ಸಖತ್ ಶಾರ್ಪ್ ಈ ಬ್ಲೇಡ್ ಮೊಬೈಲ್

Posted By: Staff
ಸಖತ್ ಶಾರ್ಪ್ ಈ ಬ್ಲೇಡ್ ಮೊಬೈಲ್

ಇದೀಗ ಡ್ಯೂಯಲ್ ಸಿಮ್ ಮೊಬೈಲ್ ಗಳಿಗೇನೂ ಕಡಿಮೆಯಿಲ್ಲ. ಆದರೂ ಡ್ಯೂಯಲ್ ಸಿಮ್ ಆಯ್ಕೆ ಮಾತ್ರ ಗ್ರಾಹಕರನ್ನು ತೃಪ್ತಿ ಪಡಿಸುವುದಿಲ್ಲ. ಇನ್ನಿತರ ಆಯ್ಕೆಗಳನ್ನೂ ಬಯಸುತ್ತಾರೆ. ಅದಕ್ಕೆಂದೇ ಸ್ಪೈಸ್ ಇತ್ತೀಚೆಗಷ್ಟೆ ಸ್ಪೈಸ್ QT62 ಬ್ಲೇಡ್ ಎಂಬ ಮೊಬೈಲನ್ನು ಬಿಡುಗಡೆಗೊಳಿಸಿದೆ.

ಗ್ರಾಹಕರ ಬೆಲೆಗೆ ತಕ್ಕ ಮೊಬೈಲ್ ಇದಾಗಿರುವುದರಲ್ಲಿ ಸಂಶಯವೇ ಇಲ್ಲ ಎನ್ನುವುದು ಕಂಪನಿ ಮಾತು. ಜಿಎಸ್ ಎಂ ಬೆಂಬಲಿತವಾಗಿರುವ ಈ ಫೋನ್ ನಲ್ಲಿರುವ ಇನ್ನಿತರ ಗುಣ ಲಕ್ಷಣಗಳೇನೆಂದು ಇಲ್ಲಿ ನೋಡಿ.

ಸ್ಪೈಸ್ QT62 ಬ್ಲೇಡ್ ಮೊಬೈಲ್ ವಿಶೇಷತೆ:

* 85 ಗ್ರಾಂ ತೂಕ

* 2.4 ಇಂಚಿನ TFT ಡಿಸ್ಪ್ಲೇ, 240 x 320 ಪಿಕ್ಸಲ್ ರೆಸೊಲ್ಯೂಷನ್

* ಪೂರ್ಣ ಕ್ವೆರ್ಟಿ ಕೀಬೋರ್ಡ್

* 2 ಮೆಗಾ ಪಿಕ್ಸಲ್ ಕ್ಯಾಮೆರಾ

* 3.5 ಎಂಎಂ ಆಡಿಯೋ ಜ್ಯಾಕ್

* ಎಫ್ ಎಂ, ಮಲ್ಟಿ ಮೀಡಿಯಾ ಪ್ಲೇಯರ್

* 8ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

* GPRS / WAP

* USB, ಬ್ಲೂಟೂಥ್

ಈ ಸ್ಪೈಸ್ ಮೊಬೈಲಿನಲ್ಲಿ ಸಾಮಾಜಿಕ ತಾಣಗಳ ಅಪ್ಲಿಕೇಶನ್ ಕೂಡ ನೀಡಲಾಗಿದೆ. 920 mA ಲೀಥಿಯಂ ಐಯಾನ್ ಬ್ಯಾಟರಿ ಹೊಂದಿರುವ ಈ ಮೊಬೈಲ್ 3 ಗಂಟೆ ಟಾಕ್ ಟೈಂ ಮತ್ತು 200 ಗಂಟೆ ಸ್ಟ್ಯಾಂಡ್ ಬೈ ಟೈಂ ಸಾಮರ್ಥ್ಯ ಹೊಂದಿದೆ.

ತುಂಬಾ ಸ್ಲಿಮ್ ಆದರೆ ಅಗಲವಾಗಿರುವ ಈ ಮೊಬೈಲ್ ಬಾಕ್ಸ್ ನಂತೆ ಕಾಣುತ್ತದೆ. ಬಳಕೆಗೆ ಅತ್ಯುತ್ತಮವೆನಿಸಿರುವ ಈ ಸ್ಪೈಸ್ QT62 ಬ್ಲೇಡ್ ಮೊಬೈಲ್ ಕೇವಲ 3,500 ರೂಪಾಯಿಗೆ ಲಭ್ಯವಿರುವುದಾಗಿ ತಿಳಿದುಬಂದಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot