'ಶ್ಯೋಮಿ ಮಿ 6' ವರ್ಧಿತ ಫೋಟೋಗಳು ಆನ್‌ಲೈನ್‌ನಲ್ಲಿ ಲೀಕ್: ಇಷ್ಟೆಲ್ಲಾ ಫೀಚರ್ ಇದೇ ಮೊದಲು..!

By Suneel
|

ಶ್ಯೋಮಿ ಒಂದರ ಹಿಂದೆ ಒಂದರಂತೆ ನಿರಂತರವಾಗಿ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ತರುವುದರಲ್ಲಿ ಸಕತ್‌ ಬ್ಯುಸಿ ಆಗಿದೆ. ಇತ್ತೀಚೆಗೆ ಶ್ಯೋಮಿ 'ಮಿ 5' ವರ್ಧಿತ ಅವೃತ್ತಿ ಡಿವೈಸ್ 'ಶ್ಯೋಮಿ ಮಿ 5ಎಸ್ (Xiaomi Mi 5s)' ಮತ್ತು ಜೊತೆಗೆ 'ಶ್ಯೋಮಿ ಮಿ 5ಎಸ್ ಪ್ಲಸ್ (Xiaomi Mi 5s Plus)' ಲಾಂಚ್ ಮಾಡಿತ್ತು. ನಂತರದಲ್ಲಿ ಶ್ಯೋಮಿ ಮಿ ನೋಟ್ 2 ಮತ್ತು ಮಿ ಮಿಕ್ಸ್ ಪರಿಕಲ್ಪನೆಯ ಸ್ಮಾರ್ಟ್‌ಫೋನ್‌ಗಳನ್ನು ಕಡಿಮೆ ಅಂಚಿನ ಡಿಸ್‌ಪ್ಲೇ ಫೀಚರ್‌ನೊಂದಿಗೆ ಮಾರುಕಟ್ಟೆಗೆ ಪರಿಚಯಿಸಿತ್ತು.

'ಶ್ಯೋಮಿ ಮಿ 6' ವರ್ಧಿತ ಫೋಟೋಗಳು ಆನ್‌ಲೈನ್‌ನಲ್ಲಿ ಲೀಕ್: ಇಷ್ಟೆಲ್ಲಾ ಫೀಚರ್...

ಮೇಲೆ ತಿಳಿಸಿದ ಡಿವೈಸ್‌ಗಳ ನಂತರ ಶ್ಯೋಮಿ ತನ್ನ ಫ್ಲಾಗ್‌ಶಿಪ್‌ನ ಹೊಸ ಸ್ಮಾರ್ಟ್‌ಫೋನ್ 'ಶ್ಯೋಮಿ ಮಿ 6' ಮೇಲೆ ಕಾರ್ಯ ಆರಂಭಿಸಿತ್ತು. ಆದರೆ ಈಗ ಅದೇ ಸ್ಮಾರ್ಟ್‌ಫೋನ್‌ನ ಪ್ರೋಟೋಟೈಪ್ ಇಮೇಜ್‌ಗಳು ಆನ್‌ಲೈನ್‌ನಲ್ಲಿ ಬಹಿರಂಗಗೊಂಡಿವೆ. ಕಂಪನಿ ಈ ಡಿವೈಸ್‌ ಅನ್ನು ಮುಂದಿನ ವರ್ಷ ಮೊಬೈಲ್‌ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಹೊಂದಿತ್ತು.

ಚೀನಾದ ಚಿನ್ನದ ಮೊಟ್ಟೆ ಶ್ಯೋಮಿಯಿಂದ ಅದ್ಭುತ ಡಿವೈಸ್

'ಶ್ಯೋಮಿ ಮಿ 6 (‍Xiaomi Mi 6)' ಪ್ರೋಟೋಟೈಪ್‌ ಇಮೇಜ್‌ಗಳು ಆನ್‌ಲೈನ್‌ನಲ್ಲಿ ಬಹಿರಂಗವಾಗಿದ್ದು, ಶ್ಯೋಮಿ ಪ್ರಿಯರು ಈ ಡಿವೈಸ್‌ನಿಂದ ನಿರೀಕ್ಷಿಸಬಹುದಾದ ಫೀಚರ್‌ಗಳೇನು ಎಂಬುದನ್ನು ಹಲವು ವರದಿಗಳಿಂದ ತಿಳಿದಿದ್ದು, ಅವುಗಳು ಈ ಕೆಳಗಿನಂತಿವೆ.

ಗಾಜಿನ ಮತ್ತು ಸೆರಾಮಿಕ್ ನಿರ್ಮಾಣ ಅಥವಾ ಲೋಹದ ಡಿವೈಸ್ ಬಾಡಿ

ಗಾಜಿನ ಮತ್ತು ಸೆರಾಮಿಕ್ ನಿರ್ಮಾಣ ಅಥವಾ ಲೋಹದ ಡಿವೈಸ್ ಬಾಡಿ

'ಶ್ಯೋಮಿ ಮಿ 5' ಗಾಜಿನ ಮತ್ತು ಸೆರಾಮಿಕ್ ಬಾಡಿ ಸಹಿತ ಲಾಂಚ್‌ ಆಗಿತ್ತು. ಇದೇ ಡಿವೈಸ್‌ನ ವಿಭಿನ್ನತೆಯಲ್ಲಿ ಮಿ 5ಎಸ್ ಮೆಟಲ್ ಬಾಡಿ ಹೊಂದಿತ್ತು. ಆದರೆ ಆನ್‌ಲೈನ್‌ನಲ್ಲಿ ಲೀಕ್‌ ಆದ ಮಾಹಿತಿ ಪ್ರಕಾರ ಶ್ಯೋಮಿ ಮಿ 6 ಸಂಪೂರ್ಣ ಮೆಟಲ್‌ ಬಾಡಿ ಹೊಂದಲಿದೆ.

ಆಂಡ್ರಾಯ್ಡ್ 7.0 ನ್ಯೂಗಾ

ಆಂಡ್ರಾಯ್ಡ್ 7.0 ನ್ಯೂಗಾ

ಶ್ಯೋಮಿ ಈಗಾಗಲೇ ತನ್ನ ಪ್ರಸ್ತುತ ಫ್ಲಾಗ್‌ಶಿಪ್‌ ಡಿವೈಸ್‌ಗೆ ಆಂಡ್ರಾಯ್ಡ್ 7.0 ನ್ಯೂಗಾ ಆಪರೇಟಿಂಗ್ ಸಿಸ್ಟಮ್ ಪರೀಕ್ಷೆ ನಡೆಸುತ್ತಿದೆ. ಆದ್ದರಿಂದ ಖಚಿತವಾಗಿ ಶ್ಯೋಮಿ ಮಿ 6 ಆಂಡ್ರಾಯ್ಡ್ 7.0 ನ್ಯೂಗಾ ಓಎಸ್ ಚಾಲಿತವಾಗಿ ಬರಲಿದೆ. MIUI 9 ಲೇಯರ್ ಹೊಂದಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ಮೀಡಿಯಾಟೆಕ್ ಹೀಲಿಯೊ ಎಕ್ಸ್30 ಪ್ರೊಸೆಸರ್ ಅಥವಾ ಸ್ನಾಪ್‌ಡ್ರಾಗನ್ 835 ಚಿಪ್‌ಸೆಟ್?

ಮೀಡಿಯಾಟೆಕ್ ಹೀಲಿಯೊ ಎಕ್ಸ್30 ಪ್ರೊಸೆಸರ್ ಅಥವಾ ಸ್ನಾಪ್‌ಡ್ರಾಗನ್ 835 ಚಿಪ್‌ಸೆಟ್?

ಫೋನ್‌ರೆಡಾರ್‌ ವರದಿ ಮಾಡಿರುವಂತೆ ಮಿ6 ಡಿವೈಸ್ ಡೆಕಾ-ಕೋರ್ ಮೀಡಿಯಾಟೆಕ್‌ ಹೀಲಿಯೊ ಎಕ್ಸ್30 ಚಿಪ್‌ಸೆಟ್ ಸಂಯೋಜನೆ ಹೊಂದಲಿದೆ. ಆದರೆ ಭಾರತದಲ್ಲಿ, ಶ್ಯೋಮಿ ಅನಧಿಕೃತ ಮೀಡಿಯಾಟೆಕ್ ಚಿಪ್‌ಸೆಟ್'ನಿಂದ ಮಾರಾಟ ಮಾಡಲು ನಿರ್ಧರಿಸಿದೆ. ಸ್ನಾಪ್‌ಡ್ರಾಗನ್ 835 ಚಿಪ್‌ಸೆಟ್‌ ಪವರ್ ಹೊಂದಲಿದೆ.

'ಮಿ 6' ಡಿವೈಸ್ 4GB RAM ಮತ್ತು 6GB RAM ವಿಭಿನ್ನತೆಯಲ್ಲಿ ಬರುವ ನಿರೀಕ್ಷೆ ಇದೆ.

ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ?

ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ?

ಶ್ಯೋಮಿ ಈ ಮೊದಲೇ ತನ್ನ 'ಶ್ಯೋಮಿ ಮಿ 5ಎಸ್ ಪ್ಲಸ್' ಡ್ಯುಯಲ್‌ ಕ್ಯಾಮೆರಾ ಸೆಟಪ್ ಹೊಂದಿದೆ. ಅಂತೆಯೇ ಮಿ 6 ಡಿವೈಸ್ ಸಹ ಡ್ಯುಯಲ್ ಕ್ಯಾಮೆರಾ ಫೀಚರ್ ಹೊಂದಲಿದೆ. ಆದ್ರೆ ಇತರೆ ಯಾವುದೇ ವರದಿಗಳು ಈ ಮಾಹಿತಿ ನೀಡಿಲ್ಲ. ಭಾಗಶಃ ನಿರೀಕ್ಷಿಸಬಹುದು.

ಗೂಗಲ್‌ ಡೇಡ್ರೀಮ್ ವಿಆರ್ ಟೆಕ್ನಾಲಜಿ ಸಪೋರ್ಟ್

ಗೂಗಲ್‌ ಡೇಡ್ರೀಮ್ ವಿಆರ್ ಟೆಕ್ನಾಲಜಿ ಸಪೋರ್ಟ್

ಶ್ಯೋಮಿ ಮಿ 6 ಮೊದಲೇ ಹೇಳಿದಂತೆ ಔಟ್‌ ಆಫ್‌ ದಿ ಬಾಕ್ಸ್ ಆಂಡ್ರಾಯ್ಡ್ 7.0 ನ್ಯೂಗಾ ಓಎಸ್ ಹೊಂದಲಿದೆ. ಆದ್ದರಿಂದ ಇದು ಗೂಗಲ್‌ನ ಡೇಡ್ರೀಮ್ ವಿಆರ್ ಟೆಕ್ನಾಲಜಿ ಸಪೋರ್ಟ್‌ ಮಾಡಲಿದೆ. ಡಿಸ್‌ಪ್ಲೇ ರೆಸಲ್ಯೂಶನ್'ನಲ್ಲಿ ಸಂಪೂರ್ಣ ಎಚ್‌ಡಿ ಇಂದ ಕ್ಯೂಎಚ್‌ಡಿ ಫೀಚರ್ ಹೊಂದಲಿದೆ.
ಮಾಹಿತಿ:

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Xiaomi Mi 6 Prototype Images Leaked Online: 5 Things to Expect From the UPCOMING Smartphone. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X