Subscribe to Gizbot

ರೆಡ್‌ಮಿ ನೋಟ್ 4 ಫ್ಲಾಷ್ ಸೇಲ್: ಕೇವಲ ರೂ.999 ಮಾತ್ರ.!!

Written By:

ಶಿಯೋಮಿ ಬಿಡುಗಡೆ ಮಾಡಿದ್ದ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಈಗಾಗಲೇ ಗ್ರಾಹಕರಿಗೆ ಭಾರೀ ಮೆಚ್ಚುಗೆಯಾಗಿತ್ತು. ಈ ಫೋನ್ ಬಿಡುಗಡೆಯಾಗಿ ಆರು ತಿಂಗಳಾದ ಹಿನ್ನಲೆಯಲ್ಲಿ ಫ್ಲಿಪ್‌ ಕಾರ್ಟ್ ನಲ್ಲಿ ಇಂದು 'ಬಿಗ್ ರೆಡ್‌ಮಿ ನೋಟ್ 4 ಸೇಲ್' ನಡೆಯುತ್ತಿದೆ. ಇಂದು ಮಾತ್ರವೇ ಈ ಫೋನ್ ರೂ.999ಕ್ಕೆ ದೊರೆಯುತ್ತಿದೆ.

ರೆಡ್‌ಮಿ ನೋಟ್ 4 ಫ್ಲಾಷ್ ಸೇಲ್: ಕೇವಲ ರೂ.999 ಮಾತ್ರ.!!

ಓದಿರಿ: ಅಮೆಜಾನ್‌ನಲ್ಲಿ ಚೀನಾ ಮೂಲದ ಸ್ಮಾರ್ಟ್‌ಫೋನ್ ಬ್ಯಾನ್: ಕಾರಣ ಭಾರತೀಯರು ಮೆಚ್ಚುವಂತದ್ದು.!!

ಇಂದು 12 ಗಂಟೆಗೆ ಸರಿಯಾಗಿ ಫ್ಲಿಪ್ ಕಾರ್ಟ್‌ನಲ್ಲಿ ಬಿಗ್ ರೆಡ್‌ಮಿ ನೋಟ್ 4 ಸೇಲ್ ಆರಂಭವಾಗುತ್ತಿದೆ. ಇದೇ ಸಂದರ್ಭದಲ್ಲಿ ಮಿ ವಸ್ತುಗಳ ಮೇಲೆ ಭರ್ಜರಿ ಆಫರ್ ಮತ್ತು ಡಿಸ್ಕೌಂಟ್‌ಗಳು ದೊರೆಯುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೇಗೆ ರೂ.999..?

ಹೇಗೆ ರೂ.999..?

ಫ್ಲಿಪ್‌ಕಾರ್ಟ್‌ ರೆಡ್‌ಮಿ ನೋಟ್ 4 ಮೇಲೆ ರೂ.12,000 ವರೆಗೆ ಏಕ್ಸ್‌ಚೇಂಜ್ ಆಫರ್ ನೀಡುತ್ತಿದ್ದು, ಈ ಹಿನ್ನಲೆಯಲ್ಲಿ ಫೋನಿನ ಬೆಲೆಯಲ್ಲಿ 12,000 ಕಡಿಮೆಯಾಗಿ ರೂ.999ಕ್ಕೆ ದೊರೆಯಲಿದೆ.

Xiaomi Redmi 4 Features !! ರೆಡ್‌ಮಿ 4 ಫೀಚರ್ಸ್ ಏನೇನಿದೆ? ಇಲ್ಲಿದೆ ಡಿಟೇಲ್ಸ್!!
ರೆಡ್‌ಮಿ ನೋಟ್ 4ನಲ್ಲಿ Full HD ಡಿಸ್‌ಪ್ಲೇ

ರೆಡ್‌ಮಿ ನೋಟ್ 4ನಲ್ಲಿ Full HD ಡಿಸ್‌ಪ್ಲೇ

ರೆಡ್‌ಮಿ ನೋಟ್ 4 ಪೋನ್‌ 5.5 ಇಂಚಿನ 1920 x 1080p Full HD ಡಿಸ್‌ಪ್ಲೇ ಹೊಂದಿದೆ. ಈ ಪೋನಿನಲ್ಲಿ ಡಿಕಾ ಕೊರ್ ಮಿಡಿಯಾ ಟೆಕ್ ಹೆಲಿಯೊ X20 ಪ್ರೋಸೆಸರ್ ಅಳವಡಿಸಲಾಗಿದ್ದು, ಇದು ಉತ್ತಮ ಗುಣಮಟ್ಟದ ವಿಡಿಯೋ ನೋಡಲು ಉತ್ತಮವಾಗಿದೆ

ರೆಡ್‌ಮಿ ನೋಟ್ 4 ಪೋನಿನಲ್ಲಿ ಉತ್ತಮ ಕ್ಯಾಮೆರಾ:

ರೆಡ್‌ಮಿ ನೋಟ್ 4 ಪೋನಿನಲ್ಲಿ ಉತ್ತಮ ಕ್ಯಾಮೆರಾ:

ರೆಡ್‌ಮಿ ನೋಟ್ 4 ಪೋನಿನಲ್ಲಿ 13MP ಹಿಂಬದಿಯ ಕ್ಯಾಮೆರಾ ಜೊತೆ ಆಟೋ ಪೋಕಸ್, ಡುಯಲ್ ಫ್ಲಾಷ್ ಹೊಂದಿದ್ದು, ಮುಂಬದಿಯಲ್ಲಿ 5MP ಕ್ಯಾಮೆರಾವನ್ನು ನೀಡಲಾಗಿದೆ.

ರೆಡ್‌ಮಿ ನೋಟ್ 4 4G VoLTE ಸಪೋರ್ಟ್:

ರೆಡ್‌ಮಿ ನೋಟ್ 4 4G VoLTE ಸಪೋರ್ಟ್:

ರೆಡ್‌ಮಿ ನೋಟ್ 4 ಪೋನ್ 4G VoLTE ಸಪೋರ್ಟ್ ಮಾಡಲಿದ್ದು, ಆಂಡ್ರಾಯ್ಡ್ 6.0ನಲ್ಲಿ ಕಾರ್ಯಚರಣೆ ನಡೆಸಲಿದೆ. ಇದರೊಂದಿಗೆ MIUI8 ಸಹ ಇರಲಿದೆ. ಮೆಟಾಲಿಕ್ ಬಾಡಿ ಹೊಂದಿರುವ ಫೋನಿನಲ್ಲಿ ಬ್ಲೂಟೂತ್, GPS, USB ಪೋರ್ಟ್ ಗಳಿದೆ.

ಶಕ್ತಿಶಾಲಿ ಬ್ಯಾಟರಿ:

ಶಕ್ತಿಶಾಲಿ ಬ್ಯಾಟರಿ:

ರೆಡ್‌ಮಿ ನೋಟ್ 4 ಶಕ್ತಿಶಾಲಿ ಬ್ಯಾಟರಿ ಹೊಂದಿದ್ದು, 4100mAH ಸಾಮಾರ್ಥ್ಯದ ಬ್ಯಾಟರಿ ದೀರ್ಘಕಾಲದ ಬ್ಯಾಕಪ್ ನೀಡುತ್ತದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Flipkart is hosting "Big Redmi Note 4" sale to commemorate the smartphone's 6-month anniversary. During the sale, Xiaomi Redmi Note 4 will be available at available at Rs 999. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot