ಜಾಗತಿಕವಾಗಿ ಅತೀ ಹೆಚ್ಚು ಫೀಚರ್ ಫೋನ್ ಗಳನ್ನು ಮಾರಾಟ ಮಾಡುವ 5 ಸಂಸ್ಥೆಗಳು

|

HMD- ಮಾಲೀಕತ್ವದ ನೋಕಿಯಾ ಸಂಸ್ಥೆ ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ಫೀಚರ್ ಫೋನ್ ಗಳ ಮಾರಾಟದಲ್ಲಿ ಮೇಲ್ದರ್ಜೆಗೆ ಏರುತ್ತಿದೆ. ಇತ್ತೀಚೆಗೆ ನಡೆದ ಕೌಂಟರ್ ಪಾಯಿಂಟ್ ಮಾರ್ಕೆಟ್ ಮಾನಿಟರ್ ಸೇವೆಯ ವರದಿಯ ಅನುಸಾರ ಫೀಚರ್ ಫೋನ್ ಗಳ ಖರೀದಿಸುವಿಕೆಯು 2018 ರ ನಾಲ್ಕನೇ ತ್ರೈಮಾಸಿಕದಲ್ಲಿ ಏರಿಕೆಯಾಗಿದೆ.

ನೋಕಿಯಾ ಫೋನ್ ಗಳಿಗೆ ಮತ್ತೊಮ್ಮೆ ಬೇಡಿಕೆ:

ನೋಕಿಯಾ ಫೋನ್ ಗಳಿಗೆ ಮತ್ತೊಮ್ಮೆ ಬೇಡಿಕೆ:

ವರದಿಯು ಹೇಳುವ ಪ್ರಕಾರ ನೋಕಿಯಾ ಫೀಚರ್ ಫೋನ್ ಗಳ ಬೇಡಿಕೆಯು ಇದೀಗ ಮತ್ತೊಮ್ಮೆ ಮರುಸ್ಥಾಪಿತವಾಗುತ್ತಿದೆ.ನೋಕಿಯಾ 3310 ಬಹಳ ದೊಡ್ಡ ಯಶಸ್ಸು ಗಳಿಸಿತ್ತು. ನಾಸ್ಟಾಲ್ಜಿಯಾ ಉತ್ತಮ ಗುಣಮಟ್ಟವನ್ನು ಹೊಂದಿರುವುದರ ಕಾರಣದಿಂದಾಗಿ ನೋಕಿಯಾ ಫೋನ್ 2018 ರ ಮೂರನೇ ತ್ರೈಮಾಸಿಕದಲ್ಲಿ ಎರಡನೇ ಅತೀ ದೊಡ್ಡ ಫೀಚರ್ ಫೋನ್ ಸಂಸ್ಥೆಯಾಗಿ ಜಾಗತಿಕವಾಗಿ ಗುರುತಿಸಿಕೊಂಡಿದೆ.

ಇಟೆಲ್ ಗೆ ಮೊದಲ ಸ್ಥಾನ ನೀಡಿದ ಆಫ್ರಿಕಾ ಮಾರುಕಟ್ಟೆ:

ಇಟೆಲ್ ಗೆ ಮೊದಲ ಸ್ಥಾನ ನೀಡಿದ ಆಫ್ರಿಕಾ ಮಾರುಕಟ್ಟೆ:

ವಿಶ್ವದ ಫೀಚರ್ ಫೋನ್ ಮಾರುಕಟ್ಟೆಯ ಮೊದಲ ಸ್ಥಾನವನ್ನು ಇಟೆಲ್ ಸಂಸ್ಥೆ ಬಿಟ್ಟುಕೊಟ್ಟಿಲ್ಲ.ಆಫ್ರಿಕನ್ ಮಾರುಕಟ್ಟೆಯಲ್ಲಿ ಈ ಫೀಚರ್ ಫೋನ್ ಗೆ ಬಹಳ ದೊಡ್ಡ ಗ್ರಾಹಕ ಬಳಗ ಇರುವುದರ ಕಾರಣದಿಂದಾಗಿ ವಿಶ್ವ ಮಟ್ಟದಲ್ಲಿ ಮೊದಲ ಸ್ಥಾನಕ್ಕೆ ಏರಲು ಕಾರಣವಾಗಿದೆ.

ಟಾಪ್ 5 ಸಂಸ್ಥೆಗಳು:

ಟಾಪ್ 5 ಸಂಸ್ಥೆಗಳು:

ಫೀಚರ್ ಫೋನ್ ದುನಿಯಾದ ಟಾಪ್ 5 ಸಂಸ್ಥೆಗಳು ಹೀಗಿವೆ- ಇಟೆಲ್, ಹೆಚ್ಎಂಡಿ ಗ್ಲೋಬಲ್(ನೋಕಿಯಾ ಬ್ರ್ಯಾಂಡ್ ನ ಮಾಲೀಕ), ರಿಲಯನ್ಸ್ ಜಿಯೋ, ಸ್ಯಾಮ್ ಸಂಗ್ ಮತ್ತು ಟೆಕ್ನೋ.ಇದೇ ಕ್ರಮದಲ್ಲಿ ಸ್ಥಾನವನ್ನು ಇವುಗಳು ಪಡೆದಿವೆ.

ಯಾವ ಸಂಸ್ಥೆಯ ಶೇರ್ ಎಷ್ಟಿದೆ?

ಯಾವ ಸಂಸ್ಥೆಯ ಶೇರ್ ಎಷ್ಟಿದೆ?

ಸದ್ಯ ಇಟೆಲ್ ಮತ್ತು ಹೆಚ್ಎಂಡಿ ಗ್ಲೋಬಲ್ ನ ನೋಕಿಯಾ ಎರಡೂ ಕೂಡ 14% ಶೇರ್ ನ್ನು ಮಾರುಕಟ್ಟೆಯಲ್ಲಿ ಹೊಂದಿದೆ. ರಿಲಯನ್ಸ್ ಜಿಯೋ 11% ಶೇರ್, ನಾಲ್ಕನೇ ಸ್ಥಾನದಲ್ಲಿರುವ ಸ್ಯಾಮ್ ಸಂಗ್ 8% ಮಾರ್ಕೆಟ್ ಶೇರ್ ಮತ್ತು ಐದನೇ ಸ್ಥಾನದಲ್ಲಿರುವ ಟೆಕ್ನೋ 6% ಶೇರ್ ನ್ನು ಜಾಗತಿಕ ಮಾರುಕಟ್ಟೆಯಲ್ಲಿ ಹೊಂದಿವೆ.

ಮುಂದಿನ 5 ವರ್ಷ ಫೀಚರ್ ಫೋನ್ ಮಾರಾಟ:

ಮುಂದಿನ 5 ವರ್ಷ ಫೀಚರ್ ಫೋನ್ ಮಾರಾಟ:

ಸದ್ಯ ನಡೆಯುತ್ತಿರುವ ಮಾರುಕಟ್ಟೆಯಲ್ಲಿನ ಸ್ಥಿತಿಗತಿಗಳನ್ನು ಪರಿಗಣಿಸಿ ಹೇಳುವುದಾದರೆ ಮುಂದಿನ ಐದು ವರ್ಷಗಳ ವರೆಗೆ ಫೀಚರ್ ಫೋನ್ ಗೆ ಗ್ರಾಹಕರು ಲಭ್ಯವಾಗುತ್ತಾರೆ. ಕಡಿಮೆ ಆದಾಯ ಗಳಿಸುವ ಮತ್ತು ಮೊದಲ ಬಾರಿಗೆ ಮೊಬೈಲ್ ಫೋನ್ ಗಳನ್ನು ಬಳಕೆ ಮಾಡಲು ಮುಂದಾಗುವ ಅದೆಷ್ಟೋ ಗ್ರಾಹಕರು ಮೊದಲ ಬಾರಿಗೆ ಫೀಚರ್ ಫೋನಿನ ಅನುಭವವನ್ನೇ ಪಡೆಯಲು ಉತ್ಸುಕರಾಗಿರುತ್ತಾರೆ.

ಫೀಚರ್ ಫೋನ್ ನಲ್ಲಿ ಆಪ್ಸ್ ಮತ್ತು ಸೌಲಭ್ಯಗಳ ಲಭ್ಯತೆ:

ಫೀಚರ್ ಫೋನ್ ನಲ್ಲಿ ಆಪ್ಸ್ ಮತ್ತು ಸೌಲಭ್ಯಗಳ ಲಭ್ಯತೆ:

ಸ್ಮಾರ್ಟ್ ಫೋನ್ ಗಳಂತೆ ಫೀಚರ್ ಫೋನ್ ಗಳು ಕೂಡ 2ಜಿ ಯಿಂದ 3ಜಿ ಮತ್ತು ಇದೀಗ 4ಜಿ ಗೆ ಅಪ್ ಗ್ರೇಡ್ ಆಗುತ್ತಿವೆ. ಕೇವಲ ಸ್ಮಾರ್ಟ್ ಫೋನ್ ಗಳ ಭಾಗವಾಗಿದ್ದ ಆಪ್ಸ್ ಮತ್ತು ಸೌಲಭ್ಯಗಳು ಫೀಚರ್ ಫೋನ್ ನ್ನೂ ಕಾಣಿಸಿಕೊಳ್ಳುವುದಕ್ಕೆ ದಾರಿ ಮಾಡಿಕೊಳ್ಳುತ್ತಿವೆ.

2018 ರಲ್ಲೂ ಮುಂದುವರಿದ ಫೀಚರ್ ಫೋನ್ ಮಾರಾಟ:

2018 ರಲ್ಲೂ ಮುಂದುವರಿದ ಫೀಚರ್ ಫೋನ್ ಮಾರಾಟ:

ಫೀಚರ್ ಫೋನ್ ಮಾರುಕಟ್ಟೆಯ ಬೆಳವಣಿಗೆಯು ಸ್ಮಾರ್ಟ್ ಫೋನ್ ಮಾರುಕಟ್ಟೆಯ ದರಕ್ಕೆ ವಿರುದ್ಧವಾಗಿದೆ. ಕೌಂಟರ್ ಪಾಯಿಂಟ್ ನ ವರದಿಯ ಪ್ರಕಾರ ಸ್ಮಾರ್ಟ್ ಫೋನ್ ಮಾರುಕಟ್ಟೆಯ ಋಣಾತ್ಮಕ ಬೆಳವಣಿಗೆಯ ದರವನ್ನು ಹೊಂದಿದೆ. 2018 ರ ಮೂರನೇ ತ್ರೈಮಾಸಿಕದಲ್ಲಿ ಫೀಚರ್ ಫೋನ್ ಒಟ್ಟು ಹ್ಯಾಂಡ್ ಸೆಟ್ ಮಾರಾಟಕ್ಕೆ 23% ಕೊಡುಗೆಯನ್ನು ನೀಡಿದೆ.

ಮಧ್ಯ ಏಷ್ಯಾ ಮತ್ತು ಆಫ್ರಿಕಾ ಮಾರುಕಟ್ಟೆ:

ಮಧ್ಯ ಏಷ್ಯಾ ಮತ್ತು ಆಫ್ರಿಕಾ ಮಾರುಕಟ್ಟೆ:

ಭಾರತದಲ್ಲಿ ರಿಲಯನ್ಸ್ ಜಿಯೋ ಬಂದ ನಂತರ ಇಲ್ಲಿನ ಮಾರುಕಟ್ಟೆಯಲ್ಲಿ ಇತರೆ ಫೀಚರ್ ಫೋನ್ ಗಳ ಮಾರಾಟ ಕಡಿಮೆಯಾಗಿದ್ದರೂ ಮಧ್ಯ ಏಷ್ಯಾ ಮತ್ತು ಆಫ್ರಿಕನ್ ದೇಶಗಳಲ್ಲಿ ಫೀಚರ್ ಫೋನ್ ಮಾರುಕಟ್ಟೆಯು ದೊಡ್ಡ ಮಟ್ಟದಲ್ಲಿದೆ ಮತ್ತು ಅದೇ ಕಾರಣಕ್ಕೆ ಜಾಗತಿಕವಾಗಿ ಫೀಚರ್ ಫೋನ್ ಮಾರುಕಟ್ಟೆ ಬೆಳವಣಿಗೆ ಕಾಣುತ್ತಿದೆ. MEA ಮಾರಾಟದ ಬೆಳೆವಣಿಗೆಯ ರೇಟ್ 32% ಅಭಿವೃದ್ಧಿ ಕಂಡಿದೆ.

ಎಲೆಕ್ಟ್ರಿಸಿಟಿಯ ಅಲಭ್ಯತೆ:

ಎಲೆಕ್ಟ್ರಿಸಿಟಿಯ ಅಲಭ್ಯತೆ:

ಫೀಚರ್ ಫೋನ್ ಗಳ ಪ್ರಸಿದ್ಧತೆಗೆ ಪ್ರಮುಖ ಕಾರಣ ಅದರ ಬ್ಯಾಟರಿ ಲೈಫ್ ಎಂಬುದಾಗಿ ವರದಿಯು ಅಭಿಪ್ರಾಯ ಪಡುತ್ತದೆ. ಆಫ್ರಿಕಾ, ಇಂಡಿಯಾದಂತ ದೇಶಗಳಲ್ಲಿ ಜನಸಂಖ್ಯೆಯ ಗಾತ್ರಕ್ಕೆ ತಕ್ಕಂತೆ ಎಲೆಕ್ಟ್ರಿಸಿಟಿಯ ಅಲಭ್ಯತೆಯ ಕಾಡುತ್ತದೆ.2014 ರ ವಿಶ್ವ ಬ್ಯಾಂಕ್ ನ ಡಾಟಾದ ಪ್ರಕಾರವೇ ಹೇಳುವುದಾದರೆ ಅಂದಾಜು 600 ಮಿಲಿಯನ್ ಜನರು ಆಫ್ರಿಕಾ ದೇಶವೊಂದರಲ್ಲೇ ಎಲೆಕ್ಟ್ರಿಸಿಟಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆಫ್ರಿಕಾದಲ್ಲಿ ಮೊಬೈಲ್ ಪೇಮೆಂಟ್ ನ್ನು ಹೆಚ್ಚಿಸಲಾಗಿದೆ ಆದರೆ ಹಳ್ಳಿಗಾಡು ಪ್ರದೇಶದಲ್ಲಿ ಎಲೆಕ್ಟ್ರಿಸಿಟಿಯ ಸಮಸ್ಯೆ ಇದೆ. ಹಾಗಾಗಿ ಅಲ್ಲಿನ ಜನರು ಚಾರ್ಜಿಂಗ್ ಪಾಯಿಂಟ್ ಗಳನ್ನು ಆಧರಿಸಿ ಮೊಬೈಲ್ ಚಾರ್ಜ್ ಮಾಡಿಕೊಳ್ಳುತ್ತಾರೆ( ಕೆಲವು ಶಾಪ್ ಗಳು ಮೊಬೈಲ್ ಪಾವತಿಗೆ ಅನುಕೂಲ ಮಾಡಿಕೊಡುತ್ತವೆ).

ಅಧಿಕ ಬ್ಯಾಟರಿ ಲೈಫ್:

ಅಧಿಕ ಬ್ಯಾಟರಿ ಲೈಫ್:

ಮೊಬೈಲ್ ಫೋನ್ ಆಯ್ಕೆಯಲ್ಲಿ ಬ್ಯಾಟರಿ ಲೈಫ್ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಸ್ಮಾರ್ಟ್ ಫೋನ್ ಗಳಿಗೆ ಹೋಲಿಸಿದರೆ ಫೀಚರ್ ಫೋನ್ ಗಳಲ್ಲಿ ಬ್ಯಾಟರಿ ಲೈಫ್ ಅಧಿಕವಾಗಿರುತ್ತದೆ. ವರದಿಯು ಹೇಳುವ ಪ್ರಕಾರ ಹೆಚ್ಚಿನ ಸ್ಮಾರ್ಟ್ ಫೋನ್ ಬಳಕೆದಾರರು ಕೂಡ ಬ್ಯಾಟರಿ ಹೆಚ್ಚು ಸಮಯ ಬರುತ್ತದೆ ಎಂಬ ಕಾರಣಕ್ಕೆ ಫೀಚರ್ ಫೋನ್ ನ್ನು ತಮ್ಮ ಸೆಕೆಂಡರಿ ಡಿವೈಸ್ ಆಗಿ ಬಳಸುತ್ತಾರಂತೆ.

ಫೀಚರ್ ಫೋನ್ ಬಳಕೆಗೆ ಕಾರಣಗಳು:

ಕೌಂಟರ್ ಪಾಯಿಂಟ್ ವರದಿಯು ಹೇಳುವಂತೆ ಫೀಚರ್ ಫೋನ್ ಗಳ

ಯಶಸ್ಸಿಗೆ ಇರುವ ಮತ್ತೊಂದು ಪ್ರಮುಖ ಕಾರಣವೇನೆಂದರೆ ಫೀಚರ್ ಫೋನ್ ನಲ್ಲಿರುವ ಬಳಕೆದಾರರಿಗೆ ಅನುಕೂಲವಾಗುವಂತಹ ಬೇಸ್. ವರದಿಯೇ ಹೇಳುವಂತೆ ಫೀಚರ್ ಫೋನ್ ನಿಂದ ಸ್ಮಾರ್ಟ್ ಫೋನ್ ಗೆ ಮೈಗ್ರೇಟ್ ಆಗುತ್ತಿರುವವರ ಸಂಖ್ಯೆ ಅಧಿಕವಾಗಿದ್ದರೂ ಕೂಡ ವಯಸ್ಸಾದವರು, ಮೊದಲ ಬಾರಿಗೆ ಫೋನ್ ಬಳಕೆಯನ್ನು ಆರಂಭಿಸುತ್ತಿರುವವರು ಸೇರಿದಂತೆ ಕಡುಬಡವರು ಫೀಚರ್ ಫೋನ್ ನ್ನೇ ಹೆಚ್ಚು ಮೆಚ್ಚಿಕೊಳ್ಳುತ್ತಾರೆ.

ಪ್ರಸಿದ್ಧ ಆಪ್ ಗಳ ಲಭ್ಯತೆ:

ಸ್ಮಾರ್ಟ್ ಫೋನ್ ಗಳಲ್ಲಿ ಲಭ್ಯವಾಗುವ ಪ್ರಸಿದ್ಧ ಅಪ್ಲಿಕೇಷನ್ ಗಳಾಗಿರುವ ವಾಟ್ಸ್ ಆಪ್, ಫೇಸ್ ಬುಕ್ ಮತ್ತು ಯುಟ್ಯೂಬ್ ಗಳು ಇದೀಗ 4ಜಿ ಫೀಚರ್ ಫೋನ್ ಗಳಲ್ಲೂ ಲಭ್ಯವಾಗುತ್ತದೆ. ಪ್ರಾಥಮಿಕವಾಗಿ ಫೋನ್ ಬಳಕೆ ಮಾಡುವವರಿಗೆ ಅಂದರೆ ಸ್ಮಾರ್ಟ್ ಫೋನ್ ಬಳಕೆಗೆ ಇನ್ನೂ ಅಪ್ ಗ್ರೇಡ್ ಆಗದ ಬಳಕೆದಾರರಿಗೆ ಇದಿಷ್ಟು ಅಪ್ಲಿಕೇಷನ್ ಗಳನ್ನು ಸಾಕಾಗುತ್ತದೆ. ಹಾಗಾಗಿ ಫೀಚರ್ ಫೋನ್ ಮಾರುಕಟ್ಟೆ ಇನ್ನೂ ಕೂಡ ಮುಂದುವರಿದಿದೆ.

Best Mobiles in India

Read more about:
English summary
These 5 companies sell most feature phones globally

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X