ಶಾಪಿಂಗ್ ಮಾಲ್‌ಗಳಲ್ಲಿ ಫೋನ್ ಖರೀದಿಸುವಾಗ ಎಚ್ಚರ!

By Suneel

  ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಹೊಸದಾಗಿ ಕಾಲಿಟ್ಟ ಫೋನ್‌ಗಳನ್ನು ಬಳಸುವ ಆಸೆ, ಆದರೆ ಪೂರ್ಣ ಹಣ ಕೊಟ್ಟು ಖರೀದಿಸಲು ಸಿದ್ದವಿಲ್ಲ. ಇಂತಹವರು ತಮ್ಮ ಈ ಅನುಭವವನ್ನು ಹಲವು ದಿನಗಳನಂತರ ಸೆಕೆಂಡ್‌ಹ್ಯಾಂಡ್ ಸ್ಮಾರ್ಟ್‌ಫೋನ್‌ಗಳಾಗಿ ಖರೀದಿಸುತ್ತಾರೆ. ಇಂತಹವರು ಒಂದು ಕಡೆಯಾದರೆ, ಇನ್ನೊಂದು ಕಡೆ ಅನಿವಾರ್ಯವಾಗಿ ಯಾವಾಗಲು ಸೆಕೆಂಡ್‌ಹ್ಯಾಂಡ್‌ ಫೋನ್‌ಗಳನ್ನೇ ಖರೀದಿಸಿ ಬಳಸುವಲ್ಲಿ ಮುಂದಾಗುತ್ತಾರೆ. ಪುನಃ ಮಾರುತ್ತಾರೆ. ಆದರೆ ಇಂದು ಕಾಲ ಬದಲಾಗಿದೆ.

  ಓದಿರಿ: ಕಟ್ಟುಕಥೆಗಳನ್ನು ನಂಬಿ ಫೋನ್ ಖರೀದಿ ಮಾಡದಿರಿ

  ಕಡಿಮೆ ಹಣವೆಂದು ಕೊಳ್ಳುವ ಸೆಕೆಂಡ್‌ಹ್ಯಾಂಡ್ ಖರೀದಿಯಲ್ಲಿ ಎಲ್ಲರೂ ಎಚ್ಚರ ವಹಿಸಲೇಬೇಕು. ಕಾರಣ ಕಳ್ಳತನದ ಫೋನ್‌ಗಳು ಮಾರಾಟವಾದರೆ ಕೊಂಡುಕೊಂಡವರು ಶಿಕ್ಷೆಗೆ ಗುರಿಯಾಗುವ ಸಂಭವವಿರುತ್ತದೆ. ನಿಮಗೆ ಮಾರುವವರು ನಿಮ್ಮ ಸ್ನೇಹಿತನೇ ಆದರೂ ಎಚ್ಚರ ವಹಿಸಲೇಬೇಕು. ಇಂದು ಕಳವಾದ ಫೋನ್‌ಗಳನ್ನು ಬಹುಬೇಗ ಪತ್ತೆಹಚ್ಚುವಲ್ಲಿ ತಂತ್ರಜ್ಞಾನ ಅಭಿವೃದ್ದಿಗೊಂಡಿದ್ದು, ಯಾರದೋ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುವ ಸಂದರ್ಭ ಬಂದಿದೆ. ಇಂತಹ ಸಮಸ್ಯೆಗೆ ಗುರಿಯಾಗದಿರಲು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಸೆಕೆಂಡ್‌ಹ್ಯಾಂಡ್‌ ಫೋನ್‌ ಖರೀದಿಸುವಾಗ ನೀವು ಹೇಗೆ ಎಚ್ಚರ ವಹಿಸಬೇಕೆಂದು ಸಲಹೆಗಳನ್ನು ನೀಡುತ್ತಿದೆ.

  ಶಾಪಿಂಗ್‌ ಮಾಲ್‌ಗಳಲ್ಲೂ ಸಹ ಸೆಕೆಂಡ್‌ಹ್ಯಾಂಡ್‌ ಫೋನ್‌ ಖರೀದಿಸುವಲ್ಲಿ ಎಚ್ಚರ ವಹಿಸಬೇಕಾಗಿದ್ದು, ಈ ಸಲಹೆಗಳನ್ನು ಅನುಸರಿಸಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಬಿಲ್‌, ಬಾಕ್ಸ್‌ ಮತ್ತು ಗ್ಯಾಜೆಟ್‌ನ ಇತರೆ ಉಪಕರಣಗಳನ್ನು ಕೇಳಿ

  ಮೇಲಿನ ವಸ್ತುಗಳನ್ನು ಕೇಳುವುದರಿಂದ ನೀವು ಮತ್ತೊಮ್ಮೆ ಗ್ಯಾಜೆಟ್‌ಗಳನ್ನು ಇನ್ನೊಬ್ಬರಿಗೆ ಮಾರಲು ಅಥವಾ ಕಂಪನಿಯಲ್ಲಿ ಬದಲಿಸಲು ಅವಕಾಶವಿದೆ. ಹಾಗೂ ಕೆಲವೊಮ್ಮೆ ಕಳ್ಳತನ ಮಾಡಿದ ಗ್ಯಾಜೆಟ್‌ಗಳನ್ನು ಕೊಳ್ಳುವುದರಿಂದ ತಪ್ಪಿಸಿಕೊಳ್ಳಬಹುದು.

  2GB RAM

  ನೀವು ಕೊಳ್ಳುವ ಸ್ಮಾರ್ಟ್‌ಫೋನ್‌ಗಳು ಕನಿಷ್ಠ 2GB RAM ಹೊಂದಿರಲಿ. 10000 ಬೆಲೆಗಿಂತ ಕಡಿಮೆ ಗ್ಯಾಜೆಟ್ಸ್‌ಗಳು ಸಹ 2GB RAM ಹೊಂದಿರಲಿ. ಕೊಳ್ಳುವ ಮುನ್ನ ಪ್ರೊಸೆಸರ್‌ ಯಾವುದು ಎಂದು ತಿಳಿದುಕೊಳ್ಳಿ. ಕೆಲವು ಹಳೆ ಪ್ರೊಸೆಸರ್‌ಗಳು ಸರಿಯಾಗಿ ಕೆಲಸ ಮಾಡದ ಕಾರಣ ಇದನ್ನು ಪರೀಕ್ಷಿಸಿಕೊಳ್ಳಿ.

  ಕಳ್ಳತನದ ಬಗ್ಗೆ ಪರೀಕ್ಷಿಸಿಕೊಳ್ಳಿ

  ಹಲವು ವೇಳೆ ಕಳ್ಳತನದ ಫೋನ್‌ ಮಾರುವವರಿಂದ ಎಚ್ಚರಿಕೆ ವಹಿಸಬೇಕಾಗಿದೆ. ನೀವು ಗ್ಯಾಜೆಟ್ ಕೊಳ್ಳುವವನಿಂದ ಫೋನ್‌ ಬಾಕ್ಸ್‌ ಕೇಳಿ ಪಡೆಯಿರಿ. ಇಲ್ಲವಾದಲ್ಲಿ ಅದೇ ಸ್ಮಾರ್ಟ್‌ಪೋನ್‌ನಿಂದ *#06# ಡಯಲ್‌ ಮಾಡಿ IMEI ನಂಬರ್‌ ಪರೀಕ್ಷಿಸಿ. IMEIdetective.com ನಲ್ಲಿ ಫೋನ್‌ಮಾಲಿಕ ಕಳ್ಳತನವಾಗಿದ್ದಲ್ಲಿ ಮೊಬೈಲ್‌ನ IMEI ನಂಬರ್‌ ಹಾಕಿರುತ್ತಾನೆ. ಈ ಮೂಲಕ ನೀವು ಬಚಾವ್‌ ಆಗಿ ಮತ್ತು ಮಾಲಿಕನಿಗೂ ಸಹಾಯ ಮಾಡಿ.

  ಹಾರ್ಡ್‌ವೇರ್‌ ಪರೀಕ್ಷಿಸಿ

  ಸ್ಮಾರ್ಟ್‌ಫೋನ್‌ ತೆಗೆದುಕೊಳ್ಳುವ ವೇಳೆ ಅದರಿಂದ ವೆಬ್‌ ಸರ್ಚ್‌ಮಾಡಿ, ಕೆಲವು ಆಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ಮಾಡಿ ಇನ್‌ಸ್ಟಾಲ್‌ಮಾಡಿ ಮತ್ತು ಡಾಟಾ ಕೇಬಲ್‌ನೊಂದಿಗೆ ಲ್ಯಾಪ್‌ಟಾಪ್‌ ಮತ್ತು ಫೋನ್‌ಗೆ ಕನೆಕ್ಟ್‌ಮಾಡಿ. ಆ ಸಮಯದಲ್ಲಿ ಮೊಬೈಲ್‌ ಚಾರ್ಜ್‌ ಆದರೆ ಹಾರ್ಡ್‌ವೇರ್‌ ಉತ್ತಮವಾಗಿರುತ್ತದೆ.

  ಪೇಪಾಲ್‌

  ನೀವು ಫೋನ್‌ಕೊಳ್ಳುವಾಗ ವೆಬ್‌ಸೈಟ್‌ ಮೂಲಕ ಹಣ ನೀಡುವ ಪೇಪಾಲ್‌ ಬಳಸಿ. ಒಂದೊಮ್ಮೆ ನೀವು ಕೆಲವು ಕಾರಣಗಳಿಂದ ಫೋನ್‌ ವಾಪಸು ಮಾಡಿ ಹಣ ಹಿಂಪಡೆಯಲು ಅನುಕೂಲವಾಗಿದೆ.

  ಫೇಸ್‌ಬುಕ್‌ ಮೂಲಕ ಖರೀದಿಗೆ ಪ್ರಯತ್ನಿಸಿ.

  ಫೇಸ್‌ಬುಕ್‌ ಮೂಲಕ ಪಡೆಯುವುದರಿಂದ ಆ ವ್ಯಕ್ತಿಯ ಬಗ್ಗೆ ತಿಳಿಯಲು ಸಹಾಯವಾಗುತ್ತದೆ. ನೀವು ಕೊಳ್ಳುವ ಫೋನ್‌ಗೆ ಇತರರು ಯಾವ ಬೆಲೆ ನೀಡುತ್ತಿದ್ದಾರೆ ಎಂಬುದು ತಿಳಿಯುತ್ತದೆ.

  ವಾರಂಟಿ ಬಗ್ಗೆ ಎಚ್ಚರ

  ಹಲವರು ಕಂಪನಿಯ ವಾರಂಟಿ ಮುಗಿಯುವ ಸಮಯದಲ್ಲಿ ಫೋನ್‌ ಮಾರಲು ಮುಂದಾಗುತ್ತಾರೆ. ಅಂತಹವರಲ್ಲಿ ಕೊಳ್ಳುವುದಕ್ಕಿಂತ ಮೊದಲು ವಾರಂಟಿ ಬಗ್ಗೆ ಎಚ್ಚರವಹಿಸಿ.

  ಕ್ಯಾಮೆರಾ ಮತ್ತು ಇತರೆ ಫೀಚರ್‌ಗಳು

  ನೀವು ಕೊಳ್ಳುವ ಮೊಬೈಲ್‌ನಿಂದ ಕೆಲವು ಫೋಟೋ ತೆಗೆದು ಅದರ ಗುಣಗಳನ್ನು ಪರೀಕ್ಷಿಸಿ. ಹಾಗೂ ಟಚ್‌ ಸ್ಕ್ರೀನ್‌ ಆದಲ್ಲಿ ಸ್ವಲ್ಪ ಸಮಯ ಬಳಸಿ ನೋಡಿ. ಕೆಲವೊಮ್ಮೆ ಟಚ್‌ ಸ್ಕ್ರೀನ್ ಫೋನ್‌ಗಳನ್ನು ಮಾರುವಲ್ಲಿ ಮೋಸ ಮಾಡಲಾಗುತ್ತದೆ.

  ಬ್ಯಾಟರಿ ಮತ್ತು ಲಿಕ್ವಿಡ್ ಡ್ಯಾಮೇಜ್‌

  ಮೊಬೈಲ್‌ ಮಾರುವವರು ಬ್ಯಾಟರಿ ಬದಲಾಯಿಸುವ ಅಥವಾ ಅದೇ ಬ್ಯಾಟರಿಯನ್ನು ತೆಗೆದು ನೋಡಿದರೆ ಬ್ಯಾಟರಿಯ ಎಡ್ಜ್‌ಗಳಲ್ಲಿ ಕೆಂಪು ಅಥವಾ ಗುಲಾಬಿ ಬಣ್ಣಕ್ಕೆ ಬದಲಾಗಿದ್ದರೆ, ಅದು ಲಿಕ್ವಿಡ್‌ ಡ್ರಾಮೇಜ್‌ ಆಗಿರುವ ಸಂಭವವಿರುತ್ತದೆ.

  ನಿಮಗೆ ಬೇಕಾದ ಫೀಚರ್ ಪರೀಕ್ಷಿಸಿ

  ಹಿಂದೆ ತಿಳಿಸಿದ ಎಲ್ಲಾ ಅಂಶಗಳ ಜೊತೆಗೆ ನಿಮಗೆ ಬೇಕಾದ ಫೀಚರ್‌ಗಳು ಇರುವುದರ ಬಗ್ಗೆ ಖಚಿತಪಡಿಸಿಕೊಳ್ಳಿ. ಸಾಧ್ಯವಾದಷ್ಟು ಫೋನ್‌ ಮಾರುವವರೊಂದಿಗೆ ಮುಖಾಮುಖಿ ಭೇಟಿ ಮಾಡಿ ಖರೀದಿಸಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Thinking of buying a used smartphone because it's an awesome deal? You may be right, but it is always better to keep a checklist with you while purchasing gadgets second-hand.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more