2017ರಲ್ಲಿ ಬಿಡುಗಡೆಯಾಗಲಿರುವ ಎಲ್.ಜಿ ಸ್ಮಾರ್ಟ್ ಫೋನುಗಳು

|

2016 ಎಲ್.ಜಿಗೆ ಖುಷಿ ತಂದ ವರುಷವಾಗಲಿಲ್ಲ. ಕಂಪನಿಯ ಅತ್ಯಂತ ನಿರೀಕ್ಷಿತ ಎಲ್.ಜಿ ಜಿ5 2016ರಲ್ಲಿ ದಯನೀಯ ಸೋಲು ಕಂಡುಬಿಟ್ಟಿತ್ತು. ಮಾಡ್ಯುಲಾರ್ ತಂತ್ರಜ್ಞಾನವನ್ನು ಸರಿಯಾಗಿ ಅಳವಡಿಸದೇ ಹೋದದ್ದು ಇದಕ್ಕೆ ಕಾರಣವಾಗಿತ್ತು. ಅದರ ಮುಂದಿನ ಫ್ಲಾಗ್ ಶಿಪ್ ಫೋನಾದ ಎಲ್.ಜಿ ವಿ20 ಉತ್ತಮವಾಗಿತ್ತಾದರೂ ಜನರ ಗಮನ ಸೆಳೆಯುವುದಕ್ಕೆ ವಿಫಲವಾಯಿತು. ನಮ್ಮ ಪ್ರಕಾರ ಎಲ್.ಜಿ ವಿ20 2016ರಲ್ಲಿ ಬಿಡುಗಡೆಗೊಂಡ ಉತ್ತಮ ಫೋನುಗಳ ಪೈಕಿ ಒಂದಾಗಿತ್ತು.

2017ರಲ್ಲಿ ಬಿಡುಗಡೆಯಾಗಲಿರುವ ಎಲ್.ಜಿ ಸ್ಮಾರ್ಟ್ ಫೋನುಗಳು

2016ರ ವಿಫಲತೆಯನ್ನು ಮರೆತು ದಕ್ಷಿಣ ಕೊರಿಯಾದ ಎಲ್.ಜಿ ಸಂಸ್ಥೆಯು 2017ರಲ್ಲಿ ಮತ್ತಷ್ಟು ಆಸಕ್ತಿಕರ ಸ್ಮಾರ್ಟ್ ಫೋನುಗಳನ್ನು ಬಿಡುಗಡೆಗೊಳಿಸುತ್ತದೆ ಎನ್ನುವುದು ನಮ್ಮ ನಿರೀಕ್ಷೆ.

ಓದಿರಿ: ಭಾರತದಲ್ಲಿ ಲಾಂಚ್ ಆಯ್ತು ರೆಡ್‌ಮಿ ನೋಟ್ 4: ಬೆಲೆ ಎಷ್ಟು..? ವೈಶಿಷ್ಟ್ಯಗಳೇನು..?

ಎಲ್.ಜಿ 2017ರಲ್ಲಿ ಬಿಡುಗಡೆಗೊಳಿಸುತ್ತದೆ ಎನ್ನಲಾದ ಕೆಲವು ಫೋನುಗಳನ್ನು ಇಲ್ಲಿ ಪಟ್ಟಿ ಮಾಡಿದ್ದೀವಿ. ಒಮ್ಮೆ ಗಮನಿಸಿ.

ಎಲ್.ಜಿ ಜಿ6.

ಎಲ್.ಜಿ ಜಿ6.

ಇದು ಕುಖ್ಯಾತ ಎಲ್.ಜಿ ಜಿ5 ಸರಣಿಯ ಹೊಸ ಸ್ಮಾರ್ಟ್ ಫೋನ್. ಇದರ ಬಗ್ಗೆ ಕೆಲವು ದಿನಗಳಿಂದ ಸುದ್ದಿಗಳು ಬರುತ್ತಿವೆ. ಲಭ್ಯವಿರುವ ವರದಿಗಳ ಪ್ರಕಾರ ಈ ಹೊಸ ಫೋನಿನಲ್ಲಿ ಮಾಡ್ಯುಲಾರ್ ವಿನ್ಯಾಸವಿರುವುದಿಲ್ಲ, ಹಳೆಯ ಬಾರ್ ವಿನ್ಯಾಸವೇ ಇದರಲ್ಲಿರಲಿದೆ. ಈ ಸುದ್ದಿ ಅಷ್ಟೇನೂ ಅಚ್ಚರಿಯದಲ್ಲ ಬಿಡಿ.

ವರದಿಗಳ ಪ್ರಕಾರ, ಎಲ್.ಜಿ ಜಿ6ನಲ್ಲಿ 5.3 ಇಂಚಿನ ಪರದೆಯಿರಲಿದೆ. ಇದು ಎಲ್.ಸಿ.ಡಿ ಪರದೆಯಾಗದೆ ಒಲೆಡ್ ಪರದೆಯಾಗಲಿದೆ ಎಂಬ ಸುದ್ದಿಗಳಿವೆ. ಎಲ್.ಜಿ ಜಿ6ನ ಹಾರ್ಡ್ ವೇರ್ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲವಾದರೂ ಕ್ವಾಲ್ ಕಮ್ ನ ಹೊಸ ಸ್ನಾಪ್ ಡ್ರಾಗನ್ 835 ಚಿಪ್ ಇದರಲ್ಲಿರುವ ಸಾಧ್ಯತೆ ಅಧಿಕ. 6ಜಿಬಿ ರ್ಯಾಮ್ ಮತ್ತು 64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ ಇದರಲ್ಲಿರಲಿದೆ.

ದೊಡ್ಡ ಕ್ಯಾಮೆರಾ ಸೆನ್ಸಾರ್ ಇದರಲ್ಲಿರಲಿದೆ, ಮೆಗಾಪಿಕ್ಸೆಲ್ ಕೂಡ ಹೆಚ್ಚಾಗಲಿದೆ. ಐರಿಸ್ ಸ್ಕ್ಯಾನರ್ ಕೂಡ ಇರುತ್ತದೆಂಬ ಸುದ್ದಿಗಳಿವೆ.

ಎಲ್.ಜಿ ವಿ30.

ಎಲ್.ಜಿ ವಿ30.

ಈ ಹೊಸ ಫೋನಿನ ಬಗ್ಗೆ ಸದ್ಯಕ್ಕೆ ಹೆಚ್ಚಿನ ಮಾಹಿತಿಗಳಿಲ್ಲ. 2017ರಲ್ಲಿ ಬಿಡುಗಡೆಗೊಳ್ಳಲಿರುವ ಈ ಫೋನಿನಲ್ಲಿ ಹಲವಾರು ಪ್ರಮುಖ ಬದಲಾವಣೆಗಳನ್ನು ಕಾಣುವ ಸಾಧ್ಯತೆಗಳಿವೆ. ಇವಾನ್ ಬ್ಲಾಸ್ (@evleaks) ಪ್ರಕಾರ ಈ ಹೊಸ ಫೋನಿನಲ್ಲಿ ಸೆಕಂಡರಿ ಸ್ಕ್ರೀನ್ ಇರುವುದಿಲ್ಲ.

ಸ್ಟೈಲಸ್ 3 ಹೊಂದಿರುವ ಎಲ್.ಜಿ 'ಕೆ' ಸರಣಿಯ ಫೋನುಗಳು.

ಸ್ಟೈಲಸ್ 3 ಹೊಂದಿರುವ ಎಲ್.ಜಿ 'ಕೆ' ಸರಣಿಯ ಫೋನುಗಳು.

ಕೆ ಸರಣಿಯಲ್ಲಿ ಒಟ್ಟು ಐದು ಸ್ಮಾರ್ಟ್ ಫೋನುಗಳನ್ನು ಬಿಡುಗಡೆಗೊಳಿಸುವುದಾಗಿ ದಕ್ಷಿಣ ಕೊರಿಯಾದ ಟೆಕ್ ದೈತ್ಯ ಎಲ್.ಜಿ ಘೋಷಿಸಿದೆ. 2017ರಲ್ಲಿ ಈ ಸರಣಿಯಲ್ಲಿ ಕೆ10, ಕೆ8, ಕೆ4 ಮತ್ತು ಕೆ3 ಫೋನನ್ನು ಬಿಡುಗಡೆಗೊಳಿಸಲಾಗುವುದೆಂದು ಕಂಪನಿ ತಿಳಿಸಿದೆ. ಲಾಸ್ ವೆಗಾಸ್ ನಲ್ಲಿ 2017ರ ಸಿ.ಇ.ಎಸ್ ಕಾರ್ಯಕ್ರಮದಲ್ಲಿ ಸ್ಟೈಲಸ್ 3 ಬಿಡುಗಡೆಯಾಗಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Here are a few upcoming smartphones from LG that are rumored to launch in 2017.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X