ವಿವೋ U20 ವಿಮರ್ಶೆ : ಅಧಿಕ ಬ್ಯಾಟರಿ ಲೈಫ್‌, ಆದ್ರೆ ಜೇಬಿಗೆ ಹೊರೆಯಿಲ್ಲ!

|

ಮೊನ್ನೆಯಷ್ಟೆ ಹೊಸದಾಗಿ ದೇಶಿಯ ಮಾರುಕಟ್ಟೆಗೆ ಪ್ರವೇಶ ಪಡೆದಿರುವ ವಿವೋ ಕಂಪನಿಯ ಹೊಸ 'ವಿವೋ ಯು20' ಸ್ಮಾರ್ಟ್‌ಫೋನ್ ಈಗಾಗಲೇ ಬಜೆಟ್‌ ಸ್ಮಾರ್ಟ್‌ಫೋನ್ ಅನ್ನುವುದು ತಿಳಿದಾಗಿದೆ. ಮೂರು ಕ್ಯಾಮೆರಾ, ಸ್ನ್ಯಾಪ್‌ಡ್ರಾಗನ್ 675 ಪ್ರೊಸೆಸರ್‌ ಮತ್ತು 5,000mAh ಬ್ಯಾಟರಿ ವಿಶೇಷತೆಗಳೊಂದಿಗೆ ಲಗ್ಗೆ ಇಟ್ಟಿರುವ ಈ ಸ್ಮಾರ್ಟ್‌ಫೋನ್ ಬಜೆಟ್‌ ಬೆಲೆಯಲ್ಲಿರುವ 'ರಿಯಲ್‌ ಮಿ 5s' ಮತ್ತು 'ರೆಡ್ಮಿ ನೋಟ್ 8' ಸ್ಮಾರ್ಟ್‌ಫೋನ್‌ಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ.

'ವಿವೋ U20'

'ವಿವೋ U20' ಸ್ಮಾರ್ಟ್‌ಫೋನ್ 4GB RAM ಮತ್ತು 64GB ವೇರಿಯಂಟ್‌ ಹಾಗೂ 6GB RAM ಮತ್ತು 64GB ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. ಇದೇ ನವೆಂಬರ್ 28ಕ್ಕೆ ಅಮೆಜಾನ್‌ನಲ್ಲಿ ಈ ಫೋನಿನ ಫಸ್ಟ್‌ ಸೇಲ್ ಆರಂಭವಾಗಲಿದೆ. ಇತ್ತೀಚಿನ ಅಗತ್ಯ ಫೀಚರ್ಸ್‌ಗಳನ್ನು ಒಳಗೊಂಡಿರುವ ವಿವೋ ಯು20 ಸ್ಮಾರ್ಟ್‌ಫೋನ್ ಮೊಬೈಲ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತದೆಯೇ?..ಈ ಸ್ಮಾರ್ಟ್‌ಫೋನಿನ ಫೀಚರ್ಸ್‌ಗಳ ಕಾರ್ಯವೈಖರಿ ಏನು?..ಮುಂದೆ ಓದಿರಿ.

ಡಿಸ್‌ಪ್ಲೇ ಮತ್ತು ಡಿಸೈನ್

ಡಿಸ್‌ಪ್ಲೇ ಮತ್ತು ಡಿಸೈನ್

'ವಿವೋ U20' ಸ್ಮಾರ್ಟ್‌ಫೋನ್ 6.53 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ರೆಸಲ್ಯೂಶನನ್ನು ಡಿಸ್‌ಪ್ಲೇ ಹೊಂದಿದೆ. ರೆಡ್ಮಿ ನೋಟ್ 8 ಗಿಂತ ಎರಡು ಇಂಚು ದೊಡ್ಡದಾಗಿದೆ. ಹಾಗೆಯೇ ಡಿಸ್‌ಪ್ಲೇ ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯವು 1080 x 2340 ಆಗಿದ್ದು, ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ಅಡುವಿನ ಅನುಪಾತ ಶೇ.90.3% ಆಗಿದೆ. ಡಿಸ್‌ಪ್ಲೇಯು ವಾಟರ್‌ಡ್ರಾಪ್‌ ನಾಚ್ ಮಾದರಿಯಲ್ಲಿದ್ದು, ಡಿಸ್‌ಪ್ಲೇಯ ರಚನೆ ಹಲವು ಆಂಗಲ್‌ಗಳ ವೀಕ್ಷಣೆಗೆ ಪೂರಕವಾಗಿದೆ. ಡಿಸ್‌ಪ್ಲೇ ಪ್ರಖರತೆಯು ಗೇಮಿಂಗ್ ಹಾಗೂ ವಿಡಿಯೊ ವೀಕ್ಷಣೆಗೆ ಅನುಕೂಲಕರವಾಗಿದೆ.

ಪ್ರೊಸೆಸರ್‌ ಮತ್ತು ಮೆಮೊರಿ

ಪ್ರೊಸೆಸರ್‌ ಮತ್ತು ಮೆಮೊರಿ

'ವಿವೋ U20' ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 675 ಪ್ರೊಸೆಸರ್‌ ಅನ್ನು ಹೊಂದಿದ್ದು, ಅದಕ್ಕೆ ಪೂರಕವಾಗಿ ಫನ್‌ಟಚ್ OS 9 ಬೆಂಬಲಿತ ಅಂಡ್ರಾಯ್ಡ್‌ 9 ಪೈ ಓಎಸ್‌ ಅನ್ನು ಪಡೆದಿದೆ. ಇದರೊಂದಿಗೆ 4GB RAM ಮತ್ತು 64GB ಹಾಗೂ 6GB RAM ಮತ್ತು 64GB ವೇರಿಯಂಟ್‌ ಆಯ್ಕೆಗಳನ್ನು ಹೊಂದಿದೆ. ಜೊತೆಗೆ ಎಸ್‌ಡಿ ಕಾರ್ಡ್‌ ಮೂಲಕ 256GB ಮೆಮೊರಿ ವಿಸ್ತರಿಸುವ ಅವಕಾಶ ನೀಡಲಾಗಿದೆ. ಹಾಗೆಯೇ ಆಂಡ್ರಾಯ್ಡ್‌ 10 ಓಎಸ್‌ ಅಪ್‌ಡೇಟ್ ಆಯ್ಕೆ ಇದೆ. ಮಲ್ಟಿಟಾಸ್ಕ್ ಕೆಲಸಗಳಿಗೆ ಪ್ರೊಸೆಸರ್ ಸೂಕ್ತ ಬಲ ನೀಡುತ್ತದೆ ಹಾಗೂ ಮೆಮೊರಿ ಆಯ್ಕೆಯು ಗ್ರಾಹಕರಿಗೆ ಅನುಕೂಲಕರ ಅನಿಸಲಿದೆ.

ಸ್ಪೆಷಲ್‌ ಕ್ಯಾಮೆರಾ ಮತ್ತು ಸೆಲ್ಫಿ

ಸ್ಪೆಷಲ್‌ ಕ್ಯಾಮೆರಾ ಮತ್ತು ಸೆಲ್ಫಿ

ಪ್ರಸ್ತುತ ಚಾಲ್ತಿಯಲ್ಲಿರುವ ಮೂರು ಕ್ಯಾಮೆರಾ ಮತ್ತು ಕ್ವಾಡ್ ಕ್ಯಾಮೆರಾದಂತೆ 'ವಿವೋ U20' ಸ್ಮಾರ್ಟ್‌ಫೋನ್ ಸಹ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಮುಖ್ಯ ಕ್ಯಾಮೆರಾವು 16ಎಂಪಿ ಸೆನ್ಸಾರ್‌ ಆಯ್ಕೆಯನ್ನು ಹೊಂದಿದೆ. ಕ್ಯಾಮೆರಾ ಫೋಕಸ್‌ ಕ್ವಿಕ್ ಆಗಿದ್ದು, ಬ್ಯಾಕ್‌ಗ್ರೌಂಡ್‌ ಬ್ಲರ್‌ ಆಯ್ಕೆಯ ಸಪೋರ್ಟ್‌ ಪಡೆದಿದೆ. ಇನ್ನು ಸೆಕೆಂಡ್ ಕ್ಯಾಮೆರಾವು 8ಎಂಪಿ ಸೆನ್ಸಾರ್‌ನ ವೈಡ್‌ ಆಂಗಲ್ ಲೆನ್ಸ್‌ನಲ್ಲಿದೆ. ತೃತೀಯ ಕ್ಯಾಮೆರಾವು 2ಎಂಪಿ ಮೈಕ್ರೋ ಸೆನ್ಸಾರ್‌ ಹೊಂದಿರಲಿದೆ. ಇದರೊಂದಿಗೆ ಸೆಲ್ಫಿ ಕ್ಯಾಮೆರಾವು 16ಎಂಪಿ ಸೆನ್ಸಾರ್‌ ಪಡೆದುಕೊಂಡಿದೆ ಜತೆಗೆ ನೈಟ್‌ ಮೋಡ್, ಅಗತ್ಯ ಎಡಿಟಿಂಗ್ ಫೀಚರ್ಸ್‌ಗಳು ಇವೆ. ತನ್ನ ವರ್ಗದಲ್ಲಿಯೇ ಬೆಸ್ಟ್‌ ಕ್ಯಾಮೆರಾ ಸೆಟ್‌ಅಪ್ ಅನ್ನಬಹುದಾಗಿದೆ.

ಬ್ಯಾಟರಿ ಲೈಫ್ ಹೇಗಿದೆ

ಬ್ಯಾಟರಿ ಲೈಫ್ ಹೇಗಿದೆ

ವಿವೋ U20' ಸ್ಮಾರ್ಟ್‌ಫೋನಿನಲ್ಲಿ 5,000mAh ಬ್ಯಾಟರಿ ಸಾಮರ್ಥ್ಯವನ್ನು ನೀಡಲಾಗಿದೆ ಇದು 'ವಿವೋ ಯು20' ಫೋನಿನತ್ತ ಗ್ರಾಹಕರನ್ನು ಅಟ್ರ್ಯಾಕ್ಟ್ ಮಾಡಲು ಮತ್ತೊಂದು ಕಾರಣ ಎನ್ನಬಹುದು. ಹಾಗೆಯೇ ಬ್ಯಾಟರಿಗೆ ಬೆಂಬಲವಾಗಿ 18W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಬ್ಯಾಟರಿಯನ್ನು ಒಮ್ಮೆ ಪೂರ್ಣ ಚಾರ್ಜ್ ಮಾಡಿದರೇ 273 ಗಂಟೆಗಳ ಸ್ಟ್ಯಾಂಡ್‌ಬೈ ಬ್ಯಾಕ್‌ಅಪ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಹಾಗೇ 11 ಗಂಟೆಗಳ ಫೇಸ್‌ಬುಕ್ ಮತ್ತು ಯೂಟ್ಯೂಬ್ ಬಳಕೆ ಬ್ಯಾಕ್‌ಅಪ್‌ ನೀಡಲಿದೆ. ಮುಖ್ಯವಾಗಿ ಗೇಮಿಂಗ್‌ಗೆ ಸಹ ಬ್ಯಾಟರಿ ಪೂರಕವಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ವಿವೋ U20' ಸ್ಮಾರ್ಟ್‌ಫೋನ್ ಎರಡು ವೇರಿಯಂಟ್‌ ಆಯ್ಕೆಗಳನ್ನು ಹೊಂದಿದ್ದು, ಆರಂಭಿಕ 4GB RAM ಮತ್ತು 64GB ವೇರಿಯಂಟ್ ಬೆಲೆಯು 10,990ರೂ.ಗಳಾಗಿದೆ. ಅದೇ ರೀತಿ 6GB RAM ಮತ್ತು 64GB ಸ್ಟೋರೇಜ್ ವೇರಿಯಂಟ್‌ ಬೆಲೆಯು 11,990ರೂ.ಗಳಾಗಿದೆ. ರೇಸಿಂಗ್ ಬ್ಲ್ಯಾಕ್‌ ಮತ್ತು ಬ್ಲೆಜ್‌ ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಸಿಗಲಿದೆ. ಅಮೆಜಾನ್ ಮತ್ತು ವಿವೋ ತಾಣಗಳಲ್ಲಿ ಇದೇ ನವೆಂಬರ್ 28ರಂದು ಫಸ್ಟ್‌ ಸೇಲ್ ನಡೆಯಲಿದೆ.

ಕೊನೆಯ ಮಾತು

ಕೊನೆಯ ಮಾತು

ವಿವೋ ಯು20 ಸ್ಮಾರ್ಟ್‌ಫೋನ್ ಬಜೆಟ್ ಬೆಲೆಯಲ್ಲಿ ಉತ್ತಮ ಫೀಚರ್ಸ್‌ಗಳನ್ನು ಹೊಂದಿದೆ. ಮುಖ್ಯವಾಗಿ ಬ್ಯಾಟರಿ ಮತ್ತು ಪ್ರೊಸೆಸರ್ ಹೇವಿ ಆಗಿರುವುದು ಪ್ರಮುಖ ಆಕರ್ಷಣೆ. ಹಾಗೆಯೇ ಹಿಂಬದಿ ಕ್ಯಾಮೆರಾ ನೀಡಲಾಗಿದೆ ಆದ್ರೆ ಮುಖ್ಯ ಕ್ಯಾಮೆರಾ ಸೆನ್ಸಾರ್ ಇನ್ನಷ್ಟು ಅಧಿಕವಾಗಿಸಬೇಕಿತ್ತು ಎಂದನಿಸುತ್ತದೆ. ಉಳಿದಂತೆ ಉತ್ತಮ ಫೋನ್ ಅನ್ನುವುದರಲ್ಲಿ ಎರಡು ಮಾತಿಲ್ಲ.

Most Read Articles
Best Mobiles in India

English summary
Vivo U20 launched in India with a starting price of Rs 10,990. 6GB RAM and 64GB storage variant of the device priced at Rs 11,990. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X