Subscribe to Gizbot

ವಿಶ್ವದಲ್ಲೇ ಟಾಪ್ ಸ್ಥಾನದಲ್ಲಿರುವ ಸ್ಮಾರ್ಟ್‌ಫೋನ್‌ಗಳು

Written By:

ನೋಡಲು ಎಲ್ಲವೂ ಒಂದೇ ಆಕಾರದಲ್ಲಿರಬಹುದು, ಒಂದೇ ಚಿಪ್‌ಗಳಲ್ಲಿ ಅವುಗಳು ಚಾಲನೆಗೊಳ್ಳುತ್ತಿರಲೂ ಬಹುದು ಆದರೆ ಪ್ರತೀ ಸ್ಮಾರ್ಟ್‌ಫೋನ್ ಭಿನ್ನವಾಗಿದೆ. ಮುಂಬರಲಿರುವ ಫೋನ್‌ಗಳ ಕುರಿತಾದ ಮಾಹಿತಿಯನ್ನು ನೀವು ಅವಲೋಕಿಸಲು ಬಯಸುತ್ತೀರಿ ಎಂದಾದಲ್ಲಿ ಇಂದಿನ ಲೇಖನದಲ್ಲಿ ಟಾಪ್ ಸ್ಥಾನದಲ್ಲಿರುವ ಫೋನ್ ಮಾಹಿತಿಗಳನ್ನು ನೀಡುತ್ತಿದ್ದೇವೆ.

ಓದಿರಿ:ಅರಿತುಕೊಳ್ಳಲೇಬೇಕಾದ ಸ್ಮಾರ್ಟ್‌ಫೋನ್ ಫೋಟೋಗ್ರಫಿ ಟಿಪ್ಸ್

ಇವುಗಳು ಏಕೆ ಅತ್ಯುತ್ತಮ ಡಿವೈಸ್‌ಗಳು ಎಂದೆನಿಸಿವೆ ಎಂಬುದನ್ನು ಅವುಗಳ ವಿಶೇಷತೆಯಿಂದ ವಿವರಿಸಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಲ್ಯಾಕ್‌ಬೆರ್ರಿ ಪಾಸ್‌ಪೋರ್ಟ್

ಬ್ಲ್ಯಾಕ್‌ಬೆರ್ರಿ ಪಾಸ್‌ಪೋರ್ಟ್

ಬ್ಲ್ಯಾಕ್‌ಬೆರ್ರಿ ಪಾಸ್‌ಪೋರ್ಟ್ ತುಸು ವಿಚಿತ್ರವಾಗಿ ಕಂಡರೂ, ಬ್ಲ್ಯಾಕ್‌ಬೆರ್ರಿ ಪ್ರೇಮಿಗಳು ಇದನ್ನು ತುಂಬಾನೇ ಇಷ್ಟಪಡುತ್ತಾರೆ. ಇದು ಉತ್ತಮ ಫಿಸಿಕಲ್ ಕೀಬೋರ್ಡ್ ಅನ್ನು ಹೊಂದಿದ್ದು, ಅನನ್ಯ ಸ್ಕ್ವೇರ್ ವಿನ್ಯಾಸದಲ್ಲಿ ಇದು ಇದೆ.

ಬ್ಲ್ಯಾಕ್‌ಬೆರ್ರಿ ಕ್ಲಾಸಿಕ್

ಬ್ಲ್ಯಾಕ್‌ಬೆರ್ರಿ ಕ್ಲಾಸಿಕ್

ನೀವು ಬ್ಲ್ಯಾಕ್‌ಬೆರ್ರಿ ಫ್ಯಾನ್ ಆಗಿದ್ದಲ್ಲಿ ಬ್ಲ್ಯಾಕ್‌ಬೆರ್ರಿ ಕ್ಲಾಸಿಕ್ ಅನ್ನು ನೀವು ಇಷ್ಟಪಡದೇ ಇರಲಾರಿರಿ. ಇದು ಉತ್ತಮ ಟಚ್ ಸ್ಕ್ರೀನ್ ಅನ್ನು ಪಡೆದುಕೊಂಡಿದ್ದು ಉತ್ತಮ ಫಿಸಿಕಲ್ ಕೀಬೋರ್ಡ್ ಅನ್ನು ಹೊಂದಿದೆ.

ಮೈಕ್ರೋಸಾಫ್ಟ್ ಲ್ಯೂಮಿಯಾ 950

ಮೈಕ್ರೋಸಾಫ್ಟ್ ಲ್ಯೂಮಿಯಾ 950

ನೀವು ವಿಂಡೋಸ್ ಫೋನ್ ಅನ್ನು ಜೊತೆಯಲ್ಲಿರಿಸಬೇಕು ಎಂದುಕೊಂಡಿದ್ದಲ್ಲಿ, ಈ ಡಿವೈಸ್ ಅನ್ನು ಪರಿಗಣಿಸಿ. ಇದು ಉತ್ತಮ ಕ್ಯಾಮೆರಾವನ್ನು ಹೊಂದಿದೆ ಮತ್ತು ಕೀಬೋರ್ಡ್, ಮೌಸ್ ಹಾಗೂ ಮಾನಿಟರ್‌ಗೆ ಇದನ್ನು ಕನೆಕ್ಟ್ ಮಾಡಿಕೊಳ್ಳಬಹುದಾಗಿದೆ.

