ಶಿಯೋಮಿ ರೆಡ್ಮಿ 6 ಪ್ರೋ ರೋಸ್ ಗೋಲ್ಡ್ ಮತ್ತು ಎಂಐ ರೂಟರ್ 4ಸಿ ಭಾರತಕ್ಕೆ!

|

ನಮಗೆಲ್ಲಾ ಈಗಾಗಲೇ ತಿಳಿದಿರುವಂತೆ ಶಿಯೋಮಿ ರೆಡ್ಮಿ ನೋಟ್ 6 ಪ್ರೋ ಬಿಡುಗಡೆಯನ್ನು ನವೆಂಬರ್ 22 ಕ್ಕೆ ಬಿಡುಗಡೆಗೊಳಿಸಲು ಸಜ್ಜಾಗಿದೆ.ಆದರೆ ಇದೀಗ ಕೇವಲ ಇದೊಂದೇ ಮುಂದಿನ ದಿನದಲ್ಲಿ ಮಾರುಕಟ್ಟೆಗೆ ಬರುವುದಿಲ್ಲ. ಇದರ ಜೊತೆಗೆ ಇನ್ನಷ್ಟು ವಿಶೇಷತೆಯೂ ಇದೆ. ಮೈ ಸ್ಮಾರ್ಟ್ ಪ್ರೈಸ್ ವರದಿಯೊಂದು ಹೇಳುವಂತೆ ರೆಡ್ಮಿ 6 ಪ್ರೋ ಹೊಸ ರೋಸ್ ಗೋಲ್ಡ್ ಕಲರಿನ ವೇರಿಯಂಟ್ ಕೂಡ ಬಿಡುಗಡೆಗೊಳ್ಳಲಿದೆ ಮತ್ತು ಅದರ ಜೊತೆಗೆ ಎಂಐ ರೂಟರ್ 4ಸಿಯನ್ನು ಕೂಡ ಮಾರುಕಟ್ಟೆಗೆ ಬಿಡಲಾಗುತ್ತದೆ.

ಶಿಯೋಮಿ ರೆಡ್ಮಿ 6 ಪ್ರೋ ರೋಸ್ ಗೋಲ್ಡ್  ಮತ್ತು ಎಂಐ ರೂಟರ್ 4ಸಿ ಭಾರತಕ್ಕೆ!

ಶಿಯೋಮಿ ಎಂಐ ರೂಟರ್ 4ಸಿಯನ್ನು ತನ್ನ ಸ್ವದೇಶಿ ಮಾರುಕಟ್ಟೆಯಲ್ಲಿ ಈ ವರ್ಷದ ಆರಂಭದಲ್ಲೇ ಬಿಡುಗಡೆಗೊಳಿಸಿತ್ತು. ಇದು ಎಂಐ ರೂಟರ್ 4 ಸರಣಿಯ ಮೂರನೇ ವೇರಿಯಂಟ್ ಆಗಿದೆ. ಆದರೆ ಭಾರತದಲ್ಲಿ ಬಿಡುಗಡೆಗೊಳ್ಳುತ್ತಿರುವ ಮೊದಲ ಮಾಡೆಲ್ ಇದಾಗಿದೆ. ಇದುವರೆಗೂ ಎಂಐ ರೂಟರ್ ಮತ್ತು ಎಂಐ ರೂಟರ್ 3ಸಿ ಮಾತ್ರವೇ ಭಾರತದಲ್ಲಿ ಲಭ್ಯವಿತ್ತು.

ಶಿಯೋಮಿ ರೆಡ್ಮಿ 6 ಪ್ರೋ ಭಾರತದಲ್ಲಿನ ಬೆಲೆ:

ಶಿಯೋಮಿ ರೆಡ್ಮಿ 6 ಪ್ರೋ ಭಾರತದಲ್ಲಿನ ಬೆಲೆ:

ಶಿಯೋಮಿ ರೆಡ್ಮಿ 6 ಪ್ರೋ ಕೈಗೆಟುಕುವ ಬೆಲೆಯಲ್ಲಿ ನಾಚ್ ಡಿಸ್ಪ್ಲೇಯೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಎರಡು ಸ್ಟೋರೇಜ್ ಕಾನ್ಫಿಗರೇಷನ್ನಿನಲ್ಲಿ ಕಳೆದ ಸೆಪ್ಟೆಂಬರ್ ನಲ್ಲಿ ಇದು ಬಿಡುಗಡೆಗೊಂಡಿತ್ತು. ಬೇಸ್ ವೇರಿಯಂಟ್ 3ಜಿಬಿ RAM ಮತ್ತು 32ಜಿಬಿ ಸ್ಟೋರೇಜ್ ಅವಕಾಶದ ಬೆಲೆ 10,999 ರುಪಾಯಿಗಳಾಗಿತ್ತು. ಟಾಪ್-ಎಂಡ್ ವೇರಿಯಂಟ್ ಅಂದರೆ 4ಜಿಬಿ RAM ಮತ್ತು 64ಜಿಬಿ ಸ್ಟೋರೇಜ್ ನ ಫೋನಿನ ಬೆಲೆ 12,999 ರುಪಾಯಿಗಳಾಗಿತ್ತು.ಇದುವರೆಗೂ ನೀಲಿ, ಚಿನ್ನದ ಬಣ್ಣ ಮತ್ತು ಕಪ್ಪು ಬಣ್ಣದಲ್ಲಿ ಲಭ್ಯವಾಗುತ್ತಿದ್ದ ಈ ಫೋನ್ ಇದೀಗ ರೋಸ್ ಗೋಲ್ಡ್ ವೇರಿಯಂಟ್ ನಲ್ಲಿ ಬಿಡುಗಡೆಗೊಳ್ಳುತ್ತಿದೆ.

ಶಿಯೋಮಿ ಎಂಐ ರೂಟರ್ 4ಸಿ ನಿರೀಕ್ಷಿತ ಬೆಲೆ ಮತ್ತು ವೈಶಿಷ್ಟ್ಯತೆಗಳು:

ಶಿಯೋಮಿ ಎಂಐ ರೂಟರ್ 4ಸಿ ನಿರೀಕ್ಷಿತ ಬೆಲೆ ಮತ್ತು ವೈಶಿಷ್ಟ್ಯತೆಗಳು:

ಎಂಐ ರೂಟರ್ 4ಸಿ ಎಂಟ್ರಿ ಲೆವೆಲ್ ರೂಟರ್ ಡೊಮೆಸ್ಟಿಕ್ ಬಳಕೆಗಾಗಿ ಯೋಗ್ಯ. ಇದರ ಬೆಲೆ 99 ಯುವಾನ್(ಅಂದಾಜು. ರುಪಾಯಿ. 1,000). ಇದು ಎಂಐ ರೂಟರ್ 4ಕ್ಯೂ ನಿಂದ ಬಹಳ ಕಡಿಮೆ ಬೆಲೆಯನ್ನು ಹೊಂದಿದ್ದು 199 ಯುವನ್ ಅಂದರೆ ಅಂದಾಜು 2,000 ಗಿಂತ ಬಹಳ ಕಡಿಮೆ ಬೆಲೆಯದ್ದಾಗಿರುತ್ತದೆ. ಇದು ಎಂಐ ರೂಟರ್ 3ಸಿಯನ್ನು ರಿಪ್ಲೇಸ್ ಮಾಡುವ ಸಾಮರ್ಥ್ಯವುಳ್ಳದ್ದು ಎಂದು ನಿರೀಕ್ಷಿಸಲಾಗುತ್ತಿದೆ.

ಈ ರೂಟರ್ ನಲ್ಲಿ 4 5ಡಿಬಿಐ ಓಮ್ನಿ ಡೈರೆಕ್ಷನಲ್ ಆಂಟೆನಾಗಳಿವೆ. ಇದು 64ಎಂಬಿ ಸ್ಟೋರೇಜ್ ವ್ವಸ್ಥೆ ಮತ್ತು ಸ್ಮಾರ್ಟ್ ಎಪಿಪಿ ಮ್ಯಾನೇಜ್ ಮೆಂಟ್ ನ್ನು ಹೊಂದಿದ್ದು ಆಂಡ್ರಾಯ್ಡ್ ಮತ್ತು ಐಓಎಸ್ ಎರಡೂ ಡಿವೈಸ್ ಗಳಿಂದಲೂ ಕಂಟ್ರೋಲ್ ಮಾಡುವ ಅವಕಾಶವನ್ನು ನೀಡುತ್ತದೆ.

ಒಂದೇ ಸಮಯಕ್ಕೆ 64 ಡಿವೈಸ್ ಗಳಿಗೆ ಕನೆಕ್ಷನ್:

ಒಂದೇ ಸಮಯಕ್ಕೆ 64 ಡಿವೈಸ್ ಗಳಿಗೆ ಕನೆಕ್ಷನ್:

ಇದು ಬೇಸಿಕ್ ಸಿಂಗಲ್ ಬ್ಯಾಂಡ್ 2.4 GHz ವೈ-ಫೈ ಕನೆಕ್ಟಿವಿಟಿ ಇದ್ದು ರೆಂಡರಿಂಗ್ ಸ್ಪೀಡ್ 300 Mbps ಆಗಿದೆ. ಇದರಲ್ಲಿ 10/100 ಈಥರ್ ನೆಟ್ LAN ಪೋರ್ಟ್ ಗಳಿದೆ ಮತ್ತು 10 ಮೀಟರ್ ವರೆಗೆ ವೈ-ಫೈ ಕವರ್ ಮಾಡುವ ಸಾಮರ್ಥ್ಯವಿದೆ. ಈ ರೂಟರ್ ನ ಮತ್ತೊಂದು ವೈಶಿಷ್ಟ್ಯತೆಯೆಂದರೆ ಒಂದೇ ಸಮಯಕ್ಕೆ 64 ಡಿವೈಸ್ ಗಳನ್ನು ಕನೆಕ್ಟ್ ಮಾಡುವುದಕ್ಕೆ ಅವಕಾಶ ನೀಡುತ್ತದೆ.

Best Mobiles in India

Read more about:
English summary
Xiaomi Redmi 6 Pro Rose Gold variant and Mi Router 4C to be launched in India soon

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X