6,599 ರೂಪಾಯಿಗೆ 5 ಮೆಗಾಪಿಕ್ಸೆಲ್ ಸ್ಪೈಸ್ ಫೋನ್

Posted By: Varun
6,599 ರೂಪಾಯಿಗೆ 5 ಮೆಗಾಪಿಕ್ಸೆಲ್ ಸ್ಪೈಸ್ ಫೋನ್

ಭಾರತದ ಮೊಬೈಲ್ ಕಂಪನಿ ಸ್ಪೈಸ್, ಮೊನ್ನೆ ದ್ವಿಸಿಮ್ ಟಚ್ ಸ್ಕ್ರೀನ್ ಹೊಂದಿರುವ ಸ್ಮಾರ್ಟ್ ಫೋನ್ ಒಂದನ್ನು ಬಿಡುಗಡೆ ಮಾಡಿದ್ದು, ಸ್ಪೈಸ್ ಸ್ಟೆಲ್ಲರ್ ಕ್ರೇಜ್ Mi-355 ಎಂದು ಹೆಸರಿಡಲಾಗಿದೆ.

ಮಲ್ಟಿಮೀಡಿಯಾ ಫೀಚರುಗಳನ್ನು ಹುಡುಕುತ್ತಿರುವವರಿಗೆ ಒಳ್ಳೆಯ ಫೋನ್ ಆಗಿರುವ ಸ್ಪೈಸ್ ಸ್ಟೆಲ್ಲರ್ ಕ್ರೇಜ್ Mi-355 ಉತ್ತಮ ಮ್ಯೂಸಿಕ್ ಪ್ಲೇಯರ್, ಸಾಮಾಜಿಕ ಜಾಲತಾಣಗಳ ಆಪ್ಸ್, A-GPS, ಇನ್ಸ್ಟಂಟ್ ಮೆಸೆಂಜರ್ ಹಾಗು NetQin ವೈರಸ್ ವಿರೋಧಿ ತಂತ್ರಾಶ ಕೂಡ ಹೊಂದಿರುವ ಇದರ ಇತರೆ ಫೀಚರುಗಳು ಈ ರೀತಿ ಇವೆ:

  • 3.5-ಇಂಚಿನ TFT LCD ಡಿಸ್ಪ್ಲೇ

  • ಆಂಡ್ರಾಯ್ಡ್ 2.3 ತಂತ್ರಾಂಶ

  • 480x320 ಪಿಕ್ಸೆಲ್ ರೆಸಲ್ಯೂಶನ್

  • 800MHz ಪ್ರೊಸೆಸರ್

  • 5 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಫ್ಲಾಶ್ ಜೊತೆಗೆ

  • ಮುಂಬದಿಯ ವಿಜಿಎ ಕ್ಯಾಮರಾ

  • 32GB ವರೆಗೂ ವಿಸ್ತರಿಸಬಹುದಾದ ಮೆಮೊರಿ

  • ದ್ವಿಸಿಮ್ (GSM+GSM)

  • 118 X 62 X 11.5 ಎಂಎಂ
 

ಬಿಳಿ ಬಣ್ಣದ ಈ ಸ್ಮಾರ್ಟ್ ಫೋನ್ 6,599 ರೂಪಾಯಿಗೆ ಬರಲಿದ್ದು, sohalic ನಲ್ಲಿ ಖರೀದಿ ಮಾಡಿದರೆ 300 ರೂಪಾಯಿ ಮೌಲ್ಯದ ರೀಚಾರ್ಜ್ ಉಚಿತವಾಗಿ ಸಿಗಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot