Subscribe to Gizbot

1,590 ರೂ.ಗೆ 'ಐಟೆಲ್ ಎ20' 4G ಸ್ಮಾರ್ಟ್‌ಫೋನ್!!

Written By:

ಶಿಯೋಮಿಯಂತೆ ಬಜೆಟ್ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ತಯಾರಿಸುವ ಚೀನಾದ ಮೊಬೈಲ್ ಐಟೆಲ್ ಕಂಪೆನಿಯ 4G ಸ್ಮಾರ್ಟ್‌ಫೋನ್ ಕೇವಲ 1,590 ರೂಪಾಯಿಗಳಿಗೆ ಗ್ರಾಹಕರ ಕೈಸೇರಲಿದೆ.! 'ಐಟೆಲ್ ಎ20' ಎಂಬ ನೂತನ 4G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಾಗಿದ್ದು ವೊಡಾಫೋನ್ ಸಹಯೋಗದಲ್ಲಿ ಈ ಫೋನ್ ಗ್ರಾಹಕರಿಗೆ ಲಭ್ಯವಿದೆ.!!

'ಐಟೆಲ್ ಎ20' ಸ್ಮಾರ್ಟ್‌ಫೋನ್ ಬೆಲೆ ವಾಸ್ತವವಾಗಿ 3,690 ರೂಪಾಯಿಗಳಾಗಿದ್ದು, ವೊಡಾಫೋನ್ ಕ್ಯಾಶ್‌ಬ್ಯಾಕ್ ಆಫರ್ ಅಡಿಯಲ್ಲಿ ನೂತನ ಫೋನ್ ಅತ್ಯಂತ ಕಡಿಮೆ ಬೆಲೆಗೆ ಗ್ರಾಹಕರಿಗೆ ಲಭ್ಯವಿದೆ.!! ಹಾಗಾದರೆ, 'ಐಟೆಲ್ ಎ20' ಫೋನ್ ಫೀಚರ್ಸ್ ಏನು? ವೊಡಾಫೋನ್ ಕ್ಯಾಶ್‌ಬ್ಯಾಕ್ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
'ಐಟೆಲ್ ಎ20' ಸ್ಮಾರ್ಟ್‌ಫೋನ್!!

'ಐಟೆಲ್ ಎ20' ಸ್ಮಾರ್ಟ್‌ಫೋನ್!!

ಅತ್ಯಂತ ಕಡಿಮೆ ಬೆಲೆಗೆ ಹೊರಬಂದಿರುವ ಉತ್ತಮ 4G ಫೋನ್ ಈ 'ಐಟೆಲ್ ಎ20' ಸ್ಮಾರ್ಟ್‌ಫೋನ್.! ಆಂಡ್ರಾಯ್ಡ್ 7.0 ನ್ಯೂಗಾ, 1.3 ಜಿಬಿ ಕ್ವಾಡ್-ಕೋರ್ ಪ್ರೊಸೆಸರ್ ನಂತಹ ಫೀಚರ್ಸ್ ಹೊಂದಿರುವ ಈ ಫೋನ್ ಅನ್ನು ವಾಸ್ತವ ಬೆಲೆ 3,690 ರೂಪಾಯಿಗಳನ್ನು ನೀಡಿ ಖರೀದಿಸಿದರು ನಷ್ಟವಿಲ್ಲ.!!

'ಐಟೆಲ್ ಎ20' ಫೀಚರ್ಸ್ ಏನು?

'ಐಟೆಲ್ ಎ20' ಫೀಚರ್ಸ್ ಏನು?

'ಐಟೆಲ್ ಎ20' ಫೋನ್ 4 ಇಂಚ್ ಡಿಸ್‌ಪ್ಲೇ, 1GB RAM, 1.3 ಜಿಬಿ ಕ್ವಾಡ್-ಕೋರ್ ಪ್ರೊಸೆಸರ್ ಹೊಂದಿದೆ.!! ಆಂಡ್ರಾಯ್ಡ್ 7.0 ನ್ಯೂಗಾದಲ್ಲಿ ಕಾರ್ಯನಿರ್ವಹಿಸುವ ಈ ಫೋನ್ ಡ್ಯುಯಲ್-ಸಿಮ್, 1700mAh ಬ್ಯಾಟರಿ 8GB ಆಂತರಿಕ ಮೆಮೊರಿನ್ನು ಹೊಂದಿದ್ದು, ನಾವು ನೀಡುವ ಬೆಲೆಗೆ ಉತ್ತಮ ಫೋನ್ ಆಗಿದೆ.!!

Xiaomi Redmi Y1 : ಶಿಯೋಮಿಯ ಮೊದಲ ಸೆಲ್ಪಿ ಫೋನ್ ರೆಡ್‌ಮಿ Y1
ಇತರೆ ಫೀಚರ್ಸ್ ಏನು?

ಇತರೆ ಫೀಚರ್ಸ್ ಏನು?

2 ಮೆಗಾಪಿಕ್ಸೆಲ್ ಹಿಂಬದಿಯ ಫ್ಲಾಶ್ ಕ್ಯಾಮರಾ ಮತ್ತು 0.3 ಮೆಗಾಪಿಕ್ಸೆಲ್ (ವಿಜಿಎ) ಫ್ರಂಟ್ ಕ್ಯಾಮರಾ ಸ್ಮಾರ್ಟ್‌ಫೋನ್‌ನಲ್ಲಿದೆ. ಅಕ್ಸೆಲೆರೊಮೀಟರ್, ಬೆಳಕಿನ ಸಂವೇದಕಗಳನ್ನು ಹೊಂದಿರುವ ಈ ಫೋನ್ ಷಾಂಪೇನ್ ಗೋಲ್ಡ್, ಡಾರ್ಕ್ ಬ್ಲೂ, ಮತ್ತು ಸಿಲ್ವರ್ ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.!!

ವೊಡಾಫೋನ್ ಸಹಯೋಗ!

ವೊಡಾಫೋನ್ ಸಹಯೋಗ!

ಜಿಯೋ, ಏರ್‌ಟೆಲ್ ಟೆಲಿಕಾಂಗಳಿಗೆ ಸೆಡ್ಡು ಹೊಡೆಯುವ ದೃಷ್ಟಿಯಿಂದ ಮೈಕ್ರೋಮ್ಯಾಕ್ಸ್ ಜೊತೆಗೆ ಕೈಜೋಡಿಸಿದ್ದ ವೊಡಾಫೋನ್ ಇದೀಗ ಐಟೆಲ್ ಕಂಪೆನಿ ಜೊತೆ ಕೈಜೋಡಿಸಿದೆ.! ಐಟೆಲ್ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಉತ್ತಮ ಕಾರ್ಯನಿರ್ವಹಣೆಗೆ ಹೆಸರಾಗಿರುವುದು ಇದಕ್ಕೆ ಕಾರಣ ಎಂದು ವೊಡಾಫೋನ್ ವಕ್ತಾರರು ಹೇಳಿದ್ದಾರೆ.!!

ವೊಡಾಫೋನ್ ಕ್ಯಾಶ್‌ಬ್ಯಾಕ್.!!

ವೊಡಾಫೋನ್ ಕ್ಯಾಶ್‌ಬ್ಯಾಕ್.!!

ವಾಸ್ತವವಾಗಿ ರೂ. 3,690 ಬೆಲೆ ಹೊಂದಿರುವ ಈ ಫೋನ್ ಅನ್ನು ಪೂರ್ಣ ಹಣ ನೀಡಿ ಖರೀದಿಸಬೇಕು. ನಂತರ ಮೂರು ವರ್ಷಗಳ ಕಾಲ ಪ್ರತಿತಿಂಗಳೂ 150 ರೂ. ವೊಡಾಫೋನ್ ರೀಚಾರ್ಜ್ ಮಾಡಿಸಿದರೆ ಕ್ಯಾಶ್‌ಬ್ಯಾಕ್ ರೂಪದಲ್ಲಿ 18 ತಿಂಗಳ ಎರಡು ಬಾರಿ 2100 ರೂಪಾಯಿಗಳ ಹಣವನ್ನು ವೊಡಾಫೋನ್ ವಾಪಸ್ ನೀಡುವುದಾಗಿ ತಿಳಿಸಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Vodafone Launches Itel A20 Smartphone at an 'Effective Price' of Rs. 1,590.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot