ವಾಟ್ಸಾಪ್‌ನ ಹತ್ತು ಅತ್ಯುತ್ತಮ ಸಲಹೆಗಳು

By Shwetha
|

ಮೊಬೈಲ್ ಪ್ಲಾಟ್‌ಫಾರ್ಮ್‌ಗಳಲ್ಲೇ ಹೆಚ್ಚು ಜನಪ್ರಿಯ ಮೆಸೆಂಜರ್ ಅಪ್ಲಿಕೇಶನ್ ಆಗಿ ವಾಟ್ಸಾಪ್ ಈಗ ಹೆಸರು ಪಡೆದಿದೆ. ಹೆಚ್ಚಿನ ಮೊಬೈಲ್ ಓಎಸ್‌ಗಳಾದ ಐಓಎಸ್, ಆಂಡ್ರಾಯ್ಡ್, ಬ್ಲ್ಯಾಕ್‌ಬೆರ್ರಿ, ನೋಕಿಯಾದಲ್ಲಿ ಈ ಮೆಸೆಂಜರ್ ಈಗ ಲಭ್ಯವಾಗುತ್ತಿದೆ. ನಿಮ್ಮಲ್ಲಿ ಇಂಟರ್ನೆಟ್ ಸಂಪರ್ಕ ಒಂದು ಇದ್ದರೆ ಸಾಕು ಈ ಸಾಮಾಜಿಕ ಮೆಸೆಂಜರ್ ತಾಣವನ್ನು ನೀವು ಅತಿ ಸುಲಭವಾಗಿ ಬಳಸಬಹುದಾಗಿದೆ. ದೂರದಲ್ಲಿರುವ ಸ್ನೇಹಿತರನ್ನು ಅತಿ ಸಮೀಪದಲ್ಲಿ ಇರಿಸಿಕೊಳ್ಳುವ ಒಂದು ಅದ್ಭುತ ವೇದಿಕೆಯಾಗಿದೆ ವಾಟ್ಸಾಪ್.

ವಾಟ್ಸಾಪ್ ಅನ್ನು ಬಳಸಲು ಕೇವಲ ಇಂಟರ್ನೆಟ್ ಸಂಪರ್ಕವಿದ್ದರೆ ಮಾತ್ರ ಸಾಕು ಮೊದಲೆಲ್ಲಾ ಇದನ್ನು ಬಳಸಲು ದರ ನಿಗದಿಪಡಿಸಲಾಗಿತ್ತಾದರೂ ಇತ್ತೀಚಿನ ಅತ್ಯಾಧುನಿಕ ವಿಧಾನವು ಈ ಅಪ್ಲಿಕೇಶನ್ ಅನ್ನು ಉಚಿತವಾಗಿ ಬಳಸುವ ಸುಯೋಗವನ್ನು ಒದಗಿಸಿದೆ. ಹಾಗಿದ್ದರೆ ಈ ಅಪ್ಲಿಕೇಶನ್ ಅನ್ನು ಇನ್ನಷ್ಟು ಸುಲಭ ಮತ್ತು ಸರಳವನ್ನಾಗಿಸಲು ನಾವಿಲ್ಲಿ ವಾಟ್ಸಾಪ್‌ನ ಉತ್ತಮ ಬಳಕೆಗಾಗಿ ಹತ್ತು ಅತ್ಯುತ್ತಮ ಸಲಹೆಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ. ಆ ಸಲಹೆಗಳು ಯಾವುದು ಎಂಬುದನ್ನು ಕೆಳಗಿನ ಸ್ಲೈಡ್‌ಗಳಲ್ಲಿ ನಾವು ನೋಡೋಣ.

#1

#1

ಲಾಸ್ಟ್ ಸೀನ್ ವೈಶಿಷ್ಟ್ಯದೊಂದಿಗೆ ಇತ್ತೀಚೆಗೆ ವಾಟ್ಸಾಪ್ ಬಂದಿದೆ. ಹೆಚ್ಚಿನವರು ಈ ವಿಶಿಷ್ಟತೆಯನ್ನು ಇತರರಿಗೆ ತೋರಿಸಲು ಬಯಸುವುದಿಲ್ಲ ಮತ್ತು ಅದನ್ನು ಮರೆಮಾಚಲು ಬಯಸುತ್ತಾರೆ ಲಾಸ್ಟ್ ಸೀನ್ ವೈಶಿಷ್ಟ್ಯವನ್ನು ಮರೆ ಮಾಚಲು ಮೆನುಗೆ ಹೋಗಿ ಅಲ್ಲಿ ಸೆಟ್ಟಿಂಗ್ಸ್ ಆರಿಸಿ ನಂತರ ಖಾತೆ ಗೌಪ್ಯತೆಯಲ್ಲಿ ನೀವು ಬದಲಾವಣೆಯನ್ನು ಮಾಡಬೇಕಾಗುತ್ತದೆ.

#2

#2

ನಿಮ್ಮ ಸಿಸ್ಟಮ್ ದೋಷದಿಂದ ವಾಟ್ಸಾಪ್ ಸಂದೇಶಗಳನ್ನು ನೀವು ಕಳೆದುಕೊಂಡಿದ್ದರೆ, ಚಿಂತಿಸದಿರಿ ಇದನ್ನು ನೀವು ಮರಳಿ ಪಡೆದುಕೊಳ್ಳಬಹುದಾಗಿದೆ. ನಿಮ್ಮ ಮೈಕ್ರೋ ಎಸ್‌ಡಿ ಕಾರ್ಡ್‌ಗೆ ಹೋಗಿ ಅಲ್ಲಿ ವಾಟ್ಸಾಪ್ > ಡೇಟಾಬೇಸ್ ಫೋಲ್ಡರ್ ಅನ್ನು ಪ್ರವೇಶಿಸಿ ಅಲ್ಲಿ ನಿಮಗೆ ಮೆಸೇಜ್ ಸ್ಟೋರ್ ಎಂಬ ಫೈಲ್ ಕಂಡುಬರುತ್ತದೆ. ಟೆಕ್ಸ್ಟ್ ಎಡಿಟರ್ ಮೂಲಕ ಇಲ್ಲಿರುವ ಸಂದೇಶಗಳನ್ನು ತೆರೆಯಿರಿ ಇದನ್ನು ಪುನಃ ನಿಮ್ಮ ಖಾತೆಗೆ ಮರುಸಂಗ್ರಹಿಸಲು ಫೋನ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿ ಮತ್ತು ವಾಟ್ಸಾಪ್ ಅನ್ನು ಪುನಃ ಸ್ಥಾಪಿಸಿ

#3

#3

ನಿಮ್ಮ ವಾಟ್ಸಾಪ್ ಥೀಮ್‌ನಿಂದ ನೀವು ಬೋರ್ ಆಗಿದ್ದರೆ, ವಾಟ್ಸಾಪ್ ಪ್ಲಸ್ ಹೋಲೋವನ್ನು ನೀವು ಪ್ರಯತ್ನಿಸಲೇ ಬೇಕು. ಇದು ಹೊಸ ಇಂಟರ್ಫೇಸ್‌ನೊಂದಿಗೆ ಬಂದಿದ್ದು ನಿಜಕ್ಕೂ ನಿಮ್ಮ ವಾಟ್ಸಾಪ್ ನೋಟವನ್ನೇ ಬದಲಾಯಿಸುತ್ತದೆ.

#4

#4

ನಿಮ್ ಮೊಬೈಲ್ ಡೇಟಾ ಯೋಜನೆಯನ್ನು ಹೆಚ್ಚಿಸಲು ನೀವು ದಿನವೂ ವಾಟ್ಸಾಪ್ ಬಳಕೆದಾರರಾಗಿದ್ದರೆ, ನಿಮ್ಮ ವಾಟ್ಸಾಪ್ ಸ್ಥಿತಿಯನ್ನು ನೀವು ದಿನವೂ ಪರಿಶೀಲಿಸಬೇಕು.

#5

#5

ಹೆಚ್ಚಿನವರು ತಮ್ಮ ಖಾತೆಯನ್ನು ವಾಟ್ಸಾಪ್‌ನಲ್ಲಿ ತೆರೆಯುತ್ತಾರೆ ಮತ್ತು ಇತರ ಕೆಲವು ಕಾರಣಗಳಿಗಾಗಿ ಅದನ್ನು ಅಳಿಸುತ್ತಾರೆ ನೀವು ವಾಟ್ಸಾಪ್ ಅನ್ನು ನಿಮ್ಮ ಫೋನ್‌ನಿಂದ ಅಳಿಸುತ್ತಿದ್ದೀರಿ ಎಂದಾದಲ್ಲಿ ನೀವು ಹೆಚ್ಚು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ನಿಮ್ಮ ಖಾತೆ ಇಲ್ಲಿ ಅಳಿಸಿ ಹೋಗುವುದಿಲ್ಲ ಎಂಬುದಾಗಿದೆ ಏಕೆಂದರೆ ವಾಟ್ಸಾಪ್ ಡೇಟಾಬೇಸ್‌ನಲ್ಲಿ ನಿಮ್ಮ ಖಾತೆ ನೋಂದಾವಣೆಯಾಗಿರುತ್ತದೆ. ಇದನ್ನು ಸಂಪೂರ್ಣವಾಗಿ ಅಳಿಸಲು, ಸೆಟ್ಟಿಂಗ್ಸ್ > ಖಾತೆ> ಖಾತೆ ಬದಲಾವಣೆ> ಸಂಖ್ಯೆ ಬದಲಾವಣೆ. ಇದರ ನಂತರ ನಿಮ್ಮ ಹಳೆಯ ಫೋನ್ ಸಂಖ್ಯೆಯನ್ನು ಇಲ್ಲಿ ಟೈಪ್ ಮಾಡಿ.

#6

#6

ಹೆಚ್ಚಿನ ಬಳಕೆದಾರರು ತಮ್ಮ ಫೋನ್ ಸಂಖ್ಯೆಯನ್ನು ಬದಲಾಯಿಸುವಾಗ ವಾಟ್ಸಾಪ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿ ಪುನಃ ಸ್ಥಾಪಿಸುತ್ತಾರೆ ಇದರಿಂದ ನಿಮ್ಮೆಲ್ಲಾ ಸಂದೇಶಗಳನ್ನು ನೀವು ಕಳೆದುಕೊಳ್ಳುತ್ತೀರಿ. ಫೋನ್ ಸಂಖ್ಯೆಯನ್ನು ಬದಲಾಯಿಸುವಾಗ ನಿಮ್ಮ ವಾಟ್ಸಾಪ್ ಸಂದೇಶಗಳನ್ನು ಕಳೆದುಕೊಳ್ಳದೇ ಇರಲು ಸೆಟ್ಟಿಂಗ್ಸ್> ಖಾತೆ ತಟ್ಟಿರಿ> ಸಂಖ್ಯೆ ಬದಲಾವಣೆ ತಟ್ಟಿರಿ ಇದರ ನಂತರ ನಿಮ್ಮ ಹಳೆಯ ಸಂಖ್ಯೆಯನ್ನು ಮತ್ತು ಹೊಸ ಸಂಖ್ಯೆಯನ್ನು ಟೈಪ್ ಮಾಡಿ.

#7

#7

ನಿಮ್ಮ ಸ್ನೇಹಿತರ ವಾಟ್ಸಾಪ್ ಚಟುವಟಿಕೆಯ ಮೇಲೆ ನಿಗಾ ಇರಿಸುವುದು ಹೇಗೆಂಬ ಹೊಸ ಸಲಹೆಯನ್ನು ಇಲ್ಲಿ ತಿಳಿದುಕೊಳ್ಳಬಹುದಾಗಿದೆ. ಈ ತಂತ್ರವನ್ನು ಬಳಸಿಕೊಂಡು ನಿಮ್ಮ ಯಾವ ಸ್ನೇಹಿತರು ಮಾತನಾಡುತ್ತಿದ್ದಾರೆ ಎಂಬುದನ್ನು ಗಮನಿಸಬಹುದಾಗಿದೆ.

#8

#8

ನಿಮ್ಮ ವಾಟ್ಸಾಪ್ ಅಧಿಸೂಚನೆಗಳನ್ನು ಓದಲು ನಿಮಗೆ ಬಿಡುವಿಲ್ಲದಿದ್ದರೆ, ಆ ಅಧಿಸೂಚನೆಗಳನ್ನು ನಿಮಗೆ ಈಗ ಧ್ವನಿಯ ಮೂಲಕ ಪಡೆದುಕೊಳ್ಳಬಹುದಾಗಿದೆ. ಇದನ್ನು ಸಕ್ರಿಯಗೊಳಿಸಲು ಮೊದಲು ನೀವು ಧ್ವನಿ ಅಧಿಸೂಚನೆ ಮತ್ತು ಮಾತನಾಡಲು ಸಂದೇಶ ಮಾಡುವಿಕೆ ಅನ್ನು ಡೌನ್‌ಲೋಡ್ ಮಾಡಿ ಸ್ಥಾಪಿಸಿಕೊಳ್ಳಬೇಕು ಮತ್ತು ನಿಮ್ಮನ್ನು ಅಪ್ಲಿಕೇಶನ್‌ಗಾಗಿ ಲಭ್ಯತೆಯನ್ನು ಸಕ್ರಿಯಗೊಳಿಸಲು ಕೇಳಲಾಗುತ್ತದೆ ಇಲ್ಲಿ ವಾಯ್ಸ್ ನೋಟಿಫಿಕೇಶನ್‌ಗಾಗಿ ಲಭ್ಯತೆಯನ್ನು ಹೊಂದಿಸಿ. ನಂತರ ನೀವು ವಾಟ್ಸಾಪ್, ವೈಬರ್, ವಾಟ್ಸಾಪ್ ಮತ್ತು ಸ್ಪಾಟ್‌ಬ್ರಾಸ್‌ನಿಂದ ಅಧಿಸೂಚನೆಗಳನ್ನು ಓದಬಹುದಾಗಿದೆ.

#9

#9

  • ನಿಮ್ಮ ವಾಟ್ಸಾಪ್ ಖಾತೆಯನ್ನು ಅಳಿಸುವುದು ಮತ್ತು ನಿಮ್ಮ ಫೋನ್‌ನಿಂದ ಅಪ್ಲಿಕೇಶನ್ ಅನ್ನು ಅನ್‌ಇನ್‌ಸ್ಟಾಲ್ ಮಾಡುವುದು.
  • ನಿಮ್ಮ ಫೋನ್‌ ಸಂಖ್ಯೆಯಿಂದ ಎರಡನೇ ಫೋನ್ ಅನ್ನು ಬಳಸಿ ವಾಟ್ಸಾಪ್‌ನಲ್ಲಿ ನೋಂದಾಯಿಸುವುದು.
  • ನಿಮ್ಮ ಫೋನ್‌ಗೆ ಸಂದೇಶದ ಮೂಲಕ ವೆರಿಫಿಕೇಶನ್ ಕೋಡ್ ದೊರೆಯುತ್ತದೆ. ಎರಡನೇ ಫೋನ್‌ನಲ್ಲಿ ವೆರಿಫೀಕೇಶನ್ ಕೋಡ್ ಅನ್ನು ನಮೂದಿಸಿ.
  • ಎರಡನೇ ಫೋನ್‌ನಿಂದ ನಿಮ್ಮ ವಾಟ್ಸಾಪ್ ಖಾತೆಯನ್ನು ಅಳಿಸಿ
  • ನಿಮ್ಮ ಮೊದಲ ಮೊಬೈಲ್‌ ಫೋನ್‌ಗೆ ವಾಟ್ಸಾಪ್ ಅನ್ನು ಸ್ಥಾಪಿಸಿ ಮತ್ತು ನಿಮ್ಮ ಫೋನ್ ಸಂಖ್ಯೆಯನ್ನು ಬಳಸಿಕೊಂಡು ಪುನಃ ನೋಂದಾಯಿಸಿಕೊಳ್ಳಿ
  • ನಿಮ್ಮ ಪರವಾನಿಗೆ 2022 ವರೆಗೆ ವಿಸ್ತರಿಸಿರುವುದನ್ನು ನಿಮಗೆ ನೋಡಬಹುದು ಆನಂದಿಸಿ
  • #10

    #10

    ನಿಮ್ಮಲ್ಲಾ ವಾಟ್ಸಾಪ್ ಸಂಪರ್ಕಗಳ ಪ್ರೊಫೈಲ್ ಚಿತ್ರಗಳನ್ನು ನಿಮ್ ಮೈಕ್ರೋಎಸ್‌ಡಿ ಕಾರ್ಡ್‌ನಲ್ಲಿ ಉಳಿಸಲಾಗುತ್ತದೆ. > ವಾಟ್ಸಾಪ್> ಪ್ರೊಫೈಲ್ ಚಿತ್ರಗಳು ಇಲ್ಲಿ ನಿಮ್ಮ ಸ್ನೇಹಿತರ ಪ್ರೊಫೈಲ್ ಚಿತ್ರವನ್ನು ಸಂಪರ್ಕಗಳಿಗೆ ಸೇರಿಸಬಹುದಾಗಿದೆ.

Best Mobiles in India

English summary
This article tells about whatsapp 10 tremendous useful features which makes you great.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X