Subscribe to Gizbot

ಓನ್‌ಪ್ಲಸ್ 5 - ಐಫೋನ್ 7 ಸಹ ಈ ಫೋನಿನ ಮುಂದೇ ಏನೇನು ಅಲ್ಲ..!

Written By:

ಶಿಯೋಮಿ ಕಂಪನಿಯೂ ಈಗಾಗಲೇ ಭಾರತೀಯ ಗ್ರಾಹಕರನ್ನು ಮೋಡಿ ಮಾಡಿರುವ ಸಂಗತಿ ಎಲ್ಲರಿಗೂ ತಿಳಿದಿದೆ. ಇಷ್ಟು ದಿನ ಬಜೆಟ್ ಫೋನ್‌ಗಳ ಮೇಲೆಯೇ ಹೆಚ್ಚಿನ ಗಮನ ಹರಿಸಿದ್ದ ಕಂಪನಿ ಇದೇ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಡ್ಯುಯಲ್ ಕ್ಯಾಮೆರಾ ಹೊಂದಿರುವ ನೂತನ ಟಾಪ್ ಎಂಡ್ ಮಾದರಿಯ ಫೋನ್ ಲಾಂಚ್ ಮಾಡಿದೆ.

ಓನ್‌ಪ್ಲಸ್ 5 - ಐಫೋನ್ 7 ಸಹ ಈ ಫೋನಿನ ಮುಂದೇ ಏನೇನು ಅಲ್ಲ..!

ಓದಿರಿ: ಜಿಯೋ-ಏರ್‌ಟೆಲ್-ವೊಡಾಗೆ ನೇರವಾಗಿ ಚಾಲೆಂಜ್ ಹಾಕಿದ ಐಡಿಯಾದಿಂದ ಸುಪರ್ ಆಫರ್

ಶಿಯೋಮಿ ಮೀ A1 ಸ್ಮಾರ್ಟ್‌ಫೋನ್ ಪ್ರೀಮಿಯಮ್ ವಿನ್ಯಾಸವನ್ನು ಹೊಂದಿದೆ ಮತ್ತು ಟಾಪ್ ಎಂಡ್ ಸ್ಮಾರ್ಟ್‌ಫೋನಿನಲ್ಲಿರುವ ಎಲ್ಲಾ ಆಯ್ಕೆಗಳು ಈ ಫೋನಿನಲ್ಲಿದೆ. ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್ ಆದರೂ ಸಹ ವಿಶೇಷತೆಗಳ ವಿಚಾರದಲ್ಲಿ ಐಫೋನ್ 7 ಮತ್ತು ಓನ್‌ಪ್ಲಸ್‌ 5ಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿನ್ಯಾಸ ಮತ್ತು ಡಿಸ್‌ಪ್ಲೇ:

ವಿನ್ಯಾಸ ಮತ್ತು ಡಿಸ್‌ಪ್ಲೇ:

ನೂತನ ಶಿಯೋಮಿ ಮೀ A1 ಸ್ಮಾರ್ಟ್‌ಫೋನ್ ಯುನಿಬಾಡಿ ಮೆಟಲ್ ವಿನ್ಯಾಸವನ್ನು ಹೊಂದಿದ್ದು, ರೌಂಡೆಡ್ ಎಡ್ಜ್ ಗಳನ್ನು ಕಾಣಬಹುದಾಗಿದೆ. ಇದರಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಅಳವಡಿಸಲಾಗಿದೆ. ಇದರಲ್ಲಿ 5,5 ಇಂಚಿನ FHD ಗುಣಮಟ್ಟದ ಡಿಸ್‌ಪ್ಲೇಯನ್ನು ನೀಡಲಾಗಿದೆ. ಇನ್‌ಫ್ರಾರೆಡ್ ಸೆಸ್ಸಾರ್ ಸಹ ಇದೆ.

ವೇಗದ ಕಾರ್ಯಚರಣೆಗೆ:

ವೇಗದ ಕಾರ್ಯಚರಣೆಗೆ:

ಇದಲ್ಲದೇ ಶಿಯೋಮಿ ಮೀ A1 ಸ್ಮಾರ್ಟ್‌ಫೋನ್ ನಲ್ಲಿ ವೇಗದ ಕಾರ್ಯಾಚರಣೆಗೆ 2GHz ವೇಗದ ಆಕ್ಟಾಕೋರ್ ಸ್ನಾಪ್‌ಡ್ರಾಗನ್ 625 ಪ್ರೋಸೆಸರ್ ಅನ್ನು ನೀಡಲಾಗಿದ್ದು, ಇದರೊಂದಿಗೆ 4GB RAM, 64 GB ಇಂಟರ್ನಲ್ ಮೆಮೊರಿಯೂ ಇದೆ. ಅಲ್ಲದೇ 128GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದು.

ಇದಲ್ಲದೇ ಸ್ಟಾಕ್ ಆಂಡ್ರಾಯ್ಡ್:

ಇದಲ್ಲದೇ ಸ್ಟಾಕ್ ಆಂಡ್ರಾಯ್ಡ್:

ಗೂಗಲ್ ನೊಂದಿಗೆ ಪಾಲುದಾರಿಕೆಯನ್ನು ಹೊಂದಿರುವ ಶಿಯೋಮಿ ಇದೇ ಮೊದಲ ಬಾರಿಗೆ ತನ್ನ ಬಳಕೆದಾರರಿಗೆ ಸ್ಟಾಕ್ ಆಂಡ್ರಾಯ್ಡ್ ಬಳಕೆಗೆ ನೀಡಿದೆ. ಈ ಹಿಂದಿನಂತೆ ಆಂಡ್ರಾಯ್ಡ್ ಮೇಲೆ ಬೇರೆ ಇನ್ಯಾವುದೇ ಯೂಸರ್ ಇಂಟರ್‌ಫೇಸ್ ಇರುವುದಿಲ್ಲ. ಅಲ್ಲದೇ ಓರಿಯೋ ಆಪ್‌ಡೇಟ್ ಸಹ ಈ ಫೋನಿಗೆ ದೊರೆಯಲಿದೆ.

ಕ್ಯಾಮೆರಾ:

ಕ್ಯಾಮೆರಾ:

ಈ ಶಿಯೋಮಿ ಮೀ A1 ಸ್ಮಾರ್ಟ್‌ಫೋನ್ ನಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಭಾರತದಲ್ಲಿ ಶಿಯೋಮಿ ಬಿಡುಗಡೆ ಮಾಡಿರುವ ಮೊದಲ ಡ್ಯುಯಲ್ ಕ್ಯಾಮೆರಾ ಫೋನ್ ಇದಾಗಿದೆ. 12MP ವೈಡ್ ಆಂಗಲ್ ಮತ್ತು 12MP ಟೆಲಿ ಲೈನ್ಸ್ ಅನ್ನು ಇದರಲ್ಲಿ ಕಾಣಬಹುದಾಗಿದೆ. ಅಲ್ಲದೇ LED ಫ್ಲಾಷ್ ಇದ್ದು, ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ನೀಡಲಾಗಿದೆ.

ರೆಡ್‌ಮಿ ನೋಟ್ 4 ನಲ್ಲಿರೋ ಈ ಫೀಚರ್ಸ್ ಯಾರೂ ಬಳಸುತ್ತಿಲ್ಲ.!!
ಬೆಲೆ:

ಬೆಲೆ:

ಒಟ್ಟು ಮೂರು ಬಣ್ಣದಲ್ಲಿ ಈ ಸ್ಮಾರ್ಟ್‌ಫೋನ್ ದೊರೆಯಲಿದ್ದು, ಬ್ಲಾಕ್, ಗೋಲ್ಡ್ ಮತ್ತು ರೋಸ್ ಗೋಲ್ಡ್ ಬಣ್ಣದಲ್ಲಿ ಲಭ್ಯವಿದೆ. ಇದರ ಬೆಲೆ ರೂ,14,999 ಆಗಿದೆ. ಸೆಪ್ಟೆಂಬರ್ 12 ರಿಂದ ಮಾರಾಟ ಆರಂಭವಾಗಲಿದ್ದು, ಮಿ.ಕಾಮ್ ಮತ್ತು ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿರಲಿದ್ದು, ಜೊತೆಗೆ ರಿಟೇಲ್ ಮೊಬೈಲ್ ಶಾಪ್‌ಗಳಲ್ಲಿಯೂ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Xiaomi, as scheduled, has announced the Mi A1 smartphone in India. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot