ಏನಿದು ಸಾಫ್ಟ್ ಫೋನ್??

Posted By: Tejaswini P G

  ಟೆಲಿಪೋನ್ ಬಳಸದೆ ಕಂಪ್ಯೂಟರ್ನಿಂದ ತಂತ್ರಾಂಶ ಬಳಸಿ ದೂರವಾಣಿ ಕರೆ ಮಾಡಲು ಅನುವು ಮಾಡಿಕೊಡುವ ತಂತ್ರಜ್ಞಾನವೇ "ಸಾಫ್ಟ್ ಫೋನ್". "ಸಾಫ್ಟ್ ಫೋನ್" ಎಂದರೆ "ಸಾಫ್ಟ್ವೇರ್ ಟೆಲಿಫೋನ್". ಈ ತಂತ್ರಜ್ಞಾನವನ್ನು VoIP (ವಾಯ್ಸ್ ಓವರ್ ಐಪಿ) ಮತ್ತು ವೀಡಿಯೋ ಕರೆಗಳನ್ನು ಬೆಂಬಲಿಸುವ ಕಂಪ್ಯೂಟರ್, ಸ್ಮಾರ್ಟ್ಫೋನ್, ಟ್ಯಾಬ್ಲೆಟ್ ಮೊದಲಾದ ಸಾಧನಗಳಲ್ಲಿ ಬಳಸಬಹುದು.

  ಏನಿದು ಸಾಫ್ಟ್ ಫೋನ್??

  ಸಾಫ್ಟ್ ಫೋನ್ ಬಳಸಿದರೆ ಬೇರೆ ದೂರವಾಣಿ ಸಾಧನದ ಅಗತ್ಯವಿರುವುದಿಲ್ಲ.ಇದುವೇ ಈ ತಂತ್ರಜ್ಞಾನದ ಮುಖ್ಯ ಪ್ರಯೋಜನ. ಅಲ್ಲದೆ ನಿಮ್ಮ ಕೆಲಸ ಮತ್ತು ಸಂವಹನೆಯ ಸಾಧನಗಳನ್ನು ಒಂದೇ ಕಡೆ ಒಗ್ಗೂಡಿಸಲು ಇದು ಸಹಾಯಮಾಡುತ್ತದೆ.

  ಸಾಫ್ಟ್ ಫೋನ್ ಬಳಸಲು ಏನೇನು ಬೇಕು?

  ನೀವು ಸಾಫ್ಟ್ ಫೋನ್ ಅಳವಡಿಸಬೇಕೇ?ಹಾಗದರೆ ನಿಮಗೆ ಏನೇನು ಬೇಕು. ಇಲ್ಲಿದೆ ಉತ್ತರ..

  ಸಾಫ್ಟ್ ಫೋನ್ ಅಳವಡಿಸಲು ಬೇಕು ಮುಖ್ಯವಾಗಿ ಈ 4 ಅಂಶಗಳು.ಮೊದಲಿಗೆ ಕರೆ ಮಾಡಲು ಒಂದು 'ಇಂಟರ್ಫೇಸ್', ಎರಡನೆಯದಾಗಿ ಕರೆಯನ್ನು ಪ್ರಾಸೆಸ್ ಮಾಡುವ ಮಾಡ್ಯೂಲ್, ಮೂರನೆಯದು ಕೋಡೆಕ್ ಸೆಟ್ ಮತ್ತು ಕೊನೆಯದಾಗಿ ಕಾಂಟಾಕ್ಟ್ಗಳು.

  ಬಂದಿದೆ ನೋಕಿಯಾ ಕ್ಯಾಮೆರಾ ಆಪ್

  ನಿಮ್ಮ ಮತ್ತು ನಿಮ್ಮ ಕಂಪ್ಯೂಟರ್ ಮಧ್ಯೆ ಸಂವಹನಕ್ಕೆ ಅಗತ್ಯವಾದ ವೇದಿಕೆಯೇ 'ಇಂಟರ್ಫೇಸ್'. ಈ ಇಂಟರ್ಫೇಸ್ ಡಯಲ್ ಪ್ಯಾಡ್,ಕಂಟ್ರೋಲ್ ಬಟನ್ಗಳು,ಆಡಿಯೋ ಔಟ್ಪುಟ್ ಮತ್ತು ವೀಡಿಯೋ ಔಟ್ಪುಟ್ ಫೀಚರ್ ಹೊಂದಿರಬೇಕು.ನಂತರ ಬೇಕಾದದ್ದು ನಿರ್ದಿಷ್ಟ ಪ್ರೋಟೋಕಾಲ್ ಆಧಾರದ ಮೇಲೆ ಕರೆ ಮಾಡಲು ಮತ್ತು ಸ್ವೀಕರಿಸಲು ಅಗತ್ಯವಾದ ವ್ಯವಸ್ಥೆ/ಮಾಡ್ಯೂಲ್.ಇನ್ನು ವಾಯ್ಸ್ ಡೇಟಾವನ್ನು ಅನಲಾಗ್ ಮತ್ತು ಡಿಜಿಟಲ್ ಫಾರ್ಮ್ಯಾಟ್ಗಳ ಮಧ್ಯೆ ಎನ್ಕೋಡ್ ಮತ್ತು ಡೀಕೋಡ್ ಮಾಡಲು ಕೋಡೆಕ್ ಗಳು ಬೇಕು.ಕೊನೆಯದಾಗಿ ಕರೆ ಮಾಡಲು ಕಾಂಟ್ಯಾಕ್ಟ್ಗಳ ಪಟ್ಟಿ ಕಂಪ್ಯೂಟರ್ನಲ್ಲಿರಬೇಕು.

  ಏನಿದು ಸಾಫ್ಟ್ ಫೋನ್??

  ಸಾಫ್ಟ್ ಫೋನ್ ಹೇಗೆ ಕೆಲಸ ಮಾಡುತ್ತದೆ?

  ನೀವು ಸಾಫ್ಟ್ ಫೋನ್ ಮೂಲಕ VoIP ಕರೆ ಮಾಡಿದಾಗ, ಸಾಫ್ಟ್ ಫೋನ್ ನ ತಂತ್ರಾಂಶವು ವಾಯ್ಸ್ ಡೇಟಾವನ್ನು ಎನ್ಕ್ಯಾಪ್ಸುಲೇಟ್ ಮಾಡಿ ವಾಯ್ಪ್ ಪ್ರೊವೈಡರ್ಗಳಿಗೆ ಕಳಿಸುತ್ತದೆ. ಅಲ್ಲಿ ವಾಯ್ಸ್ ಡೇಟಾವನ್ನು ವಾಯ್ಸ್ ಸಿಗ್ನಲ್/ಸಂಕೇತಗಳನ್ನಾಗಿ ಪರಿವರ್ತಿಸಿ ಅದನ್ನು ಸರಿಯಾದ ದೂರವಾಣಿ ಎಕ್ಸ್ಚೇಂಜ್ ಗೆ ಕಳುಹಿಸಲಾಗುತ್ತದೆ.ಇದಕ್ಕೆ ಪ್ರತ್ಯುತ್ತರವಾಗಿ ಬಂದ ವಾಯ್ಸ್ ಸಂಕೇತಗಳನ್ನು ಈ ಮೊದಲು ಹೇಳಿದ ರೀತಿಯಲ್ಲೇ ಪ್ರಾಸೆಸ್ ಮಾಡಲಾಗುತ್ತದೆ ಹಾಗೂ ಕರೆ ಪೂರ್ತಿಗಳಿಸಲಾಗುತ್ತದೆ.

  ಸಾಫ್ಟ್ ಫೋನ್ ನ ಪ್ರಯೋಜನಗಳು

  ಅಗ್ಗ : ಸಾಫ್ಟ್ ಫೋನ್ಗಳನ್ನು ಕಡಿಮೆ ವೆಚ್ಚದಲ್ಲಿ ಅಳವಡಿಸಬಹುದು. ಸಾಫ್ಟ್ ಫೋನ್ ಅಳವಡಿಸಿದರೆ ಡೆಸ್ಕ್ ಫೋನ್ ಅಥವಾ ಹ್ಯಾಂಡ್ಸೆಟ್ಗಳನ್ನು ಖರೀದಿಸಬೇಕಾಗುವುದಿಲ್ಲ. ಹೀಗಾಗಿ ನೂರಾರು ಡಾಲರ್ಗಳ ಉಳಿತಾಯವನ್ನು ಮಾಡಬಹುದು.

  ವಿಶೇಷ ಸ್ಥಳಾವಕಾಶದ ಅಗತ್ಯವಿಲ್ಲ: ಸಾಫ್ಟ್ ಫೋನ್ ಬಳಸುವ ಮೂಲಕ ನಿಮ್ಮ ಕಂಪ್ಯೂಟರ್ನಲ್ಲೇ ಕಾರ್ಯ ಹಾಗೂ ಸಂವಹನೆಯ ಸಾಧನಗಳು ಒಟ್ಟಾಗಿ ಇರುವುದರಿಂದ ದೂರವಾಣಿಗೆಂದು ವಿಶೇಷ ಸ್ಥಳದ ಅಗತ್ಯವಿರುವುದಿಲ್ಲ. ನಿಮ್ಮ ಕಂಪ್ಯೂಟರ್ನ ಇಲೆಕ್ಟ್ರಾನಿಕ್ ವಿಳಾಸ ಪುಸ್ತಕದಲ್ಲಿರುವ ಕಾಂಟ್ಯಾಕ್ಟ್ ನ ಮೇಲೆ ಕ್ಲಿಕ್ ಮಾಡುವ ಮೂಲಕ ಕಂಪ್ಯೂಟರ್ನಿಂದಲೇ ನಿಮಗೆ ಬೇಕಾದವರಿಗೆ ಕರೆಮಾಡಬಹುದು.

  Read more about:
  English summary
  A Softphone is a name given to "Software Telephone", that allows users to make telephone calls through software from a computer.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more