Subscribe to Gizbot

2 ತಿಂಗಳು ಸ್ಟಾಂಡ್ ಬೈ ಇರುವ 2 ಸಾವಿರದ ಫೋನ್

Posted By: Varun
2 ತಿಂಗಳು ಸ್ಟಾಂಡ್ ಬೈ ಇರುವ 2 ಸಾವಿರದ ಫೋನ್

ದೊಡ್ಡ ಫೀಚರುಗಳು, ಕಡಿಮೆ ಬೆಲೆ, 2 ತಿಂಗಳ ಸ್ಟಾಂಡ್ ಬೈ ಬ್ಯಾಟರಿ ಹಾಗು ದ್ವಿಸಿಮ್ ಇರುವ ಫೋನ್ ಒಂದನ್ನು ಬಿಟ್ಟಿದೆ ಭಾರತ ಮೂಲದ Xage ಕಮ್ಯೂನಿಕೇಷನ್.

M900 ಫೋರ್ಸ್ ಹೆಸರಿನ ಈ ಮೊಬೈಲ್ ಉತ್ತಮ ಮಲ್ಟಿ ಮೀಡಿಯಾ ಫೀಚರುಗಳನ್ನು ಹೊಂದಿದ್ದು ಮೈಕ್ರೋ SD ಕಾರ್ಡ್ ಮೂಲಕ 16 GB ವರೆಗೂ ವಿಸ್ತರಿಸಬಹುದಾದ ಮೆಮೊರಿ ಹೊಂದಿದ್ದು, ಸಾಕಷ್ಟು ಹಾಡುಗಳು, ವೀಡಿಯೋಗಳು, ಹಾಗು ಫೋಟೋಗಳನ್ನು ಸೇವ್ ಮಾಡಬಹುದಾಗಿದೆ.

ಎರಡು ತಿಂಗಳು ಸ್ಟಾಂಡ್ ಬೈ ಇರುವ 3100 mAh ಬ್ಯಾಟರಿ ಹೊಂದಿರುವ ಈ ಫೋನಿನ ಪ್ರಮುಖ ಫೀಚರುಗಳು ಈ ರೀತಿ ಇವೆ:

  • 2.8 ಇಂಚ್ ನ ಕಲರ್ ಡಿಸ್ಪ್ಲೇ

  • 1.3 ಮೆಗಾಪಿಕ್ಸೆಲ್ ಕ್ಯಾಮೆರಾ

  • ಆಲ್ಫಾ ನ್ಯೂಮರಿಕ್ ಕೀಬೋರ್ಡ್

  • ದ್ವಿಸಿಮ್ ಸಂಪರ್ಕ

  • ಇಂಟರ್ನೆಟ್ ಸಂಪರ್ಕ ಮಾಡಲು GPRS

  • ಇಂಟಿಗ್ರೇಟೆಡ್ ಆಡಿಯೊ-ವಿಡಿಯೋ ಪ್ಲೇಯರ್

  • ಮೈಕ್ರೋ SD ಕಾರ್ಡ್ ಮೂಲಕ16 GB ವರೆಗೆ ವಿಸ್ತರಿಸಬಹುದಾದ ಮೆಮೊರಿ

  • ಉತ್ತಮ ಬ್ಯಾಟರಿ ಖಾತ್ರಿಗೊಳಿಸುತ್ತದೆ ಇದು 3100mAh ಬ್ಯಾಟರಿ
 

M900 ಫೋರ್ಸ್ ಮೊಬೈಲ್ ರೀಟೇಲ್ ಮಳಿಗೆಗಳಲ್ಲಿ ಲಭ್ಯವಿದ್ದು, 2,599 ರೂಪಾಯಿಗೆ ಬರಲಿದೆ, 2 ವರ್ಷ ವಾರಂಟಿಯ ಜೊತೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot