ಆಪಲ್‌ ಈವೆಂಟ್‌ನ ಟಾಪ್‌ 5 ಬಹುದೊಡ್ಡ ಅನಾವರಣಗಳು ಯಾವುವು ಗೊತ್ತೇ?

By Suneel
|

ಆಪಲ್‌ ಕಂಪನಿ ಬುಧವಾರ (ಸೆಪ್ಟೆಂಬರ್‌ 7) ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇತ್ತೀಚಿನ ಜೆನರೇಷನ್‌ನ ಡಿವೈಸ್‌ಗಳನ್ನು ಅನಾವರಣ ಮಾಡಿದೆ. 'ಬಿಲ್‌ ಗ್ರಹಂ ಸಿವಿಕ್‌' ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಪಲ್ ಪ್ರಿಯರ ಬಹು ನಿರೀಕ್ಷಿತ ಡಿವೈಸ್ 'ಐಫೋನ್ 7' ಅನಾವರಣ ಕಾರ್ಯಕ್ರಮ ಇದಾಗಿತ್ತು.

ಆಫಲ್ 'ಆಪಲ್‌ ವಾಚ್ ಸೀರೀಸ್‌ 2', 'ಐಫೋನ್‌ 7', 'ಐಫೋನ್‌ 7 ಪ್ಲಸ್‌' ಅನ್ನು ಸ್ಯಾನ್‌ ಫ್ರಾನ್ಸಿಸ್ಕೋ ದಲ್ಲಿ ಪ್ರಕಟಣೆಗೊಳಿಸಿದೆ. ಅಂದಹಾಗೆ ಆಪಲ್‌ ಬಹುದೊಡ್ಡ ಈವೆಂಟ್‌ನಲ್ಲಿ ಅನಾವರಣಗೊಳಿಸಿದ ಬಹು ನಿರೀಕ್ಷಿತ ಬಹುದೊಡ್ಡ ಡಿವೈಸ್‌ಗಳು ಯಾವುವು ಎಂದು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಐಫೋನ್‌ಗೆ ಸೂಪರ್‌ ಮಾರಿಯೋ  ಬರುತ್ತಿದೆ

ಐಫೋನ್‌ಗೆ ಸೂಪರ್‌ ಮಾರಿಯೋ ಬರುತ್ತಿದೆ

'ಐಫೋಣ್‌ 7' ಗೆ ಇದೇ ಮೊಟ್ಟ ಮೊದಲ ಬಾರಿಗೆ 'ಸೂಪರ್‌ ಮಾರಿಯೋ' ಗೇಮ್‌ ಇನ್‌ಬಿಲ್ಟ್‌ ಆಗಿ ಬರುತ್ತಿದೆ. ಹೆಚ್ಚಿನ ಕ್ಲಾಸಿಕ್‌ ಲುಕ್‌ ಅನ್ನು ಈ ಗೇಮ್‌ ಹೊಂದಿದೆ.

ಸ್ವಿಮ್‌ ಪ್ರೂಫ್‌ ಆಪಲ್‌ ವಾಚ್‌

ಸ್ವಿಮ್‌ ಪ್ರೂಫ್‌ ಆಪಲ್‌ ವಾಚ್‌

ಆಪಲ್‌ ವಾಚ್‌ ಸೀರೀಸ್‌ 2 ಅನಾವರಣಗೊಂಡಿದೆ. ಇದು ನೀರು ನಿರೋಧಕವಾಗಿದ್ದು, 50 ಮೀಟರ್‌ವರೆಗೆ ನೀರು ನಿರೋಧಕ ಫೀಚರ್, ಇನ್‌ಬಿಲ್ಟ್ ಜಿಪಿಎಸ್ ಕಾರ್ಯಾಚರಣೆ ಫೀಚರ್ ಹೊಂದಿದೆ. ವಾಚ್‌ ಅನ್ನು ಸೆಪ್ಟೆಂಬರ್‌ 16 ರಂದು ಆರಂಭಿಕ ಬೆಲೆ $369 (ರೂ.24507.67) ಬಿಡುಗಡೆ ಮಾಡಲಿದೆ.

ಐಫೋನ್‌ಗೆ 2 ಕ್ಯಾಮೆರಾ

ಐಫೋನ್‌ಗೆ 2 ಕ್ಯಾಮೆರಾ

ವಿಶಾಲ 'ಐಫೋನ್‌ 7 ಪ್ಲಸ್' 12MP 2 ಕ್ಯಾಮೆರಾಗಳನ್ನು ಹೊಂದಿದೆ. ಒಂದು ವಿಶಾಲ ಆಂಗಲ್ ಲೆನ್ಸ್ ಮತ್ತು ಇನ್ನೊಂದು ಟೆಲಿಫೋಟೋ ಲೆನ್ಸ್ ಅನ್ನು ಹೊಂದಿರುತ್ತದೆ. 2 ಕ್ಯಾಮೆರಾಗಳಿಂದ 'ಐಫೋನ್‌ 7 ಪ್ಲಸ್' ನಲ್ಲಿ 2x ವರೆಗೆ ಜೂಮ್‌ ಮಾಡಬಹುದಾಗಿದೆ ಮತ್ತು 10x ಡಿಜಿಟಲ್‌ ಜೂಮ್‌ ಮಾಡಬಹುದಾಗಿದೆ.

ನೀರು ಮತ್ತು ಧೂಳಿನಿಂದ ಸುರಕ್ಷತೆ

ನೀರು ಮತ್ತು ಧೂಳಿನಿಂದ ಸುರಕ್ಷತೆ

ಇದೇ ಮೊದಲ ಬಾರಿಗೆ ಹೊಸ ಐಫೋನ್‌ಕ IP67 ನೀರು ಮತ್ತು ಧೂಳಿನಿಂದ ಸುರಕ್ಷತೆ ಹೊಂದುವ ಫೀಚರ್‌ ಒಳಗೊಂಡಿದೆ. 3.2 ಅಡಿ ನೀರಿನಲ್ಲಿ 30 ನಿಮಿಷ ಮುಳಿಗಿದ್ದರು ಸಹ ಐಫೋನ್‌ ಸುರಕ್ಷಿತವಾಗಿರುತ್ತದೆ.

ಹೆಡ್‌ಫೋನ್ಸ್ ಜಾಕ್‌ಗೆ ಬಾಯ್‌, ಏರ್‌ಪೋಡ್ಸ್‌ಗೆ ಹಾಯ್‌

ಹೆಡ್‌ಫೋನ್ಸ್ ಜಾಕ್‌ಗೆ ಬಾಯ್‌, ಏರ್‌ಪೋಡ್ಸ್‌ಗೆ ಹಾಯ್‌

ಆಪಲ್‌ ಹೊಸ ಐಫೋನ್‌ನಿಂದ ಹೆಡ್‌ಫೋನ್‌ ಜಾಕ್‌ಗೆ ವಿಶ್ರಾಂತಿ ನೀಡುತ್ತಿದ್ದು, ವಿವಿಧ ರೀತಿಯ ಇಯರ್‌ಬಡ್ಸ್‌ ಅನ್ನು ಪರಿಚಯಿಸಿದೆ. ಇಯರ್‌ಪೋಡ್ಸ್‌ಗಳು ಬೆಳಕಿನ ಜೊತೆಗೆ ಸಂಪರ್ಕ ಹೊಂದುತ್ತವೆ.

Best Mobiles in India

Read more about:
English summary
The 5 biggest takeaways from the Apple event. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X