖಚಿತ ಪಡಿಸಿದೆ.

  ಸ್ಯಾಮ್‌ಸಂಗ್‌ನಿಂದ ಪಕ್ಕಾ ಆಯ್ತು ಮಡಚುವ ಸ್ಮಾರ್ಟ್‌ಫೋನ್‌..! ಹೇಗಿರಲಿದೆ..?

  ಹೌದು, ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ಬುಧವಾರ ನಡೆದ ಸ್ಯಾಮ್‌ಸಂಗ್‌ನ ವಾರ್ಷಿಕ ಡೆವಲಪರ್‌ ಸಮ್ಮೇಳನದಲ್ಲಿ ಮಡಚಬಹುದಾದ ಸ್ಮಾರ್ಟ್‌ಫೋನ್‌ನ ಮೂಲಮಾದರಿಯನ್ನು ಪ್ರದರ್ಶಿಸಿದೆ. ಹೆಚ್ಚು ಹೈಪ್‌ ಆಗಿರುವ ಕಾರಣಕ್ಕೆ ವಿನ್ಯಾಸದ ಮೂಲ ವೈಶಿಷ್ಟ್ಯಗಳನ್ನು ರಕ್ಷಿಸಲು ಸ್ಮಾರ್ಟ್‌ಫೋನ್‌ನ್ನು ಸಂಪೂರ್ಣವಾಗಿ ಅನಾವರಣಗೊಳಿಸಿಲ್ಲ. ಹಾಗಾದ್ರೇ SDC-2018ರಲ್ಲಿ ಮತ್ತೇನಾಯ್ತು..? ಮಡಚುವ ಸ್ಮಾರ್ಟ್‌ಫೋನ್‌ ಹೇಗಿದೆ ಎಂಬುದನ್ನು ಮುಂದೆ ನೋಡಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಪ್ರಾತ್ಯಕ್ಷಿತೆ

  SDC-2018ರಲ್ಲಿ ಸ್ಯಾಮ್‌ಸಂಗ್‌ ಭವಿಷ್ಯದಲ್ಲಿ ಮಡಚಬಹುದಾದ ಸ್ಮಾರ್ಟ್‌ಫೋನ್‌ ಹೇಗೆ ಕಾಣುತ್ತದೆ ಎಂಬುದರ ಬಗ್ಗೆ ಪ್ರಾತ್ಯಕ್ಷಿತೆಯನ್ನು ತೋರಿಸಿದೆ. ಈ ಮೂಲಕ ಹಲವಾರು ವರ್ಷಗಳ ಊಹಾಫೋಹಗಳು ಮತ್ತು ವದಂತಿಗಳಿಗೆ ಫುಲ್‌ ಸ್ಟಾಪ್‌ ಹಾಕಿದೆ.

  ಹೇಗಿದೆ ಸ್ಮಾರ್ಟ್‌ಫೋನ್‌..?

  ಸ್ಯಾಮ್‌ಸಂಗ್‌ನ ಮಡಚಬಹುದಾದ ಸ್ಮಾರ್ಟ್‌ಫೋನ್‌ ಹೊಸ ರೀತಿಯ ಮೊಬೈಲ್‌ ಅನುಭವಕ್ಕೆ ನಾಂದಿಯಾಗುತ್ತದೆ ಎಂದು ಸ್ಯಾಮ್‌ಸಂಗ್‌ ಹೇಳಿದೆ. ಇನ್ಫನಿಟಿ ಫ್ಲೆಕ್ಸ್‌ ಡಿಸ್‌ಪ್ಲೇ ಹೊಂದಿರುವ ಈ ಸ್ಮಾರ್ಟ್‌ಫೋನ್‌ ಟ್ಯಾಬ್ಲೆಟ್‌ ಮಾದರಿಯಲ್ಲಿ ಬರುತ್ತದೆ. 7.3 ಇಂಚ್‌ (1536x2152) ಮುಖ್ಯ ಡಿಸ್‌ಪ್ಲೇ ಹೊಂದಿದ್ದು, ಪುಸ್ತಕದ ರೀತಿಯಲ್ಲಿ ಮುಚ್ಚಬಹುದಾಗಿದೆ. ಈ ಸ್ಮಾರ್ಟ್‌ಫೋನ್‌ನ್ನು ಮಡಚಿದಾಗ 4.6 ಇಂಚು ಡಿಸ್‌ಪ್ಲೇಯನ್ನು ಬಳಕೆದಾರರು ಹೊರಭಾಗದಲ್ಲಿ ನೋಡಬಹುದು. ಈ 4.6 ಇಂಚಿನ ಡಿಸ್‌ಪ್ಲೇ 1960x840 ರೆಸ್ಯೂಲೂಷನ್‌ ಹೊಂದಿದ್ದು, 21:9 ಆಸ್ಪೆಕ್ಟ್‌ ರೇಷಿಯೋ ಹೊಂದಿದೆ.

  ಹೆಸರು ಮತ್ತು ವಿನ್ಯಾಸ ಅಂತಿಮವಾಗಿಲ್ಲ

  ಸ್ಯಾಮ್‌ಸಂಗ್‌ನ ಬಹುನಿರೀಕ್ಷಿತ ಮಡಚಬಹುದಾದ ಸ್ಮಾರ್ಟ್‌ಫೋನ್‌ಗೆ ಇನ್ನು ಯಾವುದೇ ಹೆಸರನ್ನು ಅಂತಿಮಗೊಳಿಸಿಲ್ಲ. ಅದಲ್ಲದೇ ವಿನ್ಯಾಸವೂ ಕೂಡ ಅಭಿವೃದ್ಧಿಯಾಗುತ್ತಿರುವುದರಿಂದ ಅದು ಸಹ ಅಂತಿಮವಾಗಿಲ್ಲ. ಕೆಲವೇ ತಿಂಗಳಲ್ಲಿ ಉತ್ಪಾದನೆಗೆ ಈ ಸ್ಮಾರ್ಟ್‌ಫೋನ್‌ ಹೋಗುತ್ತಿದ್ದು, ಮುಂದಿನ ವರ್ಷದ ಆರಂಭದಲ್ಲಿ ಮಾರುಕಟ್ಟೆಗೆ ಬರುತ್ತದೆ.

  ಮಲ್ಟಿ ಆಕ್ಟಿವ್‌ ವಿಂಡೋ

  ಸ್ಯಾಮ್‌ಸಂಗ್‌ SDC-2018ರಲ್ಲಿ ಮಡಚುವ ಸ್ಮಾರ್ಟ್‌ಫೋನ್‌ ಬಗ್ಗೆ ಕೆಲವೇ ಕೆಲವು ಅಂಶಗಳನ್ನು ಬಹಿರಂಗಪಡಿಸಿದೆ. ಆದರೆ, ದಕ್ಷಿಣ ಕೊರಿಯಾದ ಟೆಕ್‌ ದೈತ್ಯ ಹೊಸ ಮಡಚುವ ಸ್ಮಾರ್ಟ್‌ಫೋನ್‌ನಲ್ಲಿ ಮಲ್ಟಿ ಆಕ್ಟಿವ್‌ ವಿಂಡೋ ಇರುವ ಬಗ್ಗೆ ಖಚಿತಪಡಿಸಿದೆ. ಮಲ್ಟಿ ಆಕ್ಟಿವ್‌ ವಿಂಡೋ ಎಂದರೆ ಒಂದೇ ಸಲಕ್ಕೆ 3 ಆಪ್‌ಗಳನ್ನು ಬಳಸುವ ಆಯ್ಕೆಯನ್ನು ಬಳಕೆದಾರರಿಗೆ ನೀಡುತ್ತಿದೆ.

