ಗೀಕ್ ಬೆಂಚ್ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ 'ವಿವೊ Z3'.!

|

ಚೀನೀಯ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಯಾದ ವಿವೋ ಸ್ಮಾರ್ಟ್‌ಫೋನ್ ಕಂಪನಿಯು ಇತ್ತಿಚಿಗೆ ಹೊಸ ತಲೆಮಾರಿನ ವಿವೋ ನೆಕ್ಸ್ ಸ್ಮಾರ್ಟ್‌ಫೋನ್ ನ್ನು ಬಿಡುಗಡೆ ಮಾಡಿತು. ಈಗ ಇದೆ ವಿವೋ ಕಂಪನಿಯೂ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಹೌದು, ವಿಶಿಷ್ಟ ಫಿಚರ್ಸ್ ಹೊಂದಿದ ಸ್ಮಾರ್ಟ್‌ಫೋನ್ನನು ಬಿಡುಗಡೆ ಮಾಡಲು ಮುಂದಾಗಿದೆ. ಈ ಸ್ಮಾರ್ಟ್‌ಫೋನ್ ವಿವೊ ಸ್ಮಾರ್ಟ್‌ಫೋನ್‌ಗಳಲ್ಲಿಯೇ ವಿಭಿನ್ನವಾಗಿ ಮೂಡಿಬರಲಿದೆ. ಮುಂಬರುವ ವಿವೋ ಸ್ಮಾರ್ಟ್‌ಫೋನ್ ಜನಪ್ರಿಯ ಬೆಂಚ್ ಮಾರ್ಕಿಂಗ್ ವೆಬ್ ಸೈಟ್ ಗೀಕ್ ಬೆಂಚ್ ನಲ್ಲಿಯೂ ಪಟ್ಟಿ ಗುರುತಿಸಿಕೊಂಡಿದೆ.

ಗೀಕ್ ಬೆಂಚ್ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ 'ವಿವೊ Z3'.!

ಗೀಕ್ ಬೆಂಚ್ ವೆಬ್ ಸೈಟ್‌ನಲ್ಲಿ ಪಟ್ಟಿ ಮಾಡಲಾದ ಸ್ಮಾರ್ಟ್ ಪೋನ್ "ವಿವೊ ವಿವೊ 1813" ಮಾದರಿಯ ಸಂಖ್ಯೆಯೊಂದಿಗೆ ಬರುತ್ತದೆ. ಇತ್ತಿಚಿಗೆ ವಿವೋ ಚೀನಾದಲ್ಲಿ ವಿವೋ Z31 ಮತ್ತು ವಿವೋ Z3 ಪ್ರೊ ಅನ್ನು ಕ್ರಮವಾಗಿ ಮಾದರಿ ಸಂಖ್ಯೆಗಳಾದ V1813A ಮತ್ತು V1813BA ನೊಂದಿಗೆ ಬಿಡುಗಡೆ ಮಾಡಿ ಎಲ್ಲರ ಗಮನ ಸೆಳೆದಿತ್ತು. ಹಾಗೆಯೇ ವಿವೋ Z3 ಮತ್ತು ವಿವೋ Z3 ಸರಣಿಯ ಸ್ಮಾರ್ಟ್ ಪೋನ್ ಗಳು ವಿಭಿನ್ನವಾಗಿವೆ . ವಿವೋ ಡಿವೈಸ್ ರೂಪಾಂತರದ 10GB RAM ನೊಂದಿಗೆ ಬರುತ್ತಿರುವ ವಿವೋ Z3 ಪ್ರೊ ಕೆಲವುದಿನಗಳ ಹಿಂದೆ ಬಿಡುಗಡೆಯಾದ ವಿವೋ NEX ಡ್ಯುಯಲ್ ಡಿಸ್‌ಪ್ಲೇ ಆವೃತ್ತಿಗಿಂತ ಭಿನ್ನವಾಗಿದೆ ಎಂದು ಹೇಳಲಾಗುತ್ತದೆ.

ಗೀಕ್ ಬೆಂಚ್ ಮುಂಬರುವ ವಿವೋ ಸ್ಮಾರ್ಟ್‌ಫೋನ್‌ಗಳ ಡಿವೈಸ್ ಆಧಾರದ ಮೇಲೆನ ಬೆಂಚ್ ಮಾರ್ಕ್ ಸ್ಟೋರ್ ಗಳನ್ನು ಬಹಿರಂಗ ಪಡಿಸಿದೆ. 'ವಿವೋ ವಿವೋ 1813' ಸ್ಮಾರ್ಟ್‌ಫೋನ್ 8,326 ಪಾಯಿಂಟ್ ಗಳನ್ನು ಬಹು-ಸ್ಕೋರ್ ಪರೀಕ್ಷೆಯಲ್ಲಿ ಪಡೆದುಕೊಂಡಿದ್ದು ಹಾಗೂ 2,371 ಪಾಯಿಂಟ್ ಗಳನ್ನು ಸಿಂಗಲ್-ಕೋರ್ ಪರೀಕ್ಷೆಯಲ್ಲಿ ಪಡೆದುಕೊಂಡಿದೆ. ವದಂತಿ ಹರಡಿರುವಂತೆ ಆನ್ ಲೈನ್ ಸ್ಮಾರ್ಟ್‌ಫೋನ್ ಪಟ್ಟಿಯಲ್ಲಿ ಮುಂಬರುವ ವಿವೊ ಸ್ಮಾರ್ಟ್‌ಫೋನ್‌ ಬಗ್ಗೆ ಯಾವುದೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಅದೆನೆ ಇರಲಿ ವಿವೊ ಮುಂದಿನ ಬೃಹತ್ 10GB ರಾಮ್ ಮತ್ತು ಸ್ನಾಪ್ಡ್ರಾಗನ್ 845 ಚಿಪ್ ಸೆಟ್ ಳೊಂದಿಗೆ ಸ್ಮಾರ್ಟ್ ಪೋನ್ ಗುರುತಿಸಿಕೊಂಡಿದೆ. ಈ ಡಿವೈಸ್ ವಿವೋ ಕಂಪನಿಯ ಮುಂದಿನ ಪ್ರೀಮಿಯಂ ಆಫರಿಂಗ್ ಸ್ಮಾರ್ಟ್‌ಫೋನ್ ಎಂದು ಹೇಳಲಾಗುತ್ತಿದೆ.

ಗೀಕ್ ಬೆಂಚ್ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ 'ವಿವೊ Z3'.!

ಕೆಲವು ದಿನಗಳ ಹಿಂದೆ ವಿವೋ ಕಂಪನಿಯ ಎರಡನೆ ತಲೆಮಾರಿನ ವಿವೋ ನೆಕ್ಸ್ ಸ್ಮಾರ್ಟ್‌ಫೋನ್‌ ಭಾರಿ ಪ್ರಮಾಣದ ಸದ್ದು ಮಾಡಿತ್ತು. ಈ ವಿವೋ ಡ್ಯುಯಲ್ ಡಿಸ್‌ಪ್ಲೇ ಆವೃತಿಯ ಸ್ಮಾರ್ಟ್‌ಫೋನ್ ಹೆಸರಿಗೆ ತಕ್ಕಂತೆ ಸ್ಮಾರ್ಟ್‌ ಆಗಿದೆ. ವಿವೋ ನೆಕ್ಸ್ ಡ್ಯುಯಲ್ ಸ್ಮಾರ್ಟ್‌ಫೋನಿನ ಫೀಚರ್ಸ್ ತಿಳಿಯಲು ಮುಂದಿನ ಸ್ಲೈಡ್ ಓದಿ..

ವಿವೋ ನೆಕ್ಸ್ ಡ್ಯುಯಲ್ ಸ್ಮಾರ್ಟ್‌ಫೋನ್ ಫೀಚರ್ಸ್:

ಫ್ರಂಟ್ ಡಿಸ್‌ಪ್ಲೇ 6.39-ಇಂಚ್ OLED ಡಿಸ್ ಪ್ಲೇ ಪ್ಯಾನಲ್
2340 x 1080 ಪಿಕ್ಸೆಲ್ಸ್ ಸ್ಕ್ರೀನ್ ರೆಸಲ್ಯೂಶನ್
ಫಿಂಗರ್ ಪ್ರಿಂಟ್ ಸ್ಕ್ಯಾನರ್
ರಿಯರ್ ಡಿಸ್‌ಪ್ಲೇ 5.49-ಇಂಚಿನ OLED ಡಿಸ್‌ಪ್ಲೇ ಪ್ಯಾನಲ್
1080 x 1920 ಪಿಕ್ಸೆಲ್ಸ್ ಸ್ಕ್ರೀನ್ ರೆಸಲ್ಯೂಶನ್
ಸ್ನಾಪ್ಡ್ರಾಗನ್ 845 ಚಿಪ್ ಸೆಟ್
10 ಜಿಬಿ RAM ಮತ್ತು 256 ಜಿಬಿ ಸ್ಟೊರೆಜ್

Best Mobiles in India

English summary
The Chinese smartphone manufacturer Vivo has recently launched its premium new-generation Vivo Nex for the masses. Apparently, the company is also working towards another smartphone which has been spotted out in the wild. The new Vivo smartphone was first spotted by Slashleaks and the device is said to pack some top-of-the-line features which will offer a premium user experience. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X