ಇಲ್ಲಿವೆ ನೋಡಿ ಬೆಸ್ಟ್‌ ಬಜೆಟ್‌ ಫೋನ್‌ಗಳು!.ಆದ್ರೆ, ಇವು ಚೀನಾ ಫೋನ್‌ಗಳಲ್ಲ!

|

ಸದ್ಯ ಪ್ರತಿಯೊಬ್ಬರಿಗೂ ಯಾವುದೇ ಕೆಲಸವಿರಲಿ ಅದಕ್ಕೆ ಸ್ಮಾರ್ಟ್‌ಫೋನ್‌ ಬೇಕೆಬೇಕು ಎನ್ನುವ ಸ್ಥಿತಿ ಇದೆ. ಅಷ್ಟರಮಟ್ಟಿಗೆ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರ ಅನಿವಾರ್ಯವಾಗಿಬಿಟ್ಟಿದೆ. ಈ ನಿಟ್ಟಿನಲ್ಲಿ ಮಾರುಕಟ್ಟೆಯಲ್ಲಿಯೂ ಸಹ ಸ್ಮಾರ್ಟ್‌ಫೋನ್‌ಗಳು ಎಂಟ್ರಿಕೊಡುತ್ತಲೇ ಸಾಗಿವೆ. ಆದರೆ ಅವುಗಳಲ್ಲಿ ಬಜೆಟ್‌ ಪ್ರೈಸ್‌ಟ್ಯಾಗ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಗ್ರಾಹಕರನ್ನು ಹೆಚ್ಚಾಗಿ ಸೆಳೆಯುತ್ತವೆ.

ಡಿಮ್ಯಾಂಡ್ ಜಾಸ್ತಿ

ಹೌದು, ಅಗತ್ಯ ಹೊಸ ಫೀಚರ್ಸ್‌ಗಳನ್ನು ಹೊಂದಿರುವ ಕೈಗೆಟುಕುವ ದರದಲ್ಲಿನ ಸ್ಮಾರ್ಟ್‌ಫೋನ್‌ಗಳಿಗೆ ಡಿಮ್ಯಾಂಡ್ ಜಾಸ್ತಿ. ಇನ್ನು ಮಾರುಕಟ್ಟೆಯಲ್ಲಿ ಬಜೆಟ್‌ ಬೆಲೆಯಲ್ಲಿ ಚೀನಾ ಮೂಲದ ಸ್ಮಾರ್ಟ್‌ಫೋನ್‌ಗಳೆ ಹೆಚ್ಚು. ಆದರೆ ಕೆಲವು ಗ್ರಾಹಕರು ಚೀನಾ ಕಂಪನಿಗಳ ಫೋನ್ ಖರೀದಿಸಲು ಇಷ್ಟಪಡುವುದಿಲ್ಲ. ಸದ್ಯ ಹಾಗೇನಾದರೂ ನೀವು ಸಹ ಚೀನಿ ಕಂಪನಿಗಳನ್ನು ಬಿಟ್ಟು ಬಜೆಟ್ ಬೆಲೆಯಲ್ಲಿ ಇತರೆ ಕಂಪನಿಗಳ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವ ಪ್ಲ್ಯಾನ್ ಇದ್ದರೇ. ಈ ಲೇಖನದಲ್ಲಿವೆ ಸೂಕ್ತ ಆಯ್ಕೆಗಳು. ಇನ್ನು ಚೀನಿ ಕಂಪನಿಯ ಫೋನ್‌ಗಳನ್ನು ಹೊರತುಪಡಿಸಿ 15,000ರೂ.ಪ್ರೈಸ್‌ಟ್ಯಾಗ್‌ನಲ್ಲಿರುವ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ M30s

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ M30s

ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ M30s ಫೋನ್‌ 48ಎಂಪಿ ಕ್ಯಾಮೆರಾ, 6000mAh ಬ್ಯಾಟರಿ, Exynos 9611 ಪ್ರೊಸೆಸರ್, AMOLED ಡಿಸ್‌ಪ್ಲೇ ಮತ್ತು ಡಿಸೈನ್ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿದೆ. ಇನ್ನು ಈ ಫೋನಿನ 4GB RAM + 64GB ವೇರಿಯಂಟ್ ಬೆಲೆಯು 13,999ರೂ.ಗಳು ಆಗಿದೆ. ಯುಎಸ್‌ಬಿ ಟೈಪ್‌ - ಸಿ ಪೋರ್ಟ್ ಆಯ್ಕೆಯನ್ನು ಪಡೆದಿದೆ.

ನೋಕಿಯಾ 6.2

ನೋಕಿಯಾ 6.2

ಜನಪ್ರಿಯ ನೋಕಿಯಾ ಕಂಪನಿಯು 6.3 ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇ ಪಿಕ್ಸಲ್ ರೆಸಲ್ಯೂಶನ್ 2280 x 1080 ಆಗಿದೆ. ಇನ್ನು ಸ್ನ್ಯಾಪ್‌ಡ್ರಾಗನ್ 636 ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, 4GB RAM ಮತ್ತು 64GB ವೇರಿಯಂಟ್ ಆಯ್ಕೆಯನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್ 13,470ರೂ.ಗಳಿಗೆ ಲಭ್ಯವಾಗಲಿದೆ.

ಆಸೂಸ್‌ ಝೆನ್ಫೋನ್ ಮ್ಯಾಕ್ಸ್ ಪ್ರೊ M2

ಆಸೂಸ್‌ ಝೆನ್ಫೋನ್ ಮ್ಯಾಕ್ಸ್ ಪ್ರೊ M2

ಆಸೂಸ್‌ ಕಂಪನಿಯ ಝೆನ್ ಮ್ಯಾಕ್ಸ್ ಪ್ರೊ M2 ಸಹ ಬಜೆಟ್‌ ಬೆಲೆಯಲ್ಲಿ ಗುರುತಿಸಿಕೊಂಡಿದ್ದು, 6.26 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಪಡೆದಿದೆ. 5,000mAh ಬ್ಯಾಟರಿ ಸಾಮರ್ಥ್ಯ, ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್, ಪ್ರಮುಖ ಹೈಲೈಟ್ಸ್‌ಗಳಾಗಿವೆ. ಇನ್ನು ಈ ಸ್ಮಾರ್ಟ್‌ಫೋನ್ 9,999ರೂ.ಗಳ ಬೆಲೆಯನ್ನು ಹೊಂದಿದ್ದು, ಫ್ಲಿಪ್‌ಕಾರ್ಟ್‌ ತಾಣದಲ್ಲಿ ಖರೀದಿಗೆ ಲಭ್ಯವಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ M30

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ M30

ಗ್ಯಾಲ್ಯಾಕ್ಸಿ M30 ಬಹುತೇಕ ಗ್ಯಾಲ್ಯಾಕ್ಸಿ ಗ್ಯಾಲ್ಯಾಕ್ಸಿ M30s ಮಾದರಿಯಂತೆ ಇದ್ದು, 5,000mAh ಬ್ಯಾಟರಿ ಲೈಫ್ ಅನ್ನು ಪಡೆದಿದೆ. ತ್ರಿವಳಿ ಕ್ಯಾಮೆರಾ ಜೊತೆಗೆ 6.4 ಇಂಚಿನ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಯುಎಸ್‌ಬಿ ಟೈಪ್-ಸಿ ಸೌಲಭ್ಯ ಪಡೆದುಕೊಂಡಿದೆ. ಅಮೆಜಾನ್ ತಾಣದಲ್ಲಿ 9,999ರೂ.ಗಳಿಗೆ ದೊರೆಯಲಿದೆ.

ಇತರೆ ಅಗ್ಗದ ಫೋನ್‌ಗಳು

ಇತರೆ ಅಗ್ಗದ ಫೋನ್‌ಗಳು

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ M10s ಸ್ಮಾರ್ಟ್‌ಫೋನ್ 8,499ರೂ.ಗಳಿಗೆ ಲಭ್ಯ. ಹಾಗೆಯೇ ಇನ್‌ಫಿನಿಕ್ಸ್‌ ಹಾಟ್ 8 ಫೋನ್ ತ್ರಿವಳಿ ಕ್ಯಾಮೆರಾ, 4GB RAM + 64GB ವೇರಿಯಂಟ್ ಮತ್ತು 5,000mAh ಫೀಚರ್ಸ್‌ಗಳಿಂದ ಗಮನಸೆಳೆದಿದ್ದು, 6,999ರೂ.ಗಳ ಪ್ರೈಸ್‌ಟ್ಯಾಗ್ ಹೊಂದಿದೆ. ಇದೇ ರೀತಿ 4GB RAM + 128GB ವೇರಿಯಂಟ್‌ನ ಇನ್‌ಫಿನಿಕ್ಸ್‌ S5 ಲೈಟ್‌ ಸಹ ಅಗ್ಗದ ಬೆಲೆಯಿಂದ ಆಕರ್ಷಕವಾಗಿದೆ. ಈ ಫೋನ್ ಬೆಲೆಯು 7,999ರೂ.ಆಗಿದೆ.

Most Read Articles
Best Mobiles in India

English summary
If you are looking for the best non-Chinese phone under Rs 15,000 in India, then check out our list. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X