ಮೊಬೈಲಿನಲ್ಲಿ SMS ಓಕೆ. ಆದ್ರೆ ಪರೀಕ್ಷೆಯಲ್ಲಿ ಯಾಕೆ?

By Varun
|
ಮೊಬೈಲಿನಲ್ಲಿ SMS ಓಕೆ. ಆದ್ರೆ ಪರೀಕ್ಷೆಯಲ್ಲಿ ಯಾಕೆ?

I h8 dis, U der, frenz njoy lyf, f9 and gud 9t, cya.

ಮೇಲಿನವಾಕ್ಯಗಳನ್ನು ಓದಿದರೆ ನಿಮಗೆ ಏನು ಅನ್ನಿಸುತ್ತೆ. ಅರ್ಧಂಬರ್ಧ ಇಂಗ್ಲೀಷ್ ಬರದೇ ಇರೋ ವ್ಯಕ್ತಿ ಬರ್ದಿರಬಹುದು, ಇಲ್ಲಾ ಟೈಪ್ ಮಾಡಿರೋನ ಕೀಬೋರ್ಡ್ ಸರಿಇಲ್ಲ ಅಂತಾ ಅನ್ನಿಸುತ್ತಾ?

ಇಲ್ಲಾ ಕಣ್ರೀ, ಇದು SMS ಲ್ಯಾಂಗ್ವೇಜ್. ಒಂದು SMS ಕಳಿಸೋಕೆ ಇರೋ 140 ಕ್ಯಾರೆಕ್ಟರ್ಸ್ ಸ್ಪೇಸ್ ನಲ್ಲಿ ಎಷ್ಟು ಅಂತಾ ಪದಗಳನ್ನ ಬಳಸಕ್ಕೆ ಆಗುತ್ತೆ. ಅದಕ್ಕೇ ಮತ್ತೆ, ಅಕ್ಷರಗಳನ್ನ ಕಟ್ ಮಾಡಿ ಚಿಕ್ಕದಾಗಿ ಮೆಸೇಜ್ ಕಳಿಸುತ್ತೇವೆ. ಆದ್ರೆ ಈ SMS ರೀತಿಯಲ್ಲಿ ಬರೆಯುವ ಅಭ್ಯಾಸ ಸ್ಕೂಲ್ ಹಾಗು ಕಾಲೇಜಿನಲ್ಲಿ ನೋಟ್ಸ್ ಬರೆಯಕ್ಕೆ, ಪರೀಕ್ಷೇಲಿ ಉತ್ತರ ಬರೆಯೋಕ್ಕೂ ಅಂಟಿಕೊಂಡುಬಿಟ್ಟಿದೆ.

ಇದು ಕಂಪ್ಯೂಟರ್ ಹಾಗು ಮೊಬೈಲ್ ಯುಗ.ಹಾಗಾಗಿ ವಿದ್ಯಾರ್ಥಿಗಳ ಕೈಯಲ್ಲಿ ಪೆನ್ನು, ಪುಸ್ತಕ ಹಿಡಿಯೋಕಿಂತಾ ಮೊಬೈಲಿನ ಕೀಪ್ಯಾಡ್ ಇಲ್ಲವೆ ಚಾಟ್ ಮಾಡಲು ಕಂಪ್ಯೂಟರ್ ಮೇಲೆ ಕೈ ಜಾಸ್ತಿ ಹೋಗುತ್ತೆ. ಅಭ್ಯಾಸ ಬಲ ನೋಡಿ, ಅದಕ್ಕೇ ಈಗೀಗ ಕ್ಲಾಸಿನಲ್ಲಿ ನೋಟ್ಸ್ ಬರೆಯುವುದು ಕೂಡಾ SMSನಂತೆ ಚುಟುಕಾಗಿ ಬರೆಯುತ್ತಾರಂತೆ. ಹೋದ್ರೆ ಹೋಗ್ಲಿ ಅಂದ್ರೆ ಪರೀಕ್ಷೆಯಲ್ಲೂ ಉತ್ತರವನ್ನು SMS ರೀತಿಯಲ್ಲಿ ಬರೆಯುತ್ತಾರಂತೆ.

