ಜಗತ್ತನ್ನೇ ಬದಲಾಯಿಸಲು ಬರುತ್ತಿದೆ 2019 ರ ಸ್ಮಾರ್ಟ್ ಫೋನ್ ಗಳು

|

ಈ ವರ್ಷದಲ್ಲಿ ಸ್ಮಾರ್ಟ್ ಫೋನ್ ದುನಿಯಾದಲ್ಲಿ ಟ್ರೆಂಡ್ ಸೃಷ್ಟಿ ಮಾಡಿದ್ದು ಅಂದರೆ ಅದು ನಾಚ್ ಸ್ಕ್ರೀನ್ ಡಿಸೈನ್. ಕೆಲವೇ ಕೆಲವನ್ನು ಹೊರತುಪಡಿಸಿದರೆ ಹೆಚ್ಚಿನ ಎಲ್ಲಾ ಪ್ರಸಿದ್ಧ ಹ್ಯಾಂಡ್ ಸೆಟ್ ಗಳಲ್ಲೂ ಕೂಡ ನಾಚ್ ಸ್ಕ್ರೀನ್ ಡಿಸೈನ್ ಇರುತ್ತಿತ್ತು. ಇನ್ನೊಂದು ಪ್ರಮುಖ ವಿಚಾರವೇನೆಂದರೆ 2018 ರಲ್ಲಿ ಡುಯಲ್ ಕ್ಯಾಮರಾ ಫೋನ್ ಗಳು ಬಜೆಟ್ ನಲ್ಲಿ ಸಿಗುವ ಡಿವೈಸ್ ಗಳಾದವು. ಹೆಚ್ಚಿನ ಬ್ರ್ಯಾಂಡ್ ಗಳು ಈ ವರ್ಷ ಮಲ್ಟಿ-ಕ್ಯಾಮರಾ ಫೋನ್ ಗಳ ತಯಾರಿಕೆಯಲ್ಲಿ ಪ್ರಯೋಗಗಳನ್ನು ಮಾಡಿದವು.

2019 ರ ಸ್ಮಾರ್ಟ್ ಫೋನ್ ನಲ್ಲಿ ಏನೆಲ್ಲಾ ಇರಲಿದೆ ಗೊತ್ತಾ?

ಕಳೆದ ಕೆಲವು ತಿಂಗಳಿನಿಂದ ಚೀನಾದ ಬ್ರ್ಯಾಂಡ್ ಹೊರತಂಡಿರುವ ಗ್ರೇಡಿಯಂಟ್ ಬಣ್ಣದ ವೇರಿಯಂಟ್ ನ ಫೋನ್ ಹೊಸ ಟ್ರೆಂಡ್ ಸೃಷ್ಟಿಮಾಡುತ್ತಿದೆ. ಇದೀಗ 2018 ಮುಗಿಯುವುದಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ. 2019 ಕ್ಕೆ ಹೆಜ್ಜೆ ಇಡುತ್ತಿರುವ ಸಂದರ್ಬದಲ್ಲಿ ಮುಂದಿನ ವರ್ಷ ಯಾವೆಲ್ಲ ರೀತಿಯ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಹವಾ ಎಬ್ಬಿಸುವ ಸಾಧ್ಯತೆ ಇದೆ ಎಂಬ ಬಗ್ಗೆ ನೋಡೋಣ. 2019 ರ ನಿರೀಕ್ಷೆಯ ಸ್ಮಾರ್ಟ್ ಫೋನ್ ಗಳ ಪಟ್ಟಿ ಇಲ್ಲಿದೆ ನೋಡಿ.

