ಶಿಯೋಮಿ ಎಂ.ಐ 5 vs ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್7: ಬೆಲೆ ಕಡಿತಗೊಳಿಸಿದ ಪ್ರೀಮಿಯಂ ಸ್ಮಾರ್ಟ್ ಫೋನುಗಳು.

|

ಸೋಮವಾರದಂದು, ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್7 ಮತ್ತು ಗ್ಯಾಲಕ್ಸಿ ಎಸ್7 ಎಡ್ಜ್ ಫೋನುಗಳು ಭಾರತದಲ್ಲಿ ಮೊದಲ ಬಾರಿಗೆ ಬೆಲೆ ಕಡಿತಗೊಳಿಸಿದವು. 5,000 ರುಪಾಯಿಯಷ್ಟು ಬೆಲೆ ಕಡಿತಗೊಂಡಿತು. ಈಗ ಗ್ಯಾಲಕ್ಸಿ ಎಸ್7 ಅನ್ನು 43,400 ರುಪಾಯಿಗೆ ಮತ್ತು ಎಡ್ಜ್ ಆವೃತ್ತಿಯನ್ನು 50,900 ರುಪಾಯಿಗೆ ಖರೀದಿಸಬಹುದು.

ಶಿಯೋಮಿ ಎಂ.ಐ 5 vs ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್7: ಬೆಲೆ ಕಡಿತಗೊಳಿಸಿದ ಪ್ರೀಮಿಯಂ

ಸ್ಯಾಮ್ಸಂಗ್ ನ ಈ ಆಕರ್ಷಣೀಯ ಬೆಲೆ ಕಡಿತದ ಬೆನ್ನಲ್ಲೇ ಶಿಯೋಮಿ ಕಂಪನಿಯು ತನ್ನ ದುಬಾರಿ ಫೋನಾದ ಎಂ.ಐ 5 ಯ ಬೆಲೆಯನ್ನು 2,000ದಷ್ಟು ಕಡಿಮೆ ಮಾಡಿದೆ. ಈಗ ಎಂ.ಐ5 22,999 ರುಪಾಯಿಗಳಿಗೆ ಲಭ್ಯ. ಇದು ಶಾಶ್ವತ ಬೆಲೆ ಕಡಿತ.

ಓದಿರಿ: ನಿಮಗೆ ಗೊತ್ತೆ ! ಈ ಹತ್ತು ಅಸಾಮಾನ್ಯ ಗಾಡ್ಜೆಟ್‍ಗಳು ವಾಸ್ತವದಲ್ಲಿ ಇವೆ

ಗಿಜ್ಬಾಟ್ ನಲ್ಲಿ ನಾವು ಶಿಯೋಮಿ ಎಂ.ಐ5 ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್7ನ್ನು ಹೋಲಿಕೆ ಮಾಡಿದ್ದೇವೆ, ಬೆಲೆ ಕಡಿಮೆಯಾದ ಈ ಎರಡೂ ಫೋನುಗಳು ಹೇಗೆ ವಿಭಿನ್ನ ಎಂದು ತೋರಿಸಿದ್ದೇವೆ. ಎರಡರ ಹೋಲಿಕೆಯನ್ನು ನೋಡಿ, ಯಾವ ಫೋನು ಖರೀದಿಸಬೇಕೆಂದು ನಿರ್ಧರಿಸಿ.

ಓದಿರಿ: ಭಾರತದಲ್ಲಿ ಲಭ್ಯವಿರುವ ಟಾಪ್ 10 ಪ್ರೀಮಿಯಂ ಡುಯಲ್ ಸಿಮ್ ಸ್ಮಾರ್ಟ್ ಫೋನುಗಳು.

ವಿನ್ಯಾಸ ಮತ್ತು ರಚನೆ.

ವಿನ್ಯಾಸ ಮತ್ತು ರಚನೆ.

ಶಿಯೋಮಿ ಎಂ.ಐ 5 ಫೋನು ದುಬಾರಿ ಫೋನಿನಂತೆ ಕಾಣುತ್ತದೆ, ಮತ್ತು ಈ ಹೊಸ ವಿನ್ಯಾಸದ ಫೋನು ಕಪ್ಪು, ಗೋಲ್ಡ್ ಮತ್ತು ಸಿಲ್ವರ್ ಬಣ್ಣಗಳಲ್ಲಿ ಲಭ್ಯವಿದೆ. ಗ್ಯಾಲಕ್ಸಿ ಎಸ್7 ನಿಜಕ್ಕೂ ಪ್ರೀಮಿಯಂ ಫೋನ್. ಗಾಜು ಮತ್ತು ಮೆಟಲ್ ದೇಹದ ವಿನ್ಯಾಸವಿದೆ. ಮೊದಲು ಈ ವಿನ್ಯಾಸವನ್ನು 2015ರಲ್ಲಿ ಗ್ಯಾಲಕ್ಸಿ ಎಸ್ 6 ಫೋನಿನಲ್ಲಿ ಪರಿಚಯಿಸಲಾಗಿತ್ತು. ಬಾಗಿದ ಮೂಲೆಗಳಿಂದಾಗಿ ಇದನ್ನು ಹಿಡಿದುಕೊಳ್ಳುವುದು ಸುಲಭ. ಗಾಜು ಮತ್ತು ಮೆಟಲ್ ವಿನ್ಯಾಸ ಇದನ್ನು ಗಟ್ಟಿಯಾಗಿಸಿದೆ, ಉನ್ನತ ಮಟ್ಟದ ಫೋನನ್ನಾಗಿ ಮಾಡಿದೆ.

ಜೊತೆಗೆ, ಗ್ಯಾಲಕ್ಸಿ ಎಸ್ 7 ಫೋನಿನಲ್ಲಿ ಜಲ ಮತ್ತು ದೂಳೂ ನಿರೋಧಕವಿದೆ. ಶಿಯೋಮಿ ಫೋನಿನಲ್ಲಿ ಇದಿಲ್ಲ. ಎರಡರಲ್ಲೂ ಶೀಘ್ರವಾಗಿ ಮತ್ತು ಕರಾರುವಕ್ಕಾಗಿ ಕಾರ್ಯನಿರ್ವಹಿಸುವ ಬೆರಳಚ್ಚು ಸಂವೇದಕವಿದೆ.

ಪರದೆ.

ಪರದೆ.

ಪರದೆಯ ವಿಚಾರದಲ್ಲಿ, ಎಂಐ 5 ಫೋನಿನಲ್ಲಿ 5.15 ಇಂಚಿನ ಫುಲ್ ಹೆಚ್.ಡಿ 1080ಪಿ ಐಪಿಎಸ್ ಎಲ್.ಸಿ.ಡಿ ಪರದೆಯಿದೆ. ಮತ್ತೊಂದೆಡೆ ಗ್ಯಾಲಕ್ಸಿ ಎಸ್7 ಫೋನಿನಲ್ಲಿ 5.1 ಇಂಚಿನ ಕ್ವಾಡ್ ಹೆಚ್.ಡಿ 1440ಪಿ ಸೂಪರ್ ಅಮೊಲೆಡ್ ಪರದೆಯಿದೆ, ಗ್ಯಾಲಕ್ಸಿಯ ಪರದೆ ಉತ್ತಮವಾಗಿದೆ. ಜೊತೆಗೆ, ಗ್ಯಾಲಕ್ಸಿ ಎಸ್7 ಫೋನಿನಲ್ಲಿ 'ಆಲ್ವೇಸ್ ಆನ್' ವಿಶಿಷ್ಟತೆಯಿದೆ. ತುಂಬಾ ಬ್ಯಾಟರಿಯನ್ನು ಉಪಯೋಗಿಸದೆ ನೋಟಿಫಿಕೇಷನ್ಸ್ ನೋಡಲು ಇದು ಉಪಯುಕ್ತ.

ಪ್ರೊಸೆಸರ್ ಶಕ್ತಿ.

ಪ್ರೊಸೆಸರ್ ಶಕ್ತಿ.

ಎರಡೂ ಸ್ಮಾರ್ಟ್ ಫೋನುಗಳಲ್ಲಿ ಶಕ್ತಿಯುತ ಕ್ವಾಡ್ ಕೋರ್ ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 820 ಪ್ರೊಸೆಸರ್ ಅಡ್ರಿನೊ 530 ಗ್ರಾಫಿಕ್ಸ್ ಇದೆ. ಯಾವುದೇ ಅಡೆತಡೆಯಿಲ್ಲದೆ ಎರಡೂ ಫೋನುಗಳು ಸರಾಗವಾಗಿ ಕಾರ್ಯನಿರ್ವಹಿಸಬಲ್ಲವು. ಮಲ್ಟಿಟಾಸ್ಕಿಂಗ್ ಕೂಡ ಸಲೀಸು.

ರ್ಯಾಮ್ ಮತ್ತು ಸಂಗ್ರಹ ಸಾಮರ್ಥ್ಯ.

ರ್ಯಾಮ್ ಮತ್ತು ಸಂಗ್ರಹ ಸಾಮರ್ಥ್ಯ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್7 ಫೋನಿನಲ್ಲಿ 32/64ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯವಿದೆ, ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸುವ ಮೂಲಕ ಇದನ್ನು 200 ಜಿಬಿವರೆಗೆ ವಿಸ್ತರಿಸಬಹುದು. 4ಜಿಬಿ ರ್ಯಾಮ್ ಇದೆ.

ಇದಕ್ಕೆ ಹೋಲಿಸಿದರೆ ಎಂಐ 5 ಫೋನಿನಲ್ಲಿ 3ಜಿಬಿಯಷ್ಟು ರ್ಯಾಮ್ ಇದೆ ಮತ್ತು 32/64ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯವಿದೆ. ಉನ್ನತ ಆವೃತ್ತಿಯ ಫೋನಿನಲ್ಲಿ 4ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯವಿದೆ.

ಕ್ಯಾಮೆರಾ.

ಕ್ಯಾಮೆರಾ.

ಶಿಯೋಮಿ ಎಂ.ಐ 5 vs ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್7 ಫೋನುಗಳಲ್ಲಿನ ಕ್ಯಾಮೆರ ಉತ್ತಮ ಚಿತ್ರಗಳನ್ನು ತೆಗೆಯುತ್ತದೆ. ಶಿಯೋಮಿ ಫೋನಿನಲ್ಲಿ ಸೋನಿ ಐ.ಎಮ್.ಎಕ್ಸ್ 298 ಸೆನ್ಸಾರ್, 4 ಆ್ಯಕ್ಸಿಸ್ ಒ.ಐ.ಎಸ್ ಹೊಂದಿರುವ 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರಾ ಇದೆ. ಚಲಿಸುವ ಚಿತ್ರಗಳನ್ನೂ ಸ್ಪಷ್ಟವಾಗಿ ತೆಗೆಯಬಹುದು. ಎಫ್/2.0 ಅಪರ್ಚರ್, 80 ಡಿಗ್ರಿ ವೈಡ್ ಆ್ಯಂಗಲ್ ಲೆನ್ಸ್ ಹೊಂದಿರುವ 4 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರಾ ಇದೆ.

ಸ್ಯಾಮ್ಸಂಗ್ ನಲ್ಲಿ ಎಫ್/1.7 ಅಪರ್ಚರ್ ಹೊಂದಿರುವ 12 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರಾ ಇದೆ. ಇದರಲ್ಲಿ ಉತ್ತಮ ಚಿತ್ರಕ್ಕಾಗಿ ಒ.ಐ.ಎಸ್ ಮತ್ತು ವೇಗದ ಪಿ.ಡಿ.ಎ.ಎಫ್ ಸೌಕರ್ಯವಿದೆ. ಎಫ್/1.7 ಅಪರ್ಚರ್ ಹೊಂದಿರು 5 ಮೆಗಾಪಿಕ್ಸೆಲ್ಲಿನ ಸೆಲ್ಫಿ ಕ್ಯಾಮೆರ ಮುಂಬದಿಯಲ್ಲಿದೆ.

ಸಾಫ್ಟ್ ವೇರ್.

ಸಾಫ್ಟ್ ವೇರ್.

ಶಿಯೋಮಿ ಎಂಐ 5 ಫೋನಿನಲ್ಲಿ ಎಂ.ಐ.ಯು.ಐ 7 ಇಂಟರ್ ಫೇಸ್ ಇದೆ, ಮತ್ತಿದು ಸದ್ಯದಲ್ಲೇ ಎಂ.ಐ.ಯು.ಐ 8ಕ್ಕೆ ಅಪ್ ಡೇಟ್ ಆಗಲಿದೆ. ಈ ಅಪ್ ಡೇಟ್ ಮೂಲಕ ಇನ್ನೂ ಹೆಚ್ಚು ಹೆಚ್ಚು ಗುಣ ವೈಶಿಷ್ಟ್ಯಗಳು ಫೋನಿಗೆ ಸೇರಲಿವೆ.

ಗ್ಯಾಲಕ್ಸಿ ಎಸ್7 ಫೋನಿನಲ್ಲಿ ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೋ ಮತ್ತು ಟಚ್ ವಿಜ್ ಯು.ಐ ಇದೆ.

ಬ್ಯಾಟರಿ.

ಬ್ಯಾಟರಿ.

ಶಿಯೋಮಿ ಎಂಐ 5 ಫೋನಿನಲ್ಲಿ 3,000 ಎಂ.ಎ.ಹೆಚ್ ಸಾಮರ್ಥ್ಯದ ಬ್ಯಾಟರಿ ಇದೆ, ಕ್ವಿಕ್ ಚಾರ್ಜ್ 3.0 ಸೌಲಭ್ಯದೊಂದಿಗೆ. ಕ್ವಿಕ್ ಚಾರ್ಜ್ 2.0ಗೆ ಹೋಲಿಸಿದರೆ ಕ್ವಿಕ್ ಚಾರ್ಜ್ 3.0 ಮೂಲಕ ಫೋನನ್ನು 20 ಪರ್ಸೆಂಟ್ ವೇಗವಾಗಿ ಚಾರ್ಜ್ ಮಾಡಬಹುದು.

ಸ್ಯಾಮ್ಸಂಗ್ ಫೋನಿನಲ್ಲೂ 3,000 ಎಂ.ಎ.ಹೆಚ್ ಸಾಮರ್ಥ್ಯದ ಬ್ಯಾಟರಿ ಇದೆ. ಫಾಸ್ಟ್ ಚಾರ್ಜಿಂಗ್ ಮತ್ತು ವೈರ್ ಲೆಸ್ ಚಾರ್ಜಿಂಗ್ ಸೌಲಭ್ಯವಿದೆ.

Best Mobiles in India

English summary
Xiaomi has announced a price cut on the Mi 5 flagship smartphone to Rs 22,999. Also, Samsung slashed the price of the Galaxy S7 to Rs 43,400. Take a look at the comparison between these smartphones to know which one you can purchase. Read more...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X