ಈ ರೀತಿಯ ಬೆಳವಣಿಗೆ ನಮ್ಮ ಸ್ಕೂಲ್ ಹಾಗು ಕಾಲೇಜುಗಳಲ್ಲಿ ಜಾಸ್ತಿ ಆಗಿದೆಯಂತೆ. ಉದಾಹರಣೆಗೆ ಭೋಪಾಲ್ ನ ಯಾವುದೋ ಕಾಲೇಜಿನ ಹುಡುಗ - Tym mng is imp in lyf.( time management is important in life) ಅಂತಉತ್ತರ ಬರೆದಿದ್ದನಂತೆ. ಈ ಥರಾ ಬರೆದರೆ ಯಾವ ಲೆಕ್ಚರರ್ ಗೆ ಅರ್ಥಾ ಆಗುತ್ತೆ ಹೇಳಿ. ಮೊದಲೇ ಮೌಲ್ಯಮಾಪನ ಮಾಡುವಾಗ ಯಾವ ಮೂಡ್ನಲ್ಲಿ ಇರುತ್ತಾರೋ ಏನೋ. ಇನ್ನ ಈ ಥರಾ ಎಲ್ಲಾ ಬರೆದರೆ ಚೊಂಬೇಶ್ವರಾನೇ. ಅದಕ್ಕೇ ಕೆಲವು ಶಾಲಾ ಕಾಲೇಜುಗಳಲ್ಲಿ ಈ ರೀತಿ ಉತ್ತರ ಬರೆದರೆ ಮಾರ್ಕ್ಸ್ ಕಟ್ ಮಾಡುತ್ತಾರಂತೆ. ಈ ರೀತಿ ಬರೆಯೋದ್ರಿಂದ ಗ್ರಾಮರ್ ಮರೆತು ಹೋಗುತ್ತೆ ಅಂತ ಆತಂಕ ವ್ಯಕ್ತಪಡಿಸುತ್ತಾರೆ ಕೆಲವು ಅಧ್ಯಾಪಕರು.

ಈಗ ಕಾಲ ಬದಲಾಗಿದೆ. ಮೊದಲೆಲ್ಲಾ ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಪ್ರಬಂಧದ ರೀತಿಯ ಉತ್ತರ ಬರೆಯಬೇಕಿತ್ತು. ಈಗ ಕಾಂಪಿಟೇಶನ್ ಜಾಸ್ತಿ ಇದೆ, ಸಮಯನೂ ಕಮ್ಮಿ ಇದೆ. ಅದಕ್ಕೆ ಮತ್ತೆ ನ್ಯೂ ಟೈಪ್ ಪ್ರಶ್ನೆಗಳು ಬಂದಿರೋದು. ಬಹುತೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಚುಟುಕಾಗಿ ಉತ್ತರಿಸಬೇಕಾಗುತ್ತೆ. ಆದ್ರೆ ಈಗಲೂ ಸಾಮಾನ್ಯವಾಗಿ ಸ್ಕೂಲ್ ಹಾಗು ಕಾಲೇಜಿನ ಪರೀಕ್ಷೆಗಳಲ್ಲಿ ಇರುವ ಪರೀಕ್ಷೆಗಳಿಗೆ ಪುಟಗಟ್ಟಲೆ ಉತ್ತರ ಬರೀಬೇಕು. ಅದಕ್ಕೇ ಪಾಪ ಹುಡುಗರೂ, ಯಾವನ್ರೀ ಉದ್ದುದ್ದ ಬರೀತಾನೆ, ಮೊದಲೇ ಉರು ಹೊಡೆಯಬೇಕು, ಅದರಲ್ಲಿ ಕಾಪಿ ಹೊಡೆದರೆ ಡಿಬಾರ್ ಬೇರೆ ಆಗ್ಬೇಕು, ಸಮಯ ಬೇರೆ ಕಮ್ಮಿ ಇರುತ್ತೆ, ಅದಕ್ಕೇ ಚುಟುಕಾಗಿ ಈ ರೀತಿ ಬರೀತಿವಿ ಅಂತ ಅನ್ನಬಹುದು.

ಇದೇ ರೀತಿ ಹುಡುಗರು ಪರೀಕ್ಷೇಲಿ sms ರೀತಿ ಉತ್ತರ ಬರೆದ್ರೆ SMS (Short Message Service ) ಅಂತ ಕರೆಯುವ ಬದಲು Simplified Meaning by Student ಅಂತ ಕರೀಬೇಕಾಗಬಹುದು. ನೀವೇನಂತೀರಾ ?

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X