ಈಗ ಪ್ರಪಂಚದಲ್ಲಿ ಸ್ಮಾರ್ಟ್‍ಫೋನ್ ಬ್ಯಾಟರಿ ತಂತ್ರಜ್ಞಾನದಲ್ಲಿ ಮತ್ತೊಂದು ಕ್ರಾಂತಿ ಬೇಕಾಗಿದೆ

By Prateeksha
|

ಸೌತ್ ಕೋರಿಯಾ ದ ದೈತ್ಯ ಸ್ಯಾಮ್ಸಂಗ್ ಗೆ ಕಳೆದ ಕೆಲ ವಾರಗಳು ದುಃಸ್ವಪ್ನವಾಗಿತ್ತು. ಕಂಪನಿಯ ಹೊಸ ಫೋನ್ ಗೆಲಾಕ್ಸಿ ನೋಟ್ 7 ವಿಫಲವಾಯಿತು ಪ್ರಪಂಚದಾದ್ಯಂತ ಗ್ರಾಹಕರು ಸ್ಪೋಟಗೊಳ್ಳುತ್ತಿರುವ ಬಗ್ಗೆ ದೂರು ನೀಡಿದಾಗ.

ಈಗ ಪ್ರಪಂಚದಲ್ಲಿ ಸ್ಮಾರ್ಟ್‍ಫೋನ್ ಬ್ಯಾಟರಿ ತಂತ್ರಜ್ಞಾನದಲ್ಲಿ ಮತ್ತೊಂದು ಕ್ರಾಂತಿ

ಸ್ಯಾಮ್ಸಂಗ್ ಹೇಳಿದಂತೆ $3 ಬಿಲಿಯನ್ ನಷ್ಟು ನಷ್ಟವಾಗಿದೆ ನೋಟ್ 7 ಹಿಂಪಡೆದ ಕಾರಣವಾಗಿ, ಇದು ಕಳೆದ ವರ್ಷದ ಗಳಿಕೆಯ ಅರ್ಧಕ್ಕೆ ಸಮಾನವಾಗಿದೆ.

ಓದಿರಿ: ನಿಮ್ಮ ಏರ್‌ಟೆಲ್ ಇಂಟರ್ನೆಟ್ ಪ್ಲಾನ್‌ಗೆ ಹೆಚ್ಚುವರಿ 250 ಎಮ್‌ಬಿ ಪಡೆದುಕೊಳ್ಳುವುದು ಹೇಗೆ?

ನಷ್ಟವನ್ನು ಲೆಕ್ಕ ಹಾಕಿದರೆ 2015 ರ ಕಂಪನಿಯ 10.13 ಟ್ರಿಲಿಯನ್ ನಷ್ಟು ಲಾಭದ ಅರ್ಧದಷ್ಟು ಇದೆ. ಇದು ನಿಜಕ್ಕೂ ದೊಡ್ಡ ನಷ್ಟ.ಇದು ಕಲಿಸುವ ಪಾಠವೆಂದರೆ ಸ್ಮಾರ್ಟ್‍ಫೋನ್ ತಯಾರಕರು ಗ್ರಾಹಕರ ಸುರಕ್ಷತೆ ಮತ್ತು ಲಾಭಕ್ಕಾಗಿ ಕ್ವಾಲಿಟಿ ಚೆಕ್ ಮಾಡಬೇಕು ತಮ್ಮ ಫೋನಿನ ಮೇಲೆ. ಅದಕ್ಕಿಂತ ಮುಖ್ಯವಾಗಿ ಬ್ಯಾಟರಿ ತಂತ್ರಜ್ಞಾನದಲ್ಲಿ ಕ್ರಾಂತಿಯ ಅವಶ್ಯಕತೆಯಿದೆ. ಯಾಕೆ ಮುಖ್ಯವೆಂದು ನೋಡೊಣ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಳೆದ 15 ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಸುಧಾರಣೆಯಿಲ್ಲಾ

ಕಳೆದ 15 ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಸುಧಾರಣೆಯಿಲ್ಲಾ

ಲಿಥಿಯಮ್ ಐಯೊನ್ ಬ್ಯಾಟರಿ ತಂತ್ರಜ್ಞಾನ ಈಗಾಗಲೆ ಸುಮಾರು 3 ದಶಕಗಳಷ್ಟು ಹಿಂದಿನದು. ಮೊದಲ ಬ್ಯಾಟರಿ 1991 ರಲ್ಲಿ ಸೋನಿ ಮತ್ತು ಆಸಾಹಿ ಕಸೈ ನಿಂದ ಬಿಡುಗಡೆಗೊಂಡಿತ್ತು. ಅಂದಿನಿಂದ ಇಂದಿನವರೆಗೆ ಸ್ಮಾರ್ಟ್‍ಫೋನ್ ಅಥವಾ ಲ್ಯಾಪ್‍ಟಾಪ್ ನಲ್ಲಿ ಉಪಯೋಗಿಸುತ್ತಿರುವ ಲೀಥಿಯಮ್ ಐಯೊನ್ ತಂತ್ರಜ್ಞಾನ ಸರಿಸುಮಾರು ಅದೇ ಆಗಿದೆ.

ಸ್ಮಾರ್ಟ್‍ಫೋನಿನಲ್ಲಿ ಕ್ರಾಂತಿ ಮೂಡಿದೆ

ಸ್ಮಾರ್ಟ್‍ಫೋನಿನಲ್ಲಿ ಕ್ರಾಂತಿ ಮೂಡಿದೆ

ಕಳೆದ 5 ರಿಂದ 6 ವರ್ಷಗಳಲ್ಲಿ ಮೊಬೈಲ್ ಕ್ಷೇತ್ರದಲ್ಲಿ ಬಹಳಷ್ಟು ಸುಧಾರಣೆಯಾಗಿದೆ. ಹಸ್ತದಷ್ಟು ಚಿಕ್ಕ ಗಣಕಯಂತ್ರ ವೇಗದ ಪ್ರೊಸೆಸರ್, ಜಿಪಿಯು, ಹೆಚ್ಚಿನ ರ್ಯಾಮ್ ಮತ್ತು ಶಕ್ತಿಯುತ ಸೆನ್ಸರ್ಸ್ ಅನ್ನು ಒಳಗೊಂಡಿದೆ. ಇವೆಲ್ಲದಕ್ಕೂ ಒಳ್ಳೆ ರೀತಿಯ ಶಕ್ತಿಬೇಕು ನಿರಂತರವಾಗಿ ಸುಲಲಿತವಾಗಿ ಕಾರ್ಯನಿರ್ವಹಿಸಲು. ಮೊಬೈಲ್ ಗೆ ಹೋಲಿಸಿದರೆ ಬ್ಯಾಟರಿ ತಂತ್ರಜ್ಞಾನ ಇನ್ನೂ ಅದೇ ಇದೆ. ಅದನ್ನು ಬದಲಾಯಿಸ ಬೇಕಾಗಿದೆ ಸ್ಮಾರ್ಟ್‍ಫೋನ್ ತಂತ್ರಜ್ಞಾನವನ್ನು ಸರಿದೂಗಿಸಲು.

ಎದುರಿಸುತ್ತಿರುವ ಸಮಸ್ಯೆ

ಎದುರಿಸುತ್ತಿರುವ ಸಮಸ್ಯೆ

ಸ್ಮಾರ್ಟ್‍ಫೋನ್ ತಯಾರಕರಲ್ಲಿ ದಿನದಿಂದ ದಿನಕ್ಕೆ ಸ್ಪರ್ಧೆ ಹೆಚ್ಚುತ್ತಿದೆ. ಬೇರೆ ಫೀಚರ್ ಗಳೊಂದಿಗೆ ಸಂಧಾನ ಮಾಡಿಕೊಳ್ಳದೆ ದೊಡ್ಡ ಗಾತ್ರದ ಬ್ಯಾಟರಿಯನ್ನು ಮೊಬೈಲ್ ನಲ್ಲಿ ಸೇರ್ಪಡಿಸುವುದು ಚಿಂತಿಸುವ ವಿಷಯ. ಅದಕ್ಕೆ ಪರಿಹಾರ ಡೆನ್ಸರ್ ಲೀಥಿಯಮ್ ಐಯೊನ್ ಬ್ಯಾಟರಿ ಯುನಿಟ್ಸ್, ಬೆಂಕಿ ತಾಗುತ್ತಿರಲು ಮುಖ್ಯ ಕಾರಣವು ಕೂಡ ಇದೇ ಆಗಿದೆ. ಪ್ರಶ್ಶರ್ ಸೆನ್ಸಿಟಿವಿಟಿಯಿಂದಾಗಿ ಹೈ ಡೆನ್ಸಿಟಿ ಬ್ಯಾಟರಿಯಿಂದ ಹೊರ ಬೀಳುವ ಉಷ್ಣತೆ, ಫುಲ್ ಎಚ್‍ಡಿ, 2ಕೆ ಮತ್ತು 4ಕೆ ಮತ್ತು ಮಲ್ಟಿಕೋರ್ ಸಿಪಿಯು ಗಳಿಂದಾಗುವ ಲೋಡ್ ಅನ್ನು ಸಂಭಾಳಿಸುವಾಗ ವಿಪರೀತ ಸಂದರ್ಭಗಳಲ್ಲಿ ಸ್ಪೋಟಗೊಳ್ಳುತ್ತವೆ. ಅದೇ ಆಗಿದ್ದು ಸ್ಯಾಮ್ಸಂಗ್ ಗೆಲಾಕ್ಸಿ ನೋಟ್ 7 ವಿಷಯದಲ್ಲಿ.

ಓದಿರಿ: ವೊಡಾಫೋನ್ 4G, ಜಿಯೋ 4G ಗಿಂತ ವೇಗ: 'ವೊಡಾಫೋನ್ 4G'ಗೆ ಅಪ್‌ಗ್ರೇಡ್ ಹೇಗೆ?

ಬೇರೆ ದಾರಿಗಳು

ಬೇರೆ ದಾರಿಗಳು

ಹೆಚ್ಚಿನ ಹಣವನ್ನು ಬ್ಯಾಟರಿ ತಂತ್ರಜ್ಞಾನದಲ್ಲಿ ಕ್ರಾಂತಿ ತರಲು ಉಪಯೋಗಿಸಿ ಲಿಥಿಯಮ್ ಐಯೊನ್ ನ ಮುಂದಿನ ಪೀಳಿಗೆಯನ್ನು ನೀಡಬೇಕು. ವರದಿ ಪ್ರಕಾರ ಕೇಂಬ್ರಿಜ್ ವಿಶ್ವವಿದ್ಯಾನಿಲಯ ದವರು ಲಿಥಿಯಮ್ ಏರ್ ಬ್ಯಾಟರಿಯನ್ನು ಲಿಥಿಯಮ್ ಐಯೊನ್ ಬ್ಯಾಟರಿಗಳಿಗೆ ಬೇರೆ ಪರಿಹಾರವಾಗಿ ಹುಡುಕಿದ್ದಾರೆ. ಅವರ ಪರೀಕ್ಷೆಗಳ ಪ್ರಕಾರ ಈಗಿನ ಬ್ಯಾಟರಿಗಳಿಗಿಂತ 10 ಪಟ್ಟು ಜಾಸ್ತಿ ಸಾಮಥ್ರ್ಯ ಹೊಂದಿದೆ.

ಅದರೊಂದಿಗೆ ಇಲ್ಲಿನೊಸ್ ನ ಅರ್ಗೊನ್ ನ್ಯಾಶನಲ್ ಲ್ಯಾಬೊರೆಟರಿ ಯ ಸಂಶೋಧಕರು ಕೂಡ ಹೊಸ ಬ್ಯಾಟರಿ ಕಂಡುಹಿಡಿದಿರುವುದಾಗಿ ಹೇಳಿದ್ದಾರೆ, ಅದರ ಹೆಸರು ಲಿಥಿಯಮ್ ಸುಪರೊಕ್ಸೈಡ್ ಬ್ಯಾಟರಿ. ಈಗಿನ ಸಧ್ಯದ ಬ್ಯಾಟರಿಗಳ ಬಹಳಷ್ಟು ಸಮಸ್ಯೆಗಳನ್ನು ನಿವಾರಿಸುವುದಾಗಿ ಹೇಳುತ್ತಿದ್ದಾರೆ. ಜನ ಬಳಕೆಗೆ ಬರಲು ಇನ್ನೂ 10 ವರ್ಷ ಹಿಡಿಯಬಹುದು.

ಬಳಕೆದಾರರು ಕಡೆ ಪಕ್ಷವಾಗಿ ಏನು ಮಾಡಬಹುದು

ಬಳಕೆದಾರರು ಕಡೆ ಪಕ್ಷವಾಗಿ ಏನು ಮಾಡಬಹುದು

ಸ್ಮಾರ್ಟ್‍ಫೋನ್‍ಗಳು ನಮ್ಮ ಜೀವನದ ಅಂಗವಾಗಿರುವುದರಿಂದ ಅದನ್ನು ಕಡೆಗಣಿಸಲಾಗುವುದಿಲ್ಲಾ. ನಾವು ಏನಿಲ್ಲದಿದ್ದರೂ ಬ್ಯಾಟರಿ ವಿಪರೀತ ಸ್ಥಿತಿಗೆ ಹೋಗದಂತೆ ನೋಡಕೊಳ್ಳಬೇಕು. ಚಾರ್ಜ್ ಮಾಡುವಾಗ, ಕಾರ್ ಚಲಾಯಿಸುವಾಗ ಉಪಯೋಗಿಸುವುದನ್ನು ಕಡಿಮೆ ಮಾಡಬೇಕು ಮತ್ತು ನಕಲಿ ಕಾರ್ ಚಾರ್ಜರ್ ಗಳನ್ನು ಉಪಯೋಗಿಸಬಾರದು, ಸೂರ್ಯನ ಬೆಳಕಿಂದ ದೂರವಿಡಬೇಕು ಅಥವಾ ಉಷ್ಣತೆಯಿಂದ, ತುಂಬಾ ಹೊತ್ತು ಚಾರ್ಜ್ ಇಡುವುದನ್ನು ತಪ್ಪಿಸಿ, ಅಸಲಿ ಚಾರ್ಜರ್ ಗಳನ್ನು ಮಾತ್ರ ಉಪಯೋಗಿಸಿ ಇತ್ಯಾದಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Most Read Articles
Best Mobiles in India

English summary
Smartphones have evolved significantly over years but not the batteries that powers them. Find out why the world needs the next breakthrough in battery technology.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more