Just In
Don't Miss
- News
ತೆಲಂಗಾಣ ಎನ್ಕೌಂಟರ್: ತನಿಖಾ ಸಮಿತಿ ರಚಿಸಿದ ಸುಪ್ರೀಂಕೋರ್ಟ್
- Automobiles
ನಕಲಿ ನಂಬರ್ಪ್ಲೇಟ್ ಬಳಸಿ ಸಿಕ್ಕಿಬಿದ್ದ ಮೈಸೂರಿನ ಯುವಕ
- Movies
2019: ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆದ ಸೌತ್ ಸಿನಿಮಾ ಯಾವುದು?
- Finance
ಅಮೆರಿಕಾದ ಈ ಕಂಪನಿಯಿಂದ ಉದ್ಯೋಗಿಗಳಿಗೆ ಲಕ್ಷ, ಲಕ್ಷ ಕ್ರಿಸ್ಮಸ್ ಬೋನಸ್!
- Sports
ರಣಜಿ ಕರ್ನಾಟಕ vs ತಮಿಳುನಾಡು; ರೋಚಕ ಪಂದ್ಯದಲ್ಲಿ ಯಾರಿಗೆ ಗೆಲುವು?
- Lifestyle
ಈ ಮುದ್ದು ಪಾಂಡಾಗಳ ಆಟ ನೋಡಿದರೆ ನೀವು ಮನಸು ಬಿಚ್ಚಿ ನಗುವಿರಿ
- Education
UPSC ESE Admit Card 2020: ಇಂಜಿನಿಯರಿಂಗ್ ಸರ್ವೀಸಸ್ ಪ್ರಿಲಿಮಿನರಿ ಪರೀಕ್ಷಾ ಪ್ರವೇಶ ಪತ್ರ ಬಿಡುಗಡೆ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಉನ್ನತ ಫೀಚರ್‌ಗಳ ಸ್ಮಾರ್ಟ್‌ಫೋನ್‌ಗಳು ಈಗ ಮಧ್ಯಮ ವರ್ಗಕ್ಕೂ ಲಭ್ಯ
ಉತ್ತಮ ವೈಶಿಷ್ಟ್ಯತೆಗಳಿರುವ ಫೋನ್ ಗಳಿಗಾಗಿ 50,000 ರುಪಾಯಿ ಪಾವತಿಸಬೇಕಾಗಿದ್ದ ಕಾಲ ಹೊರಟು ಹೋಯ್ತು. ದಿನ ಕಳೆದಂತೆ ಹೊಸಹೊಸ ತಂತ್ರಜ್ಞಾನಗಳು ಮತ್ತು ವೈಶಿಷ್ಟ್ಯತೆಗಳು ಕಡಿಮೆ ಬೆಲೆಯ ಫೋನ್ ಗಳಲ್ಲೂ ಗ್ರಾಹಕರನ್ನು ತಲುಪುವಂತಾಗಿದೆ. ಇದೀಗ ಉತ್ತಮ ವೈಶಿಷ್ಟ್ಯತೆಗಳು, ಹೈ-ಸ್ಪೀಡ್ ಪ್ರೊಸೆಸರ್, ಮೆಮೊರಿ, ಉತ್ತಮ ಕ್ಯಾಮರಾಗಳು ,ಪವರ್ ಫುಲ್ ಆಗಿರುವ ಬ್ಯಾಟರಿ ಹೀಗೆ ಹಲವು ವೈಶಿಷ್ಟ್ಯತೆಗಳಿರುವ ಫೋನೇ ಕೇವಲ 35,000 ರುಪಾಯಿಗೆ ಗ್ರಾಹಕರ ಕೈಸೇರುವಂತಿದೆ. ಅಷ್ಟೇ ಅಲ್ಲ, ಕೆಲವು ಫೋನ್ ಗಳು ಇನ್ನೂ ಕಡಿಮೆ ಅಂದರೆ 20,000 ರುಪಾಯಿಗೂ ಸಿಗುತ್ತಿದೆ.
ಟಾಪ್ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿಗಳಾದ ಶಿಯೋಮಿ, ಓಪ್ಪೋ, ಒನ್ ಪ್ಲಸ್, ವಿವೋ ಹಾಗೂ ಸ್ಯಾಮ್ ಸಂಗ್ ಕೂಡ ಈಗ ಟಾಪ್-ಎಂಡ್ ವೈಶಿಷ್ಟ್ಯತೆಗಳಿರುವ ಫೋನ್ ಗಳನ್ನು ಮಧ್ಯಮ-ರೇಂಜ್ ನ ಬೆಲೆಗೆ ಮಾರಾಟ ಮಾಡುತ್ತಿದೆ. ಗ್ರಾಹಕರ ಬೇಡಿಕೆ ಮತ್ತು ಕಾಂಪಿಟೇಷನ್ ಹೆಚ್ಚುತ್ತಿದ್ದಂತೆ ಬೆಲೆಯಲ್ಲಿ ಕಂಪೆನಿಗಳೂ ಕೂಡ ಕಾಂಪ್ರಮೈಸ್ ಆಗಲು ಮುಂದಾಗಿವೆ.

ಗ್ರಾಹಕರ ಆಯ್ಕೆ ಹೇಗಿರುತ್ತದೆ?
ಭಾರತೀಯ ಗ್ರಾಹಕರನ್ನು ಸೆಳೆಯಲು ತಯಾರಿಕಾ ಕಂಪೆನಿಗಳು ಈ ಸೂತ್ರವನ್ನು ಅಳವಡಿಸಿಕೊಂಡಿವೆ. ಅತೀ ಹೆಚ್ಚು ವೈಶಿಷ್ಟ್ಯೆತೆಗಳಿರುವ ಫೋನನ್ನು ಮಧ್ಯಮ ರೇಂಜಿನ ಬೆಲೆಯಲ್ಲಿ ಮಾರಾಟ ಮಾಡಿದರೆ ಕಂಪೆನಿಗೆ ಒಟ್ಟಾರೆ ಸರಾಸರಿ ಆದಾಯವು ಹೆಚ್ಚುತ್ತದೆ ಎಂಬ ಅಭಿಪ್ರಾಯವನ್ನು ತಜ್ಞರು ಹೇಳುತ್ತಿದ್ದಾರೆ. ಅದರಲ್ಲೂ ಗ್ರಾಹಕರಿಗೆ ಈಗ ಹೆಚ್ಚಿನ ಬುದ್ಧಿವಂತಿಕೆ ಇದೆ.
ಅವರೂ ಹೆಚ್ಚು ಆಲೋಚಿಸಿ ಖರೀದಿಸಲು ಮುಂದಾಗುತ್ತಾರೆ. ಮೆಮೊರಿ, ಪ್ರೊಸೆಸರ್, ಸಿಸ್ಟಮ್ ಆನ್-ಚಿಪ್ (ಸಾಕೆಟ್) , ಕ್ಯಾಮರಾಗಳು, ಡಿಸ್ಪ್ಲೇ ಯ ರೀತಿ, ಹೀಗೆ ಅಪ್ ಗ್ರೇಡ್ ಆಗಿರುವ ಮೊಬೈಲ್ ಗಳ ಖರೀದಿಗೆ ಗ್ರಾಹಕರು ಕೂಡ ಮನಸ್ಸು ಮಾಡುತ್ತಾರೆ ಜೊತೆಗೆ ಬಜೆಟ್ ಫ್ರೆಂಡ್ಲಿಯಾಗಿರುವ ಮೊಬೈಲ್ ಗಳನ್ನು ಖರೀದಿಸಲು ಇಚ್ಛಿಸುತ್ತಾರೆ. ಅದರಲ್ಲಿ ಹೆಚ್ಚು ವೈಶಿಷ್ಟ್ಯತೆಗಳಿರಬೇಕು ಎಂದು ಕೂಡ ಬಯಸುತ್ತಾರೆ.

ಪ್ರಮುಖ ವ್ಯತ್ಯಾಸಗಳು:
ಗ್ರಾಹಕರ ಆಯ್ಕೆಗೆ ಅನುಗುಣವಾಗಿ ತಯಾರಿಕಾ ಕಂಪೆನಿಗಳು ಬದಲಾಗುತ್ತಿರುವ ಸ್ಪಷ್ಟವಾಗಿ ಮಾರುಕಟ್ಟೆಯ ಇತಿಹಾಸವನ್ನು ಗಮನಿಸಿದರೆ ತಿಳಿದುಬರುತ್ತದೆ. ಮೊದಲೆಲ್ಲ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ನ್ನು ಕೇವಲ 45,000 ಮತ್ತು ಅದಕ್ಕಿಂತ ಹೆಚ್ಚು ಬೆಲೆಯ ಸ್ಮಾರ್ಟ್ ಫೋನ್ ಗಳಲ್ಲಿ ಮಾತ್ರ ಬಳಕೆ ಮಾಡಲಾಗುತ್ತಿತ್ತು. ಆದರೆ ಈಗ ಕೆಲವು ಬ್ರ್ಯಾಂಡ್ ಗಳು 20,000-30,000 ರುಪಾಯಿ ಬೆಲೆಯ ಹ್ಯಾಂಡ್ ಸೆಟ್ ನಲ್ಲೂ ಕೂಡ ಇದನ್ನು ಪರಿಚಯಿಸಿದೆ.
ಮೊದಲೆಲ್ಲ 4000 MAh ಬ್ಯಾಟರಿ ಮತ್ತು 6ಜಿಬಿ ಮೆಮೊರಿ ಇರುವ ಫೋನ್ ಗಳು ಕೇವಲ ಹೈ-ಎಂಡ್ ಮೊಬೈಲ್ ಗಳಾಗಿರುತ್ತಿದ್ದವು. ಇತ್ತೀಚೆಗೆ ಬರುತ್ತಿರುವ ಮಿಡ್ ರೇಂಜ್ ಫೋನ್ ಮತ್ತು ಹೈ ಎಂಡ್ ಫೋನ್ ಎರಡರಲ್ಲೂ ಕೂಡ ಕ್ಯಾಮರಾ ಕ್ವಾಲಿಟಿ ಹೆಚ್ಚು ಕಡಿಮೆ ಒಂದೇ ಆಗಿರುತ್ತದೆ. ಹೀಗೆ ಹಲವು ವ್ಯತ್ಯಾಸಗಳನ್ನು ಗಮನಿಸಬಹುದು.

ಕಡಿಮೆ ಬೆಲೆಯಲ್ಲಿ ಉತ್ತಮ ಮೊಬೈಲ್ ಬರಲು ಕಾರಣವೇನು?
ಇದಕ್ಕೆ ಪ್ರಮುಖ ಕಾರಣವೇ ಸ್ಪರ್ಧೆ. ಸ್ಯಾಮ್ ಸಂಗ್ ನ ಐಟಿ ಮತ್ತು ಮೊಬೈಲ್ ಕಮ್ಯೂನಿಕೇಷನ್ ಗೆ ಸಿಇಓ ಡಿಜೆ ಕೋ ಅವರು ಹೇಳುವಂತೆ ಕೊರಿಯನ್ ಎಲೆಕ್ಟ್ರಾನಿಕ್ ಸಂಸ್ಥೆ ಸ್ಯಾಮ್ ಸಂಗ್ ಕೂಡ ಇನ್ನು ಮುಂದೆ ಮಿಡ್ ರೇಂಜ್ ಫೋನ್ ಗಳಲ್ಲಿ ಹೈ ಎಂಡ್ ವೈಶಿಷ್ಟ್ಯತೆಗಳನ್ನು ಅಳವಡಿಸಲಿದೆಯಂತೆ. ಅದಕ್ಕೆ ಪ್ರಮುಖ ಕಾರಣ ಶಿಯೋಮಿ, ಒನ್ ಪ್ಲಸ್, ಓಪೋ ಮತ್ತು ವಿವೋ ಗಳು ನೀಡುತ್ತಿರುವ ಸ್ಪರ್ಧೆ ಎನ್ನುತ್ತಾರೆ ಅವರು.
ಮೊದಲೆಲ್ಲ ಗ್ರಾಹಕರು ಬ್ರ್ಯಾಂಡ್ ಬಗ್ಗೆ ಆಲೋಚಿಸುತ್ತಿದ್ದರು. ಆದರೆ ಈಗ ಕಾಂಪೋನೆಂಟ್ ಬಗ್ಗೆ ಯೋಚಿಸುತ್ತಾರೆ. ಮೊಬೈಲ್ ಕ್ಯಾಮರಾ ಹೇಗಿದೆ, ಸಿಸ್ಟಮ್ ಚಿಪ್ ಹೇಗಿದೆ, ಮೆಮೊರಿ ಎಷ್ಟಿದೆ, ಸ್ಟೋರೇಜ್ ಎಷ್ಟು ಅವಕಾಶವಿದೆ. ಹೀಗೆ ಪ್ರತಿಯೊಂದು ವೈಶಿಷ್ಟ್ಯತೆಯ ಬಗ್ಗೆ ಗ್ರಾಹಕರು ಬಲ್ಲವರಾಗಿದ್ದಾರೆ ಎನ್ನುತ್ತಾರೆ ಕೌಂಟರ್ ಪಾಯಿಂಟ್ ನ ಅಸೋಸಿಯೇಟ್ ಡೈರೆಕ್ಟರ್ ಆಗಿರುವ ತರುಣ್ ಪಾಠಕ್.

ಮಾರುಕಟ್ಟೆಯಲ್ಲಿನ ಸ್ಪರ್ಧೆ
ಇದೇ ಕಾರಣಕ್ಕೆ ಬ್ರ್ಯಾಂಡ್ ಗಳೂ ಕೂಡ ಕಾಂಪೋನೆಂಟ್ ವಿಚಾರದಲ್ಲಿ ಹೆಚ್ಚು ಜಾಗೃತಿ ವಹಿಸುತ್ತಿದೆ ಮತ್ತು ಕಡಿಮೆ ಬೆಲೆಯಲ್ಲೇ ಉತ್ತಮ ಮೊಬೈಲ್ ಗಳನ್ನ ಗ್ರಾಹಕರಿಗೆ ಕೊಡುವ ಉದ್ದೇಶವನ್ನು ಹೊಂದುತ್ತಿವೆ. ಒಟ್ಟಾರೆ ಮಾರುಕಟ್ಟೆಯಲ್ಲಿನ ಸ್ಪರ್ಧೆಯು ಮಧ್ಯಮ ರೇಂಜಿನಲ್ಲೇ ಬೆಸ್ಟ್ ಮೊಬೈಲ್ ಗಳು ಗ್ರಾಹಕರ ಕೈ ಸೇರಲು ಕಾರಣವಾಗುತ್ತಿದೆ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090