ಬ್ಲ್ಯಾಕ್‌ಬೆರ್ರಿ ಪ್ರಿವ್

ಬ್ಲ್ಯಾಕ್‌ಬೆರ್ರಿ ಪ್ರಿವ್

ಬ್ಲ್ಯಾಕ್‌ಬೆರ್ರಿ ಪ್ರಿವ್, ಬ್ಲ್ಯಾಕ್‌ಬೆರ್ರಿ ಕುಟುಂಬದಿಂದ ಬಂದಿರುವ ಡಿವೈಸ್ ಆಗಿದೆ. ಬ್ಲ್ಯಾಕ್‌ಬೆರ್ರಿಯ ಅದೇ ಓಎಸ್ ಅನ್ನು ಚಾಲನೆ ಮಾಡುವುದರ ಬದಲಿಗೆ ಪ್ರಿವ್ ಆಂಡ್ರಾಯ್ಡ್ ಅನ್ನು ಚಾಲನೆ ಮಾಡುತ್ತಿದೆ. ಇದು ಪ್ರಮಾಣಿತ ಆಂಡ್ರಾಯ್ಡ್ ಫೋನ್‌ನಂತೆ ಕಂಡರೂ, ಇದು ಸ್ಲೈಡ್ ಔಟ್ ಕೀಬೋರ್ಡ್ ಅನ್ನು ಪಡೆದುಕೊಂಡಿದೆ.

ಮೋಟೋ ಜಿ4

ಮೋಟೋ ಜಿ4

ಮೋಟೋ ಜಿ4 ಮೂರು ವಿಭಿನ್ನ ಮಾಡೆಲ್‌ಗಳಲ್ಲಿ ಲಭ್ಯವಿದೆ, ನಿಯಮಿತ ಜಿ4, ಜಿ4 ಪ್ಲಸ್ ಮತ್ತು ಇನ್ನೂ ಬೆಲೆ ನಿಗದಿಯಾಗದ ಜಿ4 ಪ್ಲೇ ನಲ್ಲಿ ಅತ್ಯದ್ಭುತ ಫೋನ್ ವಿಶೇಷತೆಗಳನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ.

ಐಫೋನ್ 6 ಪ್ಲಸ್

ಐಫೋನ್ 6 ಪ್ಲಸ್

ಆಪಲ್‌ನ ದೊಡ್ಡ ಸ್ಕ್ರೀನ್ ಫೋನ್ ಅನ್ನು ನೀವು ಖರೀದಿಸಬೇಕು ಎಂದಾದಲ್ಲಿ ಐಫೋನ್ 6 ಪ್ಲಸ್ ಉತ್ತಮ ಆಯ್ಕೆ ಎಂದನೆಸಿದೆ. ನಿಜಕ್ಕೂ ಇದು ಖರೀದಿಗೆ ಅರ್ಹ ಎಂದೆನಿಸಿದೆ.

ಐಫೋನ್ 6

ಐಫೋನ್ 6

ಐಫೋನ್ 6 ಮಾಡೆಲ್ ಹಳೆಯದು ಎಂದೆನಿಸಿದ್ದರೂ, ಐಫೋನ್‌ನಲ್ಲಿ ನೀವು ಹಣ ಉಳಿಸಬೇಕು ಎಂದಾದಲ್ಲಿ ಇದು ಉತ್ತಮ ಆಯ್ಕೆ ಎಂದೆನಿಸಿದೆ. ಐಫೋನ್ 6, ಐಫೋನ್ 6ಎಸ್‌ನಂತೆಯೇ ಕಾಣುತ್ತಿದೆ.

ಮೋಟೋ ಎಕ್ಸ್ ಪ್ಯೂರ್

ಮೋಟೋ ಎಕ್ಸ್ ಪ್ಯೂರ್

ಅತ್ಯುತ್ತಮ ಆಂಡ್ರಾಯ್ಡ್ ಫೋನ್ ಎಂಬುದಾಗಿ ಮೋಟೋ ಎಕ್ಸ್ ಪ್ಯೂರ್ ಪರಿಗಣಿತವಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ಗ್ಯಾಲಕ್ಸಿ ನೋಟ್ 5 ಕಿಲ್ಲರ್ ಬಿಗ್ ಸ್ಕ್ರೀನ್ ಫೋನ್ ಎಂದೆನಿಸಿದ್ದು ನೋಟ್‌ನ ಹಿಂದಿನ ಆವೃತ್ತಿಯಂತೆ, ಇದು ದೊಡ್ಡದಾದ ವೈಬ್ರೇಂಟ್ ಡಿಸ್‌ಪ್ಲೇಯನ್ನು ಪಡೆದುಕೊಂಡಿದೆ ಮತ್ತು ನೋಟ್‌ನಂತೆಯೇ ಸ್ಟೈಲಿಶ್ ಲುಕ್ ಅನ್ನು ಪಡೆದುಕೊಂಡಿದೆ.

ಎಲ್‌ಜಿ ಜಿ5

ಎಲ್‌ಜಿ ಜಿ5

ಅಲ್ ಮೆಟಲ್ ಡಿಸೈನ್ ಅನ್ನು ಪಡೆದುಕೊಂಡಿರುವ ಎಲ್‌ಜಿ ಜಿ5 ಸ್ಮಾರ್ಟ್‌ಫೋನ್ ತೆಗೆಯಬಹುದಾದ ಕೆಳಭಾಗವನ್ನು ಪಡೆದುಕೊಂಡಿದೆ ಇದರಿಂದ ಬ್ಯಾಟರಿಯನ್ನು ನಿಮಗೆ ಬದಲಾಯಿಸಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article Here's our ranking of the best phones you can buy.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot