ಕಾರಿನಲ್ಲಿ ಸ್ಪೋಟಗೊಂಡ ಸ್ಮಾರ್ಟ್ ಫೋನ್- ಪ್ರಾಣಾಪಾಯದಿಂದ ಪಾರಾದ ಬ್ಯುಸಿನೆಸ್ ಮೆನ್

By Gizbot Bureau
|

ಫೋನ್ ಸ್ಪೋಟಗೊಳ್ಳುವ ಘಟನೆ ಪದೇ ಪದೇ ಅಲ್ಲಲ್ಲಿ ನಡೆಯುತ್ತಲೇ ಇರುತ್ತದೆ. ಇದೀಗ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಬೆಳಿಗ್ಗೆ ಆಫೀಸಿಗೆ ತೆರಳುತ್ತಿದ್ದ ಸಂದರ್ಬದಲ್ಲಿ ಕಾರಿನಲ್ಲಿ ಇಟ್ಟುಕೊಂಡಿದ್ದ ಮೊಬೈಲ್ ಸ್ಪೋಟಗೊಂಡ ಪರಿಣಾಮ ಬ್ಯುಸಿನೆಸ್ ಮೆನ್ ಒಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇಂಡೋರ್ ನಲ್ಲಿ ನಡೆದಿದೆ.

ಘಟನೆ ಏನು?

ಘಟನೆ ಏನು?

ಅನಿಲ್ ನಾಯರ್, ಕೃಷಿ ಯಂತ್ರೋಪಕರಣಗಳನ್ನು ಮಾರಾಟ ಮಾಡುವ ಕೆಲಸದಲ್ಲಿ ತೊಡಗಿಕೊಂಡಿರುವ ಇವರು ತಮ್ಮ ಆಫೀಸ್ ಇರುವ ಆರ್ಬಿಟ್ ಮಾಲ್ ಪ್ರದೇಶದಲ್ಲಿ ಕಾರಿನಲ್ಲಿ ತೆರಳುತ್ತಿದ್ದರು. ಪ್ಯಾಸೆಂಜರ್ ಸೀಟ್ ನಲ್ಲಿ ತಮ್ಮ ಫೋನ್ ನ್ನು ಇಟ್ಟಿದ್ದರು.

ನಾಯರ್ ಹೇಳಿಕೆ:

ನಾಯರ್ ಹೇಳಿಕೆ:

ರಾಬರ್ಟ್ ಸ್ಕ್ವಾರ್ ಬಳಿ ತೆರಳುತ್ತಿದ್ದಾಗ ಮೊಬೈಲ್ ನಲ್ಲಿ ಸಣ್ಣದೊಂದು ಕಿಡಿ ಹೊತ್ತಿಕೊಂಡಿತು ಮತ್ತು ಹೊಗೆ ಬರಲು ಪ್ರಾರಂಭವಾಯಿತು. ನಾನು ಕೂಡಲೇ ನನ್ನ ಕಾರನ್ನು ರಸ್ತೆಯ ಪಕ್ಕದಲ್ಲಿ ಪಾರ್ಕ್ ಮಾಡಿದೆ ಮತ್ತು ಫೋನ್ ನ್ನು ತೆಗೆದು ಹೊರಗಡೆ ಎಸೆದೆ. ನಾನು ಅಲ್ಲಿಂದ ತೆರಳುತ್ತಿದ್ದಂತೆ ಫೋನ್ ಸ್ಪೋಟಗೊಂಡಿತು ಮತ್ತು ಬೆಂಕಿ ದೊಡ್ಡದಾಗಿ ಹೊತ್ತಿಕೊಂಡಿತು ಎಂದು ಹೇಳುತ್ತಾರೆ ನಾಯರ್.

ಅದೃಷ್ಟ:

ಅದೃಷ್ಟ:

ಪ್ರತಿದಿನದಂತೆ ಅವರು ಫೋನನ್ನ ಜೇಬಿನಲ್ಲಿ ಇಟ್ಟುಕೊಂಡಿದ್ದರೆ ದೊಡ್ಡ ಮಟ್ಟದ ಗಾಯಗಳಾಗುವ ಸಾಧ್ಯತೆ ಇತ್ತು. ಆದರೆ ಅಂದು ಅದ್ಯಾಕೋ ತಮ್ಮ ಫೋನನ್ನು ಪ್ಯಾಸೆಂಜರ್ ಸೀಟ್ ನಲ್ಲಿ ಇಟ್ಟುಕೊಂಡು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಹಾಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಂಪೆನಿ ಪ್ರತಿಕ್ರಿಯೆ:

ಕಂಪೆನಿ ಪ್ರತಿಕ್ರಿಯೆ:

ಘಟನೆ ಸಂಭವಿಸಿದ ಕೂಡಲೇ ನಾಯರ್ ಕಂಪೆನಿಯ ಟಾಲ್ ಫ್ರೀ ನಂಬರ್ ಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ ಮತ್ತು ಕಂಪೆನಿಯು ಸರ್ವೀಸ್ ಇಂಜಿನಿಯರ್ ನ್ನು ಮನೆಗೆ ಕಳುಹಿಸಿ ಫೋನ್ ನ್ನು ಕಲೆಕ್ಟ್ ಮಾಡಿಕೊಳ್ಳಲು ಹೇಳಿದೆ. ಆದರೆ ನಾಯರ್ ಇಂಜಿನಿಯರ್ ಗೆ ಫೋನ್ ನ್ನು ನೀಡಿಲ್ಲ. ಕಂಪೆನಿಯ ಏರಿಯಾ ಮ್ಯಾನೇಜರ್ ಜೊತೆಗೆ ಮಾತನಾಡಿ ನಂತರ ಫೋನ್ ನ್ನು ಹಸ್ತಾಂತರಿಸುತ್ತೇನೆ ಎಂದು ತಿಳಿಸಿದ್ದಾರೆ.

Best Mobiles in India

Read more about:
English summary
Smartphone explodes in car, narrow escape for business man

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X