10,990 ರುಪಾಯಿ ಬೆಲೆಗೆ 4030 mAh ಬ್ಯಾಟರಿ ವಿವೋ ಫೋನ್

|

ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿ ವಿವೋ ಹೊಸದಾಗಿ ವಿವೋ ವೈ91 ಫೋನ್ ನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ವಿವೋ ವೈ91 4,030mAh ಸಾಮರ್ಥ್ಯದ ಬ್ಯಾಟರಿ, 8ಮೆಗಾಪಿಕ್ಸಲ್ ನ ಮುಂಭಾಗದ ಕ್ಯಾಮರಾ ಮತ್ತು 6.22- ಇಂಚಿನ ಹ್ಯಾಲೋ ಫುಲ್ ವ್ಯೂ ಡಿಸ್ಪ್ಲೇಯನ್ನು ಹೊಂದಿದೆ. ಸ್ಕ್ರೀನ್ ನಲ್ಲಿ ಕೂಡ ಡ್ಯೂಡ್ರಾಪ್ ನಾಚ್ ಮೇಲ್ಬಾಗದಲ್ಲಿ ಇದೆ.

ವಿವೋ ವೈ91 ಬೆಲೆ ಮತ್ತು ಲಭ್ಯತೆ:

ವಿವೋ ವೈ91 ಬೆಲೆ ಮತ್ತು ಲಭ್ಯತೆ:

ವಿವೋ ವೈ91 ಬೆಲೆ Rs 10,990 ಮತ್ತು ವಿವೋ ಇಂಡಿಯಾ ಆನ್ ಲೈನ್ ಸ್ಟೋರ್ ನಲ್ಲಿ ಲಭ್ಯವಿದೆ. ಎರಡು ಬಣ್ಣಗಳ ವೇರಿಯಂಟ್ ನಲ್ಲಿ ಲಭ್ಯವಿದೆ- ಸ್ಟೆರ್ರಿ ಬ್ಲಾಕ್ ಮತ್ತು ಓಷಿಯನ್ ಬ್ಲೂ.

ಪರಿಚಯಾರ್ಥ ಆಫರ್ ಆಗಿ 1200 ರುಪಾಯಿ ಬ್ಲೂಟೂತ್ ಇಯರ್ ಫೋನ್ ಇದರ ಜೊತೆಗೆ ಉಚಿತವಾಗಿ ಲಭ್ಯವಾಗುತ್ತದೆ. ಬಜಾಜ್ ಫಿನ್ ಸರ್ವ್ ಕಾರ್ಡ್ ನಲ್ಲಿ ನೋ ಕಾಸ್ಟ್ ಇಎಂಐ ಆಯ್ಕೆಯಲ್ಲಿ ಈ ಫೋನ್ ಖರೀದಿಸಬಹುದಾಗಿದೆ. ಎಕ್ಸ್ ಚೇಂಜ್ ಆಫರ್ ಕೂಡ ಈ ಫೋನಿಗೆ ಲಭ್ಯವಿದೆ.

ವಿವೋ ವೈ91 ವೈಶಿಷ್ಟ್ಯತೆಗಳು:

ವಿವೋ ವೈ91 ವೈಶಿಷ್ಟ್ಯತೆಗಳು:

ವಿವೋ ವೈ91 ಸ್ಮಾರ್ಟ್ ಫೋನ್ ಮೀಡಿಯಾಟೆಕ್ ಹೇಲಿಯೋ ಪಿ22 ಆಕ್ಟಾ-ಕೋರ್ ಪ್ರೊಸೆಸರ್ ನ್ನು ಹೊಂದಿದೆ ಮತ್ತು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ನಲ್ಲಿ ರನ್ ಆಗುತ್ತದೆ. ಈ ಡಿವೈಸ್ 2ಜಿಬಿ ಮೆಮೊರಿ ಮತ್ತು 32ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ. ಸ್ಟೋರೇಜ್ ನ್ನು ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿವರೆಗೆ ಹಿಗ್ಗಿಸಿಕೊಳ್ಳಬಹುದಾದ ಅವಕಾಶ ಬಳಕೆದಾರರಿಗೆ ಇರುತ್ತದೆ.

ಡಿಸ್ಪ್ಲೇ ವೈಶಿಷ್ಟ್ಯತೆಗಳು:

ಡಿಸ್ಪ್ಲೇ ವೈಶಿಷ್ಟ್ಯತೆಗಳು:

ಈ ಹ್ಯಾಂಡ್ ಸೆಟ್ 6.22- ಇಂಚಿನ ಹ್ಯಾಲೋ ಫುಲ್ ವ್ಯೂ ಡಿಸ್ಪ್ಲೇ ಜೊತೆಗೆ 720x1520 ಪಿಕ್ಸಲ್ ರೆಸಲ್ಯೂಷನ್ ಮತ್ತು 88.6 ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಡ್ಯೂಡ್ರಾಪ್ ನಾಚ್ ಮೇಲ್ಬಾಗದಲ್ಲಿ ಇದ್ದು ತೆಳುವಾದ ಬದಿಗಳ ಬೆಝಲ್ ನ್ನು ಇದು ಡಿಸ್ಪ್ಲೇಯಲ್ಲಿ ಹೊಂದಿದೆ.

ಕ್ಯಾಮರಾ ವೈಶಿಷ್ಟ್ಯತೆಗಳು:

ಕ್ಯಾಮರಾ ವೈಶಿಷ್ಟ್ಯತೆಗಳು:

ಕ್ಯಾಮರಾ ವಿಚಾರಕ್ಕೆ ಬಂದರೆ ವಿವೋ ವೈ91 ನಲ್ಲಿ 8-ಮೆಗಾಪಿಕ್ಸಲ್ ಜೊತೆಗೆ f/1.8 ಅಪರ್ಚರ್ ನ ಕ್ಯಾಮರಾ ಮುಂಭಾಗದಲ್ಲಿ ಇರುತ್ತದೆ. ಡುಯಲ್ ಕ್ಯಾಮರಾ ಸೆಟ್ ಅಪ್ ಹಿಂಭಾಗದಲ್ಲಿ ಇದ್ದು ಪ್ರೈಮರಿ ಕ್ಯಾಮರಾವು 13ಮೆಗಾಪಿಕ್ಸಲ್ ಮತ್ತು ಸೆಕೆಂಡರಿ ಕ್ಯಾಮರಾವು 2 ಮೆಗಾಪಿಕ್ಸಲ್ ಸಾಮರ್ಥ್ಯದ್ದಾಗಿದೆ ಮತ್ತು ಕ್ರಮವಾಗಿ f/2.2, f/2.4 ಅಪರ್ಚರ್ ನ್ನು ಇವುಗಳು ಹೊಂದಿದೆ.

ಇತರೆ ಪ್ರಮುಖ ಅಂಶಗಳು:

ಇತರೆ ಪ್ರಮುಖ ಅಂಶಗಳು:

ಡುಯಲ್ ಸಿಮ್ ನ್ನು ಬಳಸಬಹುದಾದ ಈ ಸ್ಮಾರ್ಟ್ ಫೋನ್ ಮೂರು ಕಾರ್ಡ್ ಸ್ಲಾಟ್ ನ್ನು ಹೊಂದಿರುತ್ತದೆ.ಅದರಲ್ಲಿ ಎರಡು ಸಿಮ್ ಸ್ಲಾಟ್ ಆಗಿದ್ದರೆ ಮತ್ತೊಂದು ಮೈಕ್ರೋ ಎಸ್ ಡಿಕಾರ್ಡ್ ಸ್ಲಾಟ್ ಆಗಿದೆ. ಈ ಡಿವೈಸ್ 4,030mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಭದ್ರತಾ ವಿಚಾರಕ್ಕೆ ಬಂದರೆ ಫಿಂಗರ್ ಪ್ರಿಂಟ್ ಸೆನ್ಸರ್ ಜೊತೆಗೆ ಫೇಸ್ ಅನ್ ಲಾಕ್ ತಂತ್ರಜ್ಞಾನಕ್ಕೆ ಇದು ಬೆಂಬಲ ನೀಡುತ್ತದೆ. ಕನೆಕ್ಟಿವಿಟಿ ಬಗ್ಗೆ ಹೇಳುವುದಾದರೆ 4G ಕನೆಕ್ಟಿವಿಟಿ, ವೈ-ಫೈ, ಬ್ಲೂಟೂತ್ 5.0, GLONASS, GPS, ಮತ್ತು ವೈ-ಫೈ 2.4G ಗೆ ಈ ಫೋನ್ ಬೆಂಬಲ ನೀಡುತ್ತದೆ.

Best Mobiles in India

English summary
Vivo Y91 with 4030mAh battery launched in India at Rs 10,990

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X