Subscribe to Gizbot

LG X Power 2 ಸ್ಮಾರ್ಟ್‌ಪೋನು: ಆಂಡ್ರಾಯ್ಡ್ 7.0, 4,500mAh ಬ್ಯಾಟರಿ

Written By:

ಭಾರತೀಯ ಮಾರುಕಟ್ಟೆಯಲ್ಲಿ ಪ್ರಮೋಷನ್ ಮಾಡುವಲ್ಲಿ ಎಡವಿರುವುದಾಗಿ ಒಪ್ಪಿಕೊಂಡಿದ್ದ LG ಈ ಬಾರಿ ಹೊಸದೊಂದು ಸ್ಮಾರ್ಟ್‌ಪೋನನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. LG X Power 2 ಹೆಸರಿನ ಸ್ಮಾರ್ಟ್‌ಪೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

LG X Power 2 ಸ್ಮಾರ್ಟ್‌ಪೋನು: ಆಂಡ್ರಾಯ್ಡ್ 7.0, 4,500mAh ಬ್ಯಾಟರಿ

ಓದಿರಿ: ಕಾಸು ಕೊಟ್ಟು ಜಿಯೋ ಸೇವೆ ಪಡೆಯುವ ಮುಂಚೆ ಈ ಸ್ಟೋರಿ ಓದಿರಿ..!!

ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಉಳಿವಿಗಾಗಿ ಪ್ರಯತ್ನಸುತ್ತಿರುವ LG ಈ ಬಾರಿ ಹೊಸ ಸಾಹಸಕ್ಕೆ ಮುಂದಾಗಿದ್ದು, ಜನಸಾಮಾನ್ಯರಿಗೆ ಹತ್ತಿರವಾಗುವಂತಹ ಪೋನುಗಳನ್ನು ಮಾರಾಟ ಮಾಡಲು ತೀರ್ಮಾನಿಸಿದ್ದು, ಈ ಹಿನ್ನಲೆಯಲ್ಲಿ ಇದು ಮೊದಲ ಪ್ರಯತ್ನವಾಗಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5.5 ಇಂಚಿನ ಪರದೆ:

5.5 ಇಂಚಿನ ಪರದೆ:

LG X Power 2 ಸ್ಮಾರ್ಟ್‌ಪೋನ್ 5.5 ಇಂಚಿನ ದೊಡ್ಡ ಪರದೆಯನ್ನು ಹೊಂದಿದ್ದು, HD ಗುಣಮಟ್ಟವನ್ನು ಹೊಂದಿದ್ದು, 1280 x 720 ರೆಸಲ್ಯೂಷನ್ ನಿಂದ ಕೂಡಿದೆ.

 1.5GHz ಆಕ್ಟಾ ಕೊರ್ ಪ್ರೊಸೆಸರ್:

1.5GHz ಆಕ್ಟಾ ಕೊರ್ ಪ್ರೊಸೆಸರ್:

1.5GHz ಆಕ್ಟಾ ಕೊರ್ ಪ್ರೊಸೆಸರ್ ಹೊಂದಿರುವ LG X Power 2 ಸ್ಮಾರ್ಟ್‌ಪೋನ್ 1.5GB ಮತ್ತು 2GB RAM ಮಾದರಿಯಲ್ಲಿ ದೊರೆಯಲಿದ್ದು, 16GB ಇಂಟರ್ನಲ್ ಮೆಮೊರಿಯನ್ನು ಈ ಪೋನು ಹೊಂದಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ ಮೆಮೊರಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದಾಗಿದೆ.

13 MP ಕ್ಯಾಮೆರಾ:

13 MP ಕ್ಯಾಮೆರಾ:

LG X Power 2 ಸ್ಮಾರ್ಟ್‌ಪೋನಿನ ಹಿಂಭಾಗದಲ್ಲಿ 13MP ಕ್ಯಾಮೆರಾವನ್ನು ನೀಡಲಾಗಿದ್ದು, ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ನೀಡಲಾಗಿದೆ. ಸೆಲ್ಫಿ ತೆಗೆದುಕೊಳ್ಳಲು ಫ್ಲಾಷ್ ಲೈಟ್‌ ಅನ್ನು ಸಹ ನೀಡಲಾಗಿದೆ.

4,500mAh ಬ್ಯಾಟರಿ:

4,500mAh ಬ್ಯಾಟರಿ:

ಸದ್ಯ ಮಾರುಕಟ್ಟೆ ಯಲ್ಲಿ ಉತ್ತಮ ಬ್ಯಾಟರಿ ಬ್ಯಾಕಪ್ ಹೊಂದಿರುವ ಸ್ಮಾರ್ಟ್‌ಪೋನುಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಈ ಹಿನ್ನಲೆಯಲ್ಲಿ LG X Power 2 ಸ್ಮಾರ್ಟ್‌ಪೋನಿನಲ್ಲಿ 4,500mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇದೇ ಈ ಪೋನಿ ಪ್ರಮುಖ ಅಂಶವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The LG X Power 2 smartphone has just been announced. It features Android 7.0 support at launch and a 4,500 mAh battery. to konw more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot