ಫ್ಲಿಪ್ ಕಾರ್ಟ್ ನ ಬ್ಲಾಕ್ ಫ್ರೈಡೇ ಸೇಲ್ ನಲ್ಲಿ ಲಭ್ಯವಾಗಲಿದೆ ಶಿಯೋಮಿ ರೆಡ್ಮಿ ನೋಟ್ 6 ಪ್ರೋ

|

'ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿ ಶಿಯೋಮಿ ತನ್ನ ರೆಡ್ಮಿ ನೋಟ್ 6 ಪ್ರೋ ಫೋನ್ ನ್ನು ನವೆಂಬರ್ 22 ರಂದು ಅಂದರೆ ಇವತ್ತು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಈ ಸ್ಮಾರ್ಟ್ ಫೋನಿನ ಮೊದಲ ಮಾರಾಟವು ನವೆಂಬರ್ 23 ರಂದು ಅಂದರೆ ನಾಳೆ ಫ್ಲಿಪ್ ಕಾರ್ಟ್ ನ ಬ್ಲಾಕ್ ಫ್ರೈಡೇ ಸೇಲ್ ನ ಒಂದು ಭಾಗವಾಗಿ ನಡೆಯಲಿದೆ.

ಫ್ಲಿಪ್ ಕಾರ್ಟ್ ನ ಬ್ಲಾಕ್ ಫ್ರೈಡೇ ಸೇಲ್ ನಲ್ಲಿ ಲಭ್ಯವಾಗಲಿದೆ ರೆಡ್ಮಿ ನೋಟ 6 ಪ್ರೋ

ಫ್ಲಿಪ್ ಕಾರ್ಟ್ ಪೇಜ್ ನಲ್ಲಿ ಹೇಳಿರುವಂತೆ ಇಂದು ರಾತ್ರಿ 12 ಘಂಟೆಯಿಂದ ಈ ಫೋನ್ ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಾಗಲಿದೆ. ಹೆಚ್ ಡಿಎಫ್ ಸಿ ಬ್ಯಾಂಕ್ ಎಕ್ಸ್ ಕ್ಲೂಸೀವ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಪಾರ್ಟ್ನರ್ ಆಗಿರುತ್ತಾರೆ. ಅಂದರೆ ಯಾರು ಈ ಪೋನ್ ನ್ನು ಹೆಚ್ ಡಿಎಫ್ ಸಿ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಖರೀದಿಸುತ್ತಾರೋ ಅವರು ಹೆಚ್ಚುವರಿ ರಿಯಾಯಿತಿಯನ್ನು ನಿರೀಕ್ಷಿಸಬಹುದು.

ಶಿಯೋಮಿ ರೆಡ್ಮಿ ನೋಟ್ 6 ಪ್ರೋ :

ಶಿಯೋಮಿ ರೆಡ್ಮಿ ನೋಟ್ 6 ಪ್ರೋ :

ಥೈಲ್ಯಾಂಡ್ ನಲ್ಲಿ ಈ ಸ್ಮಾರ್ಟ್ ಫೋನ್ ಈಗಾಗಲೇ ಲಭ್ಯವಿದೆ.ಶಿಯೋಮಿ ರೆಡ್ಮಿ ನೋಟ್ 6 ಪ್ರೋ 6.26-ಇಂಚಿನ FHD+ ಸ್ಕ್ರೀನ್ ಜೊತೆಗೆ 2280x1080 ಪಿಕ್ಸಲ್ ರೆಸಲ್ಯೂಷನ್ ನ್ನು ಹೊಂದಿದೆ.ಇದರ ಎಲ್ ಸಿ ಡಿ ಸ್ಕ್ರೀನ್ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಜೊತೆಗೆ 2.5 ಕರ್ವ್ಡ್ ಕಾರ್ನರ್ ನಿಂದ ರಕ್ಷಿಸಲಾಗಿದೆ.ಭಾರತದಲ್ಲಿ ಎರಡು ವೇರಿಯಂಟ್ ನಲ್ಲಿ ಈ ಫೋನ್ ಲಭ್ಯವಾಗುತ್ತದೆ. 4GB+64GB ಮತ್ತು 6GB+64GB. ಸ್ಟೋರೇಜ್ ನ್ನು ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶವಿರುತ್ತದೆ.

ಇದು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 636 ಸಾಕೆಟ್ ನ ಪ್ರೊಸೆಸರ್ ನ್ನು ಹೊಂದಿದ್ದು ಅದರ ಕ್ಲಾಕ್ ಸ್ಪೀಡ್ 1.8GHz ಜೊತೆಗೆ Adreno 509 GPUವನ್ನು ಹೊಂದಿದೆ. ರೆಡ್ಮಿ ನೋಟ್ 6 ಪ್ರೋ ತನ್ನದೇ ಕಂಪೆನಿಯು ಸ್ವಂತ MIUI 10 ನಿಂದ ರನ್ ಆಗುತ್ತದೆ.

ಈ ಡಿವೈಸ್ 4000mAh ನ ಬ್ಯಾಟರಿಯನ್ನು ಹೊಂದಿದ್ದು 15 ತಾಸುಗಳ ವೀಡಿಯೋ ಪ್ಲೇಬ್ಯಾಕ್ ಮತ್ತು 390 ಘಂಟೆಗಳ ಸ್ಟ್ಯಾಂಡ್ ಬೈ ಟೈಮ್ ನ್ನು ಹೊಂದಿದೆ. ಕ್ವಿಕ್ ಚಾರ್ಜ್ 3.0 ಗೆ ಇದು ಬೆಂಬಲ ನೀಡುತ್ತದೆ.

ಕ್ಯಾಮರ

ಕ್ಯಾಮರ

ಕ್ಯಾಮರಾ ವಿಭಾಗವನ್ನು ಪ್ರಸ್ತಾಪಿಸುವುದಾದರೆ ಈ ಸ್ಮಾರ್ಟ್ ಫೋನ್ ನಲ್ಲಿ ಡುಯಲ್ ಹಿಂಭಾಗದ ಕ್ಯಾಮರಾ ಜೊತೆಗೆ ಪ್ರೈಮರಿ 12ಎಂಪಿ ಎಐ ಸೆನ್ಸರ್ ನ f/1.9ಅಪರ್ಚರ್ ಇರುವ ಕ್ಯಾಮರಾವಿದೆ ಮತ್ತು ಸೆಕೆಂಡರಿ 5ಎಂಪಿ ಡೆಪ್ತ್ ಸೆನ್ಸರ್ ನ ಎಐ ಪೋರ್ಟೈಟ್ 2.0 ಕ್ಯಾಮರಾವನ್ನು ಅಳವಡಿಸಲಾಗಿದೆ. ಸೆಲ್ಫೀ ತೆಗೆದುಕೊಳ್ಳಲು ರೆಡ್ಮಿ ನೋಟ್ 6 ಪ್ರೋ ಡುಯಲ್ ಕ್ಯಾಮರಾ ಸೆಟ್ ಅಪ್ ನ್ನು ಮುಂಭಾಗದಲ್ಲಿ ಹೊಂದಿದೆ. ಅದರಲ್ಲಿ 20MP+2MP ಸೆನ್ಸರ್ ನ ಎಐ ಪೋರ್ಟೈಟ್ ಮತ್ತು ಎಐ ಸೀನ್ ಡಿಟೆಕ್ಷನ್ ಮೋಡ್ ಗಳು ಲಭ್ಯವಿದೆ. 12 ಸೀನ್ ಗಳ ಡಿಟೆಕ್ಷನ್ ಗೆ ಈ ಡಿಟೆಕ್ಷನ್ ಮೋಡ್ ನೆರವು ನೀಡುತ್ತದೆ.

ಸೆಕ್ಯುರಿಟಿ ವಿಭಾಗದ ಬಗ್ಗೆ ಹೇಳುವುದಾದರೆ ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ಹಿಂಭಾಗದಲ್ಲಿ ಅಳವಡಿಸಲಾಗಿದೆ. ಕನೆಕ್ಟಿವಿಟಿಗೆ ಬ್ಲೂಟೂಟ್5.0, ಡುಯಲ್ ಸಿಮ್ ಡುಯಲ್ ವೋಲ್ಟ್ ಮತ್ತು ವೈಫೈ ಇದೆ. ರೆಡ್ಮಿ ನೋಟ್ 6 ಪ್ರೋ 4 ಬಣ್ಣಗಳ ವೇರಿಯಂಟ್ ನಲ್ಲಿ ಲಭ್ಯವಾಗುತ್ತದೆ - ಕಪ್ಪು, ರೋಸ್ ಗೋಲ್ಡ್, ನೀಲಿ ಮತ್ತು ಕೆಂಪು.

ರೆಡ್ಮಿ ನೋಟ್ 6 ಪ್ರೋ : ಭಾರತದಲ್ಲಿನ ನಿರೀಕ್ಷಿತ ಬೆಲೆ

ರೆಡ್ಮಿ ನೋಟ್ 6 ಪ್ರೋ : ಭಾರತದಲ್ಲಿನ ನಿರೀಕ್ಷಿತ ಬೆಲೆ

ರೆಡ್ಮಿ ನೋಟ್ 5 ಪ್ರೋ ಆರಂಭಿಕ ಬೆಲೆ 13,999. ಹಾಗಾಗಿ ರೆಡ್ಮಿ ನೋಟ್ 6 ಪ್ರೋ ಇದೇ ರೇಂಜ್ ನಲ್ಲಿ ಇರುವ ಸಾಧ್ಯತೆ ಇದ್ದು 14,999 ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚಿನ ಬೆಲೆಯನ್ನು ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ.

Best Mobiles in India

Read more about:
English summary
Xiaomi Redmi 6 Pro buyers to get special discount in Flipkart's Black Friday Sale

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X