ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 10 ಖರೀದಿದಾರರಿಗೆ ಶಾಕ್- ತೆರೆದ ಬಾಕ್ಸ್ ನಲ್ಲಿ ಸಿಗುತ್ತಿದೆ ಹೊಸ ಫೋನ್

By Gizbot Bureau
|

ನೀವೇನಾದರೂ ಹೊಸದಾಗಿರುವ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ಸರಣಿಯ ಸ್ಮಾರ್ಟ್ ಫೋನ್ ಗಳನ್ನು ಖರೀದಿಸುವುದಕ್ಕೆ ಮುಂದಾದರೆ ಮೊದಲಿಗೆ ಬಾಕ್ಸ್ ಸೀಲ್ಡ್ ಆಗಿದೆಯಾ ಅಥವಾ ತೆರೆದ ಬಾಕ್ಸ್ ನಿಮ್ಮ ಕೈಗೆ ಸಿಗುತ್ತಿದೆಯಾ ಎಂಬುದನ್ನು ಮೊದಲು ಪರೀಕ್ಷೆ ಮಾಡಿಕೊಳ್ಳಿ.ಕೆಲವು ಗ್ಯಾಲಕ್ಸಿ ಎಸ್10 ಖರೀದಿದಾರರಿಗೆ ಯುಎಸ್ ನಲ್ಲಿ ಅನ್ ಸೀಲ್ಡ್ ಆಗಿರುವ ಬಾಕ್ಸ್ ಗಳಲ್ಲಿ ಫೋನ್ ಲಭ್ಯವಾಗಿದೆ ಎಂಬ ಬಗ್ಗೆ ವರದಿಗಳು ಕೇಳಿಬರುತ್ತಿವೆ.

ಕುತೂಹಲಕಾರಿ ವಿಚಾರವೇನೆಂದರೆ ಈ ಗ್ರಾಹಕರು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ನ್ನು ಪ್ರೀ ಆರ್ಡರ್ ಮಾಡಿದ್ದರು ಮತ್ತು ಅವರು ಯುನಿಟ್ಸ್ ಗಳನ್ನು ಒಂದು ಬದಿಯಲ್ಲಿ ಟೇಪ್ ಕಟ್ ಮಾಡಿದ ರೂಪದಲ್ಲಿ ಪಡೆದಿದ್ದಾರೆ.

ಈ ರೀತಿ ತೆರೆದ ಬಾಕ್ಸ್ ಗಳಲ್ಲಿ ಫೋನ್ ಲಭ್ಯವಾಗುವುದು ಆಶ್ಚರ್ಯಕರ ವಿಚಾರವಾಗಿದೆ. ಗ್ರಾಹಕರು ಒಂದು ವೇಳೆ ತೆರೆದ ಬಾಕ್ಸ್ ಗಳಲ್ಲಿ ಫೋನ್ ನ್ನು ಪಡೆದಿದ್ದರೆ ಅದನ್ನು ಕೂಡಲೇ ರಿಪ್ಲೇಸ್ ಮಾಡಿಕೊಳ್ಳಬೇಕಾಗಿ ವಿನಂತಿ ಎಂದು ಸ್ಯಾಮ್ ಸಂಗ್ ನ ಗ್ರಾಹಕರ ಬೆಂಬಲಿತ ತಂಡದವರು ತಿಳಿಸಿದ್ದಾರೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 10 ಖರೀದಿದಾರರಿಗೆ ಶಾಕ್

ಬಾಕ್ಸ್ ನ್ನು ತೆರೆದು ನೀಡಲಾಗಿರುವ ಬಾಕ್ಸ್ ಗಳಲ್ಲಿರುವ ಫೋನ್ ಸರಿಯಾಗಿಲ್ಲ ಮತ್ತು ಅದರಲ್ಲಿನ ವಸ್ತುಗಳು ಕೂಡ ಸರಿಯಾಗಿಲ್ಲ. ಆದರೆ ಈ ಬಗ್ಗೆ ಸ್ಯಾಮ್ ಸಂಗ್ ಅಧಿಕೃತವಾಗಿ ಈ ಸಮಸ್ಯೆಯ ಬಗ್ಗೆ ಯಾವುದೇ ಮಾಹಿತಿಯನ್ನು ಹೊರಹಾಕಿಲ್ಲ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ಸರಣಿ ಜಾಗತಿಕವಾಗಿ ಬಿಡುಗಡೆಗೊಂಡ ನಂತರ ಸ್ಯಾಮ್ ಸಂಗ್ ಹೊಸ ಫೋನ್ ನ್ನು ಭಾರತದಲ್ಲಿ ಕೂಡ ಬಿಡುಗಡೆಗೊಳಿಸಿದೆ ಮತ್ತು ಅದರ ಭಾರತೀಯ ಬೆಲೆ 55,900 ರುಪಾಯಿಗಳು. ಹೊಸ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ಸರಣಿಯ ಫೋನಿನ ಬೆಲೆ 1,17,900 ರುಪಾಯಿವರೆಗೂ ಕೂಡ ಇದೆ.

ಗ್ಯಾಲಕ್ಸಿ ಎಸ್10 ಸರಣಿಯಲ್ಲಿ ಮೂರು ಫೋನ್ ಗಳಿವೆ. ಎಂಟ್ರಿ ಲೆವೆಲ್ ಗ್ಯಾಲಕ್ಸಿ ಎಸ್10ಇ, ಮಿಡ್ ರೇಂಜಿನಲ್ಲಿ ಗ್ಯಾಲಕ್ಸಿ ಎಸ್10 ಮತ್ತು ಟಾಪ್ ಲೈನ್ ನಲ್ಲಿ ಗ್ಯಾಲಕ್ಸಿ ಎಸ್10+.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10+, ಗ್ಯಾಲಕ್ಸಿ ಎಸ್10 ಮತ್ತು ಗ್ಯಾಲಕ್ಸಿ ಎಸ್10ಇ ಫೋನಿನ ಭಾರತೀಯ ಬೆಲೆ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10+8GB RAM/128GB ಸ್ಟೋರೇಜ್- Rs 73,900

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10+12GB RAM/ 512GB ಸ್ಟೋರೇಜ್- Rs 91,900

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10+12GB RAM/1TB ಸ್ಟೋರೇಜ್- Rs 1,17,900

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 8GB RAM/128GB ಸ್ಟೋರೇಜ್- Rs 66,900

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 8GB RAM/512GB ಸ್ಟೋರೇಜ್- Rs 84,900

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 5ಜಿ- ಭಾರತದಲ್ಲಿ ಇನ್ನೂ ಬಿಡುಗಡೆಗೊಂಡಿಲ್ಲ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ- 6GB RAM/ 128GB ಸ್ಟೋರೇಜ್- Rs 55,900

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 8GB RAM/ 256GB ಸ್ಟೋರೇಜ್- ಭಾರತದಲ್ಲಿ ಇನ್ನೂ ಬಿಡುಗಡೆಗೊಂಡಿಲ್ಲ

Best Mobiles in India

English summary
Some SAMSUNG GALAXY S10 buyers are complaining about receiving phones in unsealed boxes

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X