ಮಲ್ಟಿ ಕ್ಯಾಮರಾ ಫೋನ್ ಗಳು

ಮಲ್ಟಿ ಕ್ಯಾಮರಾ ಫೋನ್ ಗಳು

ಹುವಾಯಿ ನಮಗೆ ವಿಶ್ವದ ಟ್ರಿಪಲ್ ಕ್ಯಾಮರಾವಿರುವ ವಿಶ್ವದ ಮೊದಲ ಸ್ಮಾರ್ಟ್ ಫೋನ್ ನ್ನು ನೀಡಿದೆ ಅದುವೇ ಪಿ20 ಪ್ರೋ. ಸ್ಯಾಮ್ ಸಂಗ್ ಒಂದು ಹೆಜ್ಜೆ ಮುಂದೆ ಸಾಗಿದೆ ಕ್ವಾಡ್ ಕ್ಯಾಮರಾ ಗ್ಯಾಲಕ್ಸಿ ಎ9 ನ್ನು ನೀಡಿದೆ. ಇದಿಷ್ಟಕ್ಕೆ ನೀವು ಹುಬ್ಬೇರಿಸಿದ್ದರೆ ಮುಂದಿನ ವರ್ಷದ ನಿರೀಕ್ಷೆಯ ಫೋನ್ ಬಗ್ಗೆ ಕೇಳಿದರೆ ಮತ್ತಷ್ಟು ಆಶ್ಚರ್ಯಗೊಳ್ಳುತ್ತೀರಿ. ಹೌದು 2019 ಕ್ಕೆ 16 ಕ್ಯಾಮರಾವಿರುವ ಫೋನ್ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ. ನೋಕಿಯಾ 9 ನಲ್ಲಿ ಪೆಂಟಾ-ರೇರ್ ಕ್ಯಾಮರಾ ಅಂದರೆ ಹಿಂಭಾಗದ ಕ್ಯಾಮರಾವಿರುವ ಫೋನ್ ಪರಿಚಯಿಸುವ ನಿರೀಕ್ಷೆ ಇದೆ. ಇದರ ಚಿತ್ರಗಳು ಈಗಾಗಲೇ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.

ಅಮೇರಿಕಾದ ಬ್ರ್ಯಾಂಡ್ ಲೈಟ್ ಕೂಡ ಈಗಾಗಲೇ ಹಿಂಭಾಗದಲ್ಲಿ 9 ಕ್ಯಾಮರಾಗಳನ್ನು ಅಳವಡಿಸಿರುವ ಫೋನ್ ತಯಾರಿಕೆಗಾಗಿ ಕಾರ್ಯ ನಿರ್ವಹಿಸುತ್ತಿದೆ.

ಈ ಪ್ರೊಜೆಕ್ಟ್ ಲೈಟ್ ಕಂಪೆನಿಗೆ ಅಂತಹ ಮಹತ್ವಾಕಾಂಕ್ಷೆಯ ಪ್ರೊಜೆಕ್ಟ್ ಆಗಿಲ್ಲದೇ ಇರಬಹುದು ಯಾಕೆಂದರೆ ಕಂಪೆನಿ ಈಗಾಗಲೇ L16 ಪಾಯಿಂಟ್ ಮತ್ತು ಶೂಟ್ ಸ್ನ್ಯಾಪರ್ ಜೊತೆಗೆ 16 ಸೆನ್ಸರ್ ನ ಕಿಟ್ ನ್ನು ಹೊಂದಿದೆ. ಎಲ್ ಜಿ ಸಂಸ್ಥೆ ಕೂಡ 16 ಕ್ಯಾಮರಾ ಅರೇಂಜ್ ಮೆಂಟ್ ಬಗ್ಗೆ ತನ್ನ ಪೇಟೆಂಟ್ ಜೊತೆಗೆ ಚರ್ಚೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಸ್ಮಾರ್ಟ್ ಫೋನ್ ಕ್ಯಾಮರಾಗಳು ಅಂತಿಮವಾಗಿ ತಮ್ಮ ಹಣಕ್ಕೆ ತಕ್ಕಂತೆ ಡಿಎಸ್ಎಲ್ಆರ್ನ್ನು ನೀಡುತ್ತವೆ ಎಂಬುದೊಂದು ಕುತೂಹಲಕಾರಿಯಾಗಿರುವ ಅಂಶವಾಗಿದೆ. ಮಲ್ಟಿಪಲ್ ಕ್ಯಾಮರಾ ಸೆಟ್ ಅಪ್ ಹಲವು ಸೆನ್ಸರ್ ಗಳ ಕೊರತೆಯನ್ನು ಮಾಡುವ ಸಾಧ್ಯತೆ ಇದೆ. ಈಗಾಗಲೇ ರೂಪಿಸಿರುವ ತಂತ್ರಗಾರಿಯು ಯಶಸ್ಸು ಕಂಡರೆ ಖಂಡಿತ ಕ್ಯಾಮರಾ ಫೋನ್ ಗಳು ದೊಡ್ಡ ಬಿರುಗಾಳಿ ಎಬ್ಬಿಸುತ್ತವೆ ಎಂಬುದು ಮಾತ್ರ ಸುಳ್ಳಲ್ಲ.

ಮಡಚುವ ಫೋನ್ ಗಳು :

ಮಡಚುವ ಫೋನ್ ಗಳು :

ಹುವಾಯಿ ಈಗಾಗಲೇ ಸ್ಯಾಮ್ ಸಂಗ್ ನ ಮಾರುಕಟ್ಟೆಯ ಶೇರ್ ನ್ನು ಆಕ್ರಮಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ ಮತ್ತು ಆಪಲ್ ನ್ನು ಆಶ್ಚರ್ಯಗೊಳಿಸುವ ರೀತಿಯಲ್ಲಿ ವಿಶ್ವದ ಎರಡನೇ ತಯಾರಿಕಾ ಕಂಪೆನಿಯಾಗುವಲ್ಲಿ ಯಶಸ್ವಿಯಾಗಿದೆ. ಇದೀಗ ಸ್ಯಾಮ್ ಸಂಗ್ ಗ್ಯಾಲಕ್ಸಿ ಲೈನ್ ಗೆ ಕಠಿಣ ಸಮಯ ಎದುರಾಗುವ ಸಾಧ್ಯತೆ ಇದೆ ಯಾಕೆಂದರೆ ಈಗಾಗಲೇ ನಂಬರ್ 1 ಸ್ಥಾನದ ಮೇಲೆ ಕಣ್ಣಿಟ್ಟಿರುವ ಸೌತ್ ಕೊರಿಯಾದ ಸಂಸ್ಥೆ ಫೋಲ್ಡಿಂಗ್ ಫೋನ್ ಅಥವಾ ಮಡಚುವ ಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ನಿರ್ಧಾರ ಮಾಡಿದೆ.

ಮುಂಬರುವ ಈ ಫೋನ್ ನ್ನು ಗ್ಯಾಲಕ್ಸಿ ಎಕ್ಸ್ ಅಥವಾ ಎಫ್ ಎಂದು ಕರೆಯುವ ಸಾಧ್ಯತೆ ಇದೆ. ಇದರ ವೈಶಿಷ್ಟ್ಯತೆಯೆಂದರೆ 4.6-ಇಂಚಿನ ಡಿಸ್ಪ್ಲೇ ಹೊರಗಡೆ ಇರಲಿದೆ. ಇದು ಪುಸ್ತಕದಂತೆ ತೆರೆದುಕೊಳ್ಳುತ್ತದೆ ಮತ್ತು ಅದು 7.3-ಇಂಚಿನ ಸ್ಕ್ರೀನ್ ಇರಲಿದೆ. ನೀವು ಟ್ಯಾಬ್ಲೆಟ್ ನ್ನು ಇಷ್ಟಪಡುವವರಾಗಿದ್ದು ಅದನ್ನು ಜೇಬಿನಲ್ಲಿ ಇಟ್ಟುಕೊಳ್ಳುವಂತಿದ್ದರೆ ಎಂದು ಅಲೋಚಿಸಿದ್ದರೆ ಈಗಿನಿಂದಲೋ ಹಣ ಉಳಿತಾಯ ಮಾಡಿ ಮುಂದಿನ ಸ್ಯಾಮ್ ಸಂಗ್ ಫೋನ್ ಖರೀದಿಗೆ ಪ್ಲಾನ್ ಮಾಡಬಹುದು.

ಸ್ಯಾಮ್ ಸಂಗ್ ಮತ್ತು ಹುವಾಯಿ ಎರಡೂ ಕೂಡ ಫೋಲ್ಡೇಬಲ್ ಫೋನ್ ಗೆ ಅಂತಿಮ ರೂಪವನ್ನು ನೀಡುತ್ತಿದೆ. ಸುದ್ದಿಮೂಲದ ಪ್ರಕಾರ ಹುವಾಯಿ ಫೋನ್ 5ಇಂಚಿನ ಮುಂಭಾಗ ಡಿಸ್ಪ್ಲೇ ಮತ್ತು ತೆರೆದಾಗ 8 ಇಂಚಿನ ಡಿಸ್ಪ್ಲೇಯನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ. ಸಿಇಓ ಕೆನ್ ಹು ಅವರು ಹೇಳಿರುವಂತೆ ಸ್ಯಾಮ್ ಸಂಗ್ ನ ಫೋಲ್ಡೇಬಲ್ ಫೋನ್ ನಂತೆ ಹುವಾಯಿ ಫೋನ್ ಕೂಡ 5ಜಿ ಯನ್ನು ತನ್ನ ಫೋಲ್ಡೇಬಲ್ ಫೋನ್ ಗೆ ಸೇರಿಸಿರುತ್ತದೆ.

ಪಾಪ್-ಅಪ್ ಕ್ಯಾಮರಾ ಫೋನ್ ಗಳು :

ಪಾಪ್-ಅಪ್ ಕ್ಯಾಮರಾ ಫೋನ್ ಗಳು :

ಗ್ರಾಹಕರು ದೊಡ್ಡ ಪರದೆಯ ಫೋನ್ ಗಳನ್ನು ಬಯಸುತ್ತಾರೆ ಆದರೆ ಅದೇ ಸಮಯಕ್ಕೆ ಕಾಂಪ್ಯಾಕ್ಟ್ ಫಾರ್ಮ್ ಫ್ಯಾಕ್ಟರ್ ನ್ನು ಕೂಡ ಬಯಸುತ್ತಾರೆ. ಹಾಗಾಗಿ ತಯಾರಕರಿಗೆ ಇದೆರಡನ್ನೂ ಒಟ್ಟಿಗೆ ಸಾಧಿಸುವುದು ಅಂದರೆ ಫೋನಿನ ದೇಹದ ಅನುಪಾತದಲ್ಲಿ ದೊಡ್ಡ ಸ್ಕ್ರೀನ್ ಮಾಡುವುದು ಒಂದು ಸವಾಲು. ಅದನ್ನು ಸಾಧಿಸುವುದಕ್ಕಾಗಿ ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ಹಿಂಭಾಗಕ್ಕೆ ಹಾಕಲಾಯಿತು. ಮತ್ತೊಂದು ಪ್ರಮುಖ ಪರಿಹಾರವೆಂದರೆ ಇನ್-ಡಿಸ್ಪ್ಲೇ ಸಲ್ಯೂಷನ್ ನ್ನು ಆರಿಸಿಕೊಂಡರು. ಆದರೆ ಸೆಲ್ಫೀ ಕ್ಯಾಮರಾ ಮತ್ತು ಹಲವಾರು ಸೆನ್ಸರ್ ಗಳ ಬಂಚ್ ನ್ನು ಒಟ್ಟಿಗೆ ಇಡುವುದು ದರ ಜೊತೆಗೆ ಫುಲ್ ಸ್ಕ್ರೀನ್ ಡಿಸ್ಪ್ಲೇ ಇಡುವುದು ನಿಜಕ್ಕೂ ಕಷ್ಟದ ಕೆಲಸವಾಗಿತ್ತು.

ಇದೇ ಕಾರಣಕ್ಕೆ ನಾಚ್ ಸ್ಕ್ರೀನ್ ಡಿಸೈನ್ ಗಳನ್ನು ರೂಪಿಸಲಾಯಿತು. ವಿವೋ ಮತ್ತು ಓಪ್ಪೋ ಗಳು ಮುಂಭಾಗದ ಕ್ಯಾಮರಾ ಮತ್ತು ಸೆನ್ಸರ್ ನ್ನು ಮೆಕನೈಸ್ಡ್ ಸ್ಲೈಡರ್ ನಲ್ಲಿ ಇರಿಸುವ ಮೂಲಕ ಪ್ರಗತಿ ಸಾಧಿಸಿದೆ.ಫೈಂಡ್ ಎಕ್ಸ್ ಮತ್ತು ವಿವೋ ನೆಕ್ಸ್ ಗಳು ನೂತನ ಐಫೋನ್ ಮತ್ತು ಗ್ಯಾಲಕ್ಸಿ ಡಿವೈಸ್ ಗಳ ಫುಲ್ ಸ್ಕ್ರೀನ್ ಡಿಸೈನ್ ನ್ನೂ ಕೂಡ ಹೇಗೆ ಸೋಲಿಸಿದೆ ಎಂಬುದನ್ನು ನಂಬಲಸಾಧ್ಯವಾದದ್ದಾಗಿದೆ. ಈ ಟ್ರೆಂಡ್ ನ್ನು ಮುಂದಿನ ವರ್ಷಗಳಲ್ಲಿ ಹೆಚ್ಚಿನ ಬ್ರ್ಯಾಂಡ್ ಗಳು ಪಾಲಿಸುವ ಸಾಧ್ಯತೆ ಇದೆ. ಶಿಯೋಮಿ, ಹಾನರ್, ಲೆನೊವಾ ಈಗಾಗಲೇ ಈ ರೀತಿಯ ಸ್ಲೈಡರ್ ಫೋನ್ ನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಸ್ಕ್ರೀನ್ ಜೊತೆಗೆ ಹೋಲ್ ಇರುವ ಸ್ಮಾರ್ಟ್ ಫೋನ್ ಗಳು

ಸ್ಕ್ರೀನ್ ಜೊತೆಗೆ ಹೋಲ್ ಇರುವ ಸ್ಮಾರ್ಟ್ ಫೋನ್ ಗಳು

ಯಾಂತ್ರೀಕತೆಯ ಪಾಪ್ ಅಪ್ ಕ್ಯಾಮರಾವನ್ನು ಬಳಸುವುದು ಸದ್ಯದ ಮಟ್ಟಿಗೆ ನಾಚ್ ಸ್ಕ್ರೀನ್ ಡಿಸೈನ್ ನ್ನು ತೆಗೆದುಹಾಕಲು ಇರುವ ಅತ್ಯುತ್ತಮ ಮಾರ್ಗವಾಗಿದೆ. ಆದರೆ, ಇದು ಬೆಲೆಯನ್ನು ಅಧಿಕಗೊಳಿಸುತ್ತದೆ ಮತ್ತು ದೀರ್ಘಕಾಲದಲ್ಲಿ ವೈಫಲ್ಯಕ್ಕೆ ಕಾರಣವಾಗುವ ಸಾಧ್ಯತೆಗಳು ನಿಚ್ಚಳವಾಗಿದೆ.

ಹಾಗಾಗಿ ಕೆಲವು ತಯಾರಕ ಸಂಸ್ಥೆಗಳು ಇದರ ಮಧ್ಯದ ಶ್ರೇಣಿಯ ವಿಲಕ್ಷಣ ನಾಚ್ ಮತ್ತು ಪಾಪ್ ಅಪ್ ಮೆಕಾನಿಸಂನ್ನು ಹುಡುಕುತ್ತಿದ್ದಾರೆ. ಇದು ಸೆಲ್ಫೀ ಕ್ಯಾಮರಾಕ್ಕಾಗಿ ಸ್ಕ್ರೀನ್ ನಲ್ಲಿಯೇ ಹೋಲ್ ಒಂದನ್ನು ಪರಿಚಯಿಸುವ ಪ್ರಯತ್ನವಾಗಿದೆ. ಇದು ಸ್ಕ್ರೀನಿನಲ್ಲಿ ಡೆಡ್ ಪಿಕ್ಸಲ್ ಗಳ ದಟ್ಟವಾದ ಸ್ಥಳದಂತೆ ಕಾಣುತ್ತದೆ. ಸ್ಕ್ರೀನಿನಲ್ಲೊಂದು ಕಪ್ಪು ಚುಕ್ಕಿಯಿದ್ದಂತೆ ಕಾಣುತ್ತದೆ.ಈ ಐಡಿಯಾದ ಹಿಂದಿನ ಉದ್ದೇಶವೇನೆಂದರೆ ಸ್ಕ್ರೀನ್ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುವ ಕಾರಣದಿಂದ ಸರಿಯಾದ ಜಾಗದ ವ್ಯವಸ್ಥೆಯನ್ನು ಕ್ಯಾಮರಾಕ್ಕೆ ಮಾಡಿಕೊಡುವುದೇ ಆಗಿದೆ.

ಇದು ಫೋನಿನ ಅಂದ ಹಾಳುಮಾಡುತ್ತದೆ ಮತ್ತು ಬಳಕೆದಾರರಿಗೆ ಕಿರಿಕಿರಿಯಾಗಬಹುದು ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ಇತ್ತೀಚೆಗೆ ಐಫೋನ್ ಮತ್ತು ಪಿಕ್ಸಲ್ 3ಎಕ್ಸ್ಎಲ್ ನಲ್ಲಿ ಪರಿಚಯಿಸಲಾಗಿರುವ ನಾಚ್ ಸ್ಕ್ರೀನ್ ನಷ್ಟು ಕಿರಿಕಿರಿಯನ್ನು ಉಂಟುಮಾಡುವುದಿಲ್ಲ ಎಂದು ಭಾವಿಸಲಾಗುತ್ತಿದೆ.ಇನ್ಫಿನಿಟಿ ಓ ಡಿಸ್ಪ್ಲೇ ಡಿಸೈನ್ ಎಂದು ಕರೆಯಲಾಗುವ ಈ ಡಿಸೈನಿನ ಫೋನ್ ನ್ನು ಮೊದಲು ಸ್ಯಾಮ್ ಸಂಗ್ ಸಂಸ್ಥೆ ಬಿಡುಗಡೆಗೊಳಿಸಲಿದೆ. ಮೊದಲ ಫೋನ್ ಇನ್ನೂ ಬಿಡುಗಡೆಗೊಂಡಿಲ್ಲ. ಹುವಾಯಿ ಕೂಡ ಇದೇ ರೀತಿಯ ಡಿಸೈನಿನ ಫೋನಿನ ಟೀಸರ್ ತೋರಿಸುತ್ತಿದೆ. ಖಂಡಿತ ಈ ಡಿಸೈನ್ ಮುಂದಿನ ವರ್ಷ ವಿಚಿತ್ರ ಅನುಭವವನ್ನು ಮಾರುಕಟ್ಟೆಯಲ್ಲಿ ಸೃಷ್ಟಿ ಮಾಡುತ್ತದೆ ಎಂಬುದು ಮಾತ್ರ ನಿಜ.

Best Mobiles in India

English summary
Smartphone Trends To Watch Out For In 2019

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X