ಕಾಸು ಕೊಟ್ಟು ಜಿಯೋ ಸೇವೆ ಪಡೆಯುವ ಮುಂಚೆ ಈ ಸ್ಟೋರಿ ಓದಿರಿ..!!

Written By:

ಜಿಯೋ ಏಪ್ರಿಲ್ ನಿಂದ ಪೇಯ್ಡ್ ಸೇವೆಯನ್ನು ಆರಂಭಿಸುತ್ತಿದ್ದು, ಜಿಯೋ ಪ್ರೈಮ್ ಸೇವೆಯನ್ನು ಪಡೆಯಲು ಗ್ರಾಹಕರು ವರ್ಷಕ್ಕೆ 99 ರೂ. ನೀಡಬೇಕಾಗಿದ್ದು, ಅಲ್ಲದೇ ಉಚಿತ ಕರೆ ಸೇವೆ ಮತ್ತು ದೇಟಾವನ್ನು ಪಡೆಯಲು ಪ್ರತಿ ತಿಂಗಳು 303 ರೂ ಪಾವತಿ ಮಾಡಬೇಕಾಗಿದೆ.

ಕಾಸು ಕೊಟ್ಟು ಜಿಯೋ ಸೇವೆ ಪಡೆಯುವ ಮುಂಚೆ ಈ ಸ್ಟೋರಿ ಓದಿರಿ..!!

ಓದಿರಿ: ಬೆಂಗಳೂರಿನ ಕಿರಿಯ ಡೆವಲಪರ್ಸ್ ತಯಾರಿಸಿದ ಆಪ್: ಹಿರಿಯರನ್ನು ನಾಚಿಸುವಂತಿದೆ

ಅದರೆ ಇದೇ ರೀತಿಯಲ್ಲಿ ಹಣವನ್ನು ಪಾವತಿ ಮಾಡಿದರೆ ಏರ್‌ಟೆಲ್ ಮತ್ತು ವೊಡೋಪೋನ್ ನಲ್ಲಿಯೂ ಉಚಿತ ಕರೆ ಮಾಡುವ ಸೇವೆ ಮತ್ತು ಉಚಿತ ಡೇಟಾ ಸೇವೆಯನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏರ್‌ಟೆಲ್ ಆಫರ್:

ಏರ್‌ಟೆಲ್ ಆಫರ್:

ಏರ್‌ಟೆಲ್ ಮೈ ಪ್ಲಾನ್ ಇನ್‌ಫಿನಿಟಿ ಪ್ಲಾನ್ ಅನ್ನು ತನ್ನ ಪೋಸ್ಟ್‌ಪೇಯ್ಡ್‌ ಬಳಕೆದಾರರಿಗೆ ನೀಡಲಿದ್ದು, ಈ ಪ್ಲಾನ್ ನಲ್ಲಿ ಆನ್‌ಲಿಮಿಟೆಡ್ ಕರೆ ಮಾಡಬಹುದಾಗಿದೆ, ತಿಂಗಳಿಗೆ 799 ರೂ. ಪಾವತಿ ಮಾಡಬೇಕಾಗಿದ್ದು, ಇದರೊಂದಿಗೆ 100 ಲೊಕಲ್ ಮತ್ತು STD ಮೇಸೆಜ್ ಪ್ರತಿ ನಿತ್ಯ ಫ್ರೀ ಇರಲಿದೆ. ಅಲ್ಲದೇ ತಿಂಗಳಿಗೆ 2GB 4G ಡೇಟಾ ಪ್ರತಿ ತಿಂಗಳಿಗೆ ದೊರೆಯಲಿದೆ. ಇದರೊಂದಿಗೆ ವೈಯಕ್ ಮ್ಯೂಸಿಕ್ ಮತ್ತು ವೈಯಕ್ ಮೂವಿಸ್ ಸಂಪೂರ್ಣ ಉಚಿತ.

ಇದಲ್ಲದೇ ರೂ.1,199 ಪ್ಲಾನ್ ಒಂದಿದ್ದು, 5GB ಡೇಟಾ ದೊರೆಯಲಿದ್ದು, 1,599ಕ್ಕೆ 10 GB 4G ಡೇಟಾವನ್ನು ನೀಡಲಿದೆ. ಅದೇ ರೀತಿ 15 GB ಡೇಟಾ ಬೇಕಾದಲ್ಲಿ 1,999 ರೂ ನೀಡಬೇಕಾಗಿದೆ. ಅಲ್ಲದೇ 2,999 ರೂ ಪ್ಲಾನ್‌ನಲ್ಲಿ 30 GB 4G ಡೇಟಾವನ್ನು ನೀಡಲಿದೆ.

ವೊಡೋಪೋನ್ ಆಫರ್:

ವೊಡೋಪೋನ್ ಆಫರ್:

ವೊಡೋಪೋನ್ ರೆಡ್ ಪ್ಲಾನ್ 1,699 ರೂಗಳಿಗೆ ಅನ್‌ಲಿಮಿಟೆಡ್ ಕರೆ ಮಾಡುವ ಆಫರ್ ವೊಂದನ್ನು ತನ್ನ ಗ್ರಾಹಕರಿಗೆ ನೀಡಿದೆ. ಅಲ್ಲದೇ 12 GB ಡೇಟಾವನ್ನು ನೀಡದೆ. ಇದಲ್ಲದೇ 16 GB ಡೇಟಾ ಬೇಕಾದಲ್ಲಿ 1,999 ರೂ. ನೀಡಬೇಕಾಗಿದೆ. ಆದರೆ 1,299 ರೂ ನೀಡದರೆ 8GB ಡೇಟಾ ದೊರೆಯಲಿದ್ದು, ಕೇವಲ 3000 ನಿಮಿಷ ಕರೆ ಮಾಡುವ ಅವಕಾಶ ದೊರೆಯಲಿದೆ.

ಐಡಿಯಾ ಆಫರ್:

ಐಡಿಯಾ ಆಫರ್:

ಐಡಿಯಾ ಸಹ ತನ್ನ ಗ್ರಾಹಕರಿಗೆ ಉಚಿತ ಸೇವೆಯನ್ನು ನೀಡಲಿದೆ. ಆದರೆ ಇದು ಕೇವಲ 3G ಡೇಟಾವನ್ನುನ ನೀಡಲಿದೆ. ರೂ. 1,199ಕ್ಕೆ ಅನ್‌ಲಿಮಿಟೆಡ್ ಕರೆಗಳನ್ನು ಮಾಡಬಹುದಾಗಿದ್ದು, 5GB ಡೇಟಾವನ್ನು ಉಚಿತವಾಗಿ ಪಡೆಯಬಹುದಾಗಿದೆ. ಅಲ್ಲದೇ 1,599 ರೂ ನೀಡಿದರೆ 10GB ಡೇಟಾವನ್ನು ನೀಡಿಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Airtel, Vodafone, and Idea Cellular. Technically no other player is offering 1GB data per day to its users. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot