ರೆಡ್ಮಿ ನೋಟ್ 6 ಪ್ರೊಗೆ ಮೊದಲ ಬಾರಿಗೆ ರಿಯಾಯಿತಿ ಬೆಲೆ

|

ಫ್ಲಿಪ್ ಕಾರ್ಟ್ ನಲ್ಲಿ ರಿಪಬ್ಲಿಕ್ ಡೇ ಸೇಲ್ ಆರಂಭವಾಗುತ್ತಿದ್ದು ಜನವರಿ 19 ರಿಂದ ಈ ಸೇಲ್ ನಡೆಯಲಿದೆ. ಫ್ಲಿಪ್ ಕಾರ್ಟ್ ಪ್ಲಸ್ ಬಳಕೆದಾರರಿಗೆ ಮಾತ್ರವೇ ಜನವರಿ 19 ರಿಂದ ಈ ಸೇಲ್ ಆರಂಭವಾಗುತ್ತಿದೆ. ಇತರರಿಗೆ ಜನವರಿ 20 ರಿಂದ ಸೇಲ್ ಪ್ರಾರಂಭವಾಗುತ್ತದೆ. ಜನವರಿ 22 ಕ್ಕೆ ಈ ಮಾರಾಟ ಅಂತ್ಯಗೊಳ್ಳುತ್ತದೆ.

ರಿಪಬ್ಲಿಕ್ ಡೇ ಸೇಲ್:

ರಿಪಬ್ಲಿಕ್ ಡೇ ಸೇಲ್:

ಸ್ಮಾರ್ಟ್ ಫೋನ್ ಗಳಿಗೆ ಈ ಸೇಲ್ ನಲ್ಲಿ ಫ್ಲಿಪ್ ಕಾರ್ಟ್ ಭರ್ಜರಿ ರಿಯಾಯಿತಿ ದರವನ್ನು ನೀಡುತ್ತಿದೆ. ಎಲ್ಲಾ ರೇಂಜಿನ ಫೋನ್ ಗಳು ಕೂಡ ರಿಪಬ್ಲಿಕ್ ಡೇ ಸೇಲ್ ನಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತದೆ. ಫೋನ್ ಗಳಿಗೆ ಭರ್ಜರಿ ರಿಯಾಯಿತಿ ಬೆಲೆ ಸಿಗುತ್ತಿದ್ದು ಅದರಲ್ಲಿ ಪ್ರಮುಖವಾಗಿ ಇತ್ತೀಚೆಗೆ ಬಿಡುಗಡೆಗೊಂಡಿರುವ ರೆಡ್ಮಿ ನೋಟ್ 6 ಪ್ರೊ ಬೆಲೆಯಲ್ಲಿ ಸಿಕ್ಕಾಪಟ್ಟೆ ರಿಯಾಯಿತಿ ಸಿಗುತ್ತದೆ.

1000 ರುಪಾಯಿ ಡಿಸ್ಕೌಂಟ್:

1000 ರುಪಾಯಿ ಡಿಸ್ಕೌಂಟ್:

ಶಿಯೋಮಿ ರೆಡ್ಮಿ ನೋಟ್ 6 ಪ್ರೋ 1,000 ರುಪಾಯಿ ರಿಯಾಯಿತಿ ಬೆಲೆಯಲ್ಲಿ ಫ್ಲಿಪ್ ಕಾರ್ಟ್ ನ ರಿಪಬ್ಲಿಕ್ ಡೇ ಸೇಲ್ ನಲ್ಲಿ ಸಿಗುತ್ತದೆ. ಅಂದರೆ ಆಸಕ್ತ ಗ್ರಾಹಕರು ರೆಡ್ಮಿ ನೋಟ್ 6 ಪ್ರೋವನ್ನು ಅತ್ಯಂತ ಕಡಿಮೆ ಬೆಲೆ ಅಂದರೆ 12,999 ರುಪಾಯಿಗೆ ಖರೀದಿಸಬಹುದು.ಇದು ಖಂಡಿತ ಈ ಸೇಲ್ ನಲ್ಲಿ ಲಭ್ಯವಾಗುವ ಫ್ಲಿಪ್ ಕಾರ್ಟ್ ನ ಬೆಸ್ಟ್ ಡೀಲ್ ಆಗಿರುತ್ತದೆ. ರೆಡ್ಮಿ ನೋಟ್ 6 ಪ್ರೋ ಎಂಆರ್ ಪಿ ಬೆಲೆ 13,999 ರುಪಾಯಿಗಳು. ಇದು ಬೇಸ್ ಮಾಡೆಲ್ ಅಂದರೆ 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಈ ಫೋನ್ ನಲ್ಲಿ ಇರುತ್ತದೆ.

ಎಲ್ಲಾ ವೇರಿಯಂಟ್ ಗೂ ರಿಯಾಯಿತಿ?

ಎಲ್ಲಾ ವೇರಿಯಂಟ್ ಗೂ ರಿಯಾಯಿತಿ?

ಎರಡೂ ವೇರಿಯಂಟ್ ನ ರೆಡ್ಮಿ ನೋಟ್ 6 ಪ್ರೊ ಗೆ 1,000 ರುಪಾಯಿ ರಿಯಾಯಿತಿ ಇರಲಿದೆಯೇ ಎಂಬ ಬಗ್ಗೆ ಫ್ಲಿಪ್ ಕಾರ್ಟ್ ಇನ್ನೂ ಕೂಡ ತಿಳಿಸಿಲ್ಲ. ಒಂದು ವೇಳೆ ಎರಡೂ ವರ್ಷನ್ ಗಳಿಗೂ ಬೆಲೆ ಇಳಿಕೆ ಇದ್ದಲ್ಲಿ 6ಜಿಬಿ ಮೆಮೊರಿ ಮತ್ತು 64ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಫೋನ್ ಕೂಡ 15,999 ರುಪಾಯಿಯ ಬದಲಾಗಿ 14,999 ರುಪಾಯಿಗೆ ಖರೀದಿಸಲು ಗ್ರಾಹಕರಿಗೆ ಅವಕಾಶವಿರುತ್ತದೆ.ಎಲ್ಲಾ ಬಣ್ಣಗಳ ವೇರಿಯಂಟ್ ಕೆಂಪು, ಕಪ್ಪು ಮತ್ತು ರೋಸ್ ಗೋಲ್ಡ್ ಬಣ್ಣದ ಫೋನ್ ಗಳಿಗೂ ಕೂಡ ರಿಯಾಯಿತಿ ಇರುತ್ತದೆ ಎಂದು ಊಹಿಸಲಾಗಿದೆ.

ರೆಡ್ಮಿ ನೋಟ್ 6 ಪ್ರೊ ವೈಶಿಷ್ಟ್ಯತೆಗಳು:

ರೆಡ್ಮಿ ನೋಟ್ 6 ಪ್ರೊ ವೈಶಿಷ್ಟ್ಯತೆಗಳು:

ಗಮನಿಸಬೇಕಾಗಿರುವ ಪ್ರಮುಖ ಅಂಶವೇನೆಂದರೆ ಇದೇ ಮೊದಲ ಬಾರಿಗೆ ರೆಡ್ಮಿ ನೋಟ್ 6 ಪ್ರೋ ರಿಯಾಯಿತಿ ಬೆಲೆಯಲ್ಲಿ ಸಿಗುತ್ತಿದೆ. ಕಳೆದ ವರ್ಷದ ನವೆಂಬರ್ ನಲ್ಲಿ ರೆಡ್ಮಿ ನೋಟ್ 6 ಪ್ರೊ ಭಾರತದಲ್ಲಿ ಬಿಡುಗಡೆಗೊಂಡಿದೆ. ಖಂಡಿತವಾಗಲೂ ಇದುವರೆಗಿನ ಶಿಯೋಮಿ ಫೋನ್ ಗಳಲ್ಲಿ ಅತ್ಯಂತ ಬೆಸ್ಟ್ ಕ್ಯಾಮರಾ ವ್ಯವಸ್ಥೆ ಹೊಂದಿರುವ ಫೋನ್ ಇದಾಗಿದೆ. ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಎರಡೂ ಕಡೆ ಡುಯಲ್ ಕ್ಯಾಮರಾ ವ್ಯವಸ್ಥೆಯನ್ನು ಇದು ಹೊಂದಿದೆ. ಹಿಂಭಾಗದಲ್ಲಿ ರೆಡ್ಮಿ ನೋಟ್ 6 ಪ್ರೋ ಪ್ರೈಮರಿ ಸೆನ್ಸರ್ 12-ಮೆಗಾಪಿಕ್ಸಲ್ ನ ಡುಯಲ್ ಪಿಕ್ಸಲ್ ಆಟೋಫೋಕಸ್ ಮತ್ತು f/1.9 ಅಪರ್ಚರ್ ನ್ನು ಹೊಂದಿದ್ದರೆ, ಸೆಕೆಂಡರಿ ಸೆನ್ಸರ್ 5-ಮೆಗಾಪಿಕ್ಸಲ್ ಡೆಪ್ತ್ ಶಾಟ್ ಗಾಗಿ ಹೊಂದಿದೆ. ಮುಂಭಾಗದಲ್ಲಿ ರೆಡ್ಮಿ ನೋಟ್ 6 ಪ್ರೋದಲ್ಲಿ ಪ್ರೈಮರಿ ಸೆನ್ಸರ್ 20 ಮೆಗಾಪಿಕ್ಸಲ್ ಮತ್ತು ಸೆಕೆಂಡರಿ ಕ್ಯಾಮರಾವು 2 ಮೆಗಾಪಿಕ್ಸಲ್ ಸೆನ್ಸರ್ ನ್ನು ಪ್ರೊಟ್ರೈಟ್ ಸೆಲ್ಫೀ ವ್ಯವಸ್ಥೆಯಲ್ಲಿ ಹೊಂದಿದೆ.

ಪೋಕೋ ಎಫ್1 ಗೂ ರಿಯಾಯಿತಿ:

ಪೋಕೋ ಎಫ್1 ಗೂ ರಿಯಾಯಿತಿ:

ಇದೇ ರಿಪಬ್ಲಿಕ್ ಡೇ ಸೇಲ್ ನಲ್ಲಿ ಫ್ಲಿಪ್ ಕಾರ್ಟ್ ಪೋಕೋ ಎಫ್1 ನ್ನು ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಶಿಯೋಮಿ ಪೋಕೋ ಎಫ್1 18,999 ರುಪಾಯಿಯ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಇದು ಬೇಸ್ ಮಾಡೆಲ್ ಗೆ ಅಂದರೆ 6GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಗೆ ಇರುವ ಬೆಲೆಯಾಗಿದೆ. 6GB RAM ಮತ್ತು 128GB ಸ್ಟೋರೇಜ್ ವ್ಯವಸ್ಥೆಯ ಸ್ಟೋರೇಜ್ ಮಾಡೆಲ್ ನ ಪೋಕೋ ಎಫ್1 ಗೆ 21,999 ರುಪಾಯಿ ಬೆಲೆ ಇರುತ್ತದೆ. ಅದೇ 6GB RAM/256GB ಯ ಬೆಲೆ 25,999 ರುಪಾಯಿ ಆಗಿರುತ್ತದೆ. ಪೋಕೋ ಎಫ್1 ಗೆ ಹೆಚ್ಚುವರಿ ರಿಯಾಯಿತಿಯನ್ನು ಕೂಡ ಫ್ಲಿಪ್ ಕಾರ್ಟ್ ನೀಡುತ್ತಿದೆ.

ಹೆಚ್ಚುವರಿ ಆಫರ್:

ಹೆಚ್ಚುವರಿ ಆಫರ್:

ಸ್ಟೇಟ್ ಬ್ಯಾಂಕ್ ಇಂಡಿಯಾ ಜೊತೆಗೆ ಕೈಜೋಡಿಸಿರುವ ಫ್ಲಿಪ್ ಕಾರ್ಟ್ 10% ಹೆಚ್ಚುವರಿ ರಿಯಾಯಿತಿಯನ್ನು ನೀಡುತ್ತದೆ.ಇದೇ ಸಂದರ್ಬದಲ್ಲಿ ಅಮೇಜಾನ್ ಇಂಡಿಯಾ ಕೂಡ ಗ್ರೇಟ್ ಇಂಡಿಯನ್ ಸೇಲ್ ನ್ನು ಆರಂಭಿಸುತ್ತಿದ್ದು ಜನವರಿ 20 ರಿಂದ ಈ ಸೇಲ್ ಆರಂಭವಾಗಿ ಜನವರಿ 23ರ ವರೆಗೆ ನಡೆಯಲಿದೆ. ಪ್ರೈಮ್ ಸದಸ್ಯರು ಜನವರಿ 19 ರಿಂದಲೇ ಬೇಗನೆ ಆಕ್ಸಿಸ್ ಲಭ್ಯವಿರುತ್ತದೆ.

Best Mobiles in India

English summary
Xiaomi Redmi Note 6 Pro India price to get cheaper, but for a limited period

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X