3GB RAM, 4100AMH ಬ್ಯಾಟರಿ ಹೊಂದಿರುವ "ರೆಡ್‌ಮಿ 3ಎಸ್ ಪ್ರೈಮ್" ಬೆಲೆ 8,999₹!!

Written By:

ಅತ್ಯಾಧುನಿಕ ಫೀಚರ್ ಮತ್ತು ಕಡಿಮೆ ಬೆಲೆಯ ಶ್ಯೋಮಿ ಕಂಪೆನಿ ಸ್ಮಾರ್ಟ್‌ಫೊನ್ಸ್ ಭಾರತದಲ್ಲಿ ಅತ್ಯದಿಕ ಮಾರಾಟವಾಗುತ್ತಿರುವ ಸ್ಮಾರ್ಟ್‌ಫೊನ್‌ಗಳಲ್ಲಿ ಒಂದು. ಗ್ರಾಹಕರ ಆಯ್ಕೆಯನ್ನು ತಿಳಿದಿರುವ ಶ್ಯೋಮಿ ಕಂಪೆನಿ ಉತ್ತಮ ಗುಣಮಟ್ಟದ ಸ್ಮಾರ್ಟ್‌ಫೊನ್ ಬಿಡುಗಡೆಮಾಡುತ್ತಿದೆ.

ಇದೀಗ ಶ್ಯೋಮಿಗೆ ಪೈಪೋಟಿ ನೀಡಲು ಹಲವು ಕಂಪೆನಿಗಳು ಹುಟ್ಟಿಕೊಂಡಿದ್ದು, ಗ್ರಾಹಕರನ್ನು ಹಿಡಿದಿಡಲು ಶ್ಯೋಮಿ ದರಸಮರಕ್ಕೆ ಮುಂದಾಗಿದೆ. ಹಾಗಾಗಿ ಅತಿ ಹೆಚ್ಚು ಫೀಚರ್ ಹೊಂದಿರುವ ರೆಡ್‌ಮಿ 3ಎಸ್ ಪ್ರೈಮ್ ಸ್ಮಾರ್ಟ್‌ಫೊನ್ ಅನ್ನು ಕಡಿಮೆ ಬೆಲೆಯಲ್ಲಿ ನೀಡುತ್ತಿದೆ.

ನೋಕಿಯಾ ಮತ್ತೆ ನಂ 1 ಮೊಬೈಲ್ ಆಗುತ್ತದೆಯೇ?... ಆಗುತ್ತದೆ ಎನ್ನಲು 4 ಕಾರಣಗಳಿವೆ?

3GB RAM ಮತ್ತು 4100AMH ಬ್ಯಾಟರಿ ಶಕ್ತಿ ಹೊಂದಿರುವ ರೆಡ್‌ಮಿ 3ಎಸ್ ಪ್ರೈಮ್ ಸ್ಮಾರ್ಟ್‌ಫೊನ್ ಬೆಲೆಯನ್ನು ಕೇವಲ 8,999 ರೂಗಳಿಗೆ ನಿಗದಿಮಾಡಲಾಗಿದ್ದು, ಇಂದು ಮಧ್ಯಾಹ್ನದಿಂದ ಅಂತರ್ಜಾಲ ಶಾಪಿಂಗ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಕ್ಕೆ ಇಡಲಾಗುತ್ತಿದೆ. ಹಾಗಾದರೆ ರೆಡ್‌ಮಿ 3ಎಸ್ ಪ್ರೈಮ್ ಇನ್ನು ಹೆಚ್ಚಿನ ಯಾವ ಯಾವ ಫೀಚರ್‌ಗಳನ್ನು ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್‌ಫೊನ್ ವಿನ್ಯಾಸ.

ಸ್ಮಾರ್ಟ್‌ಫೊನ್ ವಿನ್ಯಾಸ.

ಸ್ಮಾರ್ಟ್‌ಫೊನ್ ಹಿಡಿದರೆ ಅತ್ಯುತ್ತಮ ಎನ್ನುವ ಅನುಭವ ನಿಡುವ ವಿನ್ಯಾಸ ರೆಡ್‌ಮಿ 3ಎಸ್ ಪ್ರೈಮ್ ನಲ್ಲಿದೆ. 5 ಇಂಚ್ ಡಿಸ್‌ಪ್ಲೇ ಹೊಂದಿದ್ದು, ನೋಡಲು ಆಕರ್ಷಕವಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ರೆಡ್‌ಮಿ 3ಎಸ್ ಪ್ರೈಮ್ ಸ್ಮಾರ್ಟ್‌ಫೊನ್ 13 ಮತ್ತು 5 ಮೆಗಾಫಿಕ್ಸಲ್ ಕ್ಯಾಮೆರಾಗಳನ್ನು ಒಳಗೊಂಡಿದೆ. ತನ್ನ ಸರಣಿಯ ಸ್ಮಾರ್ಟ್‌ಫೊನ್‌ಗಳಲ್ಲಯೇ ಅತ್ಯುತ್ತಮ ಎನ್ನುವ ಚಿತ್ರಗಳನ್ನು ತೆಗೆಯುವ ಕ್ಯಾಮೆರಾ ಇದಾಗಿದೆ.

3GBRAM ಮತ್ತು 32GB ROM.!!

3GBRAM ಮತ್ತು 32GB ROM.!!

ರೆಡ್‌ಮಿ 3ಎಸ್ ಪ್ರೈಮ್ ಸ್ಮಾರ್ಟ್‌ಫೊನ್ 15 ರಿಂದ 20 ಸಾವಿರ ರೂ ನೀಡಿದರೂ ಸಿಗದಂತಹ 3GBRAM ಮತ್ತು 32GB ROM ಫೀಚರ್ ಹೊಂದಿದೆ. ಅತ್ಯುತ್ತಮ ಕಾರ್ಯನಿರ್ವಹಣೆ ದೊರೆಯಲಿದೆ.

ವಿಶೇಷತೆಯೇ ಬ್ಯಾಟರಿ!!

ವಿಶೇಷತೆಯೇ ಬ್ಯಾಟರಿ!!

ಮೊದಲೇ ಹೇಳಿದಂತೆ ರೆಡ್‌ಮಿ 3ಎಸ್ ಪ್ರೈಮ್ ಸ್ಮಾರ್ಟ್‌ಫೊನ್ 4100Amh ಬ್ಯಾಟರಿ ಶಕ್ತಿಯನ್ನು ಹೊಂದಿದೆ. ದೀರ್ಘಕಾಲ ಬ್ಯಾಟರಿ ಬಾಳಿಕೆ ಶಕ್ತಿಯನ್ನು ಹೊಂದಿದ್ದು 3 ದಿನಗಳ ಸಂಪೂರ್ಣ ಚಾರ್ಜ ದೊರೆಯುತ್ತದೆ ಎನ್ನಲಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
xiaomi redme 3s has Class leading battery life, ergonomic design and compact form factor, excellent price to performance ratio, average camera performance in low-light situations. to know more visit to kannda.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot