Subscribe to Gizbot

ಫ್ಲಾಷ್ ಸೇಲಿನಲ್ಲಿ ಮತ್ತೊಮ್ಮೆ ರೆಡ್‌ಮಿ 5A ಸ್ಮಾರ್ಟ್‌ಫೋನ್: ಖರೀದಿದಾರರಿಗೆ ಬೊಂಬಾಟ್ ಆಫರ್..!

Written By:

2017ರ ನವೆಂಬರ್ ನಲ್ಲಿ ದೇಶ್ ಕಾ ಸ್ಮಾರ್ಟ್‌ಫೋನ್ ಹೆಸರಿನಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿದ ಶಿಯೋಮಿ ರೆಡ್‌ಮಿ 5A ಸ್ಮಾರ್ಟ್‌ಫೋನ್ ಇಂದು ಮತ್ತೊಮ್ಮೆ ಸೇಲ್‌ನಲ್ಲಿ ಕಾಣಿಸಿಕೊಳ್ಳಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ರೆಡ್‌ಮಿ ನೋಟ್ 5, ರೆಡ್‌ಮಿ 5 ಸೇರಿದಂತೆ ಹಲವು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಂದಿದ್ದರು ಸಹ , ರೆಡ್‌ಮಿ 5A ಸ್ಮಾರ್ಟ್‌ಫೋನ್ ತನ್ನ ಬೇಡಿಕೆಯನ್ನು ಉಳಿಸಿಕೊಂಡಿದೆ.

ಫ್ಲಾಷ್ ಸೇಲಿನಲ್ಲಿ ಮತ್ತೊಮ್ಮೆ ರೆಡ್‌ಮಿ 5A ಸ್ಮಾರ್ಟ್‌ಫೋನ್:

ರೆಡ್‌ಮಿ 5A ಸ್ಮಾರ್ಟ್‌ಫೋನ್ ಇಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌ ಮತ್ತು ಮಿ.ಕಾಮ್‌ನಲ್ಲಿ ಫ್ಲಾಷ್ ಸೇಲ್‌ನಲ್ಲಿ ಕಾಣಿಸಿಕೊಳ್ಳಲಿದೆ. 2GB RAM ಮತ್ತು 16GB ಸ್ಟೋರೇಜ್ ಆವೃತ್ತಿಯೂ ರೂ 5,999ಕ್ಕೆ ಹಾಗೂ 3GB RAM ಮತ್ತು 32GB ಸ್ಟೋರೇಜ್ ಆವೃತ್ತಿಯೂ ರೂ 6,999ಕ್ಕೆ ಮಾರಾಟವಾಗಲಿದೆ. ಈ ಸ್ಮಾರ್ಟ್‌ಫೋನ್ ಅನ್ನು ನೋ ಕಾಸ್ಟ್ ಇಎಂಐ ಆಯ್ಕೆಯಲ್ಲಿ ಬಳಕೆದಾರರು ಖರೀದಿಸಬಹುದಾಗಿದೆ. ಇದಲ್ಲದೇ ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಕೆದಾರರು 5 % ಕ್ಯಾಷ್ ಬ್ಯಾಕ್ ಅನ್ನು ಪಡೆದುಕೊಳ್ಳಲಿದ್ದಾರೆ. ಅಲ್ಲದೇ ಜಿಯೋ ಬಳಕೆದಾರರಿಗೆ ರೂ.2200 ಕ್ಯಾಷ್ ಬ್ಯಾಕ್ ಆಫರ್ ದೊರೆಯಲಿದೆ.

Redmi Note 5 ಬಿಡುಗಡೆಗೆ..! ಬೆಸ್ಟ್, ಬಜೆಟ್, ಬೊಂಬಾಟ್

ಶಿಯೋಮಿ ಈ ವರೆಗೆ ರೆಡ್‌ಮಿ 5A ಸ್ಮಾರ್ಟ್‌ಫೋನ್ ಅನ್ನು 5 ಮಿಲಿಯನ್ ಸಂಖ್ಯೆಯಲ್ಲಿ ಮಾರಾಟ ಮಾಡಿದ್ದು, ಈಗ ಮತ್ತೊಮ್ಮೆ ಫ್ಲಾಷ್ ಸೇಲಿನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮಾರುಕಟ್ಟೆಯಲ್ಲಿ ಇನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಲಿದೆ. ಬಳಕೆದಾರರ ಹೆಚ್ಚಿನ ಅಗತ್ಯಗಳನ್ನು ಗಮನದಲ್ಲಿರಿಸಿ ಫೀಚರ್ಗಳನ್ನು ಈ ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದ್ದು, ದೊಡ್ಡ ಬ್ಯಾಟರಿಯನ್ನು ಕಾಣಬಹುದಾಗಿದ್ದು, ಎರಡು ಸಿಮ್ ನೊಂದಿಗೆ ಮೈಕ್ರೋSD ಕಾರ್ಡ್ ಸಹ ಹಾಕಿಕೊಳ್ಳಬಹುದಾಗಿದೆ.

ಫ್ಲಾಷ್ ಸೇಲಿನಲ್ಲಿ ಮತ್ತೊಮ್ಮೆ ರೆಡ್‌ಮಿ 5A ಸ್ಮಾರ್ಟ್‌ಫೋನ್:

ರೆಡ್‌ಮಿ 5A ಸ್ಮಾರ್ಟ್‌ಫೋನಿನಲ್ಲಿ 5 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, 1280X720 ಪಿಕ್ಸೆಲ್ ರೆಸೊಲ್ಯೂಶನ್ ಗುಣಮಟ್ಟವನ್ನು ಹೊಂದಿದೆ. ವೇಗದ ಕಾರ್ಯಚರಣೆಗಾಗಿ ಕ್ವಾಲ್ಕಮ್ ಸ್ನಾಪ್ಡ್ರಾಗನ್ 425 SoC ಚಿಪ್ ಸೆಟ್ ಅನ್ನು ಅಳವಡಿಸಲಾಗಿದೆ. ಜೊತೆಗೆ 2GB/3GB RAM ಮತ್ತು 16GB/32GB ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಆಂಡ್ರಾಯ್ಡ್ ನ್ಯಾಗಾ ಆಧಾರಿತ MIUI 9 ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಈ ರೆಡ್‌ಮಿ 5A ಸ್ಮಾರ್ಟ್‌ಫೋನಿನಲ್ಲಿ ಸ್ಟೋರೇಜ್ ಸಾಮರ್ಥ್ಯವನ್ನು ವಿಸ್ತರಿಸಲು ಅನುಕೂಲವಾಗುವಂತೆ ಮೈಕ್ರೋ SD ಕಾರ್ಟ್‌ಗಾಗಿಯೇ ಸ್ಲಾಟ್ ಒಂದನ್ನು ಮೀಸಲಿರಿಸಲಾಗಿದೆ.

ರೆಡ್‌ಮಿ 5A ಸ್ಮಾರ್ಟ್‌ಫೋನಿನಲ್ಲಿ 13MP ಹಿಂಬದಿಯ ಕ್ಯಾಮೆರಾವನ್ನು ನೋಡಬಹುದಾಗಿದ್ದು, LED ಫ್ಲ್ಯಾಶ್, f/2.2 ಅಪರ್ಚರ್ ಮತ್ತು PDAF ಹೊಂದಿದೆ. ಇನ್ನು ಮುಂಭಾಗದಲ್ಲಿ f/2.0 ಅಪರ್ಚರ್ ಹೊಂದಿರುವ 5MP ಸೆಲ್ಫೀ ಕ್ಯಾಮೆರಾವನ್ನು ನೀಡಲಾಗಿದೆ. ಇದರೊಂದಿಗೆ 3000mAh ಸಾಮರ್ಥ್ಯದ ಬ್ಯಾಟರಿ , 4G VoLTE, 3.5mm ಆಡಿಯೋ ಜ್ಯಾಕ್, ಮೈಕ್ರೋ USB ಪೋರ್ಟ್, ಬ್ಲೂಟೂತ್ 4.1 ಮೊದಲಾದ ಫೀಚರ್‌ಗಳು ಕೂಡ ರೆಡ್‌ಮಿ 5A ಸ್ಮಾರ್ಟ್‌ಫೋನಿನಲ್ಲಿದೆ.

English summary
The Redmi 5A will be available to purchase from Flipkart and mi.com. Buyers can choose between two variants – the 2GB RAM with 16GB storage variant is priced at Rs 5,999, whereas the 3GB RAM with 32GB storage variant is priced at Rs 6,999. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot