ಅರಿತುಕೊಳ್ಳಲೇಬೇಕಾದ ಸ್ಮಾರ್ಟ್‌ಫೋನ್ ಫೋಟೋಗ್ರಫಿ ಟಿಪ್ಸ್

By Shwetha
|

ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಹೆಚ್ಚು ಬಳಕೆಯಾಗುತ್ತಿದ್ದು, ಬಳಕೆದಾರರು ಕ್ಯಾಮೆರಾಗಳಿಗೆ ಬದಲಾಗಿ ಸ್ಮಾರ್ಟ್‌ಫೋನ್ ಕ್ಯಾಮೆರಾಗಳನ್ನೇ ಫೋಟೋಗ್ರಫಿಗಾಗಿ ಬಳಸುತ್ತಿದ್ದಾರೆ. ಫೋನ್‌ಗಳಲ್ಲಿ ಇರುವ ಫೋಟೋಗ್ರಫಿ ಅಪ್ಲಿಕೇಶನ್‌ಗಳಲ್ಲದೆ ಮೂರನೇ ಪಾರ್ಟಿ ಅಪ್ಲಿಕೇಶನ್‌ಗಳು ನೀವು ಫೋನ್‌ನಲ್ಲಿ ತೆಗೆದ ಫೋಟೋಗಳಿಗೆ ಇಫೆಕ್ಟ್‌ಗಳನ್ನು ಸೇರಿಸಲು ನೆರವಾಗಲಿದೆ.

ಓದಿರಿ: ಸ್ಮಾರ್ಟ್‌ಫೋನ್‌ನಲ್ಲಿ ಫೋಟೋ ಸ್ಕ್ಯಾನ್ ಮಾಡುವುದು ಹೇಗೆ?

ನಿಮ್ಮ ಫೋನ್‌ನಲ್ಲೇ ಫೋಟೋ ತೆಗೆಯುವುದಕ್ಕೆ ಕೆಲವೊಂದು ರಹಸ್ಯಗಳಿದ್ದು ಅದೇನು ಎಂಬುದನ್ನೇ ಇಂದಿನ ಲೇಖನದಲ್ಲಿ ಅರಿತುಕೊಳ್ಳಲಿದ್ದೇವೆ. ಈ ಸಿಂಪಲ್ ಫೋಟೋಗ್ರಫಿ ಟ್ರಿಕ್ಸ್ ನಿಮ್ಮ ಸ್ಮಾರ್ಟ್‌ಫೋನ್ ಫೋಟೋಗ್ರಫಿಯನ್ನು ಇನ್ನಷ್ಟು ಉತ್ತಮಗೊಳಿಸಲಿದೆ ಬನ್ನಿ ಆ ಹಂತಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಅರಿತುಕೊಳ್ಳೋಣ.

ಸನ್‌ಗ್ಲಾಸ್‌ಗಳಿಂದ ಫಿಲ್ಟರ್ ರಚನೆ

ಸನ್‌ಗ್ಲಾಸ್‌ಗಳಿಂದ ಫಿಲ್ಟರ್ ರಚನೆ

ಉತ್ತಮ ಸನ್‌ಗ್ಲಾಸ್‌ಗಳನ್ನು ಬಳಸಿಕೊಂಡು ಸೀನ್‌ಗಳಿಗೆ ಫಿಲ್ಟರ್‌ಗಳನ್ನು ನಿರ್ಮಿಸಿಕೊಳ್ಳಬಹುದಾಗಿದೆ ಇದರಿಂದ ಡಾರ್ಕ್ ಲ್ಯಾಂಡ್ ಸ್ಕೇಪ್ಸ್ ಮತ್ತು ಬ್ರೈಟ್ ಸ್ಕೈಗಳ ನಡುವೆ ಬ್ಯಾಲೆನ್ಸ್ ಮಾಡಬಹುದಾಗಿದೆ.

3 ಡಿ ಫೋಟೋ ಫ್ರೇಮ್

3 ಡಿ ಫೋಟೋ ಫ್ರೇಮ್

ಪೊಲರೈಡ್ ಫೋಟೋ ಫ್ರೇಮ್ ಬಳಸಿಕೊಂಡು ನೀವು ತೆಗೆಯುತ್ತಿರುವ ವಿಷಯಕ್ಕೆ ಕಟ್ ಔಟ್‌ನಂತೆ ಮಾಡಬಹುದಾಗಿದೆ. ನಿಮ್ಮ ಫೋಟೋಗಳಿಗೆ ಇದು ಅತ್ಯುತ್ತಮ ನೋಟವನ್ನು ನೀಡಲಿದೆ.

ಇನ್‌ಸೆಪ್ಶನ್ ಸೆಲ್ಫಿ

ಇನ್‌ಸೆಪ್ಶನ್ ಸೆಲ್ಫಿ

ನಿಮ್ಮ ಫೋನ್ ಬಳಸಿಕೊಂಡು ಫೋಟೋಗಳ ಒಳಗೆ ಇನ್ನೊಂದು ಫೋಟೋಗಳನ್ನು ರಚಿಸಿಕೊಳ್ಳಬಹುದಾಗಿದೆ. ಈ ಇನ್‌ಸೆಪ್ಶನ್ ಸೆಲ್ಫಿ ನಿಜಕ್ಕೂ ನಿಮ್ಮನ್ನು ಆಕರ್ಷಿಸುತ್ತದೆ.

ಹೈ - ಕೀ ಫೋಟೋಸ್

ಹೈ - ಕೀ ಫೋಟೋಸ್

ಕಪ್ಪು ಹಿನ್ನಲೆಯಲ್ಲಿ ನೀವು ಕ್ಯಾಮೆರಾವನ್ನು ಗುರಿ ಇರಿಸುತ್ತಿದ್ದೀರಿ ಎಂದಾದಲ್ಲಿ, ಫೋಟೋಗಳ ಎಕ್ಸ್‌ಪೋಶರ್ ಅನ್ನು ಲಾಕ್ ಮಾಡಬೇಕಾಗುತ್ತದೆ. ಇದು ಹೈ ರೆಸಲ್ಯೂಶನ್ ಫೋಟೋಗಳನ್ನು ಶೂಟ್ ಮಾಡಲು ಸಹಾಯ ಮಾಡಲಿದೆ.

ಬಲೂನ್‌ನೊಂದಿಗೆ ಏರಿಯಲ್ ಶಾಟ್ಸ್

ಬಲೂನ್‌ನೊಂದಿಗೆ ಏರಿಯಲ್ ಶಾಟ್ಸ್

ಹೇಲಿಯಮ್ ಬಲೂನ್‌ಗಳನ್ನು ಬಳಸಿಕೊಂಡು ಏರಿಯಲ್ ಶೂಟ್‌ಗಳನ್ನು ಮಾಡಿಕೊಳ್ಳಬಹುದಾಗಿದೆ. ವೀಡಿಯೊಗಳನ್ನು ಶೂಟ್ ಮಾಡಲು ಇದು ಸಹಾಯಕವಾಗಿದೆ.

ಟೈನಿ ಪ್ಲಾನೆಟ್ ಫೋಟೋಗ್ರಫಿ

ಟೈನಿ ಪ್ಲಾನೆಟ್ ಫೋಟೋಗ್ರಫಿ

ಅಪ್ಲಿಕೇಶನ್ ಸ್ಟೋರ್‌ನಲ್ಲಿ ಹೆಚ್ಚು ಟೈನಿ ಪ್ಲಾನೆಟ್ ಅಪ್ಲಿಕೇಶನ್‌ಗಳಿದ್ದು ಫೋಟೋಗ್ರಫಿಗಾಗಿ ನೀವು ಇಂತಹ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ

ಕಾರ್ಡ್‌ಬೋರ್ಡ್ ಪಿನ್ ಹೋಲ್ ಮಾಡಿ

ಕಾರ್ಡ್‌ಬೋರ್ಡ್ ಪಿನ್ ಹೋಲ್ ಮಾಡಿ

ಕಾರ್ಡ್‌ಬೋರ್ಡ್‌ನಲ್ಲಿ ಸಣ್ಣ ತೂತು ಮಾಡಿ ಮತ್ತು ಪಿನ್ ಹೋಲ್ ಇಫೆಕ್ಟ್‌ನಲ್ಲಿ ಫೋಟೋ ತೆಗೆಯುವಂತೆ ಅನುಕೂಲತೆಯನ್ನು ಮಾಡಿಕೊಳ್ಳಬಹುದಾಗಿದೆ.

ಪ್ರಾಜೆಕ್ಟರ್

ಪ್ರಾಜೆಕ್ಟರ್

ಕಾರ್ಡ್‌ಬೋರ್ಡ್ ಬಾಕ್ಸ್ ಅನ್ನು ಬಳಸಿಕೊಂಡು ಸರಳವಾದ ಮತ್ತು ಬಳಸಲು ಸುಲಭವಾಗಿರುವ ಪ್ರಾಜೆಕ್ಟರ್ ಅನ್ನು ತಯಾರಿಸಿಕೊಳ್ಳಬಹುದಾಗಿದೆ ಇದಕ್ಕೆ ಕ್ಯಾಮೆರಾ ಲೆನ್ಸ್ ಅಟ್ಯಾಚ್ ಮಾಡಿದರೆ ಸಾಕು.

Best Mobiles in India

English summary
Here are eight such smartphone photography DIY ideas that photographer Richard Schabetsberger in Austria. Take a look at the simple and easy tricks related to smartphone photography from here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X