ವಿವೋ ಹೊಸ ಫೋನ್ ಗಳು ಬಿಡುಗಡೆ – ಮಾರ್ಚ್ 1 ಕ್ಕೆ iQOO ಫೋನ್ ಬಿಡುಗಡೆಗೆ ಡೇಟ್ ಫಿಕ್ಸ್

By Gizbot Bureau
|

ವಿವೋ ತನ್ನ ಎರಡನೇ ಪಾಪ್-ಅಪ್ ಸೆಲ್ಫೀ ಕ್ಯಾಮರಾ ಫೋನ್ ವಿ15 ಪ್ರೋ ಭಾರತದಲ್ಲಿ ಬಿಡುಗಡೆಗೊಂಡಿದೆ. ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಫೋನ್ ಬಿಡುಗಡೆಗೊಂಡಿದೆ. ಇದಿಷ್ಟೇ ಅಲ್ಲದೆ ವಿವೋ ತನ್ನ ಸ್ವಂತ ಮಾರುಕಟ್ಟೆಗಾಗಿ ವಿಭಿನ್ನ ಪ್ಲಾನ್ ಮಾಡಿದೆ. ಕಂಪೆನಿಯು ಇನ್ನು ಕೆಲವೇ ದಿನದಲ್ಲಿ iQOO ನ್ನು ಬಿಡುಗಡೆಗೊಳಿಸುವ ಬಗ್ಗೆ ಟೀಸರ್ ನ್ನು ಬಿಟ್ಟಿದೆ. ವಿವೋ ಹೆಸರಿಡದ iQOO ಫೋನ್ ಬಿಡುಗಡೆಗೆ ದಿನಾಂಕವೂ ಫಿಕ್ಸ್ ಆಗಿದೆ. ಕಂಪೆನಿಯು ಬಿಡುಗಡೆಗೊಳಿಸಿರುವ ಹೊಸ ಟೀಸರ್ ಹೇಳುವ ಪ್ರಕಾರ ಮಾರ್ಚ್ 1 ಕ್ಕೆ ಈ ಫೋನ್ ಅಧಿಕೃತವಾಗಿ ಬಿಡುಗಡೆಗೊಳ್ಳುವ ಸೂಚನೆ ನೀಡಿದೆ.

iQOO ಫೀಚರ್ ಗಳು:

iQOO ಫೀಚರ್ ಗಳು:

iQOO ಸ್ಮಾರ್ಟ್ ಫೋನ್ ಪ್ರೀಮಿಯಂ ಹ್ಯಾಂಡ್ ಸೆಟ್ ಆಗಿದೆ ಎಂದು ಟೀಸರ್ ತಿಳಿಸುತ್ತಿದೆ.ಈ ಹಿಂದೆ ಬಂದಿದ್ದ ರೂಮರ್ ಗಳ ಪ್ರಕಾರ iQOO ಸ್ಮಾರ್ಟ್ ಫೋನ್ನ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 ಚಿಪ್ ಸೆಟ್ ನ್ನು ಹೊಂದಿದೆ ಮತ್ತು ಇದರಲ್ಲಿ 12GB RAM ಇದೆ. ಅಷ್ಟೇ ಅಲ್ಲದೆ 44W ಫಾಸ್ಟ್ ಚಾರ್ಜಿಂಗ್ ಗೆಂ ಬೆಂಬಲ ನೀಡುತ್ತದೆ. ಹುವಾಯಿ,ಒನ್ ಪ್ಲಸ್ ಕಂಪೆನಿಗಳು ಬಿಡುಗಡೆಗೊಳಿಸಿರುವ ಚಾರ್ಜಿಂಗ್ ಗಿಂತ ಹೆಚ್ಚಿನ ವೇಗದಲ್ಲಿ ಈ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಕೆಲಸ ಮಾಡುತ್ತದೆ ಎಂದು ಹೇಳಲಾಗುತ್ತಿದೆ.ಹುವಾಯಿ 40W ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡುತ್ತದೆ ಮತ್ತು ಒನ್ ಪ್ಲಸ್ 30W ನ ಡ್ಯಾಷ್ ಚಾರ್ಜಿಂಗ್ ಗೆ ಬೆಂಬಲ ನೀಡುತ್ತದೆ.

ಮತ್ತಷ್ಟು ಫೀಚರ್:

ಮತ್ತಷ್ಟು ಫೀಚರ್:

ಇನ್ನು ಕೆಲವು ಪ್ರಚಾರವಾಗಿರುವ ಸುದ್ದಿ ತಿಳಿಸುವ ಪ್ರಕಾರ ವಿವೋ iQOO ದೊಡ್ಡ ಮೊತ್ತ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿರುತ್ತದೆ-- 256GB. ಸ್ಮಾರ್ಟ್ ಫೋನ್ ಅತೀ ದೊಡ್ಡ ಅಂದರೆ 4,000 mAh ಬ್ಯಾಟರಿಯನ್ನು ಹೊಂದಿದೆ. ಸಿಹಿಸುದ್ದಿ ಏನೆಂದರೆ ಇತರೆ ವಿವೋ ಫೋನ್ ಗಳಂತೆ ಮುಂಬರುವ iQOO ಸ್ಮಾರ್ಟ್ ಫೋನ್ USB-C ಗೆ ಬೆಂಬಲ ನೀಡುತ್ತದೆ. ಇದುವರೆಗಿನ ರೂಮರ್ ಗಳು ಕ್ಯಾಮರಾ ಲಭ್ಯತೆ ಬಗ್ಗೆ ಯಾವುದೇ ಮಾಹಿತಿಯನ್ನು ಹೊರ ಹಾಕಿಲ್ಲ. ಮೂರು ಕ್ಯಾಮರಾಗಳು ಹಿಂಭಾಗದಲ್ಲಿದ್ದು ಸೂಪರ್ HDR ಮೋಡ್ ಗೆ ಬೆಂಬಲ ನೀಡುತ್ತದೆ. ವಿವೋ iQOO ಫಿಂಗರ್ ಪ್ರಿಂಟ್ ಸ್ಕ್ಯಾನರ್ ನೊಂದಿಗೆ ಬರುತ್ತದೆ.ಸದ್ಯ ಲಭ್ಯವಿರುವ ವೈಶಿಷ್ಟ್ಯತೆಗಳ ಪ್ರಕಾರ ವಿವೋ iQOO ಗೇಮಿಂಗ್ ಗೆ ಹೆಚ್ಚು ಮಹತ್ವ ನೀಡುವ ಸ್ಮಾರ್ಟ್ ಫೋನ್ ಎನ್ನಿಸುತ್ತದೆ.

ವಿವೋ 15 ಇಂದು ಬಿಡುಗಡೆ:

ವಿವೋ 15 ಇಂದು ಬಿಡುಗಡೆ:

ವಿವೋ ಭಾರತದಲ್ಲಿ ವಿವೊ 15 ನ್ನು ಇಂದು ಬಿಡುಗಡೆಗೊಳಿಸಲಿದೆ. ಇದರ ಪ್ರಮುಖ ಹೈಲೆಟ್ ಎಂದರೆ ಪಾಪ್ ಸೆಲ್ಫೀ ಕ್ಯಾಮರಾ ಸೆಟ್ ಅಪ್ ನ್ನು ಇದು ಹೊಂದಿದ್ದು 32-ಮೆಗಾಪಿಕ್ಸಲ್ ಸೆನ್ಸರ್ ನ್ನು ಹೊಂದಿದೆ. ಹಿಂಭಾಗದ ಪೆನಲ್ ನಲ್ಲಿ ವಿವೋ ವಿ15 ಟ್ರಿಪಲ್ ಕ್ಯಾಮರಾ ಸೆಟ್ ಅಪ್ ನ್ನು ಹೊಂದಿದ್ದು ಪ್ರಮುಖ ಸೆನ್ಸರ್ 48 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದೆ. ಮತ್ತೊಂದು ಪ್ರಮುಖ ಫೀಚರ್ ಎಂದರೆ ವಿ15 ಪ್ರೋ ದಲ್ಲಿ ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ಇದೆ. ವಿ15 ಪ್ರೋ ವಿ11 ಪ್ರೊದ ಯಶಸ್ಸಿನ ಅವತರಣಿಕೆ ಆಗಿದೆ. ವಿವೋ ನೆಕ್ಸ್ ನಿಂದ ಈ ಡಿಸೈನ್ ಪ್ರಭಾವಿತಗೊಂಡಿದೆ. ಭಾರತದಲ್ಲಿ ವಿ 15 ಬೆಲೆ 26,000 ಮತ್ತು 30,000 ನಿಗದಿಗೊಳಿಸುವ ಸಾಧ್ಯತೆ ಇದೆ.

Most Read Articles
Best Mobiles in India

Read more about:
English summary
Vivo iQOO's first phone with 12GB RAM, Snapdragon 855, 44W fast-charging will launch on March 1

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X