ನೋಕಿಯಾ ಮತ್ತೆ ನಂ 1 ಮೊಬೈಲ್ ಆಗುತ್ತದೆಯೇ?... ಆಗುತ್ತದೆ ಎನ್ನಲು 4 ಕಾರಣಗಳಿವೆ?

ಭಾರತೀಯರ ಅಚ್ಚುಮೆಚ್ಚಿನ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್ ಮೂಲಕ ಮತ್ತೆ ಭಾರತದ ಮೊಬೈಲ್ ಮಾರುಕಟ್ಟೆಗೆ ಬರುತ್ತಿದೆ!

|

2017 ರಲ್ಲಿ ಭಾರತದ ಸ್ಮಾರ್ಟ್‌ಪೋನ್ ಮಾರುಕಟ್ಟೆ ಮತ್ತೆ ಬದಲಾಗುತ್ತದೆ. ಇತರ ಎಲ್ಲಾ ಮೊಬೈಲ್ ಕಂಪೆನಿಗಳು ಬಿದ್ದುಹೋಗುತ್ತವೆ!! ಹೌದು, ಭಾರತೀಯರ ಅಚ್ಚುಮೆಚ್ಚಿನ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್ ಮೂಲಕ ಮತ್ತೆ ಭಾರತದ ಮೊಬೈಲ್ ಮಾರುಕಟ್ಟೆಗೆ ಬರುತ್ತಿದೆ!

ಗುಣಮಟ್ಟದ ಮೊಬೈಲ್ ಎಂದರೆ ನೋಕಿಯಾ ಮಾತ್ರ ಎನ್ನುವ ಸಮಯದಲ್ಲಿ ಆಂಡ್ರಾಯ್ಡ್ ಮೊಬೈಲ್‌ಗಳ ಆಗಮನ ಮತ್ತು ಮೈಕ್ರೋಸಾಫ್ಟ್-ನೋಕಿಯಾ ಒಪ್ಪಂದ ನೋಕಿಯಾ ಅಳಿವಿಗೆ ಕಾರಣವಾಯಿತು ಎನ್ನಬಹುದು. ಆದರೆ, ಇದೀಗ ನೋಕಿಯಾ ನೂತನ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್‌ಗಳ ಮೂಲಕ ಮತ್ತೆ ಭಾರತೀಯ ಮೊಬೈಲ್ ಮಾರುಕಟ್ಟೆಗೆ ಬರುತ್ತಿದೆ. ಇದು ಎಲ್ಲರಲ್ಲಿಯೂ ಕುತೋಹಲಕ್ಕೆ ಕಾರಣವಾಗಿದೆ.

2017 ಕ್ಕೆ ಬರುತ್ತಿದೆ ನೋಕಿಯಾ ಆಂಡ್ರಾಯ್ಡ್ !? ಸ್ಮಾರ್ಟ್‌ಫೊನ್ ಫೀಚರ್ ಏನು? ಬೆಲೆ ಎಷ್ಟು?

ಯಾವಾಗಲೂ ಗುಣಮಟ್ಟದಲ್ಲಿ ರಾಜಿಯಾಗದ ನೋಕಿಯಾ ಭಾರತದಲ್ಲಿ ಮತ್ತೆ ನಂ 1 ಮೊಬೈಲ್ ಕಂಪೆನಿ ಆಗುತ್ತದೆಯೇ? ಭಾರತೀಯರು ಮತ್ತೆ ನೋಕಿಯಾವನ್ನು ಒಪ್ಪಿಕೊಳ್ಳುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿದೆ. ಹಾಗಾಗಿ ಭಾರತೀಯರು ನೋಕಿಯಾವನ್ನು ಒಪ್ಪಿಕೊಳ್ಳುತ್ತಾರೆ ಎನ್ನಲು ಹಲವು ಕಾರಣಗಳಿವೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ನೋಕಿಯಾ ಎಂದರೆ ಕೇವಲ ಮೊಬೈಲ್ ಅಲ್ಲ!!

ನೋಕಿಯಾ ಎಂದರೆ ಕೇವಲ ಮೊಬೈಲ್ ಅಲ್ಲ!!

ಭಾರತೀಯರ ಬಹುಸಂಖ್ಯೆ ಜನರ ಮೊದಲ ಮೊಬೈಲ್ ಅದು ನೋಕಿಯಾದೆ ಆಗಿರುತ್ತದೆ. ಹಾಗಾಗಿ ನೋಕಿಯಾ ಮೇಲೆ ಎಲ್ಲರಿಗೂ ಒಂದು ವಿಶೇಷ ಒಲವಿದೆ! ಇನ್ನು ಹೆಚ್ಚಿನದಾಗಿ ನೋಕಿಯಾ ಭಾರತೀಯರಿಗೆ ಕೇವಲ ಒಂದು ಮೊಬೈಲ್ ಆಗಿ ಉಳಿದಿಲ್ಲ. ನೋಕಿಯಾ ಜೊತೆ ಎಲ್ಲರಿಗೂ ಒಂದು ಬಿಡಿಸಲಾರದ ನಂಟಿದೆ.

ನಂಬಿಕಸ್ಥರಿಗೆ ಇದೆ ಬೆಲೆ!

ನಂಬಿಕಸ್ಥರಿಗೆ ಇದೆ ಬೆಲೆ!

ಭಾರತೀಯರೆ ಹಾಗೆ ಒಬ್ಬರನ್ನು ನಂಬಿದರೆ ಅವರಿಗಾಗಿ ಏನು ಮಾಡಲು ಸಿದ್ದ!! ಹಾಗಾಗಿ ಗುಣಮಟ್ಟದಲ್ಲಿ ಎಂದೂ ರಾಜಿಯಾಗದ ನೋಕಿಯಾ ಮೊಬೈಲ್‌ ಎಂದರೆ ನಂಬಿಕೆ ಎನ್ನುವ ಮಟ್ಟಿಗೆ ಭಾರತೀಯರ ಮನಸಿನಲ್ಲಿ ನೋಕಿಯ ನೆಲೆಯೂರಿದೆ

ಪ್ರಪಂಚದಲ್ಲಿಯೇ ದೊಡ್ಡ ಮಾರುಕಟ್ಟೆ.

ಪ್ರಪಂಚದಲ್ಲಿಯೇ ದೊಡ್ಡ ಮಾರುಕಟ್ಟೆ.

ಪ್ರಪಂಚದಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಭಾರತೀಯ ಮಾರುಕಟ್ಟೆಗೆ ಈಗಾಗಲೇ ನೋಕಿಯಾ ಚಿರಪರಿಚಿತವಾಗಿದ್ದು, ನೋಕಿಯಾ ಮೊಬೈಲ್ ಖರೀದಿಸಲು ಜನರು ತುದಿಗಾಲಿನಲ್ಲಿ ನಿಂತಿದ್ದಾರೆ.

ಆಂಡ್ರಾಯ್ಡ್‌ನಲ್ಲಿ ನೋಕಿಯಾ.

ಆಂಡ್ರಾಯ್ಡ್‌ನಲ್ಲಿ ನೋಕಿಯಾ.

ಬಳಕೆದಾರರ ಅಚ್ಚುಮೆಚ್ಚಿನ ಆಂಡ್ರಾಯ್ಡ್ ಫೀಚರ್‌ ಹೊತ್ತು ನೂತನ ನೋಕಿಯಾ ಸ್ಮಾರ್ಟ್‌ಫೊನ್ ಮಾರುಕಟ್ಟೆಗೆ ಬರುತ್ತಿದೆ. ಭಾರತೀಯರ ಅಚ್ಚುಮೆಚ್ಚಿನ ಎರಡೂ ವಸ್ತುಗಳು ಜೊತೆಗೂಡಿದರೆ ನೋಕಿಯಾವನ್ನು ಹಿಡಿಯಲು ಸಾಧ್ಯವಿಲ್ಲ!!!

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
HMD Global says that India is a prime market for Nokia's growth. to know more visit to kannda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X