ವೊಡಾಫೋನ್ 4G, ಜಿಯೋ 4G ಗಿಂತ ವೇಗ: 'ವೊಡಾಫೋನ್ 4G'ಗೆ ಅಪ್‌ಗ್ರೇಡ್ ಹೇಗೆ?

By Suneel
|

ರಿಲಾಯನ್ಸ್ ಜಿಯೋದ ಇಂಟರ್ನೆಟ್ ವೇಗವನ್ನು ಪ್ರಿವೀವ್ ಆಫರ್‌ನಲ್ಲೇ ಹೆಚ್ಚು ಜನರು ಇಷ್ಟ ಪಟ್ಟರು. ಆದರೆ ಸೆಪ್ಟೆಂಬರ್ 5 ರ ವೆಲ್ಕಮ್‌ ಆಫರ್‌ ಲಾಂಚ್ ವೇಳೆಗಾಗಲೇ ಜಿಯೋ ಸಿಮ್‌ಗೆ ಬೇಡಿಕೆ ಹೆಚ್ಚಾಗಿ, ಹೆಚ್ಚಿನ Mbps ವೇಗವಿದ್ದ ಜಿಯೋ Kbps ಗೆ ಇಳಿಯಿತು.

ಇಂದು ಯಾವ ವೆಬ್‌ತಾಣಗಳಲ್ಲಿ ನೋಡಿದರೂ ರಿಲಾಯನ್ಸ್ ಜಿಯೋ ವೇಗ ಅತೀ ಕಡಿಮೆ ಮತ್ತು 4G ವೇಗ ಇಲ್ಲ ಎಂಬ ಮಾಹಿತಿ ಹರಿದಾಡುತ್ತಿದೆ. ವೆಲ್ಕಮ್ ಆಫರ್ ಲಾಂಚ್‌ ಆದ ನಂತರ ರಿಲಾಯನ್ಸ್ ಜಿಯೋ ನೆಟ್‌ವರ್ಕ್‌ ವೇಗ ಶೇ.23 ಕುಸಿದಿದೆ ಎಂದು ವರದಿಯಾಗಿದೆ. ಅಲ್ಲದೇ ವೆಲ್ಕಮ್‌ ಆಫರ್‌ ಡಿಸೆಂಬರ್ 31 ರ ಬದಲು ಡಿಸೆಂಬರ್ 3 ಕ್ಕೆ ಅಂತ್ಯಗೊಳಿಸುವ ಬಗ್ಗೆ ಹೇಳಿದೆ.

ವೊಡಾಫೋನ್ ಆಫರ್: 1GB 3G/4G ಡಾಟಾ ಕೇವಲ ರೂ.55

ಇತ್ತ ರಿಲಾಯನ್ಸ್ ಜಿಯೋಗೆ ಪೈಪೋಟಿಯಾಗಿ ಇತರೆ ಟೆಲಿಕಾಂಗಳು ಒಂದರ ಮೇಲೊಂದು ಉತ್ತಮ ಆಫರ್‌ಗಳನ್ನು ನೀಡುತ್ತಿವೆ. ಆದರೆ ವೊಡಾಫೋನ್ ಇಂಡಿಯಾ ಮಾತ್ರ ತನ್ನ ಗ್ರಾಹಕರನ್ನು 4G ಸರ್ವೀಸ್‌ಗೆ ಅಪ್‌ಗ್ರೇಡ್‌ ಮಾಡುತ್ತಿದೆ. ಇಂದಿನ ಲೇಖನದಲ್ಲಿ ಜಿಯೋ ಮತ್ತು ವೊಡಾಫೋನ್‌ನ ಸ್ಪೀಡ್‌ ಟೆಸ್ಟ್ ಬಗ್ಗೆ ತಿಳಿಸುತ್ತಿದ್ದು, 4G ನೆಟ್‌ವರ್ಕ್‌ಗೆ ಅಪ್‌ಗ್ರೇಡ್‌ ಆಗುವುದು ಹೇಗೆ ಎಂದು ತಿಳಿಸುತ್ತಿದ್ದೇವೆ. ಮಾಹಿತಿಗಾಗಿ ಲೇಖನದ ಸ್ಲೈಡರ್‌ ಓದಿರಿ.(Vodafone)

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೊಡಾಫೋನ್ 4G ಹೆಚ್ಚು ವೇಗ

ವೊಡಾಫೋನ್ 4G ಹೆಚ್ಚು ವೇಗ

ವೊಡಾಫೋನ್ 4G ವೇಗವೇ ಎಂದು ತಿಳಿಯಲು ಗಿಜ್‌ಬಾಟ್ ಒಂದು ಸ್ಪೀಡ್‌ ಟೆಸ್ಟ್ ನಡೆಸಿತು. ಅದರಲ್ಲಿ ತಿಳಿದುಬಂದಿದ್ದು ವೊಡಾಫೋನ್ 4G ವೇಗ, ರಿಲಾಯನ್ಸ್ ಜಿಯೋ 4G ವೇಗಕ್ಕಿಂತ ಹೆಚ್ಚಾಗಿದೆ. ಗಿಜ್‌ಬಾಟ್‌ ನೀಡಿರುವ ಮೇಲಿನ ಫೋಟೋ ನೋಡಿ ವೊಡಾಫೋನ್ 4G ಸೂಪರ್‌ನೆಟ್ ಸರ್ವೀಸ್‌ ಬಗ್ಗೆ ತಿಳಿಯಬಹುದು.

 ವೊಡಾಫೋನ್‌4G ಅಪ್‌ಗ್ರೇಡ್

ವೊಡಾಫೋನ್‌4G ಅಪ್‌ಗ್ರೇಡ್

ವೊಡಾಫೋನ್ 4G ಸೇವೆ ಭಾರತದಾದ್ಯಂತ ಲಭ್ಯವಿಲ್ಲ. ನಿಮ್ಮ ಪ್ರದೇಶ ವೊಡಾಫೋನ್‌4G ವೃತ್ತವಾಗಿದ್ದಲ್ಲಿ ಸುಲಭವಾಗಿ ಅಪ್‌ಗ್ರೇಡ್ ಮಾಡಬಹುದು. ಹಳೆಯ ಸಿಮ್‌ ಬದಲಿಗೆ ವೊಡಾಫೋನ್‌4G ಸಿಮ್‌ ಆಕ್ಟಿವೇಟ್ ಮಾಡಿ, ಸರಳ ಪ್ರಕ್ರಿಯೆ ಮುಖಾಂತರ 20 ನಿಮಿಷಗಳಲ್ಲಿ ವೊಡಾಫೋನ್‌4G ಅಪ್‌ಗ್ರೇಡ್ ಮಾಡಿಕೊಳ್ಳಿ.

 ಹೊಸ ವೊಡಾಫೋನ್‌4G ಸಿಮ್‌ ಕಾರ್ಡ್ ಪಡೆಯಿರಿ

ಹೊಸ ವೊಡಾಫೋನ್‌4G ಸಿಮ್‌ ಕಾರ್ಡ್ ಪಡೆಯಿರಿ

4G ಸರ್ವೀಸ್ ಎಂಜಾಯ್‌ ಮಾಡಲು ಮೊದಲಿಗೆ ನೀವು 4G ಸ್ಮಾರ್ಟ್‌ಫೋನ್‌ ಹೊಂದಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಹತ್ತಿರದ ವೊಡಾಫೋನ್ ಸ್ಟೋರ್‌ಗೆ ಭೇಟಿ ನೀಡಿ ಮತ್ತು ಹಿಂದಿನ ಸಿಮ್ ಬದಲು ಸರ್ವೀಸ್‌ ಪ್ರೊಬೈಡರ್‌ ಬಳಿ 4G ಸಿಮ್‌ ಅಪ್‌ಗ್ರೇಡ್ ಪಡೆಯಿರಿ.

ಎಸ್‌ಎಂಎಸ್ ಸೆಂಡ್ ಮಾಡಿ

ಎಸ್‌ಎಂಎಸ್ ಸೆಂಡ್ ಮಾಡಿ

4G ಸಿಮ್‌ ಪಡೆದ ನಂತರ ಫೋನ್‌ನಲ್ಲಿ ಇನ್‌ಸರ್ಟ್ ಮಾಡಿ, SIMEX ಎಂದು ಟೈಪ್ ಮಾಡಿ ನಂತರ ಸ್ಪೇಸ್‌ ನೀಡಿ 19 ಡಿಜಿಟ್‌ನ ಸಿಮ್‌ ಕಾರ್ಡ್‌ ನಂಬರ್‌ ಎಂಟರ್ ಮಾಡಿ 55199 ಗೆ ಮೆಸೇಜ್‌ ಸೆಂಡ್ ಮಾಡಿ. ನಂತರ ಕೊನೆಯ 6 ಡಿಜಿಟ್ ಸಿಮ್‌ ಕಾರ್ಡ್‌ ನಂಬರ್‌ ಅನ್ನು ಮೊತ್ತೊಮ್ಮೆ ತಿಳಿಸುವ ಬಗ್ಗೆ ಮೆಸೇಜ್ ಪಡೆಯುತ್ತೀರಿ. ಅದೇ ನಂಬರ್‌ಗೆ ಸಿಮ್ ಕಾರ್ಡ್‌ನ ಕೊನೆಯ 6 ಡಿಜಿಟ್ ನಂಬರ್‌ಗಳನ್ನು ಸೆಂಡ್ ಮಾಡಿ.

ವೊಡಾಫೋನ್‌4G ಸರ್ವೀಸ್‌ ಆಕ್ಟಿವೇಟ್ ಆಗುತ್ತದೆ

ವೊಡಾಫೋನ್‌4G ಸರ್ವೀಸ್‌ ಆಕ್ಟಿವೇಟ್ ಆಗುತ್ತದೆ

ಮೇಲೆ ತಿಳಿಸಿದ ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ಫಾಲೋ ಮಾಡಿದ ನಂತರ ನಿಮ್ಮ ವೊಡಾಫೋನ್‌4G ಆಕ್ಟಿವೇಟ್‌ ಆಗುತ್ತದೆ. ನೀವು ಇನ್‌ಸ್ಟಾಲ್ ಮಾಡುವ ಸೆಟ್ಟಿಂಗ್ಸ್ ಸರ್ವೀಸ್ ಪ್ರೊವೈಡರ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ಗೆ ಕಳುಹಿಸಿದ ಸೆಟ್ಟಿಂಗ್ಸ್ ಆಗಿರಬೇಕು.

Best Mobiles in India

English summary
Vodafone 4G is Faster Than Reliance Jio 4G: How to Upgrade to Vodafone 4G. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X