ರೆಡ್‌ಮಿ ಪ್ರೋ 2: ಡುಯಲ್ ಕ್ಯಾಮೆರಾ, 6 GB RAM, 128 GB ಮೆಮೊರಿ, 4500mAh ಬ್ಯಾಟರಿ

Written By:

ಮೊನ್ನೆ ತಾನೆ ಭಾರತೀಯ ಮಾರುಕಟ್ಟೆಗೆ ಕ್ಸಿಯೋಮಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಪೋನನ್ನು ಬಿಡುಗಡೆ ಮಾಡಿ, ಹೊಸ ಹವಾ ಕ್ರಿಯೇಟ್ ಮಾಡಿತ್ತು. ಈಗ ಆದರ ಬೆನ್ನಲೇ ಮತ್ತೊಂದು ಸ್ಮಾರ್ಟ್‌ಪೋನ್ನನು ಭಾರತೀಯರ ಕೈಗೆ ನೀಡಲು ಮುಂದಾಗಿದೆ. ರೆಡ್‌ಮಿ ಪ್ರೋ 2 ಸ್ಮಾರ್ಟ್‌ಪೋನು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ರೆಡ್‌ಮಿ ಪ್ರೋ 2: ಡುಯಲ್ ಕ್ಯಾಮೆರಾ, 6 GB RAM, 128 GB ಮೆಮೊರಿ

ಓದಿರಿ: ಸ್ಯಾಮ್‌ಸಂಗ್ ಹಿಂದಿಕ್ಕಿದ ಆಪಲ್‌ನಿಂದ ನೂತನ ದಾಖಲೆ ನಿರ್ಮಾಣ

ಈಗಾಗಲೇ ರೆಡ್‌ಮಿ ಪ್ರೋ 2 ಸ್ಮಾರ್ಟ್‌ಪೋನು ಚೀನಾ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಅಲ್ಲಿಂದ ಕೆಲವೇ ದಿನಗಳಲ್ಲಿ ಭಾರತಕ್ಕೂ ಪ್ರಯಾಣ ಬೆಳೆಸೆಲಿದೆ. ಈ ಹಿನ್ನಲೆಯಲ್ಲಿ ಈ ಪೋನಿನ ಗುಣವಿಶೇಷತೆಗಳ ಬಗ್ಗೆ ಒಂದು ಕಿರು ನೋಟ ಈ ಮುಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
6 GB RAM/ 128 GB ಇಂಟರ್ನಲ್ ಮೆಮೊರಿ:

6 GB RAM/ 128 GB ಇಂಟರ್ನಲ್ ಮೆಮೊರಿ:

ರೆಡ್‌ಮಿ ಪ್ರೋ 2 ಸ್ಮಾರ್ಟ್‌ಪೋನು ವೇಗದ ಕಾರ್ಯನಿರ್ವಹಣೆಗೆಂದೆ ನಿರ್ಮಿತವಾಗಿದ್ದು, ಎರಡು ಮಾದರಿಯಲ್ಲಿ ಲಭ್ಯವಿರಲಿದೆ. 4 GB RAM ಮತ್ತು 64 GB ಇಂಟರ್ನಲ್ ಮೆಮೊರಿ ಹೊಂದಿರುವ ಪೋನು ಒಂದು ಮಾದರಿಯಾದರೆ, 6 GB RAM ಮತ್ತು 128 GB ಇಂಟರ್ನಲ್ ಮೆಮೊರಿ ಹೊಂದಿರುವ ಇನ್ನೊಂದು ಮಾದರಿಯ ಪೋನು ಸಹ ಮಾರುಕಟ್ಟೆಯಲ್ಲಿ ದೊರೆಯಲಿದೆ.

4500mAh ಬ್ಯಾಟರಿ:

4500mAh ಬ್ಯಾಟರಿ:

ರೆಡ್‌ಮಿ ಪ್ರೋ 2 ಸ್ಮಾರ್ಟ್‌ಪೋನಿನಲ್ಲಿ 4500mAh ಬ್ಯಾಟರಿ ಅಳವಡಿಸಲಾಗಿದ್ದು, ಇದು ದೀರ್ಘಕಾಲದ ಬ್ಯಾಟರಿ ಬಾಳಿಕೆಗೆ ಸಹಕಾರಿಯಾಗಲಿದೆ. ಅಲ್ಲದೇ ಈ ಪೋನಿನಲ್ಲಿ ಮೀಡಿಯಾ ಟೆಕ್ ಚಿಪ್ ಸೆಟ್ ಆಳವಡಿಸಲಾಗಿದ್ದು, ಇದು ಸಹ ಹೆಚ್ಚಿನ ಬ್ಯಾಟರಿ ಬಳಸಿಕೊಳ್ಳಲಿದೆ. ಇದರಿಂದಾಗಿ ಹೆಚ್ಚಿನ ಸಾಮಾರ್ಥ್ಯದ ಬ್ಯಾಟರಿ ಈ ಪೋನಿನಲ್ಲಿದೆ.

5.5 ಇಂಚಿನ Full HD ಡಿಸ್‌ಪ್ಲೇ:

5.5 ಇಂಚಿನ Full HD ಡಿಸ್‌ಪ್ಲೇ:

ಈ ರೆಡ್‌ಮಿ ಪ್ರೋ 2 ಸ್ಮಾರ್ಟ್‌ಪೋನು 5.5 ಇಂಚಿನ Full HD ಡಿಸ್‌ಪ್ಲೇಯನ್ನು ಹೊಂದಿದ್ದು, ಉತ್ತಮ ಗುಣಮಟ್ದ ವಿಡಿಯೋ ವಿಕ್ಷಣೆಗೆ ಸಹಕಾರಿಯಾಗಿದೆ. ಹೆಚ್ಚಿನ ಗ್ರಾಫಿಕ್ಸ್ ಇರುವ ಗೇಮ್ ಆಡಲು ಇದು ಹೇಳಿ ಮಾಡಿಸಿದಂತಿದೆ.

13 MP ಕ್ಯಾಮೆರಾ:

13 MP ಕ್ಯಾಮೆರಾ:

ಈ ಪೋನಿನ ಹಿಂಭಾಗದಲ್ಲಿ ಡುಯಲ್ ಕ್ಯಾಮರೆ ಇದ್ದು, ಒಂದು 13 MPಯದ್ದು, ಮತ್ತೊಂದು 5 MP ಯದ್ದು, ಎರಡು ಕ್ಯಾಮೆರಾಗಳು ಒಟ್ಟಿಗೆ ಕಾರ್ಯನಿರ್ವಹಿಸಲಿವೆ. ಅಲ್ಲದೇ ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ನೀಡಲಾಗಿದೆ.

ಬೆಲೆ:

ಬೆಲೆ:

ಸದ್ಯ ಚೈನಾ ಮಾರುಕಟ್ಟೆಯಲ್ಲಿ ಈ ಪೋನು ಮಾರಾಟವಾಗುತ್ತಿದ್ದು, 4GB RAM ಹೊಂದಿರುವ ಪೋನಿನ ಬೆಲೆ ಸರಿ ಸುಮಾರು 15,720 ರೂಗಳಾಗಲಿದ್ದು, 6GB RAM ಪೋನಿನ ಬೆಲೆ 17,695 ರೂಗಳಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Xiaomi is reportedly gearing up to unveil the successor to last year’s Xiaomi Redmi Pro. To recall, the Xiaomi Redmi Pro featuring a deca-core processor. to know more visit kananda.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot