ಮೊಬೈಲ್ ಬ್ಯಾಂಕಿಂಗ್: ಸ್ವಲ್ಪ ಯಾಮಾರಿದರೂ ಅಪಾಯ ಖಂಡಿತ

By Shwetha
|

ಇಂದಿನ ಟೆಕ್ನಾಲಜಿ ಯುಗದಲ್ಲಿ ಅಸಾಧ್ಯ ಎಂಬ ಮಾತಿಗೆ ಜಾಗವೇ ಇಲ್ಲ. ಏಕೆಂದರೆ ಅಸಾಧ್ಯ ಎಂಬುದನ್ನು ಬೇಧಿಸಿ ಅದನ್ನು ಸಾಧ್ಯವಾಗಿಸುವ ಕೆಲಸಗಳನ್ನು ಇಂದು ಮಾಡಲಾಗುತ್ತಿದೆ. ಆಧುನಿಕ ವ್ಯವಸ್ಥೆಯು ದಿನದಿಂದ ದಿನಕ್ಕೆ ಬದಲಾವಣೆಗಳನ್ನು ಪಡೆದುಕೊಳ್ಳುತ್ತಾ ಇಂದು ಕ್ರಾಂತಿಯ ಹಾದಿಯನ್ನು ಪಡೆದುಕೊಳ್ಳುತ್ತಿದೆ. ಇಂದು ಇರುವ ತಂತ್ರಜ್ಞಾನ ನಾಳೆ ಇರುವುದಿಲ್ಲ ಅಂದರೆ ಈ ತಂತ್ರಜ್ಞಾನದ ಸುಧಾರಿತ ಪ್ರಗತಿಯನ್ನು ನೀವು ಕಾಣಬಹುದು.

ಈ ಮಾರ್ಪಾಡು ಎಷ್ಟಿದೆಯೆಂದರೆ ನೀವು ಮನೆಯಲ್ಲೇ ಕುಳಿತು ಹೊರಗಿನ ಎಲ್ಲಾ ಕೆಲಸಗಳನ್ನು ಸುಲಭವಾಗಿ ನಿರ್ವಹಿಸುವಂತಿದೆ. ಆನ್‌ಲೈನ್ ಶಾಪಿಂಗ್, ವಿದ್ಯುತ್ ಬಿಲ್, ಫೋನ್ ಬಿಲ್ ಕಟ್ಟುವುದು, ಮಕ್ಕಳ ಫೀಸ್ ಹೀಗೆ ಎಲ್ಲಾ ಜವಬ್ದಾರಿಗಳನ್ನು ನೀವು ಆಯಾಯ ಸ್ಥಳಕ್ಕೆ ಹೋಗದೆಯೇ ಕುಳಿತಲ್ಲಿಂದಲೇ ನಿರ್ವಹಿಸಬಹುದಾಗಿದೆ. ಅಂಗೈಯಗದ ಮಾಣಿಕ್ಯನೆಂದೇ ಕರೆಯಿಸಿಕೊಂಡಿರುವ ಮೊಬೈಲ್ ಫೋನ್ ಪುಟ್ಟದಾಗಿದ್ದರೂ ಬೆಟ್ಟದಷ್ಟು ಕೆಲಸಗಳನ್ನು ನಿರ್ವಹಿಸುತ್ತದೆ. ಫೋನ್ ನಡೆಸುವ ಅಂತಹುದೇ ಸೇವೆಗಳಲ್ಲಿ ಒಂದಾಗಿದೆ ಮೊಬೈಲ್ ಬ್ಯಾಂಕಿಂಗ್. ನಿಮ್ಮ ಖಾತೆಗಳ ನಿರ್ವಹಣೆ, ಹಣ ವರ್ಗಾವಣೆ, ಬಿಲ್ ಪಾವತಿ ಎಟಿಎಮ್ ಲೊಕೇಟ್ ಮಾಡುವುದು ಮೊದಲಾದುವನ್ನು ಫೋನ್‌ನಲ್ಲೇ ನಿರ್ವಹಿಸಬಹುದಾಗಿದೆ.

ಆದರೆ ಮೊಬೈಲ್ ಬ್ಯಾಂಕಿಂಗ್ ಈಗ ಹ್ಯಾಕರ್‌ಗಳಿಗೆ ಸುಲಭವಾಗಿ ಆಹಾರವಾಗುತ್ತಿದೆ. ನಿಮ್ಮ ಖಾತೆಯನ್ನು ಹ್ಯಾಕ್ ಮಾಡಿ ಹಣವನ್ನು ಕಬಳಿಸುವ ಮೋಸ ನಡೆಸುವ ವ್ಯವಹಾರಗಳು ಇಲ್ಲಿ ನಡೆಯುತ್ತಿದೆ. ಹಾಗಿದ್ದರೆ ಮೊಬೈಲ್ ಬ್ಯಾಂಕಿಂಗ್‌ನಲ್ಲಿ ಭದ್ರತೆಯನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

#1

#1

ಸಂಶಯಾಸ್ಪದವಲ್ಲದ ಕಣ್ಣುಗಳನ್ನು ಇದು ಸುಲಭವಾಗಿ ಮೋಸದ ಬಲೆಗೆ ಕೆಡವುತ್ತದೆ. ಇವುಗಳು ಮೇಲ್ನೋಟಕ್ಕೆ ಅಷ್ಟೊಂದು ಅಪಾಯಕಾರಿಯಾಗಿ ಕಾಣದೇ ಇದ್ದರೂ ನಿಮ್ಮೆಲ್ಲಾ ಬ್ಯಾಂಕಿಂಗ್ ಮಾಹಿತಿಗಳನ್ನು ಇದು ಕದಿಯಬಹುದು.

#2

#2

ನಿಮ್ಮ ಬಳಕೆದಾರ ಹೆಸರು, ಪಾಸ್‌ವರ್ಡ್ಸ್, ಕ್ರೆಡಿಟ್/ಡೆಬಿಟ್ ಕಾರ್ಡ್ ನಂಬರ್ ಮೊದಲಾದ ಮಾಹಿತಿಗಳನ್ನು ಹ್ಯಾಕರ್‌ಗಳಿಗೆ ಒದಗಿಸುವಲ್ಲಿ ಸುರಕ್ಷಿತವಲ್ಲದ ವೈಫೈ ಪಾತ್ರ ವಹಿಸುತ್ತದೆ.

#3

#3

ನಕಲಿ ಇಮೇಲ್‌ಗಳು, ವಾಟ್ಸಾಪ್ ಸಂದೇಶಗಳು ಮತ್ತು ಎಸ್‌ಎಮ್‌ಎಸ್‌ಗಳು ಲಿಂಕ್‌ಗಳನ್ನು ಒಳಗೊಂಡಿದ್ದು ಇದು ನಿಮ್ಮನ್ನು ನಕಲಿ ಶಾಪಿಂಗ್ ಅಥವಾ ಬ್ಯಾಂಕಿಂಗ್ ವೆಬ್‌ಸೈಟ್‌ಗಳಿಗೆ ಕೊಂಡೊಯ್ಯುತ್ತದೆ. ಆದ್ದರಿಂದ ಮೊಬೈಲ್ ಬಳಕೆದಾರರು ಎಚ್ಚರವಾಗಿರಬೇಕು.

#4

#4

ಮೊಬೈಲ್ ಬ್ಯಾಂಕಿಂಗ್ ಪ್ರದೇಶವನ್ನು ಗುರಿಯಾಗಿರಿಸಿಕೊಂಡೇ ಮಾಲ್‌ವೇರ್‌ಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ. ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳ ರೂಪದಲ್ಲಿ ಅಥವಾ ಮರೆಯಾದ ದೋಷಪೂರಿತ ಸ್ಪ್ಯಾಮ್ ಇಮೇಲ್‌ಗಳ ರೂಪದಲ್ಲಿ ಇದು ಇರುತ್ತವೆ.

#5

#5

ಬ್ಯಾಂಕಿಂಗ್ ಅಪ್ಲಿಕೇಶನ್‌ಗಳು ಕೆಳಮಟ್ಟದ ಭದ್ರತಾ ವ್ಯವಸ್ಥೆಗಳನ್ನು ಹೊಂದಿರುವುದರಿಂದ ಹ್ಯಾಕರ್‌ಗಳಿಗೆ ಬಳಕೆದಾರರು ಸುಲಭವಾಗಿ ಬಲಿಯಾಗುವಂತೆ ಇದು ಮಾಡುತ್ತದೆ.

#6

#6

ಗೂಗಲ್ ಪ್ಲೇ/ ಆಪಲ್ ಸ್ಟೋರ್‌ನಂತಹ ಅಧಿಕೃತ ಸ್ಟೋರ್‌ಗಳಿಂದ ಮಾತ್ರವೇ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿ.

#7

#7

ಉಚಿತವಾಗಿ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳನ್ನು ಬಳಸದಿರಿ, ಕೆಫೆ, ಏರ್‌ಪೋರ್ಟ್, ಹೋಟೆಲ್‌ಗಳಲ್ಲಿ ದೊರೆಯುವ ಅಭದ್ರ ವೈಫೈ ನೆಟ್‌ವರ್ಕ್‌ಗಳನ್ನು ಬಳಸುವಾಗ ಹೆಚ್ಚು ಜಾಗ್ರತೆಯಿಂದಿರಿ.

#8

#8

ಸಂಶಯಾಸ್ಪದ ಇಮೇಲ್‌ಗಳು ಮತ್ತು ಎಸ್‌ಎಮ್‌ಎಸ್‌ಗಳಿಂದ ಲಿಂಕ್ ಕ್ಲಿಕ್ ಮಾಡುವುದು ಅಥವಾ ಅಟ್ಯಾಚ್‌ಮೆಂಟ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದನ್ನು ಆದಷ್ಟು ಕಡಿಮೆ ಮಾಡಿ.

#9

#9

ಒಮ್ಮೆ ಮುಗಿದ ನಂತರ ರಿಮೆಂಬರ್ ಮಿ ಅಥವಾ ಕೀಪ್ ಮಿ ಲಾಗ್ಡ್ ಇನ್ ಆಯ್ಕೆಗಳನ್ನು ಕ್ಲಿಕ್ ಮಾಡಬೇಡಿ.

#10

#10

ಲಾಗಿನ್ ಐಡಿ/ಪಾಸ್‌ವರ್ಡ್, ಕ್ರೆಡಿಟ್/ಡೆಬಿಟ್ ಕಾರ್ಡ್ ಸಂಖ್ಯೆ, ಸಿವಿವಿ ಸಂಖ್ಯೆ ಮೊದಲಾದ ಬ್ಯಾಂಕಿಂಗ್ ಮಾಹಿತಿಗಳನ್ನು ಫೋನ್‌ನಲ್ಲಿ ಸಂಗ್ರಹಿಸಿಡಬೇಡಿ.

#11

#11

ನಿಮ್ಮ ಫೋನ್‌ಗೆ ಪಾಸ್‌ವರ್ಡ್ ಅಥವಾ ಪಿನ್‌ನೊಂದಿಗೆ ಭದ್ರಪಡಿಸಿಕೊಳ್ಳಿ.

#12

#12

ವಿಶ್ವಾಸಾರ್ಹ ಮೊಬೈಲ್ ಭದ್ರತಾ ಅಪ್ಲಿಕೇಶನ್ ಬಳಸಿ.

Best Mobiles in India

English summary
In this article we are giving you some tips on mobile banking security. These tips helps every users to take care of their mobile banking very safely.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X