  ಕವರ್‌ ಡಿಸ್‌ಪ್ಲೇ

  ಮುಂದಿನ ತಲೆಮಾರಿನ ಸ್ಮಾರ್ಟ್‌ಫೋನ್‌ನಲ್ಲಿ ಹೊಸ ಕಮ್ಯುನಿಟಿ ಫೀಚರ್ ಕೂಡ ಇದ್ದು, ಕವರ್‌ ಡಿಸ್‌ಪ್ಲೇನಲ್ಲಿ ಆಪ್‌ ರನ್‌ ಆಗುತ್ತಿದ್ದರೆ, ಅದನ್ನು 7.3 ಇಂಚಿನ ಡಿಸ್‌ಪ್ಲೇಯಾಗಿ ವಿಸ್ತರಿಸಿದರೆ ಯಾವುದೇ ಅಡೆತಡೆಯಿಲ್ಲದೇ ಆಪ್‌ ಕಾರ್ಯನಿರ್ವಹಿಸುತ್ತದೆಯಂತೆ.

  LG ಮತ್ತು ಹುವಾವೆಯಿಂದಲೂ ತಯಾರು

  ಸ್ಯಾಮ್‌ಸಂಗ್‌ ಮಾತ್ರ ಮಡಚುವ ಸ್ಮಾರ್ಟ್‌ಫೋನ್‌ನ್ನು ನಿರ್ಮಾಣ ಮಾಡುತ್ತಿಲ್ಲ. ಬದಲಾಗಿ LG ಮತ್ತು ಹುವಾವೆ ಕಂಪನಿಗಳು ಸಹ ಭವಿಷ್ಯದ ಮಡಚುವ ಸ್ಮಾರ್ಟ್‌ಫೋನ್‌ ತಯಾರಿಯಲ್ಲಿ ಬ್ಯುಸಿಯಾಗಿವೆ. ಹೀಗಾಗಲೇ LG ತನ್ನ ಮುಂದಿನ ವರ್ಷದ ಕಾರ್ಯಕ್ರಮದಲ್ಲಿ ಮಡಚುವ ಸ್ಮಾರ್ಟ್‌ಫೋನ್‌ ಬಿಡುಗಡೆಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ. ಇತ್ತೀಚೆಗಷ್ಟೇ ಚೀನಾದಲ್ಲಿ ರೂಯು ಟೆಕ್ನಾಲಜಿ ಕಂಪನಿ ವಿಶ್ವದ ಮೊದಲ ಮಡಚುವ ಸ್ಮಾರ್ಟ್‌ಫೋನ್‌ ಫ್ಲೆಕ್ಸ್‌ಪೈ ಅನ್ನು ಬಿಡುಗಡೆ ಮಾಡಿತ್ತು.

  ಗೂಗಲ್‌ನಿಂದಲೂ ಬೆಂಬಲ

  ಸರ್ಚ್‌ ಇಂಜಿನ ದೈತ್ಯ ಗೂಗಲ್‌ ಕೂಡ ಬುಧವಾರ ಘೋಷಿಸಿದ್ದು, ಮಡಚುವ ಸ್ಮಾರ್ಟ್‌ಫೋನ್‌ಗಳಿಗೆ ಆಂಡ್ರಾಯ್ಡ್‌ ಮೊಬೈಲ್‌ OS ಅಧಿಕೃತವಾಗಿ ಬೆಂಬಲ ನೀಡುತ್ತದೆ ಎಂದು ಹೇಳಿದೆ. ಈ ಮೂಲಕ Original equipment manufacturerಗಳಿಗೆ ಆಫರ್‌ ನೀಡಿದ್ದು, ಮುಂದಿನ ತಲೆಮಾರಿನ ಮಡಚುವ ಸ್ಮಾರ್ಟ್‌ಫೋನ್‌ ಬಗ್ಗೆ ಕಾರ್ಯನಿರ್ವಹಿಸಬಹುದು ಎಂದು ಹೇಳಿದ್ದು, ಸ್ಕ್ರೀನ್‌ ಸೈಜ್‌ ಬಗ್ಗೆ ಯಾವುದೇ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಸ್ಮಾರ್ಟ್‌ಫೋನ್‌ ಕಂಪನಿಗಳಿಗೆ ಗೂಗಲ್‌ ಹೇಳಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  SDC 2018: Samsung foldable smartphone is real, and it’s coming next year. To know more